ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಬಾರಿ ಸ್ನಾನ ಮಾಡಬೇಕು? ತಜ್ಞರ ಸಲಹೆ ಇಲ್ಲಿದೆ!

Health Tips: ಭಾರತದಲ್ಲಿ ತಾಪ ಮಾನವು 45 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತಿರುವುದರಿಂದ, ನೀವು ಎಷ್ಟು ಬಾರಿ ಸ್ನಾನ ಮಾಡಬಹುದು ಎನ್ನುವ ಪ್ರಶ್ನೆ ಹಲವರಲ್ಲಿದೆ. ಅತೀಯಾಗಿ ನೀರನ್ನು ಮೈಮೇಲೆ ಹಾಕಿಕೊಳ್ಳುವುದರಿಂದ ಚರ್ಮಕ್ಕೂ ಸಮಸ್ಯೆಯಾಗಿ ನೈಸರ್ಗಿಕ ತೈಲಾಂಶ ಮತ್ತು ಪಿಹೆಚ್‌ ಮಟ್ಟ ಏರುಪೇರಾಗಿ, ಚರ್ಮ ತೀವ್ರವಾಗಿ ಸುಕ್ಕುಗಟ್ಟಬಹುದು. ಹಾಗಿದ್ರೆ ಈ ಬೇಸಿಗೆಯಲ್ಲಿ ಎಷ್ಟು ಭಾರೀ ನೀವು ಸ್ನಾನ ಮಾಡಿದರೆ ಆರೋಗ್ಯಕರ?

ಸಂಗ್ರಹ ಚಿತ್ರ

ನವದೆಹಲಿ,ಮೇ 21; ಬೇಸಿಗೆಯಲ್ಲಿ ಬಿಸಿಲಿನ (Summer Tips) ತಾಪಮಾನ ಹೆಚ್ಚಾಗಿದೆ. ಹೀಗಾಗಿ ಸೆಕೆಯನ್ನು ತಡೆದುಕೊಳ್ಳಲು ಜನರು ಹರಸಾಹಸ ಪಡುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತಿರುವುದರಿಂದ, ನೀವು ಎಷ್ಟು ಬಾರಿ ಸ್ನಾನ ಮಾಡಬಹುದು ಎನ್ನುವ ಪ್ರಶ್ನೆ ಹಲವರಲ್ಲಿದೆ. ಅತೀಯಾಗಿ ನೀರನ್ನು ಮೈಮೇಲೆ ಹಾಕಿಕೊಳ್ಳುವುದರಿಂದ ಚರ್ಮಕ್ಕೂ ಸಮಸ್ಯೆಯಾಗಿ ನೈಸರ್ಗಿಕ ತೈಲಾಂಶ ಮತ್ತು ಪಿಹೆಚ್‌ ಮಟ್ಟ ಏರುಪೇರಾಗಿ, ಚರ್ಮ ತೀವ್ರವಾಗಿ ಸುಕ್ಕುಗಟ್ಟಬಹುದು. ಹಾಗಿದ್ರೆ ಈ ಬೇಸಿಗೆಯಲ್ಲಿ ಎಷ್ಟು ಭಾರೀ ನೀವು ಸ್ನಾನ ಮಾಡಿದರೆ ಆರೋಗ್ಯಕರ?

ಬೇಸಿಗೆಯಲ್ಲಿ ಸ್ನಾನ ಮಾಡುವುದು ಏಕೆ ಮುಖ್ಯ?

ಬೇಸಿಗೆಯಲ್ಲಿ ಸ್ನಾನ ಮಾಡುವುದು ಬಹಳಷ್ಟು ಮುಖ್ಯ ವಾಗುತ್ತದೆ. ಏಕೆಂದರೆ ಬೆವರು ಹೆಚ್ಚಾಗಿ ದೇಹದ ವಾಸನೆ ಯನ್ನು ಹೆಚ್ಚಿಸುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನೀವು ಸ್ನಾನ ಮಾಡುವುದರಿಂದ, ದೇಹದಲ್ಲಿ ಚರ್ಮದ ಮಡಿಕೆಗಳಲ್ಲಿ ಸಿಲುಕಿಕೊಂಡ ಬೆವರು, ಬ್ಯಾಕ್ಟೀರಿಯಾ ಅಥವಾ ಕೊಳೆಯನ್ನು ಹೋಗಲಾಡಿಸ ಬಹುದು.ಸ್ನಾನ ಮಾಡುವುದರಿಂದ ಚರ್ಮದ ಸೋಂಕುಗಳು, ದದ್ದುಗಳು ಮತ್ತು ಇತರ ಚರ್ಮದ ಸಮಸ್ಯೆಗಳನ್ನು ತಡೆಯಲು ಸಹಕಾರಿಯಾಗುತ್ತದೆ.‌ ಹಾಗಾಗಿ ಬೇಸಗೆಯಲ್ಲಿ ಸ್ನಾನ ಮಾಡುವ ಮೂಲಕ ನೈರ್ಮಲ್ಯವನ್ನು ನೀವು ಕಾಡಬಹುದು.

Health Tips: ಬ್ರೇಕ್‌ಫಾಸ್ಟ್‌ ಸ್ಕಿಪ್‌ ಮಾಡ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!

ಎಷ್ಟು ಭಾರಿ ಸ್ನಾನ ಮಾಡಬೇಕು?

ಸಾಮಾನ್ಯವಾಗಿ ಶಾಖ, ಚಟುವಟಿಕೆಯ ಮಟ್ಟ ಮತ್ತು ಬೆವರುವಿಕೆಯನ್ನು ಅವಲಂಬಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸ್ನಾನ ಮಾಡಲು ತಜ್ಞರು ಶಿಫಾರಸು ಮಾಡುತ್ತಾರೆ. ಆದರೆ ಬೇಸಿಗೆಯಲ್ಲಿ ಸ್ನಾನ ಮಾಡುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಲು ಕೂಡ ತಜ್ಞರು ಸಲಹೆ ನೀಡುತ್ತಾರೆ‌

ದಿನಕ್ಕೆ ಎರಡು ಬಾರಿ ಸ್ನಾನ ಮಾಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆ:

*ಬೇಸಿಗೆಯಲ್ಲಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ. ಆದರೆ ​ತಣ್ಣೀರು ಅಥವಾ ಉಗುರುಬೆಚ್ಚಗಿನ ನೀರನ್ನು ಬಳಸಿ ಯಾಕಂದ್ರೆ ವಾತಾವರಣ ಬಿಸಿಯಾಗಿ ಇರುವುದರಿಂದ ಚರ್ಮ ಮತ್ತಷ್ಟು ಒಣಗುತ್ತದೆ.

*ನೀರಿನ ತಾಪಮಾನ ಮಾತ್ರವಲ್ಲದೆ, ಕಠಿಣ ರಾಸಾಯನಿಕ ಸೋಪುಗಳು ಅಥವಾ ಕ್ಲೀನರ್‌ಗಳಂತಹ ಬಳಸಿದರೆ ಚರ್ಮದ ಸಮಸ್ಯೆ ಕಾಡಬಹುದು.

*​ಸಡಿಲವಾದ ಬಟ್ಟೆಯನ್ನು ಆರಿಸಿಕೊಳ್ಳಿ

*ಸ್ನಾನ ಆದ ತಕ್ಷಣ ಚರ್ಮ ಸಂಪೂರ್ಣವಾಗಿ ಒಣಗುವ ಮುನ್ನ ಲೋಶನ್ ಅಥವಾ ಅಲೋವೆರಾ ಜೆಲ್ ಹಚ್ಚುವುದರಿಂದ ಚರ್ಮದ ತೇವಾಂಶ ಕಾಪಾಡಬಹುದು.