ಆಹಾರವನ್ನು ಬೇಯಿಸುವಾಗ ಈ ಟಿಪ್ಸ್ ಬಳಸಿದ್ರೆ ಪೋಷಕಾಂಶಗಳನ್ನು ಹೆಚ್ಚು ಮಾಡಬಹುದು!
Health Tips: ಆಹಾರವನ್ನು ಬೇಯಿಸುವಾಗ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಅವುಗಳಿಂದಾಗಿ ಆಹಾರದಲ್ಲಿ ಪೋಷಕಾಂಶದ ಕೊರತೆ ಉಂಟಾಗಿ, ಆರೋಗ್ಯಕ್ಕೆ ಅಗತ್ಯವಾದ ಪೋಷಣೆ ಸಿಗುವುದಿಲ್ಲ. ನಮ್ಮ ಆಹಾರದಲ್ಲಿ ಸಂಪೂರ್ಣವಾದ ಪೋಷಣೆಯನ್ನು ಹೇಗೆ ಹಿಡಿದಿಡಬಹುದು? ಅದಕ್ಕಾಗಿ ಯಾವ ಸುಲಭ ಕ್ರಮ ಕೈಗೊಳ್ಳಬಹುದು? ಎನ್ನುವುದರ ಕುರಿತು ವಿಸ್ತಾರವಾದ ಮಾಹಿತಿಗಳನ್ನು ಡಾ. ಅನಿತಾ ಮಾಹಿತಿ ನೀಡಿದ್ದಾರೆ
ಸಂಗ್ರಹ ಚಿತ್ರ -
ಬೆಂಗಳೂರು,ಜ.21: ನಮ್ಮ ದೇಹವು ಆರೋಗ್ಯಯುತ ವಾಗಿರಬೇಕೆಂದು ಪೋಷಕಾಂಶ ಭರಿತ ಆಹಾರ ಸೇವನೆ ಮಾಡುವುದು ಸಹಜ. ಆದರೆ ಆ ಆಹಾರವನ್ನು ಬೇಯಿಸುವಾಗ ಕೆಲವು ತಪ್ಪು ಗಳನ್ನು ಮಾಡುತ್ತೇವೆ. ಅವುಗಳಿಂದಾಗಿ ಆಹಾರದಲ್ಲಿ ಪೋಷಕಾಂಶದ (Nutrients foods) ಕೊರತೆ ಉಂಟಾಗಿ, ಆರೋಗ್ಯಕ್ಕೆ ಅಗತ್ಯವಾದ ಪೋಷಣೆ ಸಿಗುವುದಿಲ್ಲ. ನಮ್ಮ ಆಹಾರದಲ್ಲಿ ಸಂಪೂರ್ಣ ವಾದ ಪೋಷಣೆಯನ್ನು ಹೇಗೆ ಹಿಡಿದಿಡಬಹುದು? ಅದಕ್ಕಾಗಿ ಯಾವ ಸುಲಭ ಕ್ರಮ ಕೈಗೊಳ್ಳ ಬಹುದು? ಎನ್ನುವುದರ ಕುರಿತು ವಿಸ್ತಾರವಾದ ಮಾಹಿತಿಗಳನ್ನು ಡಾ. ಅನಿತಾ ಮಾಹಿತಿ ನೀಡಿದ್ದಾರೆ.
ನಾವು ಸೇವನೆ ಮಾಡುವ ತರಕಾರಿಗಳಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಆದರೆ ಕೀಟ ನಾಶಕಗಳಿಂದ ಅವುಗಳನ್ನು ರಕ್ಷಿಸಲು ಸರಿಯಾಗಿ ತೊಳೆದು ಸೇವನೆ ಮಾಡುವುದು ಮುಖ್ಯ..ಆದರೆ ಕೆಲವರು ತರಕಾರಿಗಳನ್ನು ಚಾಕುವಿನಲ್ಲಿ ಕತ್ತರಿಸಿದ ನಂತರ ತೊಳೆಯುತ್ತಾರೆ, ಇದರಿಂದ ತರಕಾರಿ ಯಲ್ಲಿನ ಪೋಷಕಾಂಶಗಳು ಕಡಿಮೆಯಾಗುತ್ತವೆ. ಹಾಗಾಗಿ ಈ ವಿಧಾನ ತಪ್ಪು ಎಂದು ವೈದ್ಯರು ತಿಳಿಸಿದ್ದಾರೆ.
ವಿಡಿಯೋ ನೋಡಿ:
ಅದೇ ರೀತಿ ಹೆಚ್ಚಿನವರು ತರಕಾರಿಗಳನ್ನು ತುಂಬಾ ಸಣ್ಣದಾಗಿ ಕತ್ತರಿಸುತ್ತಾರೆ. ಈ ವಿಧಾನ ಕೂಡ ತಪ್ಪಾಗಿದ್ದು ಇದರಿಂದ ನ್ಯೂಟ್ರಿಷನ್ ಪ್ರಮಾಣ ಕಡಿಮೆಯಾಗುತ್ತದೆ. ಇತ್ತೀಚೆಗಂತೂ ಸಿಕ್ಕಾಪಟ್ಟೆ ಕೀಟನಾಶಕ ಹೊಡೀತಾರೆ, ವಿಪರೀತ ರಾಸಾಯನಿಕ ಬಳಸ್ತಾರೆ ಎಂದು ನಾವು ತರಕಾರಿ, ಹಣ್ಣು ಸೇವಿಸುವ ಪ್ರಮಾಣ ಕಡಿಮೆ ಮಾಡಿದ್ದೇವೆ.ಇದನ್ನು ಬಗೆಹರಿಸುವ ಬಗ್ಗೆಯೂ ಸಲಹೆ ನೀಡಿದ್ದಾರೆ
ಅಡಿಗೆ ಸೋಡಾದಲ್ಲಿ ತರಕಾರಿಗಳನ್ನು ನೆನೆಸುವುದರಿಂದ ರಾಸಾಯನಿಕಗಳ ಮಟ್ಟವನ್ನು ಕಡಿಮೆ ಮಾಡಬಹುದು. ಇದಕ್ಕೆ ನೀವು ಒಂದು ಪಾತ್ರೆಯಲ್ಲಿ ಅರ್ಧದಷ್ಟು ನೀರು ತುಂಬಿಸಿ ಒಂದು ಚಮಚ ಅಡಿಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಸ್ವಚ್ಛಗೊಳಿಸಲು ಬಯಸುವ ತರಕಾರಿ ಗಳನ್ನು ಹಾಕಿ ಕೆಲವು ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ಶುದ್ದವಾದ ನೀರಿನಿಂದ ತೊಳೆಯುವುದರಿಂದ ರಸಾಯನಿಕ ಪ್ರಮಾಣ ಕಡಿಮೆಯಾಗುತ್ತದೆ.
ಅದೇ ರೀತಿ ಸ್ವಲ್ಪ ಪ್ರಮಾಣದ ನೀರಿಗೆ, ಒಂದು ಭಾಗ ವಿನೆಗರ್ ಅನ್ನು ಸೇರಿಸಿ ಎಲ್ಲಾ ತರಕಾರಿ ಗಳನ್ನು ಈ ಮಿಶ್ರಣದಲ್ಲಿ ಹತ್ತು ನಿಮಿಷಗಳ ಕಾಲ ನೆನೆಸಿಡಿ. ಅದರ ನಂತರ, ಅದನ್ನು ಚೆನ್ನಾಗಿ ತೊಳೆದರೆ ಕೀಟನಾಶಕ ತೆಗೆದು ಹಾಕಬಹುದು.
ಅತ್ಯಂತ ಸಾಮಾನ್ಯವಾಗಿ ಸಿಗುವ ಉಪ್ಪಿನಿಂದ ಕೂಡ ರಸಾಯನಿಕವನ್ನು ತೆಗೆದು ಹಾಕಬಹುದು. ಒಂದು ಲೀಟರ್ ನೀರಿಗೆ ಒಂದು ಚಮಚ ಉಪ್ಪು ಹಾಕುವ ಮೂಲಕ 30 ನಿಮಿಷಗಳ ಕಾಲ ನೆನೆಸಿಡಿ. ಅದರ ನಂತರ, ತರಕಾರಿಯನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಇದರಿಂದ ಸಾಮಾನ್ಯವಾಗಿ ಇರುವ ಕೆಮಿಕಲ್ ಪ್ರಮಾಣ ತೆಗೆದುಹಾಕಬಹುದು
Health Tips: ಮೊಟ್ಟೆಗಳ ಸೇವನೆ ಮಿತವಾಗಿದ್ದರೆ ಸುರಕ್ಷಿತ; ತಜ್ಞರ ಕಿವಿಮಾತು ಇಲ್ಲಿದೆ
ತರಕಾರಿಯನ್ನು ಬೇಯಿಸುವ ಕ್ರಮ:
ಆಹಾರವನ್ನು ಸರಿಯಾದ ಕ್ರಮದಲ್ಲಿ ಬೇಯಿಸುವ ಮೂಲಕ ಹೆಚ್ಚಿನ ಪೋಷಕಾಂಶವನ್ನು ಪಡೆಯಬಹುದು.ಆಹಾರವನ್ನು ಕಡಿಮೆ ನೀರಿನೊಂದಿಗೆ ಬೇಯಿಸಿದರೆ ಉತ್ತಮ.ಹೆಚ್ಚು ಪ್ರಮಾಣದ ನೀರು ನೊಂದಿಗೆ ಬೇಯಿಸಿದರೆ ಪೋಷಕಾಂಶಗಳು ಕಡಿಮೆಯಾಗುತ್ತವೆ.
ನೀರಿನಲ್ಲಿ ಹೆಚ್ಚು ಕುದಿಸುವ ಪ್ರಕ್ರಿಯೆಯಿಂದ ಪೌಷ್ಟಿಕ ಸತ್ವಗಳು ಹಾನಿಯಾಗುವ ಸಾಧ್ಯತೆ ಇರುತ್ತದೆ. ಯಾವುದೇ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೇಯಿಸಿ ಸೇವನೆ ಮಾಡಬಾರದು. ಹೀಗೆ ಮಾಡಿದಾಗ ಮಾತ್ರ ಅವುಗಳಲ್ಲಿ ಪೌಷ್ಟಿಕ ಸತ್ವಗಳ ಪ್ರಮಾಣ ಕಡಿಮೆ ಯಾಗುತ್ತದೆ.
ತರಕಾರಿಗಳನ್ನು ಕುಕ್ಕರ್ ನಲ್ಲಿ ಬೇಯಿಸುವಾಗ ಕಡಿಮೆ ವಿಷಿಲ್ ಇಟ್ಟು ಬೇಯಿಸದರೆ ಹೆಚ್ಚಿನ ನ್ಯೂಟ್ರಿಯೆಂಟ್ ಗಳು ನಮಗೆ ದೊರೆಯುತ್ತವೆ.
ಮಾಂಸಹಾರಿ ಆಹಾರಗಳನ್ನಯಡೀಫ್ ಫ್ರೈ ಮಾಡುವುದನ್ನು ತಪ್ಪಿಸಿ. ಪದಾರ್ಥಗಳು ದೇಹದಲ್ಲ ಕೊಬ್ಬಿನಂಶವನ್ನು ಹೆಚ್ಚಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಾಗಿಸುತ್ತದೆ.