Drinking From Cans: ಕ್ಯಾನ್‌ನಲ್ಲಿ ತುಂಬಿಸಿಟ್ಟ ಕೋಲ್ಡ್ ಡ್ರೀಕ್ಸ್ ಬಳಸಿದ್ರೆ ಆರೋಗ್ಯಕ್ಕೆ ಕುತ್ತು!
ಪ್ಯಾಕೆಟ್, ಕ್ಯಾನ್‌ನಲ್ಲಿ ತುಂಬಿಸಿಟ್ಟ ತಂಪು ಪಾನೀಯಗಳು ನಿಮಗಿಷ್ಟವೇ? ನೀವು ಕೂಲ್ ಡ್ರಿಂಕ್ಸ್ ಪ್ರಿಯರೇ ಹಾಗಿದ್ದರೆ ಈ ಸುದ್ದಿ ಓದ್ಲೇಬೇಕು. ಕ್ಯಾನ್‌ಗಳಲ್ಲಿ ಶೇಖರಣೆ ಮತ್ತು ಸಾಗಾಟ ಸಮಯದಲ್ಲಿ ಕ್ಯಾನ್‌ಗಳು ವಿವಿಧ ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಕಲುಷಿತಗೊಳ್ಳಬಹುದು. ಇದರಿಂದ ನಾವು ಕುಡಿಯುವ ಕೋಲ್ಡ್ ಡ್ರೀಕ್ಸ್ ಕಲುಷಿತ ಗೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ಇವು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಬಹುದು ಎಂದು ವೈದ್ಯಕೀಯ ಸಂಶೋಧನೆಗಳು ಹೇಳುತ್ತವೆ.
ನವದೆಹಲಿ: ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿಯುವುದು ಅಥವಾ ತಿನ್ನಲು ಪ್ಲಾಸ್ಟಿಕ್ ತಟ್ಟೆಗಳನ್ನು ಬಳಕೆ ಮಾಡುವುದು ಆನೇಕ ಗಂಭೀರ ಖಾಯಿಲೆ ಉಂಟು ಮಾಡುತ್ತವೆ ಎಂದು ಈ ಹಿಂದೆ ಸುಮಾರು ವರದಿಗಳಾಗಿವೆ(Health tips). ಪ್ರಸ್ತುತ ಹೊಸ ಅಧ್ಯಯನವು, ಕ್ಯಾನ್‌ಗಳಲ್ಲಿ ಇರುವ ಕೂಲ್ ಡ್ರಿಂಕ್ಸ್, ಬಿಯರ್ ಅಥವಾ ಇತರ ಪಾನೀಯ ಕುಡಿಯುವುದರಿಂದ (Drinking From Cans) ಹಲವು ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತವೆ ಎನ್ನುವ ಅಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಇಂದು ಹೆಚ್ಚಿನ ಜನರಿಗೆ ಕ್ಯಾನ್‌ಗಳಲ್ಲಿ ತುಂಬಿಸಿಟ್ಟ ಪಾನೀಯಗಳನ್ನು ಕುಡಿಯುವ ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಇತ್ತೀಚಿನ ಅಧ್ಯಯನವೊಂದು ಕ್ಯಾನ್ ಮೂಲಕ ನೇರವಾಗಿ ಕುಡಿಯುವ ಪಾನೀಯದ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಕ್ಯಾನ್ ಗಳ ಶೇಖರಣೆ ಮತ್ತು ಸಾಗಾಟದ ಸಮಯದಲ್ಲಿ ಕ್ಯಾನ್‌ಗಳು ವಿವಿಧ ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಕಲುಷಿತಗೊಳ್ಳಬಹುದು. ಇದರಿಂದ ನಾವು ಕುಡಿಯುವ ಕೋಲ್ಡ್ ಡ್ರಿಂಕ್ಸ್ ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ಇವು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಬಹುದು ಎಂದು ವೈದ್ಯಕೀಯ ಸಂಶೋಧನೆಗಳು ಹೇಳುತ್ತವೆ.
ಕ್ಯಾನ್‌ಗಳನ್ನು ಮಾರಾಟ ಮಾಡುವ ಮೊದಲು ಅದನ್ನು ವಿರಳವಾಗಿ ಸ್ವಚ್ಛಗೊಳಿಸಲಾಗುತ್ತದೆ. ಯಾಕೆಂದರೆ ಅವುಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿ ಬಳಕೆ ಮಾಡಲಾಗುತ್ತದೆ. ಅವುಗಳನ್ನು ಸಂಗ್ರಹಿಸುವ ಗುಣಮಟ್ಟ ಸ್ವಚ್ಚವಾಗಿರದೇ ನಾವು ಬಳಸುವ ಪಾನೀಯದೊಂದಿಗೆ ಕಲುಷಿತಗೊಳಿಸಬಹುದು.
ಕ್ಯಾನ್‌ಗಳ ನಿರ್ವಹಣೆ, ಸಂಗ್ರಹಣೆ ಅಥವಾ ಸಾಗಣೆಯ ಸಮಯದಲ್ಲಿ ಕೊಳಕು, ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳಿಂದ ಮಾಲಿನ್ಯಕಾರ ಸೋಂಕುಗಳು ವಿವಿಧ ರೋಗಗಳಿಗೆ ಕಾರಣವಾಗಬಹುದು ಇದರಿಂದ ಮೂತ್ರಪಿಂಡ ಅಥವಾ ಯಕೃತ್ತಿನ ಹಾನಿ, ಉಸಿರಾಟದ ಕಾಯಿಲೆ ತಲೆನೋವು, ಜ್ವರ, ಅತಿಸಾರಗಳಂತಹ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಕ್ಯಾನ್‌ಗಳ ಮೇಲಿನ ಚೂಪಾದ ಅಂಚುಗಳು ಬಾಯಿ ಅಥವಾ ತುಟಿಗಳಿಗೆ ಕಡಿತವನ್ನು ಉಂಟು ಮಾಡ ಬಹುದು, ಇದು ರಕ್ತಸ್ರಾವ ಅಥವಾ ಸೋಂಕು ಗಳಿಗೆ ಕಾರಣವಾಗಬಹುದು ಎಂದು ವೈದ್ಯಕೀಯ ಸಂಶೋಧನೆ ತಿಳಿಸಿದೆ.
ಕ್ಯಾನ್ ಮೂಲಕ ಯಾವುದೇ ಪಾನೀಯ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳು ಸೇರಿಕೊಳ್ಳುತ್ತವೆ.ಆಗ ವಿವಿಧ ಬ್ಯಾಕ್ಟೀರಿಯಾ ದೇಹದೊಳಗೆ ಸೇರಿಹಲವು ರೀತಿಯ ಅನಾರೋಗ್ಯ ದೇಹದಲ್ಲಿ ಕಾಣಿಸಿಕೊಳ್ಳುವುದು ಸಹಜ
ಸುರಕ್ಷಿತವಾಗಿರುವುದು ಹೇಗೆ?
ಕ್ಯಾನ್‌ಗಳಿಂದ ನೇರವಾಗಿ ಯಾವುದೇ ಪಾನೀಯ ಕುಡಿಯುವ ಬದಲು ಸುರಕ್ಷಿತ ಪರ್ಯಾಯವಾಗಿ ಸ್ಟ್ರಾ ಗಳನ್ನು ಬಳಸಲು ತಜ್ಞರು ಶಿಫಾರಸು ಮಾಡುತ್ತಾರೆ.
ಇದನ್ನು ಓದಿ: Health Tips :ಆತುರಾತುರವಾಗಿ ತಿನ್ನುತ್ತೀರಾ? ಹಾಗಾದ್ರೆ ಈ ಆರೋಗ್ಯ ಸಮಸ್ಯೆಯ ಬಗ್ಗೆ ಎಚ್ಚರ ವಹಿಸಿ!
ಕ್ಯಾನ್ ಅನ್ನು ಸ್ವಚ್ಛಗೊಳಿಸಿ; ಯಾವುದೇ ಕೊಳಕು ಅಥವಾ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಮೊದಲು ಕ್ಯಾನ್ ಸ್ವಚ್ಚ ಗೊಳಿಸಿ. ತಾಜಾ ಬಟ್ಟೆ, ಟಿಶ್ಯೂ ಅಥವಾ ಆಂಟಿಬ್ಯಾಕ್ಟೀರಿಯಲ್ ಬಳಸಿ ಕ್ಯಾನ್‌ನ ಮೇಲ್ಮೈಯನ್ನು ಸ್ವಚ್ಛಗೊಳಿಸಿ.
ಗ್ಲಾಸ್ ಬಳಕೆ ಮಾಡಿ: ಕ್ಯಾನ್ ಬಳಸಿ ನೇರವಾಗಿ ಕುಡಿಯುವ ಬದಲು ಗ್ಲಾಸ್ ಬಳಕೆ ಮಾಡಿ ಕುಡಿಯುವುದು ಉತ್ತಮವಾದ ಆಯ್ಕೆಯಾಗಿದೆ, ಇದು ಇತರ ಬ್ಯಾಕ್ಟೀರಿಯಾ,ಕಲುಷಿತದಿಂದ ನಿಮ್ಮನ್ನು ರಕ್ಷಿಸುತ್ತದೆ.