ಬೆಂಗಳೂರು: ಪ್ರಕೃತಿಯಲ್ಲಿ ಬೆಳೆಯುವ ಒಂದೊಂದು ಹಣ್ಣೂ ಒಂದೊಂದು ಪೌಷ್ಠಿಕಾಂಶದಿಂದ(Nutrient) ಸಮೃದ್ಧವಾಗಿದ್ದು, ಆರೋಗ್ಯ(Health) ವರ್ಧನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದೇ ರೀತಿಯಲ್ಲಿ ಬಾಯಿಗೆ ರುಚಿ ನೀಡುವ ಸೀಬೆ ಅಥವಾ ಪೇರಳೆ ಹಣ್ಣು(Guava) ಸಹ ತನ್ನಲ್ಲಿರುವ ಪೌಷ್ಠಿಕಾಂಶದ ಗುಣಗಳಿಂದಾಗಿ ಎಲ್ಲರ ಅಚ್ಚುಮೆಚ್ಚಿನ ಹಣ್ಣಾಗಿದೆ.
ಆಯುರ್ವೇದದಲ್ಲಿ ಈ ಹಣ್ಣನ್ನು ಅಮೃತ ಫಲ ಎಂದೇ ಕರೆಯುತ್ತಾರೆ. ಪೇರಳೆ ಹಣ್ಣು ವಿಟಮಿನ್, ನಾರಿನಾಂಶ ಮತ್ತು ಖನಿಜಾಂಶಗಳನ್ನು ಹೊಂದಿರುವ ಹಣ್ಣಾಗಿ ಹೆಸರುವಾಸಿಯಾಗಿದೆ. ಸೀಬೆ ಹಣ್ಣು ಹಲವಾರು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೊಜನಕಾರಿಯಾಗಿದೆ. ಹಾಗಾಗಿಯೇ ಅನೇಕ ಸಲ ರೋಗಿಗಳಿಗೆ ವೈದ್ಯರು ಸೀಬೆ ಹಣ್ಣನ್ನು ತಿನ್ನುವಂತೆ ಸಲಹೆ(Health Tips) ನೀಡುತ್ತಾರೆ.
ತಜ್ಞರ ಪ್ರಕಾರ ಕಿತ್ತಳೆ ಹಣ್ಣಿನಲ್ಲಿರುವುದಕ್ಕಿಂತಲೂ ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದೆ. ಈ ಹಣ್ಣಿನಲ್ಲಿ ಕಂಡುಬರುವ ಅಧಿಕ ಪ್ರಮಾಣದ ನಾರಿನಂಶ, ಪೊಟ್ಯಾಶಿಯಂ, ಮತ್ತು ಸಮೃದ್ಧವಾಗಿರುವ ಆಂಟಿ ಟಾಕ್ಸಿಕ್ ಅಂಶಗಳು ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಯೋಜನಕಾರಿಯಾಗಿದೆ.
ಸೀಬೆ ಹಣ್ಣಿನಲ್ಲಿರುವ ಕರಗುವ ಅಂಶದ ನಾರಿನಂಶವು ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ. ಇದರಲ್ಲಿರುವ ನಾರು ಜೀರ್ಣಾಂಗದಲ್ಲಿ ಕೊಲೆಸ್ಟ್ರಾಲ್ ಹೀರುವಿಕೆಯನ್ನು ಕಡಿಮೆಮಾಡುತ್ತದೆ. ಮಾತ್ರವಲ್ಲದೇ ಈ ಹಣ್ಣಿನಲ್ಲಿ ಕಂಡುಬರುವ ಪೆಕ್ಟಿನ್ ಎಂಬ ಅಂಶ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸೀಬೆ ಹಣ್ಣಿನ ನಿಯಮಿತ ಸೇವನೆಯಿಂದ ರಕ್ತದೊತ್ತಡವನ್ನು ಸಹ ನಿಯಂತ್ರಿಸಲು ಸಾಧ್ಯವಿದೆ.
Health Tips: ಚಳಿಗಾಲದಲ್ಲಿ ನೆಲ್ಲಿಕಾಯಿ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭ ಇದೆ ಗೊತ್ತಾ?
ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶ ಸಮೃದ್ಧವಾಗಿರುವುದರಿಂದ ಇದು ನಮ್ಮ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದು ದೇಹದಲ್ಲಿ ಸೋಡಿಯಂ ಪರಿಣಾಮಗಳನ್ನು ಸಮತೋಲನಗೊಳಿಸುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಹೃದಯದ ಮೇಲಿನ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಪೇರಳೆ ಹಣ್ಣನ್ನು ನಿಯಮಿತವಾಗಿ ತಿನ್ನುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ರಕ್ತದೊತ್ತಡವನ್ನು ನಿಯಂತ್ರಿಸಿಕೊಳ್ಳಬಹುದಾಗಿರುತ್ತದೆ.
ಸೀಬೆ ಹಣ್ಣಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕ ಅಂಶಗಳು ಇರುವ ಕಾರಣ ಇದು ದೇಹದಲ್ಲಿರುವ, ಜೀವಕೋಶಗಳನ್ನು ಹಾನಿಗೊಳಿಸುವ ಮತ್ತು ಹೃದಯದ ಕಾಯಿಲೆಗೆ ಕಾರಣವಾಗಬಹುದಾದ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶವು ಅಪಧಮನಿಯ ಭಿತ್ತಿಗಳನ್ನು ಬಲಪಡಿಸಲು ಮತ್ತು ಇದರ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಧುಮೇಹಿಗಳಿಗೂ ಪರಮ ಮಿತ್ರ ಸೀಬೆ ಹಣ್ಣು!
ಸೀಬೆ ಹಣ್ಣಿನಲ್ಲಿ ಗ್ಲೈಸೆಮಿಕ್ ಸೂಚಿ ಇರುವ ಕಾರಣ, ಇದು ರಕ್ತದಲ್ಲಿನ ಸಕ್ಕರೆ ಅಂಶ ಹಠಾತ್ತನೆ ಏರುವುದನ್ನು ತಡೆಯುತ್ತದೆ. ಇನ್ನು, ಪೇರಳ ಹಣ್ಣಿನಲ್ಲಿರುವ ನಾರಿನಂಶ ಗ್ಲುಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.ಸೀಬೆ ಹಣ್ಣಿನಲ್ಲಿ ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಫೈಬರ್ ಅಂಶವಿರುವುದರಿಂದ, ದೇಹ ತೂಕವನ್ನು ಇಳಿಸಲು ಇದು ಸಹಕಾರಿಯಾಗಿದೆ.