Earbuds: ಇಯರ್ ಬಡ್ ಇಲ್ಲದೆ ಮನೆಯಿಂದ ಹೊರಹೋಗುವುದೇ ಇಲ್ವಾ? ಹಾಗಿದ್ದರೆ ನೀವು ಈ ಸುದ್ದಿ ಓದಲೇಬೇಕು
ಜೇಬಿನಿಂದ ಹಿಡಿದು ನಿಮ್ಮ ಬ್ಯಾಗ್ ಮತ್ತು ಕಿವಿಗಳವರೆಗೆ, ಇಯರ್‌ಬಡ್‌ಗಳು ಎಲ್ಲೆಡೆ ಓಡಾಡುತ್ತವೆ. ಇದರಿಂದಾಗಿ ಅಹಿತಕರವಾದ ಕೊಳಕು, ಬೆವರು ಮತ್ತು ಇಯರ್‌ವಾಕ್ಸ್ ಮಿಶ್ರಣವನ್ನು ಅವು ಸಂಗ್ರಹಿಸುತ್ತವೆ. ಈ ಸಂಗ್ರಹವು ನೋಡಲು ಮಾತ್ರ ಅಹಿತಕರವಾಗಿರುವುದಿಲ್ಲ, ಬದಲಾಗಿದೆ ನಿಮ್ಮ ಇಯರ್ ಬಡ್‌ನ ಗುಣಮಟ್ಟದ ಮೇಲೂ ಪರಿಣಾಮ ಬೀರಬಹುದು ಮತ್ತು ಅತ್ಯಂತ ತೀವ್ರವಾದ ನೈರ್ಮಲ್ಯ ಸಮಸ್ಯೆ ಕಾರಣವಾಗಬಹುದು. ಹೇಗೆ ಅಂತೀರಾ..? ಇಲ್ಲಿದೆ ನೋಡಿ ಅದಕ್ಕೆ ಉತ್ತರ


ಬೆಂಗಳೂರು: ಎಲ್ಲೇ ಹೋದರೂ ಕಿವಿಗೆ ಇಯರ್ ಫೋನ್ ಅಥವಾ ಇರ್ ಬಡ್ ಇಟ್ಟುಕೊಂಡು ನಿಮ್ಮಿಷ್ಟವಾದ ಹಾಡು, ಸಿರೀಸ್ ಅಥವಾ ಸಿನಿಮಾ ನೋಡುವ ಹುಚ್ಚು ನಿಮಗಿದ್ದರೆ ನೀವು ಈ ಸುದ್ದಿ ಓದಲೇಬೇಕು. ಏಕೆಂದರೆ, ನೀವು ಮಾಡುವ ಈ ಒಂದು ತಪ್ಪು ನಿಮ್ಮ ಜೀವನ ಅತಿ ದೊಡ್ಡ ತಪ್ಪಾಗಿ ಬದಲಾಗಬಹುದು. ಅಷ್ಟೇ ಯಾಕೆ, ಈ ಒಂದು ಸಣ್ಣ ತಪ್ಪಿನಿಂದ ನೀವು ಜೀವನದುದ್ದಕ್ಕೂ ನಿಮ್ಮಿಷ್ಟದ ಹಾಡನ್ನು ಕೇಳುವ ಅವಕಾಶವನ್ನೇ ಕಳೆದುಕೊಳ್ಳಬಹುದು. ಮುಂದಿನ ಸಲ ನೀವು ನೀವು ಇಯರ್ ಫೋನ್ ಅಥವಾ ಇಯರ್ ಬಡ್ ಬಳಸುವಾಗ ಅದನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ಈಗಲೇ ಹೇಳುತ್ತೇವೆ, ಆ ದೃಶ್ಯ ಕೆಲವೊಮ್ಮೆ ಅಸಹ್ಯವಾಗಿರುತ್ತದೆ ಎಂದರೂ ತಪ್ಪಾಗಲಾರದು. ತುಂಬಾ ಸಮಯದಿಂದ ನಿಮ್ಮ ಇಯರ್ ಬಡ್ಸ್ ಕ್ಲೀನ್ ಮಾಡದೇ ಇದ್ದಲ್ಲಿ ಅದರಲ್ಲಿ ಕೊಳಕು ಕಲೆಗಳು ಮತ್ತು ಸಂಗ್ರಹವಾದ ಇಯರ್‌ವಾಕ್ಸ್ ಕಾಣಲು ಸಿಗುತ್ತದೆ.
ಜೇಬಿನಿಂದ ಹಿಡಿದು ನಿಮ್ಮ ಬ್ಯಾಗ್ ಮತ್ತು ಕಿವಿಗಳವರೆಗೆ, ಇಯರ್‌ಬಡ್‌ಗಳು ಎಲ್ಲೆಡೆ ಓಡಾಡುತ್ತವೆ. ಇದರಿಂದಾಗಿ ಅಹಿತಕರವಾದ ಕೊಳಕು, ಬೆವರು ಮತ್ತು ಇಯರ್‌ವಾಕ್ಸ್ ಮಿಶ್ರಣವನ್ನು ಅವು ಸಂಗ್ರಹಿಸುತ್ತವೆ. ಈ ಸಂಗ್ರಹವು ನೋಡಲು ಮಾತ್ರ ಅಹಿತಕರವಾಗಿರುವುದಿಲ್ಲ, ಬದಲಾಗಿದೆ ನಿಮ್ಮ ಇಯರ್ ಬಡ್‌ನ ಗುಣಮಟ್ಟದ ಮೇಲೂ ಪರಿಣಾಮ ಬೀರಬಹುದು ಮತ್ತು ಅತ್ಯಂತ ತೀವ್ರವಾದ ನೈರ್ಮಲ್ಯ ಸಮಸ್ಯೆ ಕಾರಣವಾಗಬಹುದು.
ವೈದ್ಯರು ಏನು ಹೇಳುತ್ತಾರೆ ಗೊತ್ತಾ?
ಇದನ್ನು ನಿರ್ಲಕ್ಷಿಸುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. "ಇಯರ್‌ಫೋನ್‌ಗಳ ಬಳಕೆಯು ಕಿವಿಯ ಒಳಪದರಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಇದರಿಂದಾಗಿ ಗುಣಪಡಿಸಲಾಗದ ನರ ಹಾನಿ ಉಂಟಾಗುತ್ತದೆ. ಶ್ರವಣ ನಷ್ಟದ ಆರಂಭಿಕ ಲಕ್ಷಣವೆಂದರೆ ಕಿವಿಯಲ್ಲಿ ರಿಂಗಿಂಗ್ ಸಂವೇದನೆ ಅಥವಾ ಸಂಭಾಷಣೆಯ ಸಮಯದಲ್ಲಿ ಸೂಕ್ಷ್ಮ ಶಬ್ದಗಳು ಅಥವಾ ಪದಗಳನ್ನು ಪ್ರತ್ಯೇಕಿಸಲು ಅಸಮರ್ಥರಾಗುವುದು. ಇದನ್ನು ಟಿನ್ನಿಟಸ್ ಎಂದು ಕರೆಯುತ್ತಾರೆ. ಇಯರ್‌ಫೋನ್‌ಗಳ ದೀರ್ಘಕಾಲೀನ ಬಳಕೆ ಶಾಶ್ವತ ಶ್ರವಣ ನಷ್ಟಕ್ಕೆ ಕಾರಣವಾಗುತ್ತದೆ" ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಇಎನ್‌ಟಿ- ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸಕ ಡಾ. ಸತೀಶ್ ನಾಯರ್ ಹೇಳುತ್ತಾರೆ.
ಇಯರ್‌ಬಡ್‌ಗಳನ್ನು ಸ್ವಚ್ಛಗೊಳಿಸದಿರುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದೂ ಅವರು ಹೇಳಿದ್ದಾರೆ. "ಇಯರ್‌ಬಡ್‌ಗಳನ್ನು ದೀರ್ಘಕಾಲದವರೆಗೆ ಬಳಸಿದರೆ, ಅದರಲ್ಲಿ ಬೆವರು ಸೇರಿ, ಕಿವಿ ಕಾಲುವೆಯ ಉರಿಯೂತ ಮತ್ತು ಸೋಂಕಿಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ತೀವ್ರವಾದ ನೋವು, ಊತ ಮತ್ತು ಕಿವಿಯಿಂದ ಕೀವು ಸ್ರವಿಸುವಿಕೆ ಉಂಟಾಗಿ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ" ಎಂದು ಡಾ. ನಾಯರ್ ಹೇಳಿದ್ದಾರೆ.
Viral : ಸ್ನೇಹಿತೆಯ ಜೊತೆ ಹಾಸಿಗೆಯಲ್ಲಿ ಮಲಗಿದ್ದಾಗ ಯಜಮಾನನ ಮೇಲೆಯೇ ಗುಂಡು ಹಾರಿಸಿದ ನಾಯಿ!
ಇಯರ್‌ಬಡ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಹೇಗೆ...?
ಸಮರ್ಪಕವಾದ ಇಯರ್‌ಬಡ್ ಕ್ಲೀನಿಂಗ್ ಕಿಟ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಾಮಾನ್ಯವಾಗಿ ಸೂಕ್ಷ್ಮವಾದ ಮೇಲ್ಮೈಗಳನ್ನು ಸ್ವಚ್ಛಗೊಳಿಸಲು ಮತ್ತು ಇಯರ್‌ಬಡ್‌ಗಳ ಮೂಲೆಗಳನ್ನು ತಲುಪಲು ಮಿನಿ ಬ್ರಷ್, ಪೆನ್‌ನಂತಹ ಉಪಕರಣಗಳು ಮತ್ತು ಕಾಟನ್ ಸ್ವ್ಯಾಬ್‌ಗಳಂತಹ ಪರಿಕರಗಳನ್ನು ಈ ಕಿಟ್ ಒಳಗೊಂಡಿರುತ್ತದೆ.
ಆದರೆ ಈ ಕಿಟ್ ಬಳಸಿಯೇ ಮಾತ್ರ ಇಯರ್ ಬಡ್ ಸ್ವಚ್ಛಗೊಳಿಸಬೇಕೆಂದೇನಿಲ್ಲ. ಮೇಲ್ಮೈಯಲ್ಲಿ ಕಾಣುವ ಇರ್ ವ್ಯಾಕ್ಸ್ ಸ್ವಚ್ಛಗೊಳಿಸಲು ಸೋಂಕುನಿವಾರಕ ವೈಪ್‌ಗಳನ್ನು ಬಳಸಬಹುದು. ಕನ್ನಡಕವನ್ನು ಒಡೆಸಲು ಬಳಸುವ ಮೈಕ್ರೋಫೈಬರ್ ಬಟ್ಟೆಯಿಂದಲೂ ಸ್ವಚ್ಛಗೊಳಿಸಬಹುದು.
ನಿಮ್ಮ ಇಯರ್ ಬಡ್‌ಗಳನ್ನು ಆಗಾಗ್ಗೆ ಪರಿಶೀಲಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ಸಣ್ಣ ಬ್ರಷ್ ಮತ್ತು ಮಿನಿ ವ್ಯಾಕ್ಯೂಮ್ ಬಳಸಿ ಅವುಗಳನ್ನು ಸ್ವಚ್ಛಗೊಳಿಸಿ. ಸ್ವಚ್ಛಗೊಳಿಸಿದ ನಂತರ, ಇಯರ್‌ವಾಕ್ಸ್ ಮತ್ತು ಇತರ ಕಣಗಳನ್ನು ತೆಗೆದುಹಾಕಲು ಸೋಂಕುನಿವಾರಕ ವೈಪ್‌ನಿಂದ ಅವುಗಳನ್ನು ಸ್ವಚ್ಛಗೊಳಿಸಿ. ಆದರೆ, ಸೇಫ್ಟಿ ಪಿನ್, ಸೂಜಿಯಂತಹ ಚೂಪಾದ ವಸ್ತುಗಳನ್ನು ಬಳಸಬೇಡಿ. ಇದರಿಂದಾಗಿ ನಿಮ್ಮ ಬೆಲೆಬಾಳುವ ಇಯರ್ ಬಡ್ ಹಾಳಾಗಬಹುದು.