ಬೆಂಗಳೂರು: ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ 12ರಿಂದ 13 ವರ್ಷದಲ್ಲಿ ಋತುಸ್ರಾವ (Menstruation) ಆರಂಭವಾಗುತ್ತಿತ್ತು. ಆದರೆ ಬದಲಾಗುತ್ತಿರುವ ಜೀವನಶೈಲಿ (Lifestyle) ಮತ್ತು ಆಹಾರ ಕ್ರಮದಿಂದಾಗಿ (Dietary Habits) ಈ ಮಯೋಮಾನ 9ರಿಂದ 11 ವರ್ಷಕ್ಕೆ ಇಳಿದಿದ್ದು, ಇದು ಪೋಷಕರಲ್ಲಿ ಆತಂಕವನ್ನುಂಟು ಮಾಡಿದೆ. ಆದರೆ ಚಿಕ್ಕ ವಯಸ್ಸಿನಲ್ಲಿ ಋತುಸ್ರಾವ ಆರಂಭವಾಗುವುದು ಆತಂಕಕ್ಕೆ ಕಾರಣವಲ್ಲ, ಅದಕ್ಕಿಂತ ಹೆಚ್ಚಿನ ಆತಂಕಕ್ಕೆ ಕಾರಣ ಬೇರೆಯೇ ಇವೆ ಎಂದು ತಜ್ಞರು ತಿಳಿಸಿದ್ದಾರೆ.
ಪಿಒಸಿಒಎಸ್ ಆತಂಕವೇ?
ಹದಿಹರೆಯದ ಹುಡುಗಿಯರು ಮತ್ತು ಅವರ ಪೋಷಕರು ಪಾಲಿಸಿಸ್ಟಿಕ್ ಒವರಿ ಸಿಂಡ್ರೋಮ್ (ಪಿಒಸಿಒಎಸ್) ಲಕ್ಷಣಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. 13ರಿಂದ 14 ವರ್ಷದ ಹುಡುಗಿಯರಿಗೆ ಮತ್ತು ಪೋಷಕರಿಗೆ ಆರಂಭಿಕ ಹಂತದಲ್ಲಿ ರೋಗಗ್ರಹಿಕೆ ಮತ್ತು ಚಿಕಿತ್ಸೆಯ ಮಹತ್ವವನ್ನು ವೈದ್ಯರು ಒತ್ತಿ ಹೇಳುತ್ತಿದ್ದಾರೆ. ವರದಿಯ ಪ್ರಕಾರ, ಋತುಸ್ರಾವದ ಸರಾಸರಿ ವಯಸ್ಸು 12-13ರಿಂದ 9-11 ವರ್ಷಕ್ಕೆ ಇಳಿದಿದೆ. ಇದರಿಂದಾಗಿ ಅನಿಯಮಿತ ಋತುಚಕ್ರ, ಮೊಡವೆಗಳು ಮತ್ತು ಅನಗತ್ಯ ಕೂದಲು ಬೆಳವಣಿಗೆ ಕಂಡುಬರುತ್ತಿದೆ, ಇವುಗಳನ್ನು ಆಗಾಗ್ಗೆ ಪಿಒಸಿಒಎಸ್ ಎಂದು ತಪ್ಪಾಗಿ ಗುರುತಿಸಲಾಗುತ್ತದೆ.
ಈ ಸುದ್ದಿಯನ್ನು ಓದಿ: Viral Video: ವಿಮಾನದ ರನ್‌ವೇ ಬಳಿ ಮೂತ್ರ ವಿಸರ್ಜಿಸಿದ ವೃದ್ಧ; ಕಾಕ್‍ಪಿಟ್‍ನಲ್ಲಿ ಕುಳಿತು ದೃಶ್ಯ ಚಿತ್ರೀಕರಿಸಿದ ಪೈಲಟ್
ಇವು ಸ್ವಾಭಾವಿಕ ಹಾರ್ಮೋನಲ್ ಬದಲಾವಣೆಯೇ?
ಬೆಂಗಳೂರಿನ ಸ್ತ್ರೀರೋಗ ತಜ್ಞೆಯೊಬ್ಬರು, ಆರಂಭಿಕ ಅನಿಯಮಿತ ಋತುಸ್ರಾವವು ಯಾವಾಗಲೂ ಪಿಒಸಿಒಎಸ್ ಸೂಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಕ್ಲಿನಿಕ್‌ಗಳಲ್ಲಿ ವಾರಕ್ಕೆ 10-15 ಇಂತಹ ಪ್ರಕರಣಗಳು ಕಂಡುಬರುತ್ತವೆ. ಆರಂಭಿಕ ಋತುಸ್ರಾವದ ಅನಿಯಮಿತತೆ ಸಾಮಾನ್ಯವಾಗಿದ್ದು, ಹದಿಹರೆಯದಲ್ಲಿ ಕಾಣಿಸಿಕೊಳ್ಳುವ ತೆಳುವಾದ ಮುಖದ ಕೂದಲು ಕೇವಲ ಹಾರ್ಮೋನ್ ಬದಲಾವಣೆಯಿಂದ ಉಂಟಾಗಬಹುದು. ಇದು ಪಿಒಸಿಒಎಸ್ ಲಕ್ಷಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುವ ವಿಡಿಯೊಗಳು ಮತ್ತು ಸ್ನೇಹಿತರೊಂದಿಗಿನ ಚರ್ಚೆಯಿಂದ ಹಲವು ಹದಿಹರೆಯದ ಹುಡುಗಿಯರು ತಾವು ಪಿಒಸಿಒಎಸ್‌ಗೆ ಒಳಗಾಗಿದ್ದೇವೆ ಎಂದು ಭಾವಿಸಿ ಚಿಕಿತ್ಸೆಗೆ ಮುಂದಾಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಡಾ. ಎನ್. ವೆಂಕಟೇಶ್, ʼʼಮೊಡವೆ ಮತ್ತು ಕೂದಲು ಉದುರುವಿಕೆಯಿಂದ ಕ್ಲಿನಿಕ್‌ಗೆ ಬರುವ ಹದಿಹರೆಯರ ಸಂಖ್ಯೆ ಹೆಚ್ಚಾಗಿದೆʼʼ ಎಂದು ತಿಳಿಸಿದ್ದಾರೆ. ಆದರೆ ಒಂದೆರಡು ಫಾಲಿಕಲ್‌ಗಳು ಅಥವಾ ಸ್ವಲ್ಪ ದೊಡ್ಡದಾದ ಓವರಿಗಳನ್ನು ರೇಡಿಯಾಲಜಿಸ್ಟ್‌ಗಳು ಪಿಒಸಿಒಎಸ್ ಎಂದು ಗುರುತಿಸುವುದರಿಂದ ಅತಿಯಾದ ರೋಗನಿರ್ಣಯದ ಆತಂಕ ಉಂಟಾಗುತ್ತಿದೆ.
ಪಿಒಸಿಒಎಸ್ ರೋಗ ನಿರ್ಣಯಕ್ಕೆ ಋತುಚಕ್ರದ ನಿರ್ದಿಷ್ಟ ಹಂತದಲ್ಲಿ ಕನಿಷ್ಠ 20 ಫಾಲಿಕಲ್‌ಗಳಿರುವುದು ಸೇರಿದಂತೆ ಸ್ಪಷ್ಟ ಮಾನದಂಡಗಳು ಅಗತ್ಯ ಎಂದು ವೈದ್ಯರು ಒತ್ತಿ ಹೇಳುತ್ತಾರೆ. ಜೀವನಶೈಲಿಯ ಆಹಾರ ಕ್ರಮ, ಸಕ್ಕರೆ ಮತ್ತು ಸಂಸ್ಕರಿತ ಆಹಾರದ ಅತಿಯಾದ ಸೇವನೆ, ದೈಹಿಕ ನಿಷ್ಕ್ರಿಯತೆ, ಮತ್ತು ಒತ್ತಡವು ಈ ಲಕ್ಷಣಗಳಿಗೆ ಕಾರಣವಾಗಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.