ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News : ಸ್ನೇಹಿತೆಯ ಜೊತೆ ಹಾಸಿಗೆಯಲ್ಲಿ ಮಲಗಿದ್ದಾಗ ಯಜಮಾನನ ಮೇಲೆಯೇ ಗುಂಡು ಹಾರಿಸಿದ ಶ್ವಾನ!

ಅಮೆರಿಕದ ಮೆಂಫಿಸ್‌ನಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿದದರೂ ಗಂಭೀರ ಗಾಯವಾಗದೆ ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ವಿಶೇಷವೆಂದರೆ, ಸಂತ್ರಸ್ತ ಹೇಳುವ ಪ್ರಕಾರ ಅವನ ಮೇಲೆ ಗುಂಡಿನ ದಾಳಿ ನಡೆಸಿದ್ದು ಆತ ಸಾಕಿದ್ದ ಸಾಕು ನಾಯಿ. ತನ್ನ ಸ್ನೇಹಿತೆಯೊಂದಿಗೆ ಹಾಸಿಗೆಯಲ್ಲಿ ಮಲಗಿದ್ದ ವೇಳೆ, ಪಿಟ್‌ಬುಲ್‌ ಜಾತಿಯ ಒಂದು ವರ್ಷದ ಸಾಕುನಾಯಿ ಗುಂಡು ಹಾರಿಸಿದೆ ಎಂದು ಅವನು ಹೇಳಿಕೊಂಡಿದ್ದಾನೆ.

ಅನ್ನ ಹಾಕಿದ ಒಡೆಯನ ಮೇಲೆ ಫೈರ್ ಮಾಡಿದ ನಾಯಿ...!

ಸಾಂದರ್ಭಿಕ ಚಿತ್ರ

Profile Sushmitha Jain Mar 12, 2025 3:32 PM

ವಾಷಿಂಗ್ಟನ್‌: ನಾಯಿ ಎಂದರೆ ನಿಯತ್ತಿಗೆ ಹೆಸರು. ಅದು ಯಾವತ್ತಿಗೂ ತನ್ನ ಮಾಲೀಕನಿಗೆ ಹಾನಿ ಮಾಡುವುದಿಲ್ಲ. ತನ್ನ ಜೀವನವನ್ನು ಪಣಕ್ಕೆ ಇಟ್ಟಾದರೂ ತನ್ನ ಮನೆಯ ಯಾಜಮಾನನ್ನು ಕಾಯುತ್ತದೆ, ರಕ್ಷಿಸುತ್ತದೆ... ಆದರೆ ಅಮೆರಿಕದ ಮೆಂಫಿಸ್‌ನಲ್ಲಿ ರಾಜ್ಯದಲ್ಲಿ ಒಂದು ರೀತಿಯ ವಿಚಿತ್ರ ಘಟನೆ ನಡೆದಿದ್ದು, ತನ್ನ ಒಡೆಯನ ಮೇಲೆಯೇ ಶ್ವಾನ ಗುಂಡು ಗುಂಡು ಹಾರಿಸಿದೆ. ಹೌದು ಕೆಲವೊಮ್ಮೆ ಅಪಘಾತಗಳು ಹೇಗೆ ನಡೆಯುತ್ತವೆ ಎಂದು ಹೇಳಲು ಆಗುವುದಿಲ್ಲ. ಇಲ್ಲೊಬ್ಬ ವ್ಯಕ್ತಿ ತನ್ನ ಸ್ನೇಹಿತೆ ಜೊತೆ ಏಕಾಂತದಲ್ಲಿ ಸಮಯ ಕಳೆಯಬೇಕು ಎಂದು ಪ್ಲ್ಯಾನ್‌ ಮಾಡಿದಾಗ ಆತ ಸಾಕಿದ್ದ ನಾಯಿ ಅವನ ಜೀವನ ಅತಿ ದೊಡ್ಡ ಶಾಕ್‌ ನೀಡಿದೆ. ಯಾರೂ ಊಹಿಸದ ರೀತಿಯಲ್ಲಿ ಆ ನಾಯಿ ಯಜಮಾನನ ಡೇಟಿಂಗ್‌ ಪ್ಲಾನ್‌ ಅನ್ನು ಬುಡಮೇಲು ಮಾಡಿದ್ದು ಈಗ ಎಲ್ಲೆಡೆ ಹಾಟ್‌ (Viral News)ಸುದ್ದಿಯಾಗಿದೆ.

ಅಮೆರಿಕದ ಮೆಂಫಿಸ್‌ನಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿದದರೂ ಗಂಭೀರ ಗಾಯವಾಗದೆ ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ವಿಶೇಷವೆಂದರೆ, ಸಂತ್ರಸ್ತ ಹೇಳುವ ಪ್ರಕಾರ ಅವನ ಮೇಲೆ ಗುಂಡಿನ ದಾಳಿ ನಡೆಸಿದ್ದು ಆತ ಸಾಕಿದ್ದ ಸಾಕು ನಾಯಿ. ತನ್ನ ಸ್ನೇಹಿತೆಯೊಂದಿಗೆ ಹಾಸಿಗೆಯಲ್ಲಿ ಮಲಗಿದ್ದ ವೇಳೆ, ಪಿಟ್‌ಬುಲ್‌ ಜಾತಿಯ ಒಂದು ವರ್ಷದ ಸಾಕುನಾಯಿ ಗುಂಡು ಹಾರಿಸಿದೆ ಎಂದು ಅವನು ಹೇಳಿಕೊಂಡಿದ್ದಾನೆ.

ಮೆಂಪಿಸ್ ಪೊಲೀಸ್ ಇಲಾಖೆಯ ಅಧಿಕಾರಿಗಳು ಗುಂಡಿನ ದಾಳಿಯ ಬಗ್ಗೆ ಮಾಹಿತಿ ಬಂದ ನಂತರ ಘಟನಾ ಸ್ಥಳಕ್ಕೆ ಧಾವಿಸಿದರು. ಅವರು ಅಲ್ಲಿಗೆ ತಲುಪಿದಾಗ ಗಾಯಗೊಂಡ ವ್ಯಕ್ತಿ ಮತ್ತು ಅವನ ನಾಯಿ, ಓರಿಯೋ ಕಂಡುಬಂದರೂ, ಸ್ಥಳದಲ್ಲಿ ಯಾವುದೇ ಬಂದೂಕು ಪತ್ತೆಯಾಗಲಿಲ್ಲ. ತನ್ನ ಸ್ನೇಹಿತೆಯೇ ಬಂದೂಕನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದಾಳೆ ಎಂದು ಗಾಯಗೊಂಡ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.

ಈ ಸುದ್ದಿಯನ್ನೂ ಓದಿ: Indian Tariffs: ಅಮೆರಿಕ ಮದ್ಯದ ಮೇಲೆ 150% ಸುಂಕ- ಭಾರತದ ಬಗ್ಗೆ ದೊಡ್ಡಣ್ಣ ಮತ್ತೆ ಗರಂ!

ಆ ವ್ಯಕ್ತಿ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ಓರಿಯೋನ ಪಾದವು ಟ್ರಿಗರ್‌ ಗಾರ್ಡ್‌ ಭಾಗದಲ್ಲಿ ಸಿಲುಕಿಕೊಂಡು ಗುಂಡು ಹಾರಿದೆ. ಆ ಗುಂಡು ವ್ಯಕ್ತಿಯ ಎಡತೊಡೆಯ ಮೇಲ್ಭಾಗಕ್ಕೆ ಬಡಿದು ಗಾಯಗೊಳಿಸಿದೆ. ಆದರೆ ಈ ಗಾಯವು ಗಂಭೀರವಾಗಿರದ ಅವನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. “ಅದು ಅಚಾನಕ್‌ ಅಗಿ ನಡೆದ ದುರ್ಘಟನೆ” ಎಂದು ಗಾಯಗೊಂಡ ವ್ಯಕ್ತಿಯ ಸ್ನೇಹಿತನೊಬ್ಬ ಹೇಳಿದ್ದಾನೆ. “ನಾಯಿ ಹಾರಿದಾಗ ಯಾರೂ ಊಹಿಸದಂತೆ ಗುಂಡು ಹಾರಿದೆ” ಎಂದು ಅವನು ಹೇಳಿದ್ದಾನೆ.

ಗಾಯಗೊಂಡ ವ್ಯಕ್ತಿಯ ಆರೋಗ್ಯ ಸುಧಾರಿಸುತ್ತಿದೆ ಮತ್ತು ಗುಂಡು ಹಾರಿಸಿದ ಪಿಟ್‌ಬುಲ್ ನಾಯಿಯೂ ಚೆನ್ನಾಗಿಯೇ ಇದೆ ಎಂದು ಸ್ನೇಹಿತರು ತಿಳಿಸಿದ್ದಾರೆ. “ನಾಯಿ ತುಂಬಾ ಚಂಚಲ ಸ್ವಭಾವ ಹೊಂದಿತ್ತು ಮತ್ತು ಆಟವಾಡುವುದು ಅದಕ್ಕೆ ತುಂಬಾ ಇಷ್ಟ” ಎಂದು ಗಾಯಗೊಂಡ ವ್ಯಕ್ತಿಯ ಸ್ನೇಹಿತೆಯೊಬ್ಬರು ತಿಳಿಸಿದ್ದಾರೆ. ಇನ್ನು ಈ ಹಿಂದೆ ಇದೇ ಅಮೆರಿಕಾದ ಕ್ಯಾನ್ಸಸ್ ರಾಜ್ಯದಲ್ಲಿ ನಾಯಿಯೊಂದು ತನ್ನ ಒಡೆಯನ ಮೇಲೆ ಗುಂಡು ಹಾರಿಸಿ, ಈ ವಿಚಿತ್ರ ದುರ್ಘಟನೆಯಲ್ಲಿ ಮಾಲೀಕನ ಅಂತ್ಯವಾಗಿತ್ತು.