ಬೆಂಗಳೂರು: ಪ್ರತಿದಿನ ತಾಜಾ ಹಣ್ಣುಗಳನ್ನು ಸೇವಿಸಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ (Fruits health Benefits). ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಪೋಷಕಾಂಶಗಳು ಹಣ್ಣಿನಲ್ಲಿ ಸಮೃದ್ಧವಾಗಿವೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ನಮಗೆ ಇಷ್ಟ ಬಂದಂತೆ ನಾವು ಹಣ್ಣುಗಳನ್ನು ಸೇವಿಸುವಂತಿಲ್ಲ.ಯಾವಾಗ ಮತ್ತು ಹೇಗೆ ಹಣ್ಣುಗಳನ್ಮು ತಿನ್ನುತ್ತೇವೆ ಎಂಬುದು ಮುಖ್ಯವಾಗುತ್ತದೆ. ಇತ್ತೀಚೆಗೆ ಪೌಷ್ಟಿಕ ತಜ್ಞೆಯೊಬ್ಬರು, ದಿನವನ್ನು ಹಣ್ಣುಗಳು ಅಥವಾ ಫ್ಲೇವರ್ಡ್ ಗ್ರೀಕ್ ಮೊಸರಿನಿಂದ ಯಾಕೆ ಆರಂಭಿಸಬಾರದು ಎನ್ನುವುದನ್ನು ವಿವರಿಸಿದ್ದಾರೆ.
ಹಣ್ಣುಗಳನ್ನು ಮಾತ್ರ ತಿನ್ನುವುದು, ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಸೇವವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತ್ವರಿತ ಏರಿಕೆಗೆ ಕಾರಣವಾಗಬಹುದು. ಇದು ದಿನವಿಡೀ ಹೆಚ್ಚು ಕಾರ್ಬೋ ಹೈಡ್ರೇಟ್‌ಗಳನ್ನು ತಿನ್ನಬೇಕು ಎಂಬ ಬಯಕೆಯನ್ನು ಉಂಟು ಮಾಡಬಹುದು.
ಪ್ರೋಟೀನ್-ಭರಿತ ಆಹಾರದೊಂದಿಗೆ ಸೇವಿಸಿ
ಹಣ್ಣುಗಳನ್ನು ತಿನ್ನಲೇಬೇಕಿದ್ದರೆ, ಸಕ್ಕರೆ ಪ್ರಮಾಣ ತಕ್ಷಣ ಏರದಂತೆ ತಡೆಯಲು ಪ್ರೋಟೀನ್ ಭರಿತ ಆಯ್ಕೆ ಮಾಡುವುದು ಉತ್ತಮ. ನೀವು ಹಣ್ಣುಗಳನ್ನು ಒಂದು ಕಪ್ ಗ್ರೀಕ್ ಮೊಸರು ಅಥವಾ ಕನಿಷ್ಠ ಸ್ವಲ್ಪ ಫೈಬರ್‌ನೊಂದಿಗೆ ಜೋಡಿಸಬಹುದು. ಇದರಿಂದ ಸಕ್ಕರೆ ಪ್ರಮಾಣ ಹೆಚ್ಚಳವಾಗುವುದಿಲ್ಲ.
ತಾಯಿ ಹಾಲು ಮಕ್ಕಳಿಗೆ ಅಮೃತವೇಕೆ? ವಿಜ್ಞಾನ ಹೇಳುವುದೇನು?
ಹಣ್ಣುಗಳನ್ನು ಸೇವಿಸುವಾಗ ಮಾಡುವ ಸಾಮಾನ್ಯ ತಪ್ಪುಗಳು
ಹಣ್ಣು ತಿಂದ ತಕ್ಷಣ ನೀರು ಕುಡಿಯುವುದು: ಹಣ್ಣು ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸ ಹೆಚ್ಚಿನವರಿಗೆ ಇದೆ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು. ಹಾಗೆಯೇ ಅಸಿಡಿಟಿ, ತಲೆನೋವು ಅಥವಾ ವಾಕರಿಕೆ ಉಂಟಾಗಬಹುದು. ಹಣ್ಣು ತಿಂದ ನಂತರ ಕನಿಷ್ಠ 1 ಗಂಟೆ ಬಿಟ್ಟು ನೀರು ಕುಡಿದರೆ ಉತ್ತಮ.
ಹಣ್ಣಿನ ಜ್ಯೂಸ್ ಬದಲು ಸಂಪೂರ್ಣ ಹಣ್ಣನ್ನು ಆರಿಸಿ: ತಾಜಾ ಹಣ್ಣು ದೇಹಕ್ಕೆ ಉತ್ತಮ. ಆದರೆ ಹಣ್ಣಿನ ಜ್ಯೂಸ್ ಮಾಡುವಾಗ ಜೀರ್ಣಕ್ರಿಯೆಗೆ ಅಗತ್ಯವಾದ ಹೆಚ್ಚಿನ ಫೈಬರ್ ನಷ್ಟವಾಗುತ್ತದೆ. ಅವು ಸಕ್ಕರೆ ಮಟ್ಟವನ್ನು ಕೂಡ ಹೆಚ್ಚಿಸಬಹುದು. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಬೇಗನೆ ಹೆಚ್ಚಾಗುತ್ತದೆ. ಆದ್ದರಿಂದ ಜ್ಯೂಸ್‌ಗಿಂತ ಇಡೀ ಹಣ್ಣನ್ನೇ ಸೇವಿಸಿ.
ರಾತ್ರಿ ಹಣ್ಣುಗಳು ಬೇಡ: ರಾತ್ರಿಯ ಊಟವು ಹಗುರ ಮತ್ತು ಪೌಷ್ಟಿಕಯುಕ್ತವಾಗಿರಬೇಕು. ಆದರೆ ಪರ್ಯಾಯವಾಗಿ ಹಣ್ಣುಗಳನ್ನು ಆಯ್ಕೆ ಮಾಡುವುದು ಉತ್ತಮ ನಿರ್ಧಾರವಲ್ಲ. ಹಣ್ಣುಗಳಲ್ಲಿನ ನೈಸರ್ಗಿಕ ಸಕ್ಕರೆ ಅಂಶ ದೇಹದಲ್ಲಿ ಹಾರ್ಮೋನುಗಳ ಬಿಡುಗಡೆಗೆ ಕಾರಣವಾಗಿ ನಿದ್ರೆಗೆ ಅಡ್ಡಿಪಡಿಸುತ್ತದೆ.
ಊಟದ ನಂತರ ತಕ್ಷಣ ಹಣ್ಣು ತಿನ್ನಬೇಡಿ: ಊಟವಾದ ತಕ್ಷಣ ಹಣ್ಣನ್ನು ಡೆಸರ್ಟ್‌ನಂತೆ ತಿನ್ನುವ ಬದಲು, ಕಾರ್ಬೋಹೈಡ್ರೇಟ್ ಹೆಚ್ಚಿರುವ ಊಟಕ್ಕೆ 20-30 ನಿಮಿಷಗಳ ಮೊದಲು ಹಣ್ಣನ್ನು ಸೇವಿಸಿದರೆ, ಅದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.