Diet Tips: ಬೆವರು ಸುರಿಸದೆ, ಡಯೆಟ್ ಮಾಡದೇ ಬರೋಬ್ಬರಿ 30 ಕೆಜಿ ಇಳಿಸಿಕೊಂಡ ಮಹಿಳೆ; ಟಿಪ್ಸ್ ಇಲ್ಲಿದೆ ನೋಡಿ
ಕೆಲವರು ತೂಕ ಇಳಿಸಿಕೊಳ್ಳಲು ಜಿಮ್ಗೆ ಹೋಗಿ ಬೆವರು ಸುರಿಸಿ ವರ್ಕೌಟ್ ಮಾಡುತ್ತಾರೆ ಅಥವಾ ಡಯೆಟ್ ಮಾಡುತ್ತಾರೆ. ಆದರೆ ಉದಿತಾ ಅಗರ್ವಾಲ್ ಎಂಬ ಮಹಿಳೆ ಇವೆರಡನ್ನೂ ಮಾಡದೆ ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಇದಕ್ಕೆ ಕಾರಣ ಜೀವನಶೈಲಿಯಲ್ಲಿ ಮಾಡಿಕೊಂಡ ಬದಲಾವಣೆ. 30 ಕೆಜಿ ತೂಕ ಇಳಿಸಿಕೊಳ್ಳಲು ಅವರು ಅನುಸರಿಸಿದ ಟಿಪ್ಸ್ ಇಲ್ಲಿದೆ ನೋಡಿ.


ಇತ್ತೀಚಿನ ದಿನಗಳಲ್ಲಿ, ಬೊಜ್ಜು ಅನೇಕರನ್ನು ಕಾಡುವ ಗಂಭೀರ ಸಮಸ್ಯೆಗಳಲ್ಲಿ ಒಂದು. ಲಕ್ಷಾಂತರ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದಲ್ಲದೆ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಕೆಲವರು ಜಿಮ್ಗೆ ಹೋಗಿ ಬೆವರು ಸುರಿಸಿ ವರ್ಕೌಟ್ ಮಾಡುತ್ತಾರೆ. ಇನ್ನು ಕೆಲವರು ಡಯೆಟ್ (Diet Tips) ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಇವೆರಡನ್ನೂ ಮಾಡದೆ 30 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ.
ವರದಿ ಪ್ರಕಾರ , ಉದಿತಾ ಅಗರ್ವಾಲ್ ಜಿಮ್ಗೆ ಹೋಗದೆ ಅಥವಾ ಯಾವುದೇ ಡಯೆಟ್ ಮಾಡದೇ ತನ್ನ ತೂಕವನ್ನು ಇಳಿಸಿಕೊಂಡಿದ್ದಾರೆ. ಅವರು ದಿನಚರಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ, ಸುಲಭವಾಗಿ ತೂಕವನ್ನು ಇಳಿಸಿಕೊಂಡಿದ್ದಾರೆ.
30 ಕೆಜಿ ತೂಕ ಇಳಿಸಿಕೊಳ್ಳಲು ಅವಳು ಅನುಸರಿಸಿದ ಟಿಪ್ಸ್ ಇಲ್ಲಿದೆ ನೋಡಿ
ಡಿಟಾಕ್ಸ್ ಪಾನೀಯದಿಂದ ದಿನದ ಆರಂಭ: ಉದಿತಾ ಪ್ರತಿದಿನ ಬೆಳಗ್ಗೆ ಜೀರಿಗೆ, ಸೋಂಪು, ಮೆಂತ್ಯ ಮತ್ತು ಓಂಕಾಳನ್ನು (ಕ್ಯಾರಮ್ ಬೀಜಗಳು) ನೀರಿನಲ್ಲಿ ಕುದಿಸಿ ತಯಾರಿಸಿದ ಡಿಟಾಕ್ಸ್ ಪಾನೀಯವನ್ನು ಕುಡಿಯುವ ಮೂಲಕ ದಿನವನ್ನು ಶುರು ಮಾಡುತ್ತಾರಂತೆ. ಈ ಪಾನೀಯ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೊಟ್ಟೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.
ತಪ್ಪುಗಳನ್ನು ಸರಿಪಡಿಸಿಕೊಂಡರು: ಅನಾರೋಗ್ಯಕರವಾದದ್ದನ್ನು ತಿಂದಿದ್ದಕ್ಕೆ ಗಿಲ್ಟ್ ಫೀಲ್ ಮಾಡದೇ, ಆರೋಗ್ಯಕರ ದಿನಚರಿಯನ್ನು ಶುರು ಮಾಡಿದ್ದಾರೆ. ಈ ವಿಧಾನವು ಅವರಿಗೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿತಂತೆ.
ಮನೆಯಲ್ಲಿ ತಯಾರಿಸಿದ ಊಟಕ್ಕೆ ಮೊದಲ ಆದ್ಯತೆ: ಹೊರಗೆ ಹೋಗುವಾಗ ಜಂಕ್ ಫುಡ್ ತಿನ್ನುವುದನ್ನು ತಪ್ಪಿಸಲು, ಅವರು ಮನೆಯಲ್ಲಿ ತಯಾರಿಸಿದ ಊಟವನ್ನು ಟಿಫಿನ್ನಲ್ಲಿ ತೆಗೆದುಕೊಂಡು ಹೋಗುತ್ತಿದ್ದರಂತೆ. ಇದು ಅವರ ಕ್ಯಾಲೋರಿ ಸೇವನೆಯನ್ನು ನಿಯಂತ್ರಣದಲ್ಲಿಡುವುದಲ್ಲದೆ, ಪೌಷ್ಟಿಕ, ಸಮತೋಲಿತ ಊಟಕ್ಕೆ ಒಗ್ಗಿಕೊಳ್ಳುವಂತೆ ಮಾಡಿದೆ.
ಚಿಯಾ ಬೀಜದ ನೀರು ಸೇವನೆ: ಉದಿತಾ ಪ್ರತಿದಿನ 3–4 ಲೀಟರ್ ನೀರು ಕುಡಿಯುತ್ತಿದ್ದರು. ಜತೆಗೆ ದಿನವಿಡೀ ಚಿಯಾ ಬೀಜಗಳಿಂದ ಕೂಡಿದ ನೀರನ್ನು ಸೇವಿಸುತ್ತಿದ್ದರು. ಇದು ಅವಳ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿದೆ ಮತ್ತು ದೇಹದ ನೈಸರ್ಗಿಕ ಡಿಟಾಕ್ಸ್ ಪ್ರಕ್ರಿಯೆಗೆ ಸಹಾಯ ಮಾಡಿತು.
ಸ್ನ್ಯಾಕ್ಸ್ ಇಲ್ಲದ ಚಹಾ ಸೇವನೆ: ಉದಿತಾ ಬಿಸ್ಕತ್ತು, ರಸ್ಕ್ಗಳನ್ನು ತಿನ್ನದೇ ಚಹಾವನ್ನು ಕುಡಿಯುತ್ತಿದ್ದರು. ಈ ಸಣ್ಣ ಬದಲಾವಣೆಯು ಅನಗತ್ಯ ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡಿತು ಮತ್ತು ಜಂಕ್ ಫುಡ್ ತಿನ್ನುವುದನ್ನು ತಡೆಯಲು ಸಹಾಯ ಮಾಡಿತು.
ಸಂಸ್ಕರಿಸಿದ ಆಹಾರದಿಂದ ದೂರ: ಇವರು ಬ್ರೆಡ್, ಸಮೋಸಾ ಮತ್ತು ಪೇಸ್ಟ್ರಿಗಳನ್ನು ತಿನ್ನಲಿಲ್ಲ. ಹಾಗಂತ ಸಕ್ಕರೆ ತಿನ್ನುವುದನ್ನು ಸಂಪೂರ್ಣವಾಗಿ ಬಿಡಲಿಲ್ಲ.
ಈ ಸುದ್ದಿಯನ್ನೂ ಓದಿ:Viral Video: ಸಫಾರಿ ಹೋದವರಿಗೆ ಕಾದಿತ್ತು ಬಿಗ್ ಶಾಕ್! ಹೀಗಾಗುತ್ತೆ ಅಂತ ಯಾರೂ ಊಹಿಸಿರ್ಲಿಕ್ಕಿಲ್ಲ
ಊಟಕ್ಕೆ ಮೊದಲು ನೀರು ಸೇವನೆ: ಊಟಕ್ಕೆ ಮುನ್ನ ಒಂದು ಲೋಟ ನೀರು ಕುಡಿಯುವುದರಿಂದ ಅವರ ತೂಕ ಇಳಿಕೆಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿದೆಯಂತೆ. ಇದು ಹೆಚ್ಚು ತಿನ್ನುವುದನ್ನು ತಪ್ಪಿಸಲು ಸಹಾಯ ಮಾಡಿದೆ.