ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Health: ನಿಮ್ಮ ಹಿತ್ತಿಲಿನಲ್ಲಿ ಬೆಳೆಯುವ ನೀಲ ಶಂಖ ಪುಷ್ಪ ಬಳಸಿ ಆರೋಗ್ಯ, ಸೌಂದರ್ಯ ಹೆಚ್ಚಿಸಬಹುದು; ಎಲ್ಲಿ ಸಿಕ್ಕರೂ ಬಿಡಬೇಡಿ

ಸಾಮಾನ್ಯವಾಗಿ ಎಲ್ಲೆಂದರಲ್ಲಿ ಬೆಳೆಯುವ ನೀಲಶಂಖ ಪುಷ್ಪ ಎಲ್ಲೇ ಸಿಕ್ಕರೂ ಬಿಡಬೇಡಿ. ಇದರಲ್ಲಿ ನಾನಾ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಇದರಿಂದ ಕಣ್ಣು, ಮುಖ್ಯ, ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲ ಇನ್ನೂ ಹಲವಾರು ರೀತಿಯ ಪ್ರಯೋಜನವನ್ನು ಪಡೆಯಬಹುದು ಎನ್ನುತ್ತಾರೆ ಆಯುರ್ವೇದ ಸೌಂದರ್ಯ ತಜ್ಞರಾದ ದೀಪಾ ನಾಗೇಶ್.

ಬೆಂಗಳೂರು: ಕೂದಲಿಗೆ ಮಾತ್ರವಲ್ಲ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸಾಮಾನ್ಯವಾಗಿ ಎಲ್ಲೆಂದರಲ್ಲಿ ಬೆಳೆಯುವ ನೀಲಶಂಖ ಪುಷ್ಪ (Neelashankha flower ) ಎಲ್ಲೇ ಸಿಕ್ಕರೂ ಬಿಡಬೇಡಿ ಎನ್ನುತ್ತಾರೆ ಆಯುರ್ವೇದ ಸೌಂದರ್ಯ ತಜ್ಞರಾದ ದೀಪಾ ನಾಗೇಶ್.ವಿಶ್ವವಾಣಿ ಹೆಲ್ತ್ (Vishwavani Health) ಯೂಟ್ಯೂಬ್ ಚಾನೆಲ್ (Youtube channel) ನಲ್ಲಿ ನೀಲಶಂಖ ಪುಷ್ಪದ ಪ್ರಯೋಜನಗಳ ಕುರಿತು ಅವರು ನೀಡಿರುವ ಮಾಹಿತಿ ಇಲ್ಲಿದೆ. ನೀಲಶಂಖ ಪುಷ್ಪದಿಂದ ಬೆಳಗ್ಗೆ ಕಷಾಯ ಮಾಡಿ ಸೇವಿಸುವುದು ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದರಿಂದ ರಕ್ತ ಶುದ್ಧಿಯಾಗುತ್ತದೆ, ಚರ್ಮಕ್ಕೆ ಕಾಂತಿ ದೊರೆಯುತ್ತದೆ. ಈ ಕಷಾಯವನ್ನು ಹೇರ್ ಟಾನಿಕ್, ಸ್ಕಿನ್ ಟೋನರ್ ಆಗಿ ಕೂಡ ಬಳಕೆ ಮಾಡಬಹುದು. ಇನ್ನು ಇದರ ಸೀರಮ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆ, ಚರ್ಮ ಸುಕ್ಕುಗಟ್ಟುವುದನ್ನು ತಡೆಯಬಹುದು. ಅಗಸೆ ಬೀಜದ ಜೆಲ್ ತಯಾರಿಸಿ ಅದಕ್ಕೆ ನಿಲಶಂಖ ಪುಷ್ಪವನ್ನು ಬೆರೆಸಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಳಸಬಹುದು. ನೀಲಶಂಖ ಪುಷ್ಪವನ್ನು ಹಾಲು ಜೊತೆ ಬೆರೆಸಿ ಪೇಸ್ಟ್ ಮಾಡಿ ಪೂರ್ತಿ ದೇಹದ ಮಸಾಜ್ ಗೂ ಬಳಸಬಹುದು. ಇದರಿಂದ ಮಕ್ಕಳ ದೇಹ ಮಸಾಜ್ ಕೂಡ ಮಾಡಬಹುದು. ಇದರಿಂದ ಕಾಡಿಗೆಯನ್ನು ಕೂಡ ತಯಾರಿಸಬಹುದು ಎನ್ನುತ್ತಾರೆ ಅವರು.