ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಅಂಗೈಯಲ್ಲೇ ಇದೆ ಔಷಧ ಭಂಡಾರ; ತೂಕ ಇಳಿಕೆಯಿಂದ ಹಿಡಿದು ಬೊಜ್ಜು ಕರಗಿಸಲು ನೆರವಾಗುತ್ತದೆ ಈ ಮ್ಯಾಜಿಕ್‌ ಪಾನೀಯ

ಬಾಳೆ ದಿಂಡಿನ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬಾಳೆ ದಿಂಡು ಜೀರ್ಣಾಂಗ ವ್ಯವಸ್ಥೆ ಮತ್ತು ಆಮ್ಲೀಯತೆಯ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಬಾಳೆ ದಿಂಡು ಪೊಟ್ಯಾಸಿಯಮ್, ವಿಟಮಿನ್ ಬಿ6, ಮೆಗ್ನೀಸಿಯಮ್, ವಿಟಮಿನ್ ಸಿ, ತಾಮ್ರ , ಕಬ್ಬಿಣ, ಮ್ಯಾಂಗನೀಸ್, ಕಾರ್ಬೋಹೈಡ್ರೇಟ್‌, ಫೈಬರ್, ಇತರ ಖನಿಜಗಳು ಮತ್ತು ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

ಬಾಳೆ ದಿಂಡಿನ ಜ್ಯೂಸ್ (ಸಂಗ್ರಹ ಚಿತ್ರ)

ಬೆಂಗಳೂರು: ವರ್ಕೌಟ್‌ (Workout) ಮಾಡ್ತಿದ್ದರೂ, ಡಯಟ್‌ (Diet) ಪಾಲಿಸುತ್ತಿದ್ದರೂ ಹೊಟ್ಟೆಯ ಬೊಜ್ಜು (Belly Fat) ಕರಗೋದೇ ಇಲ್ಲವೆಂದು ಅನೇಕರು ಹೇಳುತ್ತಾರೆ. ಆದರೆ ಮನೆಯಲ್ಲೇ ಸಿಗುವ ಬಾಳೆದಿಂಡಿನಲ್ಲಿ(Banana Stem) ಎಷ್ಟು ಪ್ರಬಲ ಔಷಧಿ ಗುಣವಿದೆ ಎಂಬುದು ಅನೇಕರಿಗೆ ಗೊತ್ತೇ ಇಲ್ಲ. ಖಾಲಿ ಹೊಟ್ಟೆಯಲ್ಲಿ ಈ ಬಾಳೆದಿಂಡಿನ ಜ್ಯೂಸ್ ಸೇವಿಸಿದರೆ ತೂಕ ಇಳಿಯುವುದರ ಜತೆಗೆ, ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ಕಬ್ಬಿಣ ಅಂಶದ ಕೊರತೆಯನ್ನು ನೀಗಿಸಬಹುದಾಗಿದ್ದು, ದೇಹದೊಳಗಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಇದು ಮಾಡುತ್ತದೆ.

ಹೌದು, ಬಾಳೆ ದಿಂಡಿನ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಜೀರ್ಣಾಂಗ ವ್ಯವಸ್ಥೆ ಮತ್ತು ಆಮ್ಲೀಯತೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಬಾಳೆ ದಿಂಡು ಪೊಟ್ಯಾಸಿಯಮ್, ವಿಟಮಿನ್ ಬಿ6, ಮೆಗ್ನೀಸಿಯಮ್, ವಿಟಮಿನ್ ಸಿ, ತಾಮ್ರ , ಕಬ್ಬಿಣ , ಮ್ಯಾಂಗನೀಸ್, ಕಾರ್ಬೋಹೈಡ್ರೇಟ್ ಗಳು, ಫೈಬರ್ ಗಳು, ಇತರ ಖನಿಜಗಳು ಮತ್ತು ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಾಗಾದ್ರೆ ಬನ್ನಿ ಪಾನೀಯವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜ ಏನು ಎಂಬುದನ್ನು ನೋಡೋಣ...

ಕಡಿಮೆ ಕ್ಯಾಲೋರಿ, ಹೆಚ್ಚು ನಾರಿನಂಶ

ಬಾಳೆದಿಂಡಿನಲ್ಲಿರುವ ಅತಿ ಹೆಚ್ಚು ನಾರಿನಂಶ (Dietary Fiber) ಇದ್ದು, ಹೊಟ್ಟೆ ತುಂಬಿದ ಭಾವನೆ ತಂದು ಹೆಚ್ಚು ಹೊತ್ತು ಹಸಿವು ಆಗದಂತೆ ತಡೆಯುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಬಾಳೆ ದಿಂಡಿನ ರಸ ಸೇರಿದರೆ, ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆ ದೂರ ಮಾಡುತ್ತದೆ

ಬಾಳೆದಿಂಡು ಆಮ್ಲಿಯತೆಯನ್ನು ಕಡಿಮೆ ಮಾಡುವ ಮತ್ತು ಹೊಟ್ಟೆಯ ಆರೋಗ್ಯವನ್ನು ಸುಧಾರಿಸುವ ಗುಣವನ್ನು ಹೊಂದಿದೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಬಾಳೆ ದಿಂಡಿನ ರಸ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗಲಿದ್ದು, ಹೊಟ್ಟೆಯ ಸಮಸ್ಯೆಗಳು, ಆ್ಯಸಿಡ್ ರಿಫ್ಲೆಕ್ಸ್‌ ಮತ್ತು ಹೊಟ್ಟೆ ಉಬ್ಬುವುದು ಮುಂತಾದ ರೋಗಲಕ್ಷಣಗಳನ್ನು ಸುಧಾರಿಸುತ್ತದೆ.

ಮೆಟಾಬಾಲಿಸಂ ಸುಧಾರಿಸುತ್ತದೆ

ಬಾಳೆದಿಂಡು ಹೊಟ್ಟೆಯಲ್ಲಿರುವ ಹಾನಿಕಾರಕ ಕೊಬ್ಬನ್ನು ಕರಗಿಸುವುದಲ್ಲದೆ, ದೇಹದ ಮೆಟಾಬಾಲಿಸಂ ಪ್ರಕ್ರಿಯೆಯನ್ನು ಸುಧಾರಿಸಿ, ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡುತ್ತದೆ. ದೇಹದೊಳಗಿರುವ ಕಶ್ಮಲಗಳನ್ನು ಹೊರಹಾಕುವಲ್ಲಿ ಈ ಜ್ಯೂಸ್‌ ತುಂಬಾ ಸಹಕಾರಿ ಆಗಿದ್ದು, ಇದು ಚಯಾಪಚಯ ಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ ಬೊಜ್ಜು ಕರಗಿಸುತ್ತದೆ.

Health Tips: ಚಳಿಗಾಲದ ಸೋಂಕುಗಳಿಂದ ಮಕ್ಕಳನ್ನು ಕಾಪಾಡುವುದು ಹೇಗೆ?

ದೇಹದೊಳಗಿರುವ ಕಶ್ಮಲಗಳನ್ನ ಹೊರಹಾಕುತ್ತದೆ

ಇದು ಉತ್ತಮ ಡಿಟಾಕ್ಸಿಫೈಯರ್ ಆಗಿ ಕಾರ್ಯನಿರ್ವಹಿಸಲಿದ್ದು, ದೇಹದಲ್ಲಿರುವ ಮಾಲಿನ್ಯಗಳನ್ನು ಹೊರ ಹಾಕುತ್ತದೆ. ದೇಹದೊಳಗಿರುವ ಕಶ್ಮಲಗಳನ್ನು ಹೊರಹಾಕುವಲ್ಲಿ ಈ ಜ್ಯೂಸ್‌ ತುಂಬಾ ಸಹಕಾರಿ ಆಗಿದ್ದು, ಇದು ಚಯಾಪಚಯ ಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ ಬೊಜ್ಜು ಕರಗಿಸುತ್ತದೆ.

ಶುಗರ್ ಕಂಟ್ರೋಲ್ ಮಾಡುತ್ತದೆ

ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ, ರಕ್ತದಲ್ಲಿನ ಸಕ್ಕರೆ ಪ್ರಮಾಣ ತಕ್ಷಣ ಏರದಂತೆ ಬಾಲೆದಿಂಡಿನ ಜ್ಯೂಸ್ ತಡೆಯಲಿದ್ದು, ಊಟದ ನಂತರವೂ ಬ್ಲಡ್ ಶುಗರ್ ಸ್ಥಿರವಾಗಿರಲು ಸಹಕಾರಿಯಾಗುತ್ತದೆ. ಈ ಜ್ಯೂಸ್ ಅನ್ನು ಸೋಸದೆ ಕುಡಿದರೆ ಅದು ಮಧುಮೇಹಕ್ಕೆ ಒಳ್ಳೆಯದು. ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಇದು ಮಧುಮೇಹಕ್ಕೆ ತುಂಬಾ ಲಾಭಕಾರಿ.

ಕಿಡ್ನಿ ಸ್ಟೋನ್ ತಡೆಯಲು ಮತ್ತು ಹೊರ ಹಾಕಲು ಸಹಕಾರಿ

ಬಾಳೆದಿಂಡು ಮೂತ್ರವರ್ಧಕ ಗುಣಗಳಿಂದ ಕೂಡಿದ್ದು, ಇದರಿಂದ ಮೂತ್ರ ಪ್ರಮಾಣ ಹೆಚ್ಚಾಗಿ ಕಿಡ್ನಿ ಸ್ಟೋನ್‌ಗಳನ್ನು ಹೊರಹಾಕಲು ಸಹಾಯವಾಗುತ್ತದೆ. ಬಾಳೆ ದಿಂಡು ಮೂತ್ರ ವರ್ಧಕವಾಗಿ ಕೆಲಸ ಮಾದಲಿದ್ದು, ಕಿಡ್ನಿ ಸ್ಟೋನ್ ತಡೆಗಟ್ಟುವಲ್ಲಿಯೂ ಈ ಪಾನೀಯ ತುಂಬಾ ಪರಿಣಾಮಕಾರಿ.