ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Health Tips: ಎಚ್ಚರ... ಎಚ್ಚರ! ಅಗತ್ಯಕ್ಕಿಂತ ಜಾಸ್ತಿ ಸಕ್ಕರೆ ಸೇವನೆ ಆರೋಗ್ಯಕ್ಕೆ ಈ ಸಮಸ್ಯೆ ತಂದೊಡ್ಡಬಹುದು

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಸುವ ಆಹಾರ ಪದಾರ್ಥಗಳಲ್ಲಿ ಸಂಸ್ಕರಿಸಿದ ಸಕ್ಕರೆಯ ಬಳಕೆ ವ್ಯಾಪಕವಾಗಿ ಬಿಟ್ಟಿದೆ. ಬಹುತೇಕ ಎಲ್ಲ ಆಹಾರಗಳಿಗೆ ಅದ್ಭುತ ರುಚಿ ಕೊಡುವ ಈ ಸಕ್ಕರೆ ಆರೋಗ್ಯದ ಮೇಲೆ ಬಹಳಷ್ಟು ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ ಅದರಲ್ಲೂ ಅತಿಯಾದ ಸಕ್ಕರೆ ಸೇವನೆಯು ಕರುಳಿನ ಸಮಸ್ಯೆಗೆ ತೀವ್ರ ಅಡ್ಡಿಯಾಗಲಿದ್ದು ಅತಿಯಾದ ರಕ್ತದಲ್ಲಿನ ಸಕ್ಕರೆ ಮಟ್ಟವು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಅತಿಯಾದ ಸಕ್ಕರೆ ಸೇವನೆ ಆರೋಗ್ಯಕ್ಕೆ ಅಪಾಯ!

Profile Pushpa Kumari Feb 26, 2025 5:30 AM

ನವದೆಹಲಿ: ಬೆಳಗ್ಗೆ ಎದ್ದ ಕೂಡಲೇ ಕುಡಿಯುವ ಚಹಾ ಕಾಫಿಗಳಿಂದ ಹಿಡಿದು, ಯಾವುದೇ ಹಬ್ಬ ಹರಿದಿನದಲ್ಲಿ ಬಳಸಲ್ಪಡುವ ಸಕ್ಕರೆಯು ಬಹುತೇಕ‌ ಬಳಸುವ ದಿನನಿತ್ಯದ ಆಹಾರ ಪದಾರ್ಥವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಸುವ ಆಹಾರ ಪದಾರ್ಥಗಳಲ್ಲಿ ಸಂಸ್ಕರಿಸಿದ ಸಕ್ಕರೆಯ ಬಳಕೆ ವ್ಯಾಪಕವಾಗಿ ಬಿಟ್ಟಿದೆ. ಬಹುತೇಕ ಎಲ್ಲ ಆಹಾರಗಳಿಗೆ ಅದ್ಭುತ ರುಚಿ ಕೊಡುವ ಈ ಸಕ್ಕರೆ ಆರೋಗ್ಯದ ಮೇಲೆ ಬಹಳಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ಅತಿಯಾದ ಸಕ್ಕರೆ ಸೇವನೆಯು ಕರುಳಿನ ಸಮಸ್ಯೆಗೆ ತೀವ್ರ ಅಡ್ಡಿಯಾಗಲಿದ್ದು ಹಾರ್ಮೋನುಗಳ ಅಸಮತೋಲನಕ್ಕೂ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು(Health Tips) ಎಚ್ಚರಿಕೆ ನೀಡಿದ್ದಾರೆ.

ಕರುಳಿನ ಮೇಲೆ ಅಪಾಯ: ಹೆಚ್ಚು ಸಕ್ಕರೆಯನ್ನು ಸೇವಿಸಿದಾಗ, ಜೀರ್ಣಾಂಗ ವ್ಯವಸ್ಥೆಯು ಡಿಸ್ಬಯೋಸಿಸ್ ಆಗಿ ಬೈಫಿ ಡೋಬ್ಯಾಕ್ಟೀರಿಯಾ ಮತ್ತು ಲ್ಯಾಕ್ಟೋ ಬಾಸಿಲಸ್‌ ನಂತಹ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಲ್ಲಿ ಹಾನಿ ಕಾರಕ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಕರುಳಿನ ಆರೋಗ್ಯ ಕೆಡ ಲಿದೆ. ಇದರಿಂದ ಇನ್ಸುಲಿನ್ ಪ್ರತಿರೋಧ ಹೆಚ್ಚಾಗಿ ಟೈಪ್ 2 ಮಧು ಮೇಹ ಸೇರಿದಂತೆ ಈ ರೀತಿಯ ಅಸ್ವಸ್ಥತೆಗಳಿಗೆ ಕಾರವಾಗಬಹುದು

ಹಾರ್ಮೋನುಗಳ ಅಸಮತೋಲನ: ಹೆಚ್ಚಿದ ರಕ್ತದಲ್ಲಿನ ಸಕ್ಕರೆಯು ಮೇದೋಜ್ಜೀರಕ ಗ್ರಂಥಿಯನ್ನು ಹೆಚ್ಚುವರಿ ಇನ್ಸುಲಿನ್ ಉತ್ಪಾದಿಸಲು ಒತ್ತಾಯಿಸುತ್ತದೆ, ಹೀಗಾಗಿ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸಿ ಇದು ಮಹಿಳೆ ಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಗೆ ಕಾರವಾಗುತ್ತದೆ ಹಾಗೆಯೇ ಹೆಚ್ಚಿದ ಆಂಡ್ರೊಜೆನ್ ಮಟ್ಟ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಕಾರಣವಾಗಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ನಂತಹ ಸಮಸ್ಯೆಗೆ ಕಾರಣವಾಗಬಹುದು. 

ಯಕೃತ್ತಿನ ಸಮಸ್ಯೆಗೆ ಕಾರಣವಾಗಬಹುದು! ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸಿದ ಸಕ್ಕರೆಯು ನಮ್ಮ ದೇಹದಲ್ಲಿ ಫ್ರಕ್ಟೋಸ್ ರೂಪದಲ್ಲಿ ಸಂಗ್ರಹವಾಗಿ ಯಕೃತ್ತಿಗೆ (ಲಿವರ್) ತೊಂದರೆ ಯಾಗಬಹುದು. ಇದರಿಂದ ಹೆಚ್ಚಿನ ಫ್ರಕ್ಟೋಸ್ ಕೊಬ್ಬಾಗಿ (ಫ್ಯಾಟ್) ಪರಿ ವರ್ತನೆಯಾಗುತ್ತದೆ. ಆಗ ಯಕೃತ್ತಿನ ಮೇಲೆ ಹೆಚ್ಚಿನ ಒತ್ತಡ ವುಂಟಾದಾಗ ಹಲವು ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಸಕ್ಕರೆ ದೇಹದಲ್ಲಿ ಹೆಚ್ಚಾಗಿ ಬೊಜ್ಜು ಹೆಚ್ಚುತ್ತದೆ: ದೇಹದ ತೂಕ ಹೆಚ್ಚಾದಂತೆ ಇನ್ಸುಲಿನ್ ಹಾರ್ಮೋನಿನ ಉತ್ಪಾದನೆ ಏರುಪೇರಾಗಿ ಹಸಿವು ಹೆಚ್ಚಾಗಿ ಮತ್ತಷ್ಟು ಆಹಾರ ಸೇವಿಸುವಂತೆ ಆಗಲಿದೆ.‌ ಆಗ ಕ್ರಮೇಣ ಹೊಟ್ಟೆಯ ಸುತ್ತ ಕೊಬ್ಬು ಶೇಖರವಾಗು ತ್ತದೆ. ಇದರಿಂದ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗಿ ರಕ್ತದ ಪರಿ ಚಲನೆಗೆ ತೊಂದರೆಯಾಗುತ್ತದೆ. ಅಧಿಕ ಸಕ್ಕರೆ ಸೇವನೆಯಿಂದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಫ್ರಕ್ಟೋಸ್ ಪ್ರಮಾಣ ಹೆಚ್ಚಾದಂತೆ ರಕ್ತದಲ್ಲಿ ಯೂರಿಕ್‌ ಆಮ್ಲದ ಪ್ರಮಾಣವು ಹೆಚ್ಚುತ್ತದೆ.

ಇದನ್ನು ಓದಿ: Health Tips: ಕರಿಬೇವಿನ ಎಲೆಯಲ್ಲಿದೆ ಈ ಅದ್ಭುತ ಆರೋಗ್ಯ ಪ್ರಯೋಜನ

ಹಣ್ಣುಗಳಲ್ಲಿ ಸಕ್ಕರೆ ಅಂಶ: ತಾಜಾ ಹಣ್ಣುಗಳಲ್ಲಿ ಸಕ್ಕರೆಯು ನೈಸರ್ಗಿಕವಾಗಿ ಇರಲಿದ್ದು ಸೀಬೆ, ದಾಳಿಂಬೆ, ಸೀತಾಫಲ,‌ ಸಪೋಟ, ಕಿತ್ತಲೆ, ದ್ರಾಕ್ಷಿ ಇತ್ಯಾದಿ ಹಣ್ಣು ಗಳಲ್ಲಿ ಇರುವ ಸಿಹಿ ಅಂಶವು ಆರೋಗ್ಯಕ್ಕೆ ಹಾನಿ ಯಾಗಲ್ಲ. ಆದರೆ ಹೊರಗಿನ ಸಂಸ್ಕರಿಸಿದ ಆಹಾರದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿಯೇ ಇರುತ್ತದೆ. ಇವುಗಳ ತಯಾರಿಕೆಯಲ್ಲಿ ಫ್ರಕ್ಟೋಸನ್ನು ಹೆಚ್ಚಾಗಿಯೇ ಬಳಸಲಾಗಿರುತ್ತದೆ. ಹಾಗಾಗಿ ಇದು ದೇಹಕ್ಕೆ ಬಹಳಷ್ಟು ಹಾನಿಕಾರಕ.