‘ಮೊವೆಂಬರ್’ (Mo+November) ಅಥವಾ ‘ನೋ ಶೇವ್ ನವೆಂಬರ್’ ಆಸ್ಟ್ರೇಲಿಯಾದಲ್ಲಿ ವಿನೋದ ವಾದ ಚ್ಯಾಲೆಂಜ್ ರೀತಿಯಲ್ಲಿ ಸೃಷ್ಟಿಯಾಗಿ ಈಗ ಇದೊಂದು ಪುರುಷರ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಅಭಿಯಾನವಾಗಿ ಎಲ್ಲಡೆ ಪ್ರಚಲಿತವಾಗಿದೆ. ನವೆಂಬರ್ ಮಾಸವನ್ನು ಪುರುಷರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಮಾಸವಾಗಿ ಆಚರಿಸಲಾಗುತ್ತದೆ.
ಪ್ರತಿ ವರ್ಷ ನವೆಂಬರ್‍ನಲ್ಲಿ ಸಾಕಷ್ಟು ಪುರುಷರು ಗಡ್ಡ ಬೆಳೆಸಿಕೊಳ್ಳುವುದನ್ನು ನೋಡಿದ್ದೀರಿ. ಇದು ಫ್ಯಾಷನ್‌ಗೆ ಆಗಿ ಅಲ್ಲ ಬದಲಿಗೆ ಪುರುಷರ ಆರೋಗ್ಯದ ಕುರಿತು ಚರ್ಚೆ ನಡೆಸಲು ಉತ್ತೇಜಿಸುವ ಮತ್ತು ಪುರುಷರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆ ಗಮನ ಹರಿಸುವಂತೆ ಜಾಗೃತಿ ಮೂಡಿಸಲು ನಡೆಸುವ ಒಂದು ಅಭಿಯಾನ.
ಮೊವೆಂಬರ್ ಏಕೆ ಮುಖ್ಯ?
ಸಮಾಜವು ಪುರುಷರು ಸದೃಢವಾಗಿರಬೇಕು, ಹಲವು ವಿಚಾರಗಳ ಜವಾಬ್ದಾರಿ ಹೊರಬೇಕು ಎಂದು ನಿರೀಕ್ಷಿಸುತ್ತದೆ. ಆದರೆ ಈ ಮಧ್ಯದಲ್ಲಿ ಪುರುಷರು ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವುದನ್ನು ಮರೆಯುತ್ತಾರೆ. ಮೊವೆಂಬರ್ ಈ ವಿಚಾರಕ್ಕೆ ಆದ್ಯತೆ ನೀಡುವ ಜಾಗೃತಿ ಮಾಸವಾಗಿ ಕಾರ್ಯ ನಿರ್ವಹಿಸುತ್ತದೆ. ಪುರುಷರು ದೈಹಿಕ ಮತ್ತು ಮಾಸಿಕ ಆರೋಗ್ಯ ಸೇರಿ ತಮ್ಮ ಸರ್ವಾಂಗೀಣ ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸುತ್ತದೆ. ಜೊತೆಗೆ ಪ್ರೊಸ್ಟೇಟ್ ಕ್ಯಾನ್ಸರ್, ಟೆಸ್ಟಿಕ್ಯುಲರ್ ಕ್ಯಾನ್ಸರ್ , ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಯಂತಹ ವಿಚಾರಗಳ ಮೇಲೆ ಈ ಮೊವೆಂಬರ್ ಅಭಿಯಾನ ಕೇಂದ್ರೀಕೃತವಾಗಿದೆ.
ಇದನ್ನೂ ಓದಿ: Health Tips: ತೂಕ ಇಳಿಯಬೇಕೆ? ಖಾಲಿ ಹೊಟ್ಟೆಯಲ್ಲಿ ಶುಂಠಿ ಚಹಾ ಸೇವಿಸಿ
ಪ್ರೋಸ್ಟೇಟ್ ಮತ್ತು ಟೆಸ್ಟಿಕ್ಯುಲರ್ ಕ್ಯಾನ್ಸರ್‌ಗಳು ಪುರುಷರಲ್ಲಿ ಸಾಮಾನ್ಯ ಕ್ಯಾನ್ಸರ್‌ಗಳಾಗಿದ್ದು, ಅವುಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹು ದಾಗಿದೆ. ಆದರೆ ಲಕ್ಷಣಗಳ ಬಗ್ಗೆ ಅರಿವು ಇಲ್ಲದಿರುವುದು ಹಾಗೂ ಸಮಯಕ್ಕೆ ಸರಿಯಾಗಿ ವೈದ್ಯ ರನ್ನು ಸಂಪರ್ಕಿಸದಿರುವುದರಿಂದ ಅನೇಕ ಪ್ರಕರಣಗಳು ಮುಂದುವರೆದ ಹಂತದಲ್ಲಿ ಪತ್ತೆಯಾಗು ತ್ತವೆ. ತಪಾಸಣೆಗಳ ಮಹತ್ವ ಹಾಗೂ ಆರಂಭಿಕ ಲಕ್ಷಣಗಳನ್ನು ಗುರುತಿಸುವ ಕುರಿತು ಮಾತುಕತೆ ಗಳನ್ನು ಪ್ರೋತ್ಸಾಹಿಸುವ ಮೂಲಕ, ಮೊವೆಂಬರ್ ಪುರುಷರನ್ನು ನಿಯಮಿತ ತಪಾಸಣೆ ಹಾಗೂ ಸಮಯೋಚಿತ ವೈದ್ಯಕೀಯ ಸಲಹೆ ಪಡೆಯಲು ಉತ್ತೇಜಿಸುತ್ತದೆ.
ಮಾನಸಿಕ ಆರೋಗ್ಯವನ್ನು ಇನ್ನೂ ತಾತ್ಸರದಿಂದ ನೋಡುವ ಸಮಾಜದಲ್ಲಿ, ಮತ್ತು “ಬಲಿಷ್ಠ ವಾಗಿರಿ” ಎಂದು ಪುರುಷರಿಗೆ ಹೇಳಲಾಗುವ ಪರಿಸ್ಥಿತಿಯಲ್ಲಿ, ಅನೇಕ ಪುರುಷರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಅಧ್ಯಯನಗಳ ಪ್ರಕಾರ ಮಾನಸಿಕ ಆರೋಗ್ಯ ಸಮಸ್ಯೆಗಳ ಪ್ರಮಾಣ ಮಹಿಳೆಯರಿಗಿಂತ ಪುರುಷರಲ್ಲಿ ಕಡಿಮೆ ಇದ್ದರೂ, ಆತ್ಮಹತ್ಯೆ ಪ್ರಮಾಣವು ಪುರುಷರಲ್ಲಿ ಎರಡರಷ್ಟು (ವಿಶೇಷವಾಗಿ ಹೆಚ್ಚಿನ ಆದಾಯದ ದೇಶಗಳಲ್ಲಿ ಇದು ನಾಲ್ಕರಷ್ಟು) ಹೆಚ್ಚಿದೆ. ಇದು ಮತ್ತೊಮ್ಮೆ ಪುರುಷರ ಮಾನಸಿಕ ಆರೋಗ್ಯ ಜಾಗೃತಿ ಹಾಗೂ ಬೆಂಬಲದ ಅಗತ್ಯವನ್ನು ಒತ್ತಿ ಹೇಳುತ್ತದೆ. ಮೊವೆಂಬರ್ ಇಂತಹ ಸಂಭಾಷಣೆಗಳನ್ನು ಸಾಮಾನ್ಯ ಗೊಳಿಸಿ, ಪುರುಷರು ಮುಕ್ತವಾಗಿ ಮಾತನಾಡಿ ಸಮಯಕ್ಕೆ ನೆರವು ಪಡೆಯಲು ಪ್ರೇರೇಪಿಸುತ್ತದೆ.
ಮೊವೆಂಬೆರ್ ಸಾರುವ ಸಂದೇಶವೇನು?
ಗಡ್ಡ ಬೆಳೆಸುವುದಕ್ಕಿಂತ ಹೆಚ್ಚಾಗಿ, ತಪಾಸಣೆ ಶಿಬಿರಗಳು, ಜಾಗೃತಿ ಕಾರ್ಯಕ್ರಮಗಳು ಮತ್ತು ಸಂಭಾ ಷಣೆಗಳ ಮೂಲಕ ಪುರುಷರ ಆರೋಗ್ಯದ ಬಗ್ಗೆ ಇರುವ ನಿರ್ಲಕ್ಷ ಮತ್ತು ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸುವುದು ಮೊವೆಂಬರ್ ನ ಮುಖ್ಯ ಉದ್ದೇಶವಾಗಿದೆ. ಈ ಅವಧಿಯಲ್ಲಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳು ಜಾಗೃತಿ ಮೂಡಿಸಲು, ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲು, ಮತ್ತು ಎಲ್ಲ ವಯಸ್ಸಿನ ಪುರುಷರನ್ನು ರೋಗ ನಿವಾರಣಾ ಅಥವಾ ತಡೆಗಟ್ಟುವ ಆರೋಗ್ಯ ಕ್ರಮಗಳನ್ನು ಅನುಸರಿಸಲು ಪ್ರೇರೇಪಿಸುವತ್ತ ಪ್ರಯತ್ನಗಳನ್ನು ಮಾಡಬೇಕಿದೆ.
ಮೊವೆಂಬೆರ್ ಚಳುವಳಿಯಲ್ಲಿ ನೀವು ಹೇಗೆ ಭಾಗವಹಿಸಬಹುದು?
* ಮೀಸೆ ಬೆಳೆಸಿಕೊಳ್ಳಿ ಅಥವಾ ಹಾಗೆ ಮಾಡುವವರನ್ನು ಬೆಂಬಲಿಸಿ.
* ಜಾಗೃತಿ ಕಾರ್ಯಕ್ರಮಗಳು ಅಥವಾ ಸ್ಕ್ರೀನಿಂಗ್ ಡ್ರೈವ್‌ಗಳನ್ನು ಆಯೋಜಿಸಿ ಅಥವಾ ಭಾಗವಹಿಸಿ.
* ಪುರುಷರ ಆರೋಗ್ಯದ ಕುರಿತು ಚರ್ಚೆ, ಅನುಭವಗಳು, ಮತ್ತು ಅರಿವನ್ನು ಹಂಚಿಕೊಳ್ಳಿ.
ನೆನಪಿಡಿ, ಇಂದು ಒಂದು ಸರಳ ತಪಾಸಣೆ ನಾಳೆ ದೊಡ್ಡ ಸಮಸ್ಯೆ ಬರುವುದನ್ನು ತಡೆಯಬಹುದು. ಈ ಮೂವೆಂಬರ್ ಅನ್ನು ಪ್ರತಿಯೊಬ್ಬ ಪುರುಷನು ತನ್ನ ಆರೋಗ್ಯವನ್ನು ಗಂಭೀರವಾಗಿ ಪರಿಗಣಿ ಸಲು ಪ್ರೇರೇಪಿಸುವ ಚಳುವಳಿಯನ್ನಾಗಿ ಮಾಡೋಣ, ಏಕೆಂದರೆ ಆರಂಭಿಕ ಕ್ರಮವು ಜೀವಗಳನ್ನು ಉಳಿಸುತ್ತದೆ.
(ಡಾ.ವಿಷ್ಣು ಪ್ರಸಾದ್ ಕನ್ಸಲ್ಟೆಂಟ್ - ಯೂರೋಲಾಜಿ, ಯುರೋ-ಒಂಕಾಲೊಜಿ ಮತ್ತು ರೊಬೊಟಿಕ್ ಸರ್ಜನ್, ಮಣಿಪಾಲ್ ಆಸ್ಪತ್ರೆ ಯಶವಂತಪುರ)