Health Tips: ತೂಕ ಇಳಿಯಬೇಕೆ? ಖಾಲಿ ಹೊಟ್ಟೆಯಲ್ಲಿ ಶುಂಠಿ ಚಹಾ ಸೇವಿಸಿ
ತೂಕ ಇಳಿಕೆಯಿಂದ ಹಿಡಿದು ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸುವಲ್ಲಿ ಶುಂಠಿ ಟೀ ಸಹಕಾರಿ. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಗೆ ಚಹಾ ಕಾಫಿ, ಟೀ ಕುಡಿಯುವ ಬದಲು ಈ ಶುಂಠಿ ಚಹಾ ಕುಡಿಯುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ.
ಶುಂಠಿ ಟೀ -
ಬೆಂಗಳೂರು: ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ(Empty Stomach) ನಾವು ಏನು ಸೇವಿಸುತ್ತೇವೋ, ಅದು ದಿನವಿಡೀ ನಮ್ಮ ಆರೋಗ್ಯದ ಮೇಲೆಯೇ ನೇರವಾಗಿ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ದಿನದ ಮೊದಲ ಆಹಾರ ಎಂದಿಗೂ ಪೌಷ್ಟಿಕವಾಗಿಯೇ ಇರಬೇಕು. ಬೆಡ್ ಕಾಫಿ (Coffee) ಅಥವಾ ಎದ್ದ ತಕ್ಷಣ ಚಹಾ(Tea) ಕುಡಿಯುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಎಚ್ಚರಿಸುತ್ತಾರೆ.
ಕೆಲವರಿಗೆ ಈ ಎದ್ದ ಕೂಡಲೇ ಕಾಫಿ ಅಥವಾ ಚಹಾ ಕುಡಿಯದಿದ್ದರೆ ಮನಸ್ಸಿಗೆ ಸಮಾಧಾನ ಆಗುವುದಿಲ್ಲ, ದಿನವೆಲ್ಲ ಎನ್ನೋ ಕಳೆದುಕೊಂಡಂತೆ ಇರುತ್ತಾರೆ. ಚಹಾ ಇಲ್ಲದೇ ಆ ದಿನ ಪೂರ್ಣವೇ ಆಗುವುದಿಲ್ಲ ಅನ್ನೋ ಭಾವ ಅವರದ್ದು! ಆದರೆ ಖಾಲಿ ಹೊಟ್ಟೆಗೆ ಟೀ ಕಾಫಿ ಕುಡಿದ್ದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನುವುದು ವೈದ್ಯರ ಅಭಿಪ್ರಾಯ. ಎಂತಹ ಪರಿಸ್ಥಿತಿಯಲ್ಲಿ ಆಯ್ಯೋ ಚಹಾ ಕುಡಿಯದೇ ಹೇಗೆ ಇರೋದು ಎಂದು ನೀವು ಯೋಚಿಸುತ್ತಿದ್ದರೆ, ನಿಮ್ಮ ಚಿಂತೆಗೆ ನಾವು ಉತ್ತರ ಹೇಳುತ್ತೇವೆ. ಬೆಳಗ್ಗೆ ಎದ್ದ ತಕ್ಷಣ ನೀವು ಶುಂಠಿ ಟೀ (Ginger Tea) ಸೇವಿಸಿ. ಇದು ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ನಿಮಗೂ ಟೀ ಕುಡಿದ ಅನುಭವವನ್ನು ನೀಡುತ್ತದೆ.
ಹೌದು, ಶುಂಠಿ ಅಜೀರ್ಣ, ವಾಕರಿಕೆಗೆ ಇತ್ಯಾದಿ ಅನಾರೋಗ್ಯ ಸಮಸ್ಯೆಗಳಿಗೆ ಒಳ್ಳೆಯ ಮನೆಮದ್ದಾಗಿದ್ದು, ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮು ಕಡಿಮೆ ಮಾಡಲಿದೆ. ಇದರೊಂದಿಗೆ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡಲಿದ್ದು, ಇದು ಉತ್ಕರ್ಷಣ ನಿರೋಧಕ ಗುಣಗಳನ್ನ ಹೊಂದಿದೆ. ಇದು ಆರೋಗ್ಯಕರ ಜೀವಕೋಶಗಳನ್ನ ರಕ್ಷಿಸುತ್ತದೆ, ರಕ್ತದೊತ್ತಡವನ್ನ ನಿಯಂತ್ರಿಸಲು ಮತ್ತು ರಕ್ತ ಪರಿಚಲನೆಯನ್ನ ಸುಧಾರಿಸಲು ಸಹ ಸಹಾಯಕವಾಗಿದೆ. ಹಾಗಾದ್ರೆ ಬನ್ನಿ ಈ ಚಳಿಗಾಲದಲ್ಲಿ ಬೆಳಿಗ್ಗೆ ಶುಂಠಿ ಚಹಾ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳು (Health Tips) ಏನು ಎಂಬುದನ್ನು ನೋಡೋಣ.
ತೂಕ ನಿಯಂತ್ರಣಕ್ಕೆ ಸಹಕಾರಿ
ಚಯಾಪಚಯ ಪ್ರಕ್ರಿಯೆ ಸುಧಾರಿಸಲು ಶುಂಠಿ ಸಹಕಾರಿ. ಕರ್ಕ್ಯುಮಿನ್ ಅಂಶವು ತೂಕ ನಷ್ಟ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಲೋಟ ಶುಂಠಿ ಚಹಾದಿಂದ ದಿನವನ್ನು ಆರಂಭಿಸುವುದು ಮತ್ತು ನಿಯಮಿತ ವ್ಯಾಯಾಮ ಮಾಡುವ ಮೂಲಕ ತೂಕ ಇಳಿಕೆ ಸಹಕಾರಿಯಾಗಿದೆ.
ಬೆನ್ನು ಮೂಳೆಯ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದು
ಶುಂಠಿ ಹೆಪಟೊಪ್ರೊಟೆಕ್ಟಿವ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಯಕೃತ್ತನ್ನು ಹಾನಿಯಿಂದ ರಕ್ಷಿಸಲು ಮತ್ತು ಅದರ ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೆ ಶುಂಠಿ ನೀರನ್ನು ಕುಡಿಯುವುದರಿಂದ ಇದರಲ್ಲಿರುವ ನಿರ್ವಿಶೀಕರಣ ಪ್ರಕ್ರಿಯೆ ಹೆಚ್ಚಾಗುತ್ತದೆ.
ಉರಿಯೂತ ಸಮಸ್ಯೆಗೆ ಮದ್ದು
ಅರಿಶಿನದ ಉರಿಯೂತದ ಗುಣಲಕ್ಷಣಗಳು ಕೀಲು ನೋವು ಮತ್ತು ಸಂಧಿವಾತದಂತಹ ಉರಿಯೂತ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಾಯವಾಗಲಿದ್ದು, ಶುಂಠಿ ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡಲಿದ್ದು, ಹೃದ್ರೋಗದ ಅಪಾಯವನ್ನು ತಡೆಯುತ್ತದೆ.
ರಕ್ತದೊತ್ತಡ ಕಡಿಮೆ ಮಾಡುತ್ತದೆ
ಶುಂಠಿ ಚಹಾವು ಅಧಿಕ ರಕ್ತದೊತ್ತಡವನ್ನ ಕಡಿಮೆ ಮಾಡಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನ ಸುಧಾರಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಶುಂಠಿ ಚಹಾ ಸೇವನೆಯಿಂದ ನೀವು ಹತ್ತಾರು ಆರೋಗ್ಯಕರ ಪ್ರಯೋಜನಗಳನ್ನ ಪಡೆಯಬಹುದು.