ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೊಟ್ಟೆ ಸೇವನೆ ಆರೋಗ್ಯಕ್ಕೆ ಉತ್ತಮವೇ? ಬಳಕೆ ಬಗ್ಗೆ ವೈದ್ಯರ ಸಲಹೆ ಏನು?

Health Tips: ಮೊಟ್ಟೆಯನ್ನು ಕೆಲವರು ಸೂಪರ್‌ಫುಡ್ ಎಂದು ಹೇಳಿದರೆ ಮತ್ತೆ ಹಲವರು ಅವುಗಳು ಕೊಲೆಸ್ಟ್ರಾಲ್ ಅಥವಾ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು ದೂಷಿಸುತ್ತಾರೆ‌. ಹಾಗಾಗಿ ಪ್ರತಿದಿನ ಇವುಗಳ ಸೇವನೆ ಒಳ್ಳೆಯದೇ? ಅವು ಯಕೃತ್ತಿಗೆ ಹಾನಿ ಮಾಡುತ್ತವೆಯೇ? ಅಥವಾ ಅವು ತೂಕ ನಷ್ಟಕ್ಕೆ ಸಹಾಯ ಮಾಡಬಹುದೇ? ಎನ್ನುವ ಸಂದೇಹ ಹೆಚ್ಚಿನವರಿಗೆ ಇದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಮೊಟ್ಟೆ ಸೇವನೆ ದೇಹಕ್ಕೆ ಸುರಕ್ಷಿತವೇ? ವೈದ್ಯರು ನೀಡಿದ ಸಲಹೆ ಏನು?

ಸಂಗ್ರಹ ಚಿತ್ರ -

Profile
Pushpa Kumari Jan 24, 2026 7:34 AM

ನವದೆಹಲಿ, ಜ. 24: ಮೊಟ್ಟೆ (Egg) ಆರೋಗ್ಯಕ್ಕೆ ಉತ್ತಮ‌ ಎಂದು ವಾರಕೊಮ್ಮೆಯಾದರೂ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಇದು ಸಂಪೂರ್ಣ ಪ್ರೋಟೀನ್ ಜತೆಗೆ ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಆದರೆ ಇವುಗಳ ಸೇವನೆ ಬಗ್ಗೆ ಹೆಚ್ಚಾಗಿ ಚರ್ಚೆ ನಡೆಯುತ್ತಿರುತ್ತವೆ. ಒಮ್ಮೆ ಅವುಗಳನ್ನು ಸೂಪರ್‌ಫುಡ್ ಎಂದು ಹೇಳಿದರೆ ಮತ್ತೊಮ್ಮೆ ಅವುಗಳನ್ನು ಕೊಲೆಸ್ಟ್ರಾಲ್ ಅಥವಾ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು ದೂಷಿಸುತ್ತಾರೆ‌. ಹಾಗಾಗಿ ಪ್ರತಿದಿನ ಇವುಗಳ ಸೇವನೆ ಒಳ್ಳೆಯದೇ? ಇವು ಯಕೃತ್ತಿಗೆ ಹಾನಿ ಮಾಡುತ್ತವೆಯೇ? ಅಥವಾ ಇವು ತೂಕ ನಷ್ಟಕ್ಕೆ ಸಹಾಯ ಮಾಡಬಹುದೇ? ಎನ್ನುವ ಸಂದೇಹ ಹೆಚ್ಚಿನವರಿಗೆ ಇದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಮೊಟ್ಟೆ ಸೇವನೆ ಉತ್ತಮವೇ?

ಮೊಟ್ಟೆ ಪ್ರೊಟೀನ್‌ನ ಆಗರ. ಆದರೆ ಅದರ ಬಗ್ಗೆ ಇರುವ ಗೊಂದಲಗಳ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಮೊಟ್ಟೆಯು ಅತ್ಯುತ್ತಮ ಪ್ರೊಟೀನ್ ಮೂಲವಾಗಿದ್ದು ಅದು ನಿಮ್ಮನ್ನು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ ಮತ್ತು ಸ್ಥಿರವಾದ ಶಕ್ತಿಯನ್ನು ಒದಗಿಸುತ್ತದೆ. ಹಾಗಾಗಿ ಅನಗತ್ಯ ಸೇವನೆಯನ್ನು ಇದು ತಪ್ಪಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಕೊಬ್ಬಿನ ಯಕೃತ್ತಿಗೆ ಮೊಟ್ಟೆ ಒಳ್ಳೆಯದೇ?

ಹೌದು, ಮಿತವಾಗಿ ಮೊಟ್ಟೆ ಸೇವನೆ ಮಾಡಿದರೆ ಪ್ರೋಟೀನ್ ಸಕ್ಕರೆ ಸೇವನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುತ್ತದೆ. ಇದು ಫ್ಯಾಟಿ ಲಿವರ್ ನಿರ್ವಹಣೆಗೆ ಪೂರಕ.

ಮೊಟ್ಟೆಕೊಲೆಸ್ಟ್ರಾಲ್ ಹೆಚ್ಚಿಸುತ್ತವೆಯೇ?

ಹೆಚ್ಚಿನ ಜನರಿಗೆ ಮೊಟ್ಟೆ ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತದೆ ಎಂಬ ಭಯ ಇದೆ. ಆದರೆ ಆರೋಗ್ಯವಂತ ವ್ಯಕ್ತಿಗಳಲ್ಲಿ ಮೊಟ್ಟೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚು ಮಾಡುವುದಿಲ್ಲ. ಮೊಟ್ಟೆ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮೇಲೆ ಅಲ್ಪಪ್ರಮಾಣದ ಪರಿಣಾಮ ಬೀರಬಹುದು.

ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ತೂಕ ಇಳಿಕೆಗೆ ಮೊಟ್ಟೆ ಸಹಕಾರಿಯೇ?

ಹೊಟ್ಟೆಯ ಕೊಬ್ಬು ಮತ್ತು ತೂಕ ಇಳಿಕೆ ಮಾಡೋರಿಗೆ ಮೊಟ್ಟೆ ಉತ್ತಮ ಆಹಾರ. ಅವುಗಳ ಹೆಚ್ಚಿನ ಪ್ರೋಟೀನ್ ಅಂಶವು ಹೊಟ್ಟೆಯ ಕೊಬ್ಬು ಮತ್ತು ತೂಕ ಇಳಿಸುವ ಪ್ರಮಾಣಕ್ಕೆ ಉತ್ತಮ. ಇದರಲ್ಲಿ ಪ್ರೊಟೀನ್ ಹೆಚ್ಚಿರುವುದರಿಂದ ಪದೇ ಪದೆ ಹಸಿವಾಗುವುದನ್ನು ತಡೆಯುತ್ತದೆ. ಇದು ಡಯಟ್ ಮಾಡುವವರಿಗೆ ಉತ್ತಮ ಆಹಾರ ಎನಿಸಿಕೊಂಡಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲಿದೆಯೆ?

ಮೊಟ್ಟೆ ಬಹುತೇಕ ಶೂನ್ಯ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚು ಮಾಡುವುದಿಲ್ಲ.

ಹೊಟ್ಟೆ ಉಬ್ಬರ ಉಂಟಾಗುತ್ತದೆಯೇ?

ಕೆಲವು ಜನರಲ್ಲಿ ಮೊಟ್ಟೆ ತಿಂದಾಗ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್‌ ಸಮಸ್ಯೆ ಕಂಡುಬರಬಹುದು. ಅಂತಹ ಜನರು ಮೊಟ್ಟೆ ಬೇಯಿಸುವ ವಿಧಾನವನ್ನು ಬದಲಿಸಿ ಸೇವನೆ ಮಾಡಬಹುದು. ದಿನಕ್ಕೆ 1ರಿಂದ 2 ಇಡೀ ಮೊಟ್ಟೆಗಳನ್ನು ಸೇವಿಸಬಹುದು. ಬೇಯಿಸಿದ ಅಥವಾ ಆಮ್ಲೆಟ್ ರೂಪದಲ್ಲಿ ಸೇವಿಸುವುದು ಉತ್ತಮ ವಿಧಾನ.