WHO: ಭಾರತದ ಮಕ್ಕಳಲ್ಲಿ ಉಂಟಾಗುವ ಸ್ಥೂಲಕಾಯತೆ ತಡೆಗಟ್ಟಲು ಡಬ್ಲ್ಯೂಎಚ್‌ಒ ಫೌಂಡೇಶನ್ ಮತ್ತು ನೋವೋ ನಾರ್ಡಿಸ್ಕ್ ಸಹಭಾಗಿತ್ವ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇಂದು ಜಾಗತಿಕವಾಗಿ ಅಪೌಷ್ಟಿಕತೆಗಿಂತಲೂ, ಅತಿಯಾದ ತೂಕ ಮತ್ತು ಸ್ಥೂಲಕಾಯತೆ ಹೆಚ್ಚಿನ ಸಾವುಗಳಿಗೆ ಕಾರಣವಾಗುತ್ತಿವೆ. ಇದು ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ಟೈಪ್ 2 ಮಧುಮೇಹ ಸೇರಿದಂತೆ ಹಲವಾರು ಸಾಂಕ್ರಾಮಿಕ ವಲ್ಲದ ರೋಗಗಳಿಗೆ ನೇರ ಸಂಬಂಧ ಹೊಂದಿದೆ.
-
ಬೆಂಗಳೂರು: ಭಾರತದಲ್ಲಿ ಹೆಚ್ಚುತ್ತಿರುವ ಮಕ್ಕಳ ಸ್ಥೂಲಕಾಯತೆ ಸಮಸ್ಯೆಯನ್ನು ನಿಯಂತ್ರಿಸಲು ಮತ್ತು ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಆರ್ಥಿಕ ನೆರವು ನೀಡುವ ಉದ್ದೇಶದೊಂದಿಗೆ 'ಡಬ್ಲ್ಯೂಎಚ್‌ಒ ಫೌಂಡೇಶನ್' ಮತ್ತು 'ನೋವೋ ನಾರ್ಡಿಸ್ಕ್' ಸಂಸ್ಥೆಗಳು ಇಂದು ಹೊಸ ಸಹಭಾಗಿತ್ವ ಮಾಡಿಕೊಂಡಿವೆ. ಈ ಸಹಯೋಗವು ಶಾಲಾ ಆಧಾರಿತ ಆರೋಗ್ಯ ಕಾರ್ಯಕ್ರಮಗಳ ಮೂಲಕ ಸ್ಥೂಲಕಾಯತೆ ತಡೆಗಟ್ಟುವ ಗುರಿ ಹೊಂದಿದ್ದು, ಭಾರತ ಸರ್ಕಾರದ 'ಆಯುಷ್ಮಾನ್ ಭಾರತ್ ಶಾಲಾ ಆರೋಗ್ಯ ಮತ್ತು ಸ್ವಾಸ್ಥ್ಯ ಕಾರ್ಯಕ್ರಮ' ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ 'ಆರೋಗ್ಯ ಉತ್ತೇಜಕ ಶಾಲೆಗಳ' ಚೌಕಟ್ಟಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇಂದು ಜಾಗತಿಕವಾಗಿ ಅಪೌಷ್ಟಿಕತೆಗಿಂತಲೂ, ಅತಿಯಾದ ತೂಕ ಮತ್ತು ಸ್ಥೂಲಕಾಯತೆ ಹೆಚ್ಚಿನ ಸಾವುಗಳಿಗೆ ಕಾರಣವಾಗುತ್ತಿವೆ. ಇದು ಹೃದಯರಕ್ತನಾಳದ ಕಾಯಿಲೆಗಳು ಮತ್ತು ಟೈಪ್ 2 ಮಧುಮೇಹ ಸೇರಿದಂತೆ ಹಲವಾರು ಸಾಂಕ್ರಾಮಿಕವಲ್ಲದ ರೋಗಗಳಿಗೆ ನೇರ ಸಂಬಂಧ ಹೊಂದಿದೆ.
ಬಾಲ್ಯದಲ್ಲಿ ಕಂಡುಬರುವ ಅತಿಯಾದ ತೂಕವು ಮುಂದಿನ ಜೀವನದಲ್ಲಿ ಸ್ಥೂಲಕಾಯತೆ ಮತ್ತು ಅದಕ್ಕೆ ಸಂಬಂಧಿಸಿದ ಆರೋಗ್ಯದ ಅಪಾಯಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಬಾಲ್ಯದಲ್ಲೇ ತಡೆಗಟ್ಟುವಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ.
ಇದನ್ನೂ ಓದಿ:WHO Alert: ಕಲುಷಿತ ಭಾರತೀಯ ಕೆಮ್ಮಿನ ಸಿರಪ್ ಬಗ್ಗೆ ಎಚ್ಚರ: ವಿಶ್ವ ಆರೋಗ್ಯ ಸಂಸ್ಥೆ
ಈ ಸಹಭಾಗಿತ್ವವು ಆರೋಗ್ಯಕರ ಜೀವನಶೈಲಿ, ದೈಹಿಕ ಚಟುವಟಿಕೆಗಳಿಗೆ ಪ್ರೋತ್ಸಾಹ, ಆರಂಭಿಕ ಹಂತದಲ್ಲೇ ಅಪಾಯ ಗುರುತಿಸುವಿಕೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಜ್ಜುಗೊಳಿಸುವಿಕೆಯ ಮೇಲೆ ಗಮನ ಕೇಂದ್ರೀಕರಿಸಲಿದೆ. ಭಾರತದಲ್ಲಿ ಸ್ಥೂಲಕಾಯತೆ ಸಮಸ್ಯೆ ಮತ್ತು ತುರ್ತು ಪರಿಸ್ಥಿತಿಯನ್ನು ಮನಗಂಡು, ಸುಸ್ಥಿರ ತಡೆಗಟ್ಟುವಿಕೆ ಕ್ರಮಗಳನ್ನು ಜಾರಿಗೆ ತರಲು ಈ ಸಂಸ್ಥೆಗಳು ಭಾರತಕ್ಕೆ ಆದ್ಯತೆ ನೀಡಬೇಕೆಂದು ಪರಿಗಣಿಸಿದೆ.
ಆಯ್ದ ಜಿಲ್ಲೆಗಳಲ್ಲಿನ ಶಾಲಾ ಪರಿಸರವನ್ನು ಆರೋಗ್ಯಕರವಾಗಿಸುವುದು, ಆರೋಗ್ಯ ತಪಾಸಣೆ, ಜೀವನಶೈಲಿ ಶಿಕ್ಷಣ ಮತ್ತು ಮಕ್ಕಳಲ್ಲಿ ಹಾಗೂ ಹದಿಹರೆಯದವರಲ್ಲಿ ಆರೋ ಗ್ಯದ ಅಪಾಯಗಳನ್ನು ಮೊದಲೇ ಗುರುತಿಸಲು ಮಾನಸಿಕ ಆರೋಗ್ಯ ಬೆಂಬಲ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಕುರಿತು ಮಾತನಾಡಿದ ಡಬ್ಲ್ಯೂಎಚ್‌ಒ ಫೌಂಡೇಶನ್ ನ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಅನಿಲ್ ಸೋನಿ ಅವರು, "ಭಾರತದಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯತೆ ಅಥವಾ ಬೊಜ್ಜಿನ ಸಮಸ್ಯೆಯು, ಜನರನ್ನು ಮೊದಲೇ ಎಚ್ಚರಿಸುವ ಮತ್ತು, ದೀರ್ಘಕಾಲದವರೆಗೆ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಂತಹ 'ತಡೆಗಟ್ಟುವಿಕೆಗೆ ಆದ್ಯತೆ ನೀಡುವ' ವಿಧಾನಗಳ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
ಶಾಲೆಗಳು ಬೊಜ್ಜು ತಡೆಗಟ್ಟುವಿಕೆಯ ವಿಚಾರದಲ್ಲಿ ಮುಂಚೂಣಿಯಲ್ಲಿವೆ. ಶಾಲಾ ಅವಧಿ ಯಲ್ಲೇ ಆರೋಗ್ಯ ತಪಾಸಣೆ ಮತ್ತು ಶಿಕ್ಷಣವನ್ನು ಸಂಯೋಜಿಸುವ ಮೂಲಕ, ಮುಂದಿನ ಪೀಳಿಗೆಯ ಸ್ವಾಸ್ಥ್ಯವನ್ನು ರಕ್ಷಿಸುವುದು ಮತ್ತು ಶಾಲೆಗಳನ್ನು ಆರೋಗ್ಯಕರ ಜೀವನಕ್ಕೆ ಪೂರಕವಾದ ಪರಿಸರವಾಗಿ ಪರಿವರ್ತಿಸುವುದು ಈ ಸಹಭಾಗಿತ್ವದ ಗುರಿಯಾಗಿದೆ" ಎಂದು ಹೇಳಿದರು.
ನೋವೋ ನಾರ್ಡಿಸ್ಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಕ್ರಾಂತ್ ಶ್ರೋತ್ರಿಯಾ ಮಾತನಾಡಿ, "ಆರೋಗ್ಯಕರ ಸಮಾಜದ ನಿರ್ಮಾಣವು, ಯುವಜನರು ಸರಿಯಾದ ನಿರ್ಧಾರ ಗಳನ್ನು ತೆಗೆದುಕೊಳ್ಳುವಂತೆ ಮಾಡುವುದರಿಂದ ಆರಂಭವಾಗುತ್ತದೆ. ಭಾರತದಲ್ಲಿ ಬಾಲ್ಯ ಮತ್ತು ಹದಿಹರೆಯದ ಬೊಜ್ಜಿನ ಸಮಸ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದೆ.
ದೇಶದ ದೀರ್ಘಕಾಲದ ಆರೋಗ್ಯವನ್ನು ಕಾಪಾಡಲು ಈ ಸವಾಲನ್ನು ಮೊದಲೇ ಎದುರಿಸು ವುದು ಅತ್ಯಗತ್ಯ. ಡಬ್ಲ್ಯೂಎಚ್‌ಒ ಫೌಂಡೇಶನ್‌ನೊಂದಿಗೆ ನೋವೋ ನಾರ್ಡಿಸ್ಕ್ ಹೊಂದಿ ರುವ ಈ ಸಹಯೋಗವು ಶಾಲಾ ವಯಸ್ಸಿನ ಮಕ್ಕಳಿಗೆ ಆರೋಗ್ಯಕರ ಜೀವನ ನಡೆಸಲು ಅಗತ್ಯವಾದ ಜ್ಞಾನ, ಆತ್ಮವಿಶ್ವಾಸ ಮತ್ತು ಉತ್ತಮ ಅಭ್ಯಾಸಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಆರಂಭಿಕ ವಯಸ್ಸಿನಲ್ಲೇ ಜಾಗೃತಿ ಮೂಡಿಸುವ ಮೂಲಕ, ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವ ಮೂಲಕ ಮತ್ತು ಸಮತೋಲಿತ ಪೌಷ್ಟಿಕಾಂಶದ ಪ್ರಾಮುಖ್ಯತೆಯನ್ನು ತಿಳಿಸುವ ಮೂಲಕ, ನಾವು ಬೆಳೆಯುತ್ತಿರುವ ಬೊಜ್ಜಿನ ಹೊರೆಯನ್ನು ಕಡಿಮೆ ಮಾಡಲು ಮತ್ತು ಮುಂದಿನ ಪೀಳಿಗೆಗೆ ಆರೋಗ್ಯಕರ ಭವಿಷ್ಯವನ್ನು ಒದಗಿಸಲು ಸಹಾಯ ಮಾಡ ಬಹುದು" ಎಂದು ತಿಳಿಸಿದರು.
ಭಾರತವು ಇಂದು ಬೊಜ್ಜು ಮತ್ತು ಸಂಬಂಧಿಸಿದ ಹೃದಯ, ಮೂತ್ರಪಿಂಡ ಹಾಗೂ ಚಯಾಪಚಯ ಕ್ರಿಯೆಯ ಸಮಸ್ಯೆಗಳ ಕ್ಷಿಪ್ರ ಏರಿಕೆಯನ್ನು ಎದುರಿಸುತ್ತಿದೆ. ಇದು ಹೆಚ್ಚಾಗಿ ಯುವಜನತೆಯಲ್ಲಿ ಮತ್ತು ಚಿಕಿತ್ಸೆಯ ಲಭ್ಯತೆ, ಜಾಗೃತಿ ಹಾಗೂ ಆರೈಕೆಯ ಕೊರತೆ ಯಿರುವ ಸಮುದಾಯಗಳಲ್ಲಿ ಕಂಡುಬರುತ್ತಿದೆ. ಈ ಪ್ರವೃತ್ತಿಯನ್ನು ತಡೆಗಟ್ಟಲು ಪುರಾವೆ ಆಧಾರಿತ ಸಂಘಟಿತ ಕ್ರಮಗಳು, ಅಪಾಯಗಳನ್ನು ಮುಂಚಿತವಾಗಿ ಗುರುತಿಸುವಿಕೆ ಮತ್ತು ಸಾರ್ವಜನಿಕ ಆರೋಗ್ಯ ನಾಯಕತ್ವದ ಅಡಿಯಲ್ಲಿ ಆರೋಗ್ಯ ವ್ಯವಸ್ಥೆಯ ಸನ್ನದ್ಧತೆ ಅತ್ಯಗತ್ಯವಾಗಿದೆ.