ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಣುವಿನ ಗಾತ್ರ ಪರಮಾಣುವಿನ ಪಾತ್ರ

ಸ್ವತಃ ಅಲೋಪತಿ ವೈದ್ಯರಾಗಿದ್ದ ಹನಿಮನ್ ರವರು ಕೆಲವು ರೋಗಗಳಿಗೆ ಚಿಕಿತ್ಸೆಯು ಇಲ್ಲದ ಸಂಪೂರ್ಣ ಗುಣವಾಗದ ಹಾಗೂ ಅಲೋಪತಿ ಔಷಧಿಗಳ ಅನಾರೀತಿಯ ಚಿಕಿತ್ಸಾ ವಿಧಾನಗಳಿಂದ ಹಾನಿಯಾಗುವುದನ್ನು ಗಮನಿಸಿ ಹೊಸ ರೀತಿಯ ಚಿಕಿತ್ಸಾ ಮಾರ್ಗವನ್ನು ಸಂಶೋಧಿಸಲು ಮುಂದಾ ದರು. ಅಂದೆಯೇ 18ನೇ ಶತಮಾನದಲ್ಲಿ ಮಲೇರಿಯಾ ಕಾಯಿಲೆಯು ತೀವ್ರವಾಗಿ ಉಲ್ಬಣವಾಗಿತ್ತು. ಸಮಯದಲ್ಲಿ ಕ್ವಿನೈನ್ ಅನ್ನು ಔಷಧಿಯನ್ನು ಕೊಡಲಾಗುತ್ತಿತ್ತು.

ವಿಶ್ವ ಹೋಮಿಯೋಪತಿ ದಿನಾಚರಣೆ

1755 ರ ಏಪ್ರಿಲ್ 10 ರಂದು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲೆಂದು ಜನರ ಪಾಲಿಗೆ ವರವನ್ನು ಕೊಡಲೆಂದೆ ದಿವ್ಯ ಔಷಧಿ ಚಿಕಿತ್ಸಾ ಮಾರ್ಗವನ್ನು ಕಂಡುಹಿಡಿದ ಡಾಕ್ಟರ್ ಸ್ಯಾಮುಲ್ ಹ್ಯಾನೆಮನ್ ರವರ ಜನುಮ ಜರ್ಮನಿಯಲ್ಲಿ ಮೆಸ್ಸಿನ್ ನಗರದಲ್ಲಿ ಆಗಿತ್ತು. ಹ್ಯಾನೆಮನ್ ರವರು ಅಪಾರ ಬುದ್ಧಿವಂತಿಕೆ ಮತ್ತು ಅಧ್ಯಯನಸ್ತಿಕ ಹೊಂದಿದ್ದು ವಿವಿಧ ಭಾಷೆಯಾದ ಜರ್ಮನಿ, ಲ್ಯಾಟಿನ್, ಗ್ರೀಕ್ ಫ್ರಾನ್ಸ್, ಇಂಗ್ಲಿಷ್ ಭಾಷೆಗಳಲ್ಲಿ ಪರಿಣಿತರಾಗಿದ್ದು ಪುಸ್ತಕಗಳನ್ನು ಭಾಷಾಂತರವನ್ನು ಮಾಡುವ ಅಭ್ಯಾಸ ಹೊಂದಿದ್ದರು. ಲೆಪ್ಪಿಂಗ್ ದೇಶದಲ್ಲಿ 1779 ರಲ್ಲಿ ವೈದ್ಯಕೀಯ ಪದ್ಧತಿ ಪಡೆದಿದ್ದರು.

ಸ್ವತಃ ಅಲೋಪತಿ ವೈದ್ಯರಾಗಿದ್ದ ಹನಿಮನ್ ರವರು ಕೆಲವು ರೋಗಗಳಿಗೆ ಚಿಕಿತ್ಸೆಯು ಇಲ್ಲದ ಸಂಪೂರ್ಣ ಗುಣವಾಗದ ಹಾಗೂ ಅಲೋಪತಿ ಔಷಧಿಗಳ ಅನಾರೀತಿಯ ಚಿಕಿತ್ಸಾ ವಿಧಾನಗಳಿಂದ ಹಾನಿಯಾಗುವುದನ್ನು ಗಮನಿಸಿ ಹೊಸ ರೀತಿಯ ಚಿಕಿತ್ಸಾ ಮಾರ್ಗವನ್ನು ಸಂಶೋಧಿಸಲು ಮುಂದಾದರು. ಅಂದೆಯೇ 18ನೇ ಶತಮಾನದಲ್ಲಿ ಮಲೇರಿಯಾ ಕಾಯಿಲೆಯು ತೀವ್ರವಾಗಿ ಉಲ್ಬಣವಾಗಿತ್ತು. ಸಮಯದಲ್ಲಿ ಕ್ವಿನೈನ್ ಅನ್ನು ಔಷಧಿಯನ್ನು ಕೊಡಲಾಗುತ್ತಿತ್ತು.

ಇದನ್ನೂ ಓದಿ:Summer Health Tips: ಬಿಸಿಲಿಗೆ ಸ್ಮೃತಿ ತಪ್ಪದಿರಲಿ; ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಕ್ವಿನೈನ್ ಸೇವಿಸಿದರೆ ಮಲೇರಿಯಾ ರೋಗ ಲಕ್ಷಣಗಳು ಕಂಡುಬರುತ್ತದೆ ಎಂದು ಪುಸ್ತಕಗಳನ್ನು ಭಾಷಾಂತರ ಮಾಡುವ ಸಮಯದಲ್ಲಿ ಕಂಡುಬಂದಿತ್ತು. ಹನಿಮನ್ ರವರು ಯಾವ ವಸ್ತುಗಳಿಂದ ಕಾಯಿಲೆ ಉಂಟುಮಾಡುವುದು ಶಕ್ತಿ ಹೊಂದಿರುವುದು ಅದೇ ವಸ್ತುಗಳಿಂದ ಕಾಯಿಲೆ ವಾಸಿಯಾಗುತ್ತದೆ ಎಂಬ ಸಿದ್ದಾಂತವನ್ನು ಕಂಡುಹಿಡಿದರು. ಅದು ಲೈಕ್ಸ್ ಕ್ಯೂರ್ ಲೈಕ್ ಎಂದು ಹೇಳಲಾಗುತ್ತದೆ. ಇನ್ನು ಒಗಟಿನಲ್ಲಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುವುದಾಗಿ ಹೋಮಿಯೋಪತಿ ಪದ್ಧತಿಯನ್ನು ಹುಟ್ಟು ಹಾಕಿದ್ದರು.

ಅಂತ ಹೋಮಿಯೋಪತಿ ಚಿಕಿತ್ಸಾ ವಿಧಾನವು ಇಂದಿಗೆ ವಿಶ್ವದ್ಯಾಂತ ಎರಡನೇ ಸ್ಥಾನದಲ್ಲಿ ಇರುವ ಚಿಕಿತ್ಸೆ ಪದ್ಧತಿಯಾಗಿದೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿ ಚಿಕಿತ್ಸೆ ಹಾಗೂ ಅಡ್ಡ ಪರಿಣಾ ಮಗಳಿಲ್ಲದೆ ನೀಡುವ ಚಿಕಿತ್ಸೆ ಪದ್ಧತಿ ಭಾರತದ ಜನರಲ್ಲಿ ಅತ್ಯಂತ ವಿಶ್ವಸನೀಯ ವಾಗಿಯೂ ವೇಗವಾಗಿಯೂ ಬೆಳೆಯುತ್ತಿದೆ. ಮಾನವತೆಯಲ್ಲಿ ವಿಜ್ಞಾನ ಸರಳತೆಯ ಜನಸಾಮಾನ್ಯ ರಿಗೆ ಹೆಚ್ಚು ಉಪಯೋಗವಾಗಿರುವ ಈ ಚಿಕಿತ್ಸೆ ವಿಧಾನವನ್ನು ರೂಪಿಸಿದ ಡಾಕ್ಟರ್ ಸ್ಯಾಮುಲ್ ಹ್ಯಾನಮನ್ ರವರು ಹುಟ್ಟುಹಬ್ಬದ ಅಂಗವಾಗಿ ದಿನಾಂಕ ಏಪ್ರಿಲ್ 10 ರಂದು ವಿಶ್ವ ಹೋಮಿಯೋಪತಿ ದಿನಾಚರಣೆಯನ್ನು ಆಚರಿಸಲಾಗಿದೆ.

1843ರ ಜುಲೈ 2 ರಂದು ಪ್ಯಾರಿಸಿನಲ್ಲಿ ನಿಧನರಾಗಿದ್ದರು. ಹನಿಮನ್ ರವರು ವೈದ್ಯಕೀಯ ಕ್ಷೇತ್ರದಲ್ಲಿ ಕೊಡುಗೆ ಶಾಶ್ವತವಾಗಿ ಉಳಿದಿದೆ ಹನಿಮನ್ ರವರನ್ನು ಹೋಮಿಯೋಪತಿಯ ಪಿತಾಮಹ ಎಂದು ಗೌರವಿಸಿ ಅವರು ಹುಟ್ಟುಹಬ್ಬವನ್ನು ಅರ್ಚಿಸಲಾಗಿದೆ. ನಮ್ಮ ಮಹಾವಿದ್ಯಾಲಯ ಬಸವೇಶ್ವರ ನಗರದಲ್ಲಿ ಆಸ್ಪತ್ರೆ ಹೊಂದಿದ್ದು ಸುಮಾರು 30 ವರ್ಷಗಳಿಂದ ಸತತವಾಗಿ ಬರುವ ರೋಗಗಳಿಗೆ ಪರಿಣಾಮಕರವಾದ ಚಿಕಿತ್ಸೆ ನೀಡುತ್ತಿದ್ದು ಪ್ರತಿ ವರ್ಷಕ್ಕೆ 30,000 ದಿಂದ 35,000 ರೋಗಗಳಿಗೆ ಬರುತ್ತಿದ್ದಾರೆ ಇನ್ನು ಹೆಚ್ಚು ಹೆಚ್ಚು ಜನರಿಗೆ ಈ ಪದ್ಧತಿಯ ಉಪಕಾರಿಯಾಗಲಿ ಎಂದು ತಲುಪಲಿ ಎಂದು ಆಶಿಸುತ್ತೇನೆ.

ಡಾ.ಎಸ್.ವಿಮಲ

ಮುಖ್ಯ ವೈದ್ಯಾಧಿಕಾರಿ,

ಸರ್ಕಾರಿ ಹೋಮಿಯೋಪತಿ ಮಹಾವಿದ್ಯಾಲಯ ಮತ್ತು ಆಸ್ಪತ್ರೆ,

ಬೆಂಗಳೂರು