ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರುಳಿನ ಆರೋಗ್ಯವನ್ನು ಹೆಚ್ಚಿಸಲು ತಜ್ಞರ ಸಲಹೆ ಇಲ್ಲಿದೆ!

Health Tips: ಮಳೆಗಾಲದಲ್ಲಿ ಜೀರ್ಣಕ್ರಿಯೆ ಹಾಗೂ ಕರುಳಿನ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಹೊರಗಿನಿಂದ ಹಾಗೂ ಕರಿದ ಆಹಾರಗಳ ಸೇವನೆಯಿಂದ ಈ ಸಮಸ್ಯೆ ಕಾಡುವುದು ಸಾಮಾನ್ಯ. ಆದರೆ ಹೆಚ್ಚಿನವರು ಇದನ್ನು ಸುಧಾರಿಸಲು 'ಪ್ರೊಬಯೋಟಿಕ್ ಸಪ್ಲಿಮೆಂಟ್‌ಗಳು' ಹಾಗೂ ಕ್ಯಾಪ್ಸೂಲ್‌ಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದರ ಬದಲಾಗಿ ಮನೆಯಲ್ಲೇ ಸಿಗುವ ಆಹಾರ ಪದಾರ್ಥಗಳನ್ನು ಬಳಕೆ ಮಾಡಲು ತಜ್ಞರು ಸಲಹೆ ನೀಡಿದ್ದಾರೆ

ಕರುಳಿನ ಆರೋಗ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸುವ ಆಹಾರಗಳು!

(ಸಂಗ್ರಹ ಚಿತ್ರ) -

Profile
Pushpa Kumari Jul 18, 2026 7:00 AM

ನವದೆಹಲಿ,ಜು.17: ಮಳೆಗಾಲದಲ್ಲಿ ಜೀರ್ಣಕ್ರಿಯೆ ಹಾಗೂ ಕರುಳಿನ ಆರೋಗ್ಯ (Gut health) ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಹೊರಗಿನಿಂದ ಹಾಗೂ ಕರಿದ ಆಹಾರಗಳ ಸೇವನೆಯಿಂದ ಈ ಸಮಸ್ಯೆ ಕಾಡುವುದು ಸಾಮಾನ್ಯ. ಆದರೆ ಹೆಚ್ಚಿನವರು ಇದನ್ನು ಸುಧಾರಿಸಲು 'ಪ್ರೊಬಯೋಟಿಕ್ ಸಪ್ಲಿಮೆಂಟ್‌ಗಳು' ಹಾಗೂ ಕ್ಯಾಪ್ಸೂಲ್‌ಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದರ ಬದಲಾಗಿ ಮನೆಯಲ್ಲೇ ಸಿಗುವ ಆಹಾರ ಪದಾರ್ಥಗಳನ್ನು ಬಳಕೆ ಮಾಡಲು ತಜ್ಞರು ಸಲಹೆ ನೀಡಿದ್ದಾರೆ. ಕೇವಲ ಪ್ರೊಬಯೋಟಿಕ್ ಮಾತ್ರೆಗಳನ್ನು ಸೇವನೆ ಮಾಡುವುದರಿಂದ ಅಡ್ಡ ಪರಿಣಾಮ ಉಂಟು ಮಾಡಬಹುದು. ಇದರ ಬದಲಾಗಿ ಅಡುಗೆ ಮನೆಯಲ್ಲೇ ಸುಲಭವಾಗಿ ಸಿಗುವ ಆಹಾರವನ್ನು ಬಳಕೆ ಮಾಡಬಹುದು.

ಈರುಳ್ಳಿ:

ಈರುಳ್ಳಿಯಲ್ಲಿ "ಫ್ರಕ್ಟೂಲಿ ಗೋಸ್ಯಾಕರೈಡ್‌ "ಎಂಬ ಅಂಶವಿದೆ. ಇದು ಆರಾಮದಾಯಕ ಕರುಳಿನ ಚಲನೆ ಮತ್ತು ಹೊಟ್ಟೆ ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಇದನ್ನು ಹಸಿಯಾಗಿ ಅಥವಾ ಸಲಾಡ್‌ಗಳಿಗೆ ಸೇರಿಸಿ ಸೇವಿಸಬಹುದು.

ಬೆಳ್ಳುಳ್ಳಿ:

​ಬೆಳ್ಳುಳ್ಳಿಯಲ್ಲಿ ಇನ್ಯುಲಿನ್ ಎಂಬ ಫ್ರಕ್ಟಾನ್ ನಾರಿನಂಶವಿದೆ. ಇದು ಕರುಳಿನ ಕೆಲಸಗಳಿಗೆ ಉತ್ತೇಜನ ನೀಡುತ್ತದೆ. ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಇದು ಅತ್ಯುತ್ತಮ ಆಹಾರವಾಗಿದೆ. ಪ್ರತಿದಿನ ಬೆಳಿಗ್ಗೆ 1 ಹಸಿ ಬೆಳ್ಳುಳ್ಳಿ ಎಸಳನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಅಭ್ಯಾಸ ಮಾಡಿಕೊಳ್ಳಿ

ರಾಗಿ:

ರಾಗಿ ದೇಹಕ್ಕೆ ಶಕ್ತಿಯನ್ನು ಒದಗಿಸುವ ಆಹಾರವಾಗಿದೆ. ಇದು ಕರುಳಿನ ಕ್ರಿಯೆಯನ್ನು ಉತ್ತೇಜಿಸುತ್ತದೆ. ಅದೇ ರೀತಿ ರೋಗನಿರೋಧಕ ಶಕ್ತಿ, ಹಾರ್ಮೋನು ಮತ್ತು ಸುಲಭವಾದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.ನಿಮ್ಮ ಬೆಳಿಗ್ಗಿನ ದಿನವನ್ನು ಬೆಚ್ಚಗಿನ ರಾಗಿ ಗಂಜಿಯೊಂದಿಗೆ ಪ್ರಾರಂಭಿಸಿ.

Health Tips: ಮಳೆಗಾಲದಲ್ಲಿ ಆಹಾರ ವಿಷಬಾಧೆ ಭೀತಿ ಹೆಚ್ಚಳ! IMD ಎಚ್ಚರಿಕೆ ನಡುವೆ ಆರೋಗ್ಯ ತಜ್ಞರ ಮಹತ್ವದ ಸಲಹೆ

ಹಸಿ ಬಾಳೆಕಾಯಿ:

​ಹಸಿ ಬಾಳೆಕಾಯಿಯಲ್ಲಿ ರೆಸಿಸ್ಟೆಂಟ್ ಸ್ಟಾರ್ಚ್ ಎಂಬ ಅಂಶ ಹೇರಳವಾಗಿದೆ. ಇದು ಹೊಟ್ಟೆಯಲ್ಲಿ 'ಬ್ಯುಟೈರೇಟ್' ಎಂಬ ಅಂಶವನ್ನು ಉತ್ಪಾದಿಸಿ ಕರುಳಿನ ಆರೋಗ್ಯ ರಕ್ಷಣೆ ಮಾಡುತ್ತದೆ.

ಹೆಸರು ಬೇಳೆ:

​ಹೆಸರುಕಾಳು ಸುಲಭವಾಗಿ ಜೀರ್ಣವಾಗುವ ಆಹಾರವಾಗಿದ್ದು ಸೂಕ್ಷ್ಮಜೀವಿಗಳಿಗೆ ಸುರಕ್ಷಿತವಾಗಿ ಪೋಷಣೆ ನೀಡುತ್ತದೆ. ಹೆಸರುಕಾಳನ್ನು ಮೊಳಕೆ ಬರಿಸಿ ಹಾಗೂ ಸಲಾಡ್ ರೂಪದಲ್ಲಿ ಸೇವಿಸಿ.

​ಜೋಳ:

ಜೋಳವು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದು "ರಕ್ತದಲ್ಲಿನ ಸಕ್ಕರೆಯ ಹಠಾತ್ ಏರಿಕೆಯನ್ನು ಮಾಡದೆ ನಿಮ್ಮ ಕರುಳಿನ ಒಳಪದರವನ್ನು ಸುರಕ್ಷಿತವಾಗಿ ಪೋಷಿಸಲು ಸಹಾಯ ಮಾಡುತ್ತದೆ.

ನೆಲ್ಲಿಕಾಯಿ:

​ನೆಲ್ಲಿಕಾಯಿಯಲ್ಲಿ ಪಾಲಿಫೆನಾಲ್ಸ್ ಅಂಶ ಇವೆ. ಇವು ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಶಕ್ತಿಶಾಲಿ ಇಂಧನವಾಗಿ ಕೆಲಸ ಮಾಡುತ್ತವೆ. ಇದು ಜೀರ್ಣಕ್ರಿಯೆಯ ಆರೋಗ್ಯಕ್ಕೆ ಒಳ್ಳೆಯದು