ನವದೆಹಲಿ,ಸೆ.4: ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಆಹಾರ ಪದಾರ್ಥಕ್ಕೂ ಪಾಮ್ ಆಯಿಲ್ (Palm Oil) ಬಳಕೆ ಸಾಮಾನ್ಯವಾಗಿದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದೇ? ಅಥವಾ ಹಾನಿಕಾರಕವೇ ಎನ್ನುವ ಗೊಂದಲ ಹಲವು ಜನರಲ್ಲಿದೆ. ತಾಳೆ ಎಣ್ಣೆ ಅಥವಾ ಪಾಮ್ ಆಯಿಲ್ ತಾಳೆ ಮರದ ಹಣ್ಣಿನಿಂದ ಹೊರ ತೆಗೆಯ ಲಾಗುತ್ತದೆ. ಇದು ಸ್ಯಾಚುರೇಟೆಡ್ ಮತ್ತು ಅನ್ ಸ್ಯಾಚು ರೇಟೆಡ್ ಫ್ಯಾಟಿ ಕೊಬ್ಬು, ಪಾಲ್ಮಿಟಿಕ್ ಆಮ್ಲ, ಒಲೀಕ್ ಆಮ್ಲ, ಲಿನೋಲಿಕ್ ಆಮ್ಲ, ವಿಟಮಿನ್ ಇ ಮತ್ತು ಕ್ಯಾರೊಟಿನಾಯ್ಡ್ ಗಳನ್ನು ಸಹ ಹೊಂದಿರುತ್ತದೆ. ಹಾಗಿದ್ರೆ ಪಾಮ್ ಆಯಿಲ್ ಆರೋಗ್ಯಕ್ಕೆ ಉತ್ತಮವೇ?
ತಾಳೆ ಎಣ್ಣೆಯೂ ಅಡುಗೆ ಎಣ್ಣೆ ಚಾಕೊಲೇಟ್ ಮತ್ತು ವಿವಿಧ ಸಂಸ್ಕರಿಸಿದ ಆಹಾರಗಳಂತಹ ಉತ್ಪನ್ನಗಳಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ದೇಹಕ್ಕೆ ಪೋಷಕಾಂಶ ಒದಗಿಸುತ್ತವೆ. ತಾಳೆ ಎಣ್ಣೆಯಲ್ಲಿ ಸಹಜವಾಗಿ ಕೊಲೆಸ್ಟ್ರಾಲ್ ಮಟ್ಟ ಇರುವುದಿಲ್ಲ ಆದರೆ, ಒಂದೇ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿ ಉಪಯೋಗಿಸಿದರೆ ಆರೋಗ್ಯಕ್ಕೆ ಹಾನಿಯಾಗಬಹುದು.
Vishwavani Health: ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಎಚ್ಐವಿ ಸೋಂಕಿತರ ಸಂಖ್ಯೆ; ಕಾರಣವೇನು?
ಮೆದುಳಿನ ಆರೋಗ್ಯಕ್ಕೆ ರಕ್ಷಣೆ ನೀಡುತ್ತದೆ:
ಇದರಲ್ಲಿ ಟೋಕೋಟ್ರಿಯೆನಾಲ್‌ಗಳು ಮತ್ತು ಟೋಕೋಫೆರಾಲ್ ಗಳಂತಹ ಉತ್ಕರ್ಷಣ ನಿರೋಧಕಗಳು ಹೆಚ್ಚಿದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ ಮೆದುಳಿನ ಆರೋಗ್ಯ ರಕ್ಷಣೆ ಮಾಡುತ್ತದೆ.
ದೇಹಕ್ಕೆ ವಿಟಮಿನ್ ಎ ಪ್ರಮಾಣ ಸಿಗುತ್ತದೆ:
ಕ್ಯಾರೋಟಿನಾಯ್ಡ್‌ಗಳನ್ನು ಹೊಂದಿರುವ ಪಾಮ್ ಎಣ್ಣೆಯೂ ದೇಹಕ್ಕೆ ವಿಟಮಿನ್ ಎ ಪ್ರಮಾಣ ಹೆಚ್ಚಿಸಿ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಅದೇ ರೀತಿ ಕ್ಯಾನ್ಸರ್, ದೀರ್ಘಕಾಲದ ಕಾಯಿಲೆಯ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸುತ್ತದೆ.
ಚರ್ಮಕ್ಕೆ ಪ್ರಯೋಜನಕಾರಿ:
ತಾಳೆ ಎಣ್ಣೆಯಲ್ಲಿರುವ ಅಂಟಿ- ಆಕ್ಸಿಡೆಂಟ್ ಗಳು ರೋಗ ನಿರೋಧಕ ಶಕ್ತಿಯ ಪ್ರಮಾಣವನ್ನು ಹೆಚ್ಚು ಮಾಡುತ್ತದೆ. ಇದು ಒಣ ಚರ್ಮವನ್ನು ಹೈಡ್ರೇಟ್ ಮಾಡಿ ಚರ್ಮದ ನೈಸರ್ಗಿಕ ತೇವಾಂಶವನ್ನು ದೀರ್ಘಕಾಲದವರೆಗೆ ಕಾಪಾಡುತ್ತದೆ.
ಹೃದಯಕ್ಕೆ ತಾಳೆ ಎಣ್ಣೆ ಹಾನಿಕರವೇ?
ತಾಳೆ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಅಧಿಕವಾಗಿ ಇರಲಿದೆ. ಆದರೆ ಅತಿಯಾದ ಸಂಸ್ಕರಿಸಿದ ಆಹಾರ ಹಾಗೂ ಸಂಸ್ಕರಿಸಿದ ತಾಳೆ ಎಣ್ಣೆಯನ್ನು ಸೇವಿಸುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ.
ಯಾರು ಹೆಚ್ಚು ಎಚ್ಚರಿಕೆ ವಹಿಸಬೇಕು?
*ಹೆಚ್ಚಿನ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿರುವ ಜನರು ಸೇವನೆ ಮಾಡುವಾಗ ಜಾಗೃತಿ ವಹಿಸಬೇಕಾಗುತ್ತದೆ
*ಹೃದಯ ಕಾಯಿಲೆಯ ಹೆಚ್ಚಿನ ಅಪಾಯವಿರುವವರು ತಮ್ಮ ತಾಳೆ ಎಣ್ಣೆ ಸೇವನೆಯ ಬಗ್ಗೆಯೂ ಜಾಗರೂಕರಾಗಿರಬೇಕು.
*ಅಲರ್ಜಿಯ ಸಮಸ್ಯೆ ಇರುವವರು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು