ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಳಿಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಇರಲಿ ಎಚ್ಚರ: ಈ ಬಗ್ಗೆ ಗಮನ ವಹಿಸಿ!

Health Tips: ಚಳಿಗಾಲದಲ್ಲಿ ಸಣ್ಣ ಮಕ್ಕಳ ಆರೋಗ್ಯ ಬಗ್ಗೆ ಎಷ್ಟು ಗಮನ ವಹಿಸಿದರೂ ಕಡಿಮೆಯೇ. ಶೀತ ಗಾಳಿಯಿಂದಾಗಿ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು, ಅಲರ್ಜಿಗಳು ಮತ್ತು ಒಣ ಚರ್ಮದಂತಹ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ಹೇಗೆ ಕಾಪಾಡಿ ಕೊಳ್ಳಬೇಕು ಹಾಗೂ ಮಕ್ಕಳನ್ನು ಚಳಿಯಿಂದ ರಕ್ಷಿಸಲು ಕೆಲವು ಅಗತ್ಯ ಮಾರ್ಗಸೂಚಿಗಳ ಬಗ್ಗೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ,ಡಿ.27: ಎಲ್ಲೆಡೆ ಚಳಿಯ (Winter Tips)ವಾತಾವರಣ ಹೆಚ್ಚಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಜನರ ಆರೋಗ್ಯದಲ್ಲಿ ಕೂಡ ಏರುಪೇರಾಗುತ್ತಿದೆ. ಈ ಸಂದರ್ಭದಲ್ಲಿ ಜ್ವರ, ಶೀತ ಕೆಮ್ಮು ಅನ್ನೋದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಚಳಿಗಾಲದಲ್ಲಿ ಸಣ್ಣ ಮಕ್ಕಳ ಆರೋಗ್ಯ ಬಗ್ಗೆ ಎಷ್ಟು ಗಮನ ವಹಿಸಿದರೂ ಕಡಿಮೆಯೇ. ಶೀತ ಗಾಳಿಯಿಂದಾಗಿ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು, ಅಲರ್ಜಿಗಳು ಮತ್ತು ಒಣ ಚರ್ಮದಂತಹ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಹಾಗೂ ಮಕ್ಕಳನ್ನು ಚಳಿಯಿಂದ ರಕ್ಷಿಸಲು ಕೆಲವು ಅಗತ್ಯ ಮಾರ್ಗಸೂಚಿಗಳ ಬಗ್ಗೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಒಳಾಂಗಣ ತಾಪಮಾನವನ್ನು ಕಾಪಾಡಿಕೊಳ್ಳಿ:

ಚಳಿಗಾಲದಲ್ಲಿ ಕಿಟಕಿಗಳನ್ನು ಕ್ಲೋಸ್ ಮಾಡಿಕೊಳ್ಳುವುದರಿಂದ ಮನೆಯೊಳಗಿನ ಗಾಳಿ ಒಣಗಿರುತ್ತದೆ. ಹೀಗಾಗಿ ಬ್ಯಾಕ್ಟೀರಿಯಾಗಳ ಒಳ ಪ್ರವೇಶ ಹೆಚ್ಚಾಗಿ ಇರುತ್ತದೆ. ಹಾಗಾಗಿ ಅದಷ್ಟು ಕಿಟಕಿಗಳನ್ನು ತೆರೆದಿಡಿ. ಮತ್ತು ರೂಮ್ ಹೀಟರ್‌ಗಳನ್ನು ಬಳಸುವಾಗ ಕೋಣೆಯ ಉಷ್ಣಾಂಶ ನಡುವೆ ಇರುವಂತೆ ನೋಡಿಕೊಳ್ಳಿ.. ಇದು ಮಗುವಿನ ಉಸಿರಾಟದಲ್ಲಿ ಕಿರಿಕಿರಿ ಉಂಟಾಗುವುದನ್ನು ತಪ್ಪಿಸುತ್ತದೆ.

Health Tips: ಚಳಿಗಾಲದಲ್ಲಿ ಸಪೋಟ ಹಣ್ಣಿನ ಆರೋಗ್ಯ ಪ್ರಯೋಜನಗಳು: ರೋಗನಿರೋಧಕ ಶಕ್ತಿ ಹೆಚ್ಚಿಸಿ, ಹೃದಯವನ್ನು ಕಾಪಾಡಿ

ಮಕ್ಕಳ ಉಡುಗೆಯ ಬಗ್ಗೆ ನಿಗಾ ಇರಲಿ:

ಮಕ್ಕಳಿಗೆ ಒಂದೇ ದಪ್ಪನೆಯ ಬಟ್ಟೆ ಹಾಕುವ ಬದಲು ಲೇಯರ್ಸ್ ಪದರದ ಬಟ್ಟೆ ಧರಿಸಿದರೆ ಉತ್ತಮ. ಇದರಿಂದ ಮಕ್ಕಳಲ್ಲಿ ಕಿರಿಕಿರಿಯಾಗುವುದಿಲ್ಲ. ತಲೆ, ಕಿವಿ ಮತ್ತು ಕುತ್ತಿಗೆಯನ್ನು ಮುಚ್ಚಲು ಸ್ಕಾರ್ಫ್ ಮತ್ತು ಕ್ಯಾಪ್‌ಗಳನ್ನು ಬಳಸಿ. ಹಾಗೂ ಕೈಗವಸು ಮತ್ತು ಸಾಕ್ಸ್‌ಗಳನ್ನು ಹಾಕುವ ಮೂಲಕ ಪಾದಗಳನ್ನು ಬೆಚ್ಚಗಿಡಿ.

ಚರ್ಮದ ಹೈಡ್ರೇಶನ್ ಮತ್ತು ಆರೈಕೆ:

ಚಳಿಗಾಲದಲ್ಲಿ ಶುಷ್ಕ ವಾತಾವರಣದಿಂದಾಗಿ ಮಕ್ಕಳ ಚರ್ಮ ಬೇಗನೆ ಒಣಗುತ್ತದೆ. ಹಾಗಾಗಿ ಸ್ನಾನದ ನಂತರ ಮಕ್ಕಳಿಗೆ ಬೇಬಿ ಆಯಿಲ್ ಮಸಾಜ್ ಮಾಡಿ ಮತ್ತು ದಿನಕ್ಕೆ ಎರಡು ಬಾರಿ ಮಾಯಿಶ್ಚರೈಸರ್ ಹಚ್ಚಿ.

ಸರಿಯಾದ ಪ್ರಮಾಣದ ನೀರು ಕುಡಿಸಿ:

ಚಳಿಗಾಲದಲ್ಲಿ ನೀರಿನ‌ ಸೇವನೆ ಕೂಡ ಅಗತ್ಯವಾಗಿದೆ. ಹಾಗಾಗಿ ಮಗು ಸಾಕಷ್ಟು ನೀರು ಕುಡಿಯುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳವುದು ಮುಖ್ಯ

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ನೀಡಿ:

ಮಕ್ಕಳಿಗೆ ಬಿಸಿ ಬಿಸಿಯಾದ ಸೂಪ್‌ಗಳು ಮತ್ತು ಪೌಷ್ಟಿಕ ಆಹಾರಗಳನ್ನು ನೀಡಿ. ಈ ಆಹಾರವು ಹೈಡ್ರೇಟೆಡ್ ಆಗಿಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ ಯಾಗುತ್ತದೆ. ಅದೇ ರೀತಿ ವಿಟಮಿನ್ ಮತ್ತು ಖನಿಜಾಂಶಗಳಿಂದ ಕೂಡಿದ ಹಣ್ಣು-ತರಕಾರಿಗಳಿಗೂ ಆದ್ಯತೆ ನೀಡಿ.

ಮನೆಯಲ್ಲಿ ಸ್ವಚ್ಚತೆ ಕಾಪಾಡಿ:

ಮನೆ ಸ್ವಚ್ಛತೆ ಕಾಪಾಡದಿದ್ದರೆ ಧೂಳಿನಿಂದಲೂ ಆಸ್ತಮಾ, ಅಲರ್ಜಿ, ಕೆಮ್ಮಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಮಗು ಮಲಗುವ ಕೋಣೆಯನ್ನು ಕ್ಲೀನ್ ಮಾಡಿ.‌ ರೂಮ್ ಕೂಡ ಬೆಚ್ಚಗೆ ಇರುವಂತೆ ನೋಡಿ

ಹೊರಗಿನ ಆಟೋಟಗಳಲ್ಲಿ ಜಾಗ್ರತೆ ವಹಿಸಿ:

ಚಳಿ ಇದ್ದಾಗ ಮಕ್ಕಳನ್ನು ಹೊರಗಡೆ ಆಟವಾಡಲು ಹೆಚ್ಚು ಬಿಡಬೇಡಿ. ಮಗು ಹೊರಗೆ ಹೋಗುವ ಮೊದಲು ಬೆಚ್ಚಗಿನ ಉಡುಗೆ ಧರಿಸಿ