ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KMC Hospital Mangaluru: ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ ಕೆಎಂಸಿ ವೈದ್ಯರು!

ಹೃದಯದ ಕಾರ್ಯಕ್ಕೆ ತಡೆಯೊಡ್ಡುವ ‘ ಕ್ಯಾಲ್ಸಿಫಿಕ್‌ ಕನ್ಸ್ಟ್ರಕ್ಟಿವ್ ಪೆರಿಕಾರ್ಡಿಟಿಸ್’' ಎಂಬ ದೀರ್ಘ ಕಾಲದ ಕಾಯಿಲೆಯಿಂದ ಬಳಲುತ್ತಿದ್ದ 50 ವರ್ಷ ವಯಸ್ಸಿನ ಪುರುಷರೋಗಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದೆ. ರೋಗಿಯನ್ನು ಆರು ದಿನಗಳ ಕಾಲ ಐಸಿಯುನಲ್ಲಿ ಮೇಲ್ವಿಚಾರಣೆ ಮಾಡಲಾಯಿತು ಮತ್ತು ವಾರ್ಡ್‌ಗೆ ಸ್ಥಳಾಂತರಿಸಲಾಯಿತು, ಶಸ್ತ್ರಚಿಕಿತ್ಸೆಯ 12 ದಿನಗಳ ನಂತರ ಆರೋಗ್ಯವಾಗಿ ಡಿಸ್ಚಾರ್ಜ್‌ ಮಾಡಲಾಯಿತು.

ಮಂಗಳೂರು: ಹೃದಯದ ಕಾರ್ಯಕ್ಕೆ ತಡೆಯೊಡ್ಡುವ ‘ ಕ್ಯಾಲ್ಸಿಫಿಕ್‌ ಕನ್ಸ್ಟ್ರಕ್ಟಿವ್ ಪೆರಿಕಾ ರ್ಡಿಟಿಸ್’' ಎಂಬ ದೀರ್ಘ ಕಾಲದ ಕಾಯಿಲೆಯಿಂದ ಬಳಲುತ್ತಿದ್ದ 50 ವರ್ಷ ವಯಸ್ಸಿನ ಪುರುಷ ರೋಗಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯು (KMC Hospital Mangaluru) ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, ರೋಗಿಗೆ ಹೊಸ ಜೀವನ ಕಟ್ಟಿಕೊಳ್ಳಲು ನೆರವಾಗಿದೆ. ಆಸ್ಪತ್ರೆಯ ಕನ್ಸಲ್ಟೆಂಟ್ ಕಾರ್ಡಿಯೊಥೊರಾಕಿಕ್ ಮತ್ತು ವ್ಯಾಸ್ಕ್ಯೂಲರ್ ಸರ್ಜರಿ ತಜ್ಞರಾದ ಡಾ. ಹರೀಶ್‌ ರಾಘವನ್, ಡಾ.ಮಾಧವ್‌ ಕಾಮತ್, ಡಾ. ಐರೇಶ್‌ ಶೆಟ್ಟಿ ಹಾಗೂ ಅರವಳಿಕೆ ತಜ್ಞರಾದ ಡಾ. ರಾಮಮೂರ್ತಿ ರಾವ್ ಮತ್ತು ಡಾ .ಪಂಚಾಕ್ಷರಿ ಪಾಟೀಲ್ ಅವರ ತಂಡ ಯಶಸ್ವಿಯಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಪೆರಿಕಾರ್ಡಿಯೆಕ್ಟೊಮಿ ಶಸ್ತ್ರಚಿಕಿತ್ಸೆ ಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಏನಿದು ಅಪರೂಪದ ಪ್ರಕರಣ ?

ತೀವ್ರ ಬಳಲಿಕೆ, ಉಸಿರಾಟದ ಸಮಸ್ಯೆ , ಕಾಲುಗಳಲ್ಲಿ ಹಾಗೂ ಕಿಬ್ಬೊಟ್ಟೆಯಲ್ಲಿ ಊತ, ಅಸಮಾನ್ಯ ತೂಕ ಏರಿಕೆ (140 ಕೆ ಜಿ ತೂಕ) ಬಳಲುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರು ಇಂಟರ್ವೆನ್ಶನಲ್‌ ಕಾರ್ಡಿಯಾಲಾಜಿಸ್ಟ್‌ ಡಾ. ರಾಜೇಶ್‌ ಭಟ್‌ ಅವರನ್ನು ಮೊದಲು ಭೇಟಿಯಾಗಿದ್ದರು. ಕಾರ್ಡಿಯಾಕ್‌ ಸಮಸ್ಯೆಯ ಕಾರಣದಿಂದ ದೇಹದಲ್ಲಿ ನೀರು ತುಂಬಿ ಅವರ ತೂಕ ಅಧಿಕವಾಗಿತ್ತು. ತಪಾಸಣೆ ಮತ್ತು ಎಮ್‌ಆರ್‍ಐ ಪರೀಕ್ಷೆಯಲ್ಲಿ ತೀವ್ರ ಮಟ್ಟದ ಕ್ಯಾಲ್ಸಿಫೈಡ್‌ ಪೆರಿಕಾರ್ಡಿಯಮ್‌ ( ಹೃದಯದ ಸುರಕ್ಷಿತ ಭಾಗದಲ್ಲಿ ಕ್ಯಾಲ್ಶಿಯಮ್‌ ತುಂಬಿರುವುದು) ಪತ್ತೆಯಾಗಿತ್ತು .

ಇದು ಹೃದಯದ ಸಾಮಾನ್ಯ ಕಾರ್ಯಕ್ಕೆ ತಡೆಯೊಡ್ಡಿತ್ತು. ಡೈಯುರೆಟಿಕ್ಸ್‌ ಬಳಕೆಯ ಬಳಿಕ ರೋಗಿಯನ್ನು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಗಿತ್ತು. ಕೆಎಂಸಿ ಆಸ್ಪತ್ರೆಯ ನುರಿತ ತಜ್ಞರ ತಂಡ ಹೃದಯಕ್ಕೆ ಅಂಟಿಕೊಂಡಿದ್ದ ಕ್ಯಾಲ್ಸಿಫೈಡ್‌ ಪೆರಿಕಾರ್ಡಿಯಲ್ ಸ್ಯಾಕ್‌ ( ಕ್ಯಾಲ್ಶಿಯಮ್‌ ತುಂಬಿದ ಚೀಲ) ವನ್ನು ಯಶಸ್ವಿಯಾಗಿ ತೆಗೆದು ಹೃದಯದ ಕಾರ್ಯ ಸರಾಗವಾಗಿ ನಡೆಯುವಂತೆ ಮಾಡ ಲಾಯಿತು.

ಶಸ್ತ್ರಚಿಕಿತ್ಸೆ ಕುರಿತು ಮಾತನಾಡಿದ ಡಾ. ಹರೀಶ್‌ ರಾಘವನ್ “ ಕನ್ಸ್ಟ್ರಕ್ಟಿವ್ ಪೆರಿಕಾರ್ಡಿಟಿಸ್ ಒಂದು ಮಾರಣಾಂತಿಕ ಸಮಸ್ಯೆಯಾಗಿದ್ದು ಇದು ಹೃದಯದದ ರಕ್ತ ತುಂಬುವ ಹಾಗೂ ಪಂಪ್‌ಮಾಡುವ ಕಾರ್ಯವನ್ನು ತಡೆಯುತ್ತದೆ. ಆರಂಭದಲ್ಲೇ ಸಮಸ್ಯೆಯನ್ನು ಪತ್ತೆ ಹಚ್ಚುವುದು ಮತ್ತು ಶೀಘ್ರ ಚಿಕಿತ್ಸೆಯೇ ಸಮಸ್ಯೆ ಗುಣಪಡಿಸಲು ಇರುವ ಮಾರ್ಗ. ಕ್ಯಾಲ್ಶಿಯಮ್‌ ಪ್ರಮಾಣ ಅಧಿಕವಾಗಿ ಶೇಖರಣೆಯಾಗಿರುವುದೇ ಈ ಪ್ರಕರಣ ಮತ್ತಷ್ಟು ಕ್ಲಿಷ್ಟವಾಗಲು ಕಾರಣ. ಆದರೆ ಉತ್ತಮ ತಂಡದ ಕಾರ್ಯದಿಂದ ಸಮಸ್ಯೆ ಪರಿಹರಿಸಲು ಸಾಧ್ಯವಾಗಿದ್ದು ರೋಗಿಯು ಗುಣಮುಖರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ಡಾ. ರಾಜೇಶ್‌ ಭಟ್‌ ಮಾತನಾಡಿ “ ಇಂತಹ ಪ್ರಕರಣಗಳು ಬಹಳಷ್ಟು ವಿರಳ, ನನ್ನ ಅನುಭವದಲ್ಲಿ ಕೆಲವು ಪ್ರಕರಣ ಮಾತ್ರ ಕಂಡಿದ್ದೇನೆ. ನಿಖರವಾದ ಪರೀಕ್ಷೆಯ ಮೂಲಕ ನಾವು ಸರಿಯಾದ ಸಮಸ್ಯೆಯನ್ನು ಗುರುತಿಸಿ ಸೂಕ್ತವಾದ ಚಿಕಿತ್ಸೆಯನ್ನು ನೀಡಿದ್ದೇವೆ. ಶಸ್ತಚಿಕಿತ್ಸೆಯ ಬಳಿಕ ರೋಗಿ ಯಲ್ಲಿ ಸಾಕಷ್ಟು ಚೇತರಿಕೆ ಕಂಡಿದ್ದು, ಆರೋಗ್ಯವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಒಬ್ಬ ತೀವ್ರವಾದ ಆರೋಗ್ಯ ಸಮಸ್ಯೆಯಿಂದ ಬಂದ ರೋಗಿ ಆರೋಗ್ಯವಾಗಿ ಮನೆಗೆ ಹಿಂತಿರುಗುವುದನ್ನು ನೋಡಲು ಸಂತೋಷವಾಗುತ್ತದೆ. ಶಸ್ತ್ರಚಿಕಿತ್ಸೆ ಪೂರ್ವದ ಚಿಕಿತ್ಸೆ ಬಹಳ ಸವಾಲಿನದ್ದಾಗಿತ್ತು. ರೋಗಿಗೆ ಹೆಚ್ಚಿನ ಮಟ್ಟದ ಔಷಧಗಳ ಅಗತ್ಯವಿತ್ತು. ಹೃದಯ ಮತ್ತು ಕಿಡ್ನಿ ಕಾರ್ಯವನ್ನು ಸಮತೋಲನಕ್ಕೆ ತರುವುದು ಮುಖ್ಯವಾಗಿತ್ತು” ಎಂದರು.

ಇದನ್ನು ಓದಿ;Health Tips: ಆಹಾರಕ್ಕೂ ಅಂಟಿವೆಯಲ್ಲ ಮಿಥ್ಯೆಗಳು!

ಕನ್ಸಲ್ಟೆಂಟ್‌ ನೆಫ್ರೋಲಾಜಿಸ್ಟ್‌ ಡಾ, ಸುಶಾಂತ್ ಕುಮಾರ್‍ ಮಾತನಾಡಿ “ ಕಾರ್ಡಿಯಾಕ್‌ ಸಮಸ್ಯೆಯ ಕಾರಣದಿಂದ ರೋಗಿಯಲ್ಲಿ ಕಿಡ್ನಿ ಫೇಲ್ಯೂರ್ ಉಂಟಾಗಿತ್ತು. ಹೃದಯದ ಕಾರ್ಯದಲ್ಲೂ ತಡೆ ಉಂಟಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಕಿಡ್ನಿ ಕಾರ್ಯವೂ ಚೇತರಿಕೆ ಕಂಡಿದೆ. ವಿವಿಧ ವಿಭಾಗದ ವೈದ್ಯರ ಈ ಒಗ್ಗಟ್ಟಿನ ಕಾರ್ಯವು ಉತ್ತಮ ಫಲಿತಾಂಶ ನೀಡಿದೆ” ಎಂದರು.

ಅಪರೂಪದ ಪ್ರಕರಣದ ಕುರಿತು ಮಾತನಾಡಿದ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಾಘೀರ್ ಸಿದ್ದಿಕಿ “ ಈ ಪ್ರಕರಣದಲ್ಲಿ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ಪ್ರದರ್ಶಿಸಿದ ವೈದ್ಯಕೀಯ ನಿಪುಣತೆ ಹಾಗೂ ಕಾರ್ಯ ಕ್ಷಮತೆ ಬಗ್ಗೆ ನಮಗೆ ಹೆಮ್ಮೆ ಇದೆ. ಇಂತಹ ಕ್ಲಿಷ್ಟಕರ ಹಾಗೂ ಅಪರೂಪದ ಚಿಕಿತ್ಸೆಗಳು ಉತ್ತಮ ದರ್ಜೆಯ ಚಿಕಿತ್ಸೆಯನ್ನು ನೀಡುವಲ್ಲಿ ಹಾಗೂ ಮಾರಣಾಂತಿಕ ಸಮಸ್ಯೆಯನ್ನು ಹೊಂದಿರುವ ರೋಗಿಯೂ ಸುಧಾರಿತ ಚಿಕಿತ್ಸಾ ವಿಧಾನ ಹಾಗೂ ಚೇತರಿಕೆ ಹೊಂದುವ ಭರವೆಸೆಯನ್ನು ನೀಡುವ ಬದ್ಧತೆಯನ್ನು ತೋರುತ್ತದೆ “ ಎಂದರು.

ರೋಗಿಯನ್ನು ಆರು ದಿನಗಳ ಕಾಲ ಐಸಿಯುನಲ್ಲಿ ಮೇಲ್ವಿಚಾರಣೆ ಮಾಡಲಾಯಿತು ಮತ್ತು ವಾರ್ಡ್‌ಗೆ ಸ್ಥಳಾಂತರಿಸಲಾಯಿತು, ಶಸ್ತ್ರಚಿಕಿತ್ಸೆಯ 12 ದಿನಗಳ ನಂತರ ಆರೋಗ್ಯವಾಗಿ ಡಿಸ್ಚಾರ್ಜ್‌ ಮಾಡಲಾಯಿತು.