ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಚಳಿಗಾಲದಲ್ಲಿ ನೆಲ್ಲಿಕಾಯಿ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭ ಇದೆ ಗೊತ್ತಾ?

Health Benifits of Amla: ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ನೆಲ್ಲಿಕಾಯಿಯನ್ನು ಬೆಳಗ್ಗಿನ ಮೊದಲ ಆಹಾರವಾಗಿ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗುತ್ತದೆ. ನೆಲ್ಲಿಕಾಯಿ ತಿನ್ನುವುದರಿಂದ ನಮಗೆ ಸಿಗುವ ಆರೋಗ್ಯ ಪ್ರಯೋಜನಗಳು ಏನೆಲ್ಲ ಎನ್ನುವ ವಿವರ ಇಲ್ಲಿದೆ.

ಖಾಲಿ ಹೊಟ್ಟೆಗೆ ನೆಲ್ಲಿಕಾಯಿ ಸೇವಿಸಿ

ನೆಲ್ಲಿಕಾಯಿ -

Profile
Sushmitha Jain Dec 5, 2025 7:00 AM

ಬೆಂಗಳೂರು: ಚಳಿಗಾಲದಲ್ಲಿ(Winter) ದೇಹದ ರೋಗ ನಿರೋಧಕ (Immune system) ಸಾಮರ್ಥ್ಯ ಕಡಿಮೆಯಾಗುವ ಕಾರಣ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಈ ಋತುಮಾನದಲ್ಲಿ ಸೋಂಕುಗಳು ಬೇಗ ತಗಲುತ್ತವೆ. ತಜ್ಞರ ಪ್ರಕಾರ, ಇಂತಹ ಋತುಮಾನದಲ್ಲಿ ಔಷಧೀಯ ಗುಣ ಇರುವ ಆಹಾರಗಳನ್ನು ಸೇವಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಂತಹ ಪೌಷ್ಟಿಕಯುಕ್ತ ಆಹಾರ ಪದಾರ್ಥಗಳಲ್ಲಿ ನೆಲ್ಲಿಕಾಯಿ (Amla) ಕೂಡ ಒಂದಾಗಿದ್ದು, ಇದರಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ. ಮಧುಮೇಹವನ್ನು ಇದು ನಿಯಂತ್ರಿಸಲಿದ್ದು, ಉರಿಯೂತ ನಿವಾರಕ, ಅಸ್ತಮಾ ನಿವಾರಕ ಗುಣವನ್ನೂ ಹೊಂದಿದೆ. ಉಸಿರಾಟದ ಸಮಸ್ಯೆಗಳನ್ನು ಇದು ತಡೆಯುತ್ತವೆ. ಅದರಲ್ಲೂ ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ನೆಲ್ಲಿಕಾಯಿಯನ್ನು ಬೆಳಗ್ಗಿನ ಮೊದಲ ಆಹಾರವಾಗಿ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗುತ್ತದೆ. ನೆಲ್ಲಿಕಾಯಿ ತಿನ್ನುವುದರಿಂದ ನಮಗೆ ಸಿಗುವ ಆರೋಗ್ಯ ಪ್ರಯೋಜನಗಳು ಹೇಗಿರುತ್ತವೆ ಮತ್ತು ಏನೆಲ್ಲ ಲಾಭಗಳು ಸಿಗುತ್ತವೆ ಎಂಬುದರ ಬಗ್ಗೆ ತಿಳಿಯೋಣ.

ಪೌಷ್ಟಿಕಾಂಶಗಳಲ್ಲಿ ಸಮೃದ್ಧ

ಹಿಂದಿನ ಕಾಲದಿಂದಲೂ ಆಯುರ್ವೇದದಲ್ಲಿ ಔಷಧಿಯಾಗಿ ಬಳಸುತ್ತಿರುವ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಪ್ರಮಾಣ ಅತೀ ಹೆಚ್ಚಾಗಿದೆ. 100 ಗ್ರಾಂ ತಾಜಾ ನೆಲ್ಲಿಕಾಯಿಯಲ್ಲಿ, 20 ಕಿತ್ತಳೆ ಹಣ್ಣುಗಳಿಗೆ ಸಮನಾದ ವಿಟಮಿನ್ ಸಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿ ಶಕ್ತಿ, ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಕ್ಯಾರೋಟಿನ್, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್ ಮತ್ತು ಅನೇಕ ಅಗತ್ಯ ವಿಟಮಿನ್‌ಗಳು ಸಹ ಲಭ್ಯವಿದ್ದು, ಆ್ಯಂಡಿ ಆಕ್ಸಿಡೆಂಟ್ ಅಂಶಗಳು ಇದರಲ್ಲಿ ಇರುವುದರಿಂದ ದೇಹದ ಸಂಪೂರ್ಣ ಆರೋಗ್ಯವನ್ನು ಸಮದೂಗಿಸಿಕೊಂಡು ಹೋಗುತ್ತದೆ. ಇದರೊಂದಿಗೆ ನೆಲ್ಲಿಕಾಯಿಯಲ್ಲಿ ಶಕ್ತಿ, ಕ್ಯಾಲೋರಿಗಳು, ಫೈಬರ್, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ 50%, ಕಬ್ಬಿಣ, ಕ್ಯಾರೋಟಿನ್, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್, ವಿಟಮಿನ್‌ಗಳು ಕೂಡ ಸಮೃದ್ಧವಾಗಿದ್ದು, ಇದು ಅನೇಕ ರೀತಿಯ ಅಸ್ವಸ್ಥತೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ

ಕ್ಯಾನ್ಸರ್ ತಡೆಗಟ್ಟುವ ಗುಣ

ನೆಲ್ಲಿಕಾಯಿಯಲ್ಲಿ ರೇಡಿಯೋ-ಮಾಡ್ಯುಲೇಟರ್, ಕೀಮೋ-ಮಾಡ್ಯುಲೇಟರ್, ಉರಿಯೂತ ವಿರೋಧಿ, ಆಂಟಿ-ಮ್ಯುಟಾಜೆನಿಕ್, ಫ್ರೀ ರಾಡಿಕಲ್ ಸ್ಕ್ಯಾವೆಂಜಿಂಗ್ ಮುಂತಾದ ಜೈವಿಕ ಗುಣಗಳನ್ನು ಹೊಂದಿದ್ದು, ಅಲ್ಲದೇ ಕ್ಯಾನ್ಸರ್ ಕಾರಕ ಕೋಶಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಅವುಗಳನ್ನು ಕೊಲ್ಲುತ್ತದೆ. ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಮತ್ತು ತಡೆಗಟ್ಟುವಿಕೆಯಲ್ಲಿ ನೆಲ್ಲಿಕಾಯಿ ಸಹಾಯಕವಾಗುತ್ತವೆ ಎಂಬ ಅಭಿಪ್ರಾಯ ತಜ್ಞರದು.

ಕರಿಬೇವಿನ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಇವು!

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ನೆಲ್ಲಿಕಾಯಿಯು ಕರಗುವ ಫೈಬರ್ ಅನ್ನು ಹೊಂದಿದ್ಧು, ಇದು ಚಯಾಪಚಯವನ್ನು ಸುಧಾರಿಸಲು ಮತ್ತು ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜತೆಗೆ ಹೆಚ್ಚಿನ ಮಧುಮೇಹ ಹೊಂದಿರುವವರಿಗೆ ಅವರ ದೇಹದಲ್ಲಿನ ಸಕ್ಕರೆ ಅಂಶದ ಮಟ್ಟವನ್ನು ಸಮತೋಲನ ಗೊಳಿಸಿ ಇನ್ಸುಲಿನ್ ಪ್ರತಿರೋಧಕ್ಕೆ ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಫಲಕಾರಿ

ನೆಲ್ಲಿಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಅಂಶಗಳಿದ್ದು, ಗ್ಯಾಸ್ಟ್ರಿಕ್ ಜ್ಯೂಸ್ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಹೆಚ್ಚಿನ ಫೈಬರ್ ಅಂಶದಿಂದಾಗಿ ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಪ್ರತಿದಿನ ನೆಲ್ಲಿಕಾಯಿ ಸೇವಿಸುವುದು ಉತ್ತಮ.

ಮಹಿಳೆಯರ ಆರೋಗ್ಯಕ್ಕೆ ವಿಶೇಷ ಪ್ರಯೋಜನ

ಋತುಚಕ್ರದ ಸಮಯದಲ್ಲಿ ನೆಲ್ಲಿಕಾಯಿ ದೇಹದಿಂದ ವಿಷ ಕಣಗಳನ್ನು ಹೊರಹಾಕಲು ನೆರವಾಗಲಿದ್ದು, ಮೂಡ್ ಸ್ವಿಂಗ್, ಹೊಟ್ಟೆ ಸೆಳೆತ, ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಹಾರ್ಮೋನುಗಳನ್ನು ಸಮತೋಲನಗೊಳಿಸುವ ಗುಣ ಇರುವುದರಿಂದ ಫಲವತ್ತತೆಯ ಮೇಲೆ ಯಾವುದೇ ಹಾನಿಕಾರಕ ಪರಿಣಾಮ ಬೀರುವುದಿಲ್ಲ.