ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Health Tips: ಬೆಲ್ಲದ ಸೇವನೆ ಸಕ್ಕರೆಗಿಂತ ನಿಜವಾಗಿಯೂ ಉತ್ತಮವೇ? ತಜ್ಞರು ಹೇಳೋದೇನು?

ಹಿಂದಿನ ಕಾಲದಿಂದಲೂ ಬೆಲ್ಲವು ಆರೋಗ್ಯಕರ ಆಹಾರವೆಂಬ ಖ್ಯಾತಿಯನ್ನು ಪಡೆದಿದೆ. ತಲೆಮಾರು ಗಳಿಂದಲೂ ನೀರಿನ ಜೊತೆ ಬೆಲ್ಲ ಕೊಡುವುದು, ಊಟದ ನಂತರ ಸೇವಿಸಲು ಶಿಫಾರಸು ಮಾಡಲ್ಪಡು ವುದು ಹೀಗೆ ನೈಸರ್ಗಿಕವಾಗಿ ಆರೋಗ್ಯಕರ ಎಂದು ಹೇಳಲಾಗುತ್ತದೆ. ಅದರಲ್ಲೂ ಸಕ್ಕರೆಗೆ ಪರ್ಯಾಯವಾಗಿ ಬೆಲ್ಲವನ್ನು "ಉತ್ತಮ" ಆಯ್ಕೆಯೆಂದು ನೋಡಲಾಗುತ್ತದೆ

ಇಂಟರ್ ನೆಟ್ ಚಿತ್ರ

ನವದೆಹಲಿ: ಹಿಂದಿನ ಕಾಲದಿಂದಲೂ ಬೆಲ್ಲವು (Jaggery) ಆರೋಗ್ಯಕರ ಆಹಾರವೆಂಬ ಖ್ಯಾತಿಯನ್ನು ಪಡೆದಿದೆ. ತಲೆಮಾರುಗಳಿಂದಲೂ ನೀರಿನ ಜೊತೆ ಬೆಲ್ಲ ಕೊಡುವುದು, ಊಟದ ನಂತರ ಸೇವಿಸಲು ಶಿಫಾರಸು ಮಾಡಲ್ಪಡುವುದು ಹೀಗೆ ನೈಸರ್ಗಿಕವಾಗಿ ಆರೋಗ್ಯಕರ ಎಂದು ಹೇಳಲಾಗುತ್ತದೆ. ಅದರಲ್ಲೂ ಸಕ್ಕರೆಗೆ ಪರ್ಯಾಯವಾಗಿ ಬೆಲ್ಲವನ್ನು "ಉತ್ತಮ" ಆಯ್ಕೆಯೆಂದು ನೋಡಲಾಗುತ್ತದೆ. ಆದರೆ, ಅತಿಯಾಗಿ ಸೇವಿಸಿದಾಗ ಬೆಲ್ಲವೂ ಸಕ್ಕರೆಯಂತೆಯೇ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

​ಬೆಲ್ಲವು ಸಕ್ಕರೆಗಿಂತ ಉತ್ತಮವೇ?

​ಬೆಲ್ಲದಲ್ಲಿ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಹಲವು ಪೋಷಕಾಂಶಗಳು ಇವೆ.  ಆದರೆ ಲೆಕ್ಕ ಮೀರಿ ಸೇವಿಸಿದರೆ ಆರೋಗ್ಯ ಪರಿಣಾಮ ಬೀರಬಹುದು. ಇನ್ನೂ ​ಕ್ಯಾಲೋರಿಗಳ ವಿಷಯದಲ್ಲಿ ಬೆಲ್ಲ ಮತ್ತು ಸಕ್ಕರೆ ಎರಡೂ ಒಂದೇ ರೀತಿಯಾಗಿವೆ. ಬೆಲ್ಲವು ಶುದ್ಧೀಕರಿಸದ ಸಿಹಿಯಾಗಿದ್ದರೂ, ಪೋಷಕಾಂಶಗಳ ದೃಷ್ಟಿಯಿಂದ ಪೂರ್ಣ ಒಳಿತಲ್ಲ.

Health Tips: ಈ ಆರೋಗ್ಯ ಸಮಸ್ಯೆ ಇದ್ದವರು ಅಪ್ಪಿತಪ್ಪಿಯೂ ಮಖಾನ ಸೇವಿಸಬೇಡಿ

ಮಧುಮೇಹಿಗಳಿಗೆ ಬೆಲ್ಲ ಸುರಕ್ಷಿತವೇ?

ಇದು ಅತ್ಯಂತ ಸಾಮಾನ್ಯವಾದ ತಪ್ಪು ಕಲ್ಪನೆಗಳಲ್ಲಿ ಒಂದಾಗಿದೆ. ಬೆಲ್ಲವು ಹೆಚ್ಚಾಗಿ ಸುಕ್ರೋಸ್ ಅನ್ನು ಹೊಂದಿರುವುದರಿಂದ, ಇದು ಸಕ್ಕರೆಯಂತೆಯೇ ಗ್ಲೈಸೆಮಿಕ್ ಪರಿಣಾಮವನ್ನು ಉಂಟು ಮಾಡಬಹುದು. ದೇಹವು ಎರಡನ್ನೂ ಅಷ್ಟೇ ವೇಗವಾಗಿ ಗ್ಲೂಕೋಸ್ ಆಗಿ ವಿಭಜಿಸುತ್ತದೆ. ಅನೇಕ ಮಧುಮೇಹಿಗಳು ಬೆಲ್ಲ ಸುರಕ್ಷಿತ ಎಂದು ಭಾವಿಸಿ ಎಂದು ಸಕ್ಕರೆ ಬದಲು ಬೆಲ್ಲ ಸೇರಿಸಿಕೊಳ್ಳುತ್ತಾರೆ, ಆದರೆ ಇದರಿಂದ ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಏರಿಕೆಯಾಗುತ್ತದೆ.‌ಮಧುಮೇಹ ಇರುವವರಿಗೆ ಬೆಲ್ಲವು ಸಕ್ಕರೆಯಷ್ಟೇ ಅಪಾಯಕಾರಿಯಾಗಿದೆ.

ಬೆಲ್ಲ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆಯೇ?

​ಊಟದ ನಂತರ ಸಣ್ಣ ತುಂಡು ಬೆಲ್ಲ ತಿನ್ನುವುದು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆದರೆ, ಅತಿಯಾಗಿ ತಿಂದರೆ ಹೊಟ್ಟೆ ಉಬ್ಬರ ಹಾಗೂ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

​ಬೆಲ್ಲ ಯಾವಾಗಲೂ ಶುದ್ಧವಾಗಿರುತ್ತದೆಯೇ?

​ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಬೆಲ್ಲಗಳೂ ಶುದ್ಧವಾಗಿರುವುದಿಲ್ಲ. ಅನೇಕ ಕಡೆ ಬೆಲ್ಲಕ್ಕೆ ರಾಸಾಯನಿಕಗಳು, ಸಕ್ಕರೆಯ ಪಾಕವನ್ನು ಬೆರೆಸಿಯೂ ನೀಡಲಾಗುತ್ತದೆ. ಹಾಗಾಗಿ ಈ ಬಗ್ಗೆ ಜಾಗೃತಿವಹಿಸಿ.