ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಚಳಿಗಾಲದಲ್ಲಿ ಸಪೋಟ ಹಣ್ಣಿನ ಆರೋಗ್ಯ ಪ್ರಯೋಜನಗಳು: ರೋಗನಿರೋಧಕ ಶಕ್ತಿ ಹೆಚ್ಚಿಸಿ, ಹೃದಯವನ್ನು ಕಾಪಾಡಿ

ಈ ಕಾಲೋಚಿತ ಹಣ್ಣುಗಳನ್ನು ದೈನಂದಿನ ಆಹಾರದ ಜೊತೆ ಜೊತೆ ಸೇವಿಸುವುದರಿಂದ ನಿಮ್ಮಲ್ಲಿರುವ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ ಈ ರೀತಿಯ ಸಮಸ್ಯೆಗಳಿಂದ ದೂರ ಇರುವಂತೆ ಮಾಡುತ್ತದೆ. ಈ ರೀತಿ ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಸರಿದೂಗಿಸಿಕೊಂಡು ಹೋಗುವ ಹಲವಾರು ಆಹಾರ ಪದಾರ್ಥಗಳಿದ್ದು, ಈ ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಈ ಸಪೋಟ ಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಅನೇಕ ಉಪಯೋಗವಿದೆ.

ಸಪೋಟ ಹಣ್ಣಿನಲ್ಲಿದೆ ಅಗಾಧ ಅರೋಗ್ಯ ಪ್ರಯೋಜನ

ಸಪೋಟ -

Profile
Sushmitha Jain Dec 11, 2025 7:58 AM

ಬೆಂಗಳೂರು: ಚಳಿಗಾಲದ ಹವಾಮಾನವು(Winter Season) ಹಲವಾರು ಆರೋಗ್ಯ ತೊಂದರೆಗಳನ್ನು(Health Issues) ಹುಟ್ಟು ಹಾಕುತ್ತದೆ. ನೆಗಡಿ,ವೈರಾಣು ಸೋಂಕು,ಒಣಚರ್ಮ ಮುಂತಾದವು ಚಳಿಗಾಲದಲ್ಲಿ ಕಾಡುವ ಸಾಮಾನ್ಯ ಆರೋಗ್ಯ ಸಂಬಂಧಿ ಸಮಸ್ಯೆಗಳು. ಹಾಗಾಗಿ ಈ ಚಳಿಗಾಲ ಆರಂಭವಾಗುತ್ತಿದ್ದಂತೆ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಈ ಋತುಮಾನದಲ್ಲಿ ಪೌಷ್ಟಿಕಾಂಶವುಳ್ಳ ಆಹಾರ ಹಾಗೂ ಕಾಲೋಚಿತ ಹಣ್ಣುಗಳು(ಸೀಸನಲ್ ಫ್ರೂಟ್ಸ್) ಹಾಗೂ ತರಕಾರಿಯನ್ನು ಹೆಚ್ಚು ತಿನ್ನಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಈ ಕಾಲೋಚಿತ ಹಣ್ಣುಗಳನ್ನು ದೈನಂದಿನ ಆಹಾರ ಜೊತೆ ಜೊತೆ ಸೇವಿಸುವುದರಿಂದ ನಿಮ್ಮಲ್ಲಿರುವ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ ಈ ರೀತಿಯ ಸಮಸ್ಯೆಗಳಿಂದ ದೂರ ಇರುವಂತೆ ಮಾಡುತ್ತದೆ. ಈ ರೀತಿ ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಸರಿದೂಗಿಸಿಕೊಂಡು ಹೋಗುವ ಹಲವಾರು ಆಹಾರ ಪದಾರ್ಥಗಳಿದ್ದು, ಈ ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಈ ಸಪೋಟ(Sapota) ಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಅನೇಕ ಉಪಯೋಗವಿದೆ. ಈ ಹಣ್ಣು ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಿ ದೇಹವನ್ನು ಶಕ್ತಿಯುತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ಸಪೋಟ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ(Health Tips) ಲಾಭಗಳಿವೆ? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ತೂಕ ಇಳಿಕೆಗೆ ಸಹಕಾರಿಯಾಗಿದೆ : ಎಳೆಯ ಮಕ್ಕಳಿಂದ ಹಿರಿಯ ವಯಸ್ಕರವರೆಗೂ ಇಷ್ಟ ಪಡುವ ಈ ಸಪೋಟ ಹಣ್ಣಿನಲ್ಲಿ ಫೈಬರ್ ಅಂಶವು ಹೇರಳವಾಗಿದೆ. ಈ ಹಣ್ಣಿನಲ್ಲಿರುವ ಫೈಬರ್ ಗಳು ಬೇಗನೆ ಹಸಿವಾಗುವುದನ್ನು ತಡೆಯುತ್ತದೆ. ಜೀರ್ಣಾಂಗ ವ್ಯವಸ್ಥೆ ಸುಧಾರಿಸಿ, ತೂಕ ಇಳಿಸಲು ಸಹಕಾರಿಯಾಗಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ಈ ಶೀತಲಮಯ ವಾತಾವರಣದಲ್ಲಿ ನೆಗಡಿ, ಕೆಮ್ಮು, ಶೀತ ಹಾಗೂ ಕಫ ಇಂತಹ ಆರೋಗ್ಯ ಸಮಸ್ಯೆಗಳು ಕಾಡುವುದೇ ಹೆಚ್ಚು. ಈ ಕಾಯಿಲೆಯ ವಿರುದ್ಧ ಸೆಣಸಾಡಲು ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಅಗತ್ಯ. ಸಪೋಟ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವು ಸಮೃದ್ಧವಾಗಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೇ ಕಫವನ್ನು ನೀರು ಮಾಡುವ ಶಕ್ತಿ ಇದೆ.

ಹೊಟ್ಟೆಯ ಆರೋಗ್ಯ ಕಾಪಾಡುತ್ತದೆ : ಸಪೋಟ ಫೈಬರ್ ನಿಂದ ಸಮೃದ್ಧವಾಗಿದ್ದು, ಇದು ಕರುಳನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ. ಜೀರ್ಣ ಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆ ಸಮಸ್ಯೆಯು ಬರದಂತೆ ನೋಡಿಕೊಳ್ಳುತ್ತದೆ.

ಚರ್ಮ ಹಾಗೂ ತ್ವಚೆಯ ಆರೋಗ್ಯಕ್ಕೂ ಸಹಕಾರಿ : ಸಪೋಟ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಇ ಅಂಶಗಳು ಸಮೃದ್ಧವಾಗಿದೆ. ಇದರ ನಿಯಮಿತ ಸೇವನೆಯು ಚರ್ಮವನ್ನು ಸ್ವಚ್ಛಗೊಳಿಸಿ, ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಅದಲ್ಲದೇ, ಚರ್ಮದ ಕೋಶಗಳ ಪುನರುತ್ಪಾದಿಸಿ, ಕಪ್ಪು ಚುಕ್ಕೆಗಳು ಮತ್ತು ಕಲೆಗಳಿಂದ ಉಂಟಾಗುವ ಗುರುತುಗಳನ್ನು ನಿವಾರಿಸುತ್ತದೆ.

ಹೃದಯದ ಆರೋಗ್ಯ ಕಾಪಾಡುತ್ತದೆ: ಪೊಟ್ಯಾಶಿಯಮ್ ಮಟ್ಟ ಕಡಿಮೆಯಿದ್ದಾಗ ಹೃದಯ ಸಮಸ್ಯೆಗಳು ಬರುವ ಸಾಧ್ಯತೆಯೇ ಹೆಚ್ಚು. ಆದರೆ ಈ ಕಿತ್ತಳೆಯಲ್ಲಿ ಪೊಟ್ಯಾಶಿಯಮ್ ಅಂಶವು ಹೇರಳವಾಗಿದ್ದು, ಹೀಗಾಗಿ ಇದರ ನಿಯಮಿತ ಸೇವನೆಯು ಹೃದಯರಕ್ತನಾಳದ ವ್ಯವಸ್ಥೆಯನ್ನು ಬಲ ಪಡಿಸಲು ಹಾಗೂ ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತದೆ.

ಮಲಬದ್ಧತೆ ಸಮಸ್ಯೆ ನಿವಾರಣೆ:
ಸಪೋಟ ಹಣ್ಣಿನಲ್ಲಿ ನಾರಿನ ಪ್ರಮಾಣ ಹೆಚ್ಚಾಗಿ ಸಿಗುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಇದು ಕರುಳಿನ ಭಾಗವನ್ನು ಸೋಂಕುಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ.ಕರುಳಿನ ಭಾಗದಲ್ಲಿ ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಇದರಿಂದ ಸರಾಗವಾದ ಮಲವಿಸರ್ಜನೆ ನಿಮ್ಮದಾಗಿ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ.