ಬೆಂಗಳೂರು,ಸೆ.3: ಭಾರತೀಯ ಅಡುಗೆಯಲ್ಲಿ ಕೊಬ್ಬರಿ ಎಣ್ಣೆಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ಆಹಾರದ ರುಚಿ ಹೆಚ್ಚಿಸು ವುದಲ್ಲದೆ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ.ತಾಜಾ ತೆಂಗಿನ (Coconut Oil) ತಿರುಳಿನಿಂದ ಹೊರತೆಗೆಯಲಾದ ಈ ನೈಸರ್ಗಿಕ ಎಣ್ಣೆಯು ಕೊಬ್ಬಿನಾಮ್ಲಗಳಲ್ಲಿ ಹಾಗೂ ವಿಶೇಷವಾಗಿ ಲಾರಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಉತ್ಕರ್ಷಣ ನಿರೋಧಕ ಹೆಚ್ಚು ಮಾಡಿ ದೇಹಕ್ಕೆ ಉತ್ತೇಜನ ನೀಡುತ್ತದೆ. ಸಾಮಾನ್ಯ ಆಹಾರ ಶೈಲಿ ಹಾಗೂ ದಿನನಿತ್ಯದಲ್ಲಿ ಕೊಬ್ಬರಿ ಎಣ್ಣೆಯನ್ನು ಹಿತಮಿತವಾಗಿ ಬಳಸುವುದರಿಂದ ಏನೆಲ್ಲಾ ಆರೋಗ್ಯ ಲಾಭ ಇದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಹೃದಯ ಆರೋಗ್ಯವನ್ನು ಬೆಂಬಲಿಸುತ್ತದೆ:
ತೆಂಗಿನ ಎಣ್ಣೆಯು ಟ್ರೈಗ್ಲಿಸರೈಡ್‌ಗಳನ್ನು ಹೊಂದಿದ್ದು ಉತ್ತಮ HDL ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ರಕ್ತ ಸಂಚಾರವು ಸುಗಮವಾಗಿ ನಡೆಯಲಿದ್ದು ಹೃದಯದ ಆರೋಗ್ಯ ಬೆಂಬಲಿಸುವಂತೆ ಮಾಡುತ್ತದೆ.
ಶಕ್ತಿಯ ಮಟ್ಟ ಹೆಚ್ಚಳ:
ಕೊಬ್ಬರಿ ಎಣ್ಣೆಯಲ್ಲಿರುವ ಕೊಬ್ಬಿನಂಶಗಳು ಸುಲಭವಾಗಿ ಜೀರ್ಣಗೊಳ್ಳುವಂತೆ ಮಾಡುತ್ತದೆ. ಇದು ಆಯಾಸವನ್ನು ದೂರವಾಗಿಸಿ ದೇಹವನ್ನು ಆ್ಯಕ್ಟೀವ್ ಆಗಿ ಇರಿಸುತ್ತದೆ.
ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ:
ದೇಹವು ಕೊಬ್ಬು-ಕರಗುವ ಜೀವಸತ್ವಗಳನ್ನು ವಿಟಮಿನ್ A, D, E, ಹೀರಿಕೊಳ್ಳಲು ಸಹಾಯ ಮಾಡುವ ಮೂಲಕ ಉತ್ತಮ ಜೀರ್ಣ ಕ್ರಿಯೆಯನ್ನು ಬೆಂಬಲಿಸುತ್ತದೆ. ಅದೇ ರೀತಿ ದೇಹದಲ್ಲಿ ಉಂಟಾಗುವ ಉರಿಯೂತವನ್ನು ಕೂಡ ಕಡಿಮೆ ಮಾಡುತ್ತದೆ.
ತೂಕ ನಿಯಂತ್ರಣಕ್ಕೆ ಸಹಕಾರಿ:
ಚಯಾಪಚಯ ಕ್ರಿಯೆಯನ್ನು ಬೆಂಬಲಿಸಿ ಬೇಗನೇ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದ ದೇಹದ ತೂಕ ನಿರ್ವಹಣೆಗೆ ಇದು ಉತ್ತಮ ಆಯ್ಕೆಯಾಗಿದೆ.
ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ:
ಮುಖದ ಕಾಂತಿ ಹೆಚ್ಚಿಸಲು ಹೆಚ್ಚಿನವರು ತೆಂಗಿನ ಎಣ್ಣೆ ಬಳಕೆ ಮಾಡುತ್ತಾರೆ. ತೆಂಗಿನ ಎಣ್ಣೆ ಚರ್ಮವನ್ನು ತೇವಗೊಳಿಸಲು, ಶುಷ್ಕತೆಯನ್ನು ಕಡಿಮೆ ಮಾಡಿ ಮುಖದ ಬ್ರೈಟ್ ಹೆಚ್ಚಿಸುತ್ತದೆ.
ಕೂದಲಿನ ಆರೈಕೆ:
ಕೂದಲು ಉದುರುವಿಕೆಯನ್ನು ತಡೆದು, ಕೂದಲಿನ ಪ್ರೋಟೀನ್ ನಷ್ಟವಾಗದಂತೆ ತೆಂಗಿನ ಎಣ್ಣೆ ತಡೆಯುತ್ತದೆ. ಕೂದಲಿಗೆ ನೈಸರ್ಗಿಕ ಹೊಳಪು ನೀಡಲು ಸ್ನಾನಕ್ಕೂ ಮೊದಲು ತೆಂಗಿನ ಎಣ್ಣೆ ಬಳಸಿ