Health Tips: ವಾರದಿಂದ ಕಾಡುವ ನೆಗಡಿ, ಕೆಮ್ಮಿಗೆ ಇಲ್ಲಿದೆ ಸರಳ ಮನೆ ಮದ್ದು
ನಮ್ಮ ಸುತ್ತಮುತ್ತಲು ಇರುವ ಔಷಧೀಯ ಗಿಡಗಳಿಂದಲೇ ದೀರ್ಘ ಕಾಲದ ನೆಗಡಿ, ಕೆಮ್ಮು ಕಫದಂತಹ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅದರಲ್ಲಿಯೂ ತುಳಸಿ ಎಲೆ ದೀರ್ಘ ಕಾಲದ ನೆಗಡಿ, ಕಫ, ಕೆಮ್ಮು ಸಮಸ್ಯೆಗೆ ಸುಲಭವಾಗಿ ಪರಿಹಾರ ನೀಡುವ ಜತೆಗೆ ಅನೇಕ ಇತರ ಆರೋಗ್ಯ ಸಮಸ್ಯೆಯನ್ನೂ ನಿವಾರಿಸುತ್ತದೆ ಎಂದು ವೈದ್ಯೆ ಡಾ. ಪದ್ಮಾವತಿ ರಾಥೋಡ್ ವಿವರಿಸಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ಇತ್ತೀಚಿನ ದಿನದಲ್ಲಿ ಹವಾಮಾನ ವೈಪರೀತ್ಯಗಳಿಂದ ಎಲ್ಲ ಕಾಲದಲ್ಲಿಯೂ ನಮಗೆ ಶೀತ, ಕೆಮ್ಮು, ಜ್ವರ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳು ಕಾಡುತ್ತಲೇ ಇರುತ್ತದೆ. ಕೆಲವೊಮ್ಮೆ ಈ ನೆಗಡಿ, ಕೆಮ್ಮುಗಳು 10-15 ದಿನಗಳ ತನಕ ಇದ್ದು ಸಮಸ್ಯೆ ನೀಡುತ್ತವೆ. ಇದಕ್ಕೆ ಅಲೋಪತಿ ಔಷಧದ ಮೊರೆ ಹೋಗಿ ಬಳಿಕ ವಾಸಿಯಾಗದೆ ಅನೇಕರು ತೊಂದರೆಗೊಳಗಾಗುತ್ತಿದ್ದಾರೆ. ಇದಕ್ಕಿಂತಲೂ ಆಯುರ್ವೇದದ ಔಷಧಗಳ ಮೊರೆ ಹೋದರೆ ತುಂಬಾ ಉತ್ತಮ ಎಂದು ʼವಿಶ್ವವಾಣಿ ಹೆಲ್ತ್ʼ ಚಾನಲ್‌ನಲ್ಲಿ ಆಯುರ್ವೇದ ವೈದ್ಯೆ ಡಾ. ಪದ್ಮಾವತಿ ರಾಥೋಡ್ (Dr. Padmavati Rathod) ತಿಳಿಸಿದ್ದಾರೆ.
ನಮ್ಮ ಸುತ್ತ ಮುತ್ತಲು ಇರುವ ಔಷಧೀಯ ಗಿಡಗಳಿಂದಲೇ ದೀರ್ಘ ಕಾಲದ ನೆಗಡಿ, ಕೆಮ್ಮು ಕಫ ದಂತಹ ಆರೋಗ್ಯ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದು. ಅದರಲ್ಲಿಯೂ ತುಳಸಿ ಎಲೆ ದೀರ್ಘ ಕಾಲದ ನೆಗಡಿ, ಕಫ, ಕೆಮ್ಮು ಮುಂತಾದ ಸಮಸ್ಯೆಗೆ ಸುಲಭವಾಗಿ ಪರಿಹಾರ ನೀಡುವ ಜತೆಗೆ ಅನೇಕ ಇತರ ಆರೋಗ್ಯ ಪ್ರಯೋಜನೆ ನೀಡುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.
ತುಳಸಿ ಗಿಡಕ್ಕೆ ಹಿಂದೂ ಸಂಪ್ರದಾಯದಲ್ಲಿ ಪೂಜ್ಯನೀಯ ಸ್ಥಾನವಿದೆ. ತುಳಸಿ ಗಿಡದಲ್ಲಿ ಅನೇಕ ಔಷಧೀಯ ಅಂಶಗಳಿದ್ದು ಅವುಗಳಿಂದ ಆರೋಗ್ಯ ವೃದ್ಧಿ ಮಾಡಬಹುದು. ಅದರಲ್ಲಿಯೂ ನೆಗಡಿ ಸಮಯದಲ್ಲಿ ತುಳಸಿ ಆರೋಗ್ಯ ದೃಷ್ಟಿಯಿಂದ ಸಹಕಾರಿ. ಕೊರೋನಾ ಅವಧಿಯಲ್ಲಿ ಎಲ್ಲಿಯೂ ಸರಿಯಾದ ಔಷಧಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಬಹುತೇಕ ಜನರು ಈ ತುಳಸಿ ಎಲೆಯನ್ನು ಔಷಧವಾಗಿ ಸೇವಿಸಿ ಗುಣಮುಖರಾಗಿದ್ದು ಇದೆ. ಈ ಬಗ್ಗೆ ಅನೇಕ ಉಪಯುಕ್ತ ಸಂಗತಿಯನ್ನು ಡಾ. ಪದ್ಮಾವತಿ ತಿಳಿಸಿ ಕೊಟ್ಟಿದ್ದಾರೆ.
ವಿಡಿಯೊ ನೋಡಿ:
ಹೇಗೆ ಬಳಸುವುದು?
- 5-6ತುಳಸಿ ಎಲೆಗಳನ್ನು ಅರ್ಧ ಇಂಚಿನಷ್ಟು ಶುಂಠಿ ಜತೆ ಬೆರೆಸಿ ಆ ನೀರಿನ ಕಷಾಯವನ್ನು ದಿನಕ್ಕೆ ಮೂರು ಸಲ ಸೇವಿಸುದರಿಂದ ನೆಗಡಿ, ಕೆಮ್ಮು ಸಮಸ್ಯೆ ದೂರಾಗಲಿದೆ.
- ಚರ್ಮ ರೋಗದ ಸಮಸ್ಯೆ ಇದ್ದರೆ ಆಗ ತುಳಸಿ ರಸದ ಜತೆಗೆ ಲಿಂಬೆ ಹಣ್ಣಿನ ರಸ ಮಿಶ್ರಗೊಳಿಸಿ ಕಲೆಯಾದ ಭಾಗದಲ್ಲಿ ಹಚ್ಚಿದರೆ ಕಲೆ ನಿರ್ಮೂಲನೆ ಆಗಲಿದೆ.
- ಚರ್ಮದ ತುರಿಕೆ ಕಂಡುಬಂದಾಗ ಲಿಂಬೆ ರಸ, ಜೇನುತುಪ್ಪ ಹಾಗೂ ತುಳಸಿ ರಸ ಮಿಶ್ರಣ ಮಾಡಿ ಲೇಪನ ಹಚ್ಚುದರಿಂದು ತುರಿಕೆ ಕಡಿಮೆಯಾಗಲು ಸಹಕಾರಿಯಾಗಲಿದೆ.
ಅಂಗೈಯಲ್ಲೇ ಇದೆ ಔಷಧ ಭಂಡಾರ; ತೂಕ ಇಳಿಕೆಯಿಂದ ಹಿಡಿದು ಬೊಜ್ಜು ಕರಗಿಸಲು ನೆರವಾಗುತ್ತದೆ ಈ ಮ್ಯಾಜಿಕ್ ಪಾನೀಯ
- ಸಂಧಿವಾತ, ಕೀಲು ನೋವು ಇತ್ಯಾದಿ ಸಮಸ್ಯೆ ಇದ್ದವರು ಆ ಜಾಗಕ್ಕೆ ಶುಂಠಿ ಪೇಸ್ಟ್ ಮತ್ತು ತುಳಸಿ ಎಲೆಯ ಪೇಸ್ಟ್ ಅನ್ನು ಮಿಶ್ರ ಮಾಡಿ ಲೇಪಿಸಬೇಕು.
- ಜ್ವರ ಕಡಿಮೆಯಾಗಲು ಕೂಡ ತುಳಸಿ ರಸ ಪರಿಣಾಮಕಾರಿ. ಉಗುರು ಬೆಚ್ಚಗಿನ ನೀರಿನ ಜತೆ ತುಳಸಿ ರಸ ಸೇರಿಸಿ ಸೇವಿಸಿದರೆ ಜ್ವರ ಕಡಿಮೆಯಾಗಲಿದೆ.
- ತುಳಸಿ ರಸ ಇರುವ ನೀಡಿಗೆ ಕಹಿ ಬೇವಿನ ಎಲ್ಲೆಯ ರಸ ಸೇರಿಸಿ ನಿತ್ಯ ಸೇವನೆ ಮಾಡುವುದರಿಂದ ಸಣ್ಣ ಪುಟ್ಟ ಕಾಯಿಲೆ ಬರಲಾರದು.
- ತುಳಸಿ ಎಲೆಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಗುಣವಿದೆ. ಈ ನಿಟ್ಟಿನಲ್ಲಿ ಕೂಡ ಇದು ಸಹಕಾರಿ.
- ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
- ತುಳಸಿ ರಸದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬೇಕಾದ ಪೋಷಕಾಂಶಗಳಿವೆ. ಹೀಗಾಗಿ ಇದರ ಸೇವನೆ ಯಥೇಚ್ಛವಾಗಿ ಮಾಡಿದರೆ ಹೃದಯದ ಆರೋಗ್ಯಕ್ಕೆ ಉತ್ತಮ ಪರಿಣಾಮ ಬೀರಲಿದೆ.
ಅಲ್ಲದೆ ತುಳಸಿಯಲ್ಲಿ ವಲೊಟೈಲ್ ಆಯ್ಲ್ ಪ್ರಮಾಣ ಹೇರಳವಾಗಿ ಇದೆ. ಹೀಗಾಗಿ ಇದನ್ನು ನಾವು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ಬೇಕಾದ ರೋಗ ನಿರೋಧಕ ಶಕ್ತಿ ನೈಸರ್ಗಿಕವಾಗಿ ಸಿಕ್ಕಂತಾಗುತ್ತದೆ. ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ ಫಂಗಲ್ ಅಂಶ ತುಳಸಿಯಲ್ಲಿ ಇರುವ ಕಾರಣಕ್ಕೆ ಇದನ್ನು ಸೇವಿಸುವುದರಿಂದ ದೇಹ ಕ್ರಿಯಾಶೀಲವಾಗಿ ಇರಲಿದೆ. ಈ ಮೂಲಕ ತುಳಸಿಯನ್ನು ಪೂಜ್ಯನೀಯವಾಗಿ ಕಾಣುವ ಜೊತೆ ಜೊತೆಗೆ ಅವುಗಳ ರಸವನ್ನು ಸೇವಿಸುದರಿಂದ ಆರೋಗ್ಯಯುತ ಜೀವನ ಶೈಲಿಯನ್ನು ನೀವು ರೂಢಿಸಿಕೊಳ್ಳಬಹುದು ಎಂದು ಡಾ. ಪದ್ಮಾವತಿ ತಿಳಿಸಿದ್ದಾರೆ.