ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mana Santwana: ನಮ್ಮ ಬದುಕೇ ಹಬ್ಬ; ನಿತ್ಯವೂ ನಿತ್ಯೋತ್ಸವ

ಹಬ್ಬಗಳು ಎಂದರೇ ಇನ್ನಿಲ್ಲದ ಉತ್ಸಾಹ ಮತ್ತು ಸಂತಸ. ನಮ್ಮೆಲ್ಲರ ಅಚ್ಚುಮೆಚ್ಚಿನ ಹುಟ್ಟು ಹಬ್ಬದಿಂದ ಹಿಡಿದು ಶ್ರಾವಣ ಮಾಸದ ನಾನ ಬಗೆಯ ಧಾಮಿ೯ಕ ಮತ್ತು ಸಾಂಸ್ಕೃಕ ಹಬ್ಬಗಳ ತನಕ ಎಲ್ಲಾ ರೀತಿಯ ಹಬ್ಬಗಳನ್ನು ಬಹುಕಾಲದಿಂದ ಕಾತುರದಿಂದ ಕಾದು ಸಡಗರ ಸಂಭ್ರಮಗಳಿಂದ ಆಚರಿಸುತ್ತೇವೆ.

ಶ್ರಾವಣ ಮಾಸ ಬಂದಿದೆ. ಎಲ್ಲೆಲ್ಲೂ ಹಬ್ಬದ ವಾತವರಣ, ಸಡಗರ ಕಾಣುತ್ತಿದೆ. ಒಂದು ಪಕ್ಷ, ಶ್ರಾವಣ ಮಾಸದ ನಂತರವೂ, ಪ್ರತಿ ನಿತ್ಯವೂ ಹಬ್ಬ ಮರಳಿ ಬಂದರೇ ಹೇಗೆ? ಹಬ್ಬದ ಹೊಸತು ಸಂತಸ ದಿನವೂ ನಮ್ಮದಾದರೇ ಬಾಳೇ ಬಂಗಾರವೆನ್ನಿಸುವುದಿಲ್ಲವೇ? ಆದರೇ ವಾಸ್ತವದಲ್ಲಿ ಇದು ಅಸಾಧ್ಯವೆಂದು ನಿವೇಲ್ಲರೂ ಯೋಚಿಸುತ್ತಿರಬಹುದು, ಇದಕ್ಕೆ ಉತ್ತರ ಖಂಡಿತವಾಗಿಯೂ ಅಸಾಧ್ಯವಲ್ಲ. ಬನ್ನಿ ಇದನ್ನು ಹೇಗೆ ಅಸಾಧ್ಯದಿಂದ ಸಾಧ್ಯಮಾಡುವುದೆಂದು ತಿಳಿದುಕೊಳ್ಳೋಣ.

ಹಬ್ಬಗಳು ಎಂದರೇ ಇನ್ನಿಲ್ಲದ ಉತ್ಸಾಹ ಮತ್ತು ಸಂತಸ. ನಮ್ಮೆಲ್ಲರ ಅಚ್ಚುಮೆಚ್ಚಿನ ಹುಟ್ಟು ಹಬ್ಬದಿಂದ ಹಿಡಿದು ಶ್ರಾವಣ ಮಾಸದ ನಾನ ಬಗೆಯ ಧಾಮಿ೯ಕ ಮತ್ತು ಸಾಂಸ್ಕೃಕ ಹಬ್ಬಗಳ ತನಕ ಎಲ್ಲಾ ರೀತಿಯ ಹಬ್ಬಗಳನ್ನು ಬಹುಕಾಲದಿಂದ ಕಾತುರದಿಂದ ಕಾದು ಸಡಗರ ಸಂಭ್ರಮಗಳಿಂದ ಆಚರಿಸುತ್ತೇವೆ. ಆ ಒಂದು ವಿಶೇಷ ದಿನದೆೊಂದು ನಮ್ಮ ಎಲ್ಲಾ ಚಿಂತೆಗಳನ್ನು ಬದಿಗಿಟ್ಟು ನಮ್ಮ ಧಮ೯, ನಂಬಿಕೆ ಸಂಸ್ಕೃತಿಯನ್ನು ಆಚರಿಸುವಂತಹ ಸಮಯ.

ಎಲ್ಲರೂ ಒಟ್ಟು ಕೂಡಿ ಆಚರಿಸುವಂತಹ ಉಲ್ಲಾಸದ ದಿನ. ಎಲ್ಲೆಲ್ಲೂ ಬಣ್ಣ ಬಣ್ಣದ ರಂಗೋಲಿ, ಬಣ್ಣದ ಹೂವುಗಳು, ನಾನ ವಿಧವಾದ ದೀಪಗಳು ಕಣ್ಣಿಗೆ ಹಬ್ಬವನ್ನು ನೀಡುತ್ತಾ ಎಲ್ಲಡೇ ಹಬ್ಬದ ವಾತವರಣವನ್ನು ಹರಡುತ್ತವೆ. ಹಬ್ಬಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಜನರ ಜೀವನದಲ್ಲಿ ಸಂತೋಷ, ಸಾಮರಸ್ಯ ಮತ್ತು ಏಕತೆಯನ್ನು ತರುತ್ತವೆ. ಇವು ಸಾಂಸ್ಕೃತಿಕ ಮತ್ತು ಸಾಮಾಜಿಕ ಬಾಂಧವ್ಯವನ್ನು ಬಲಪಡಿಸುತ್ತವೆ, ಜೊತೆಗೆ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿವೆ. ಪೂಜೆ ಪುನಸ್ಕಾರ, ಭಗವಂತನ ನಾಮ ಸ್ಮರಣೆ, ಭಕ್ತಿ ಪೂವ೯ಕ ಆರಾಧನೆಯನ್ನು ಕುಟುಂಬ ಮತ್ತು ಬಂಧು ಮಿತ್ರರೆೊಂದಿಗೆ ಸಡಗರದಿಂದ ಸಂಭ್ರಮಿಸುವ ಶುಭ ದಿನವೇ ಹಬ್ಬ. ಇವೆಲ್ಲವೂ ಹಬ್ಬದ ಅವಿಭಾಜ್ಯ ಅಂಗವಾಗಿದ್ದು, ಹಬ್ಬದ ಸಂಭ್ರಮವನ್ನು ಸೂಚಿಸುತ್ತದೆ.

ವರ್ಷ ಪೂರ್ತಿ ಯುಗಾದಿಯಿಂದ ಹಿಡಿದು (ಹೊಸ ವಷ೯) ಸಂಕ್ರಾತಿ(ಬೆಳೆ ಮತ್ತು ಪಸರು), ಬಣ್ಣದ ಹೋಲಿ ಹಬ್ಬ, ದಸರಾ(ದೇವಿಯ ಶಕ್ತಿಯನ್ನು ಆರಾಧಿಸುವುದು), ರಂಜಾನ್ (ಪ್ರಾಥ೯ನೆ ಮತ್ತು ಉಪವಾಸ) ಬೆಳಕಿನ ದೀಪವಳಿ ಮತ್ತು ಕ್ರಿಸ್ ಮಸ್ ತನಕ ಹಬ್ಬಗಳು ನಮ್ಮ ಬದುಕನ್ನೇ ಆಚರಿಸಿದಂತೆ ತೋರುತ್ತವೆ. ಹೀಗೆ ಹಬ್ಬಗಳು ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಅವು ಕೇವಲ ಆಚರಣೆಗಳಲ್ಲ, ಆದರೆ ನಮ್ಮ ಸಂಸ್ಕೃತಿ, ನಂಬಿಕೆ ಮತ್ತು ಪರಂಪರೆಯ ಅವಿಭಾಜ್ಯ ಅಂಗಗಳಾಗಿವೆ.

ಇವೆಲ್ಲವೂ ಕಣ್ಣಿಗೆ ಕಾಣುವಂತಹ ಮತ್ತು ಸ್ಪಶಿ೯ಸಿ ನೋಡುವಂತಹ ಭೌತಿಕ ಮತ್ತು ಬಹಿರಂಗವಾದ ಅನುಭವಗಳು. ಇವೆಲ್ಲವೂ ಇದ್ದರೆ ಮಾತ್ರ ಹಬ್ಬವೆನ್ನುವ ನಂಬಿಕೆಯಿದೆ. ಆರಾಧನೆ ಸಲ್ಲಿಸಿ ಭಗವಂತನನ್ನು ತೃಪ್ತಿ ಪಡಿಸುವುದು, ಎಲ್ಲರಾ ಆಗಮನದಿಂದ ಸಂತೋಷಗೊಂಡು ತೃಪ್ತಿಗೊಳ್ಳುವುದು ಸವೇ೯ ಸಾಮಾನ್ಯ. ಇತ್ತೀಚಿನ ಸಾಮಾಜಿಕ ಜಾಲಾತಾಣಗಳಲ್ಲಿ ತಾವು ಆಚರಿಸಿದ ಹಬ್ಬದ ಫೋಟೋ ಮತ್ತು ವೀಡಿಯೋ ಪೋಸ್ಟ ಗಳು ಹಂಚಿಕೊಳ್ಳುವುದು ಸಾಮಾನ್ಯವಾಗಿ ನೋಡುತ್ತೇವೆ. ಈ ಒಂದು ಭಾಗವೂ ಕೂಡ ಜನಗಳಿಗೆ ತೃಪ್ತಿ ಮತ್ತು ಸಂತಸ ಕೊಡುತ್ತದೆ. ನೋಡುಗರಿಗೂ ಇದು ಒಂದು ರೀತಿಯ ಮನೋರಂಜನೆಯಾಗಿದ್ದು, ಇದು ಕೂಡ ಹಬ್ಬದ ಸಡಗರದ ಸಂಕೇತವಾಗಿದೆ.

ಮನಸ್ಸಿನ ಮತ್ತು ಹಬ್ಬದ ನಂಟು

ಹಬ್ಬವು ನಮಗೆ ಬೆಳಕನ್ನು ನೀಡುತ್ತದೆ. ಬೆಳಕೆಂದರೆ ಜ್ಞಾನೋದಯ. ನಮ್ಮಲ್ಲಿರುವ ಅಜ್ಞಾನವೆಂಬ ಕತ್ತಲ್ಲಿನ್ನಲ್ಲಿ ಬೆಳಕನ್ನು ಪಸರಿಸಿ ನಮ್ಮನ್ನು ಜ್ಞಾನದೆಡೆಗೆ ಕರೆದುಕೊಂಡು ಹೋಗುವುದೇ ಹಬ್ಬ. ಭರವಸೆಯ ಬೆಳಕು, ಒಗ್ಗಟ್ಟಿನ ಬೆಳಕು ಕೂಡ ಹಬ್ಬದಿಂದ ನಮಗೆ ಲಭಿಸುವುದು. ಹಬ್ಬದಿಂದ ನಮಗಾಗುವ ಸಂತೋಷವನ್ನು ಪೋಷಿಸುವುದನ್ನು ನಾವು ಪ್ರತಿ ನಿತ್ಯವೂ ಅಭ್ಯಾಸ ಮಾಡಬೇಕು. ಗಿಡಗಳಿಗೆ ಹೇಗೆ ನೀರು ಮತ್ತು ಗೊಬ್ಬರವನ್ನು ಹಾಕಿ ಪೋಷಿಸುತ್ತೇವೆಯೋ ಹಾಗೆಯೇ ನಮ್ಮ ಮನಸ್ಸನ್ನು ಹಬ್ಬದ ಸಕಾರಾತ್ಮಕತೆಯಿಂದ ಪೋಷಿಸಿ ಆಂತರಿಕವಾಗಿ ಪಕ್ವವಾದರೇ ಇದೊಂದು ಸಾಧನೆಯೇ ಸರಿ.

ಹಬ್ಬಗಳು ಕುಟುಂಬದಲ್ಲಿ ಹಾಗು ಸಮಾದದಲ್ಲಿ ಧನಾತ್ಮಕ ಮನೋಭಾವನೆಯನ್ನು ಸೃಷ್ಟಿಸುತ್ತದೆ ( positivity) ಮತ್ತು ನಮ್ಮ ಮನಸ್ಥಿತಿಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಸಕಾರಾತ್ಮಕ ಭಾವನೆಗಳನ್ನು ಬೆಳೆಸಿ, ಸಾಮಾಜಿಕ ಬಾಂಧವ್ಯಗಳನ್ನು ಸಹ ಬಲಪಡಿಸುತ್ತವೆ. ಸಾಂಸ್ಕೃತಿಕ ಪುಷ್ಟೀಕರಣ ಮತ್ತು ಆಧ್ಯಾತ್ಮಿಕ ಚಿಂತನೆಗೆ ಅವಕಾಶಗಳನ್ನು ಒದಗಿಸಿಕೊಡುತ್ತವೆ. ದಿನಚರಿಯಿಂದ ವಿರಾಮವನ್ನು ನೀಡುವುದಲ್ಲದೇ, ಸಮಾಜದಲ್ಲಿ ಏಕತೆಯನ್ನು ಉತ್ತೇಜಿಸುತ್ತವೆ ಮತ್ತು ಬಾಂಧವ್ಯ, ಆಚರಣೆಗಳನ್ನು ಪ್ರೋತ್ಸಾಹಿಸುವ ಮೂಲಕ ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತವೆ.

ಹಬ್ಬದ ದಿನ ಜೀವನೋಲ್ಲಾಸ ಸಂತೋಷ ಹುರಿದುಂಬಿಸುತ್ತಿರುತ್ತದೆ. ದಿನಚರಿಯೂ ಕೂಡ ಅಚ್ಚುಕಟ್ಟಾಗಿ ಶಿಸ್ತಿನಿಂದ ನಡೆಯುತ್ತದೆ. ವಿಳಂಬ ಪ್ರಕೃತಿಯಿಲ್ಲದೇ, ಆಲಸ್ಯವಿಲ್ಲದೇ ಎಲ್ಲವೂ ಲೀಲಾಜಲವಾಗಿ ನಡೆದು ಹೋಗುತ್ತದೆ. ಅಂದುಕೊಂಡತೆ ಎಲ್ಲಾ ರೀತಿಯ ಚಟುವಟಿಕೆಗಳು ಸಾಗುತ್ತವೆ. ಹಬ್ಬವನ್ನು ಆಚರಿಸುವವರು ಸಮಸ್ಯೆಗಳನ್ನೆಲ್ಲಾ ಬದಿಗಿಟ್ಚು, ಚಿಂತೆಯಿಲ್ಲದೇ, ರಗಳೆೇ ಇಲ್ಲದೇ ಎಲ್ಲವನ್ನು ಸರಾಗವಾಗಿ ನಿಭಾಯಿಸುತ್ತಾರೆ. ಒಟ್ಚಿನಲ್ಲೀ ಸಕಾರಾತ್ಮಕವಾಗಿ ದಿನವವನ್ನು ಕಳೆಯುತ್ತಾರೆ.

ಹಬ್ಬದ ನಂತರ ಮನಸ್ಥಿತಿ ಈ ರೀತಿ ಇದ್ದರೆ ದಿನವೂ ಹಬ್ಬ !

ಆದರೆ, ಹಬ್ಬವಾದ ನಂತರ ಆಲಸ್ಯ, ನಿರಾಸಕ್ತಿ,ನೆಗೆಟೀವ್ ಥಿಕಿಂಗ್, ಅತಿಯಾದ ಯೋಚನೆ ಮತ್ತೆ ಮುಂದುವರೆಯುತ್ತದೆ. ಸಡಗರ ಸಂಭ್ರಮ ನಿಂತಾಕ್ಷಣ ಎಲ್ಲವೂ ಮಾಯಾ! ಒಂದು ಪಕ್ಷ ಮನಸ್ಸಿನ ಮೇಲೆ ಹಬ್ಬದ ಪರಿಣಾಮ ಹಬ್ಬದ ನಂತರವೂ ಮುಂದುವರೆದರೇ, ಹಬ್ಬದ ಆಚರಣೆ ಸಾಥ೯ಕವಾಗುತ್ತದೆ. ಹಬ್ಬದ ಫಲಿತಾಂಶವಾಗಿ ದೊರೆತ

ಸಂತೋಷ, ಸಂತೃಪ್ತಿಯನ್ನು ಸಕಾರಾತ್ಮಕ ಸಾಮಥ್ಯ೯ವನ್ನಾಗಿ ಬೆಳೆಸಿಕೊಳ್ಳುವಂತಹ ಶಕ್ತಿ ನಮ್ಮದಾಗಬೇಕು. ಭೌತಿಕ,ಬಹಿರಂಗವಾಗಿ ಕಾಣುವ ಸೌಕಯ೯ಗಳ ಮತ್ತು ಸಂತೋಷದ ಜೊತೆ, ಆಂತರಿಕವಾಗಿ ವಿಕಾಸಗೊಳ್ಳುವ ಪ್ರಯತ್ನ ನಮ್ಮದಾಗಬೇಕು.

ಉತ್ಸಾಹ ಮತ್ತು ಸಂತೋಷವನ್ನು ಆ ಒಂದು ದಿನಕ್ಕೆ ಸೀಮಿತವಾಗಿಸದೇ, ಪ್ರತಿದಿನ ಸಂತೋಷ ವಾಗಿರುವುದನ್ನು ಕಲಿಯಬೇಕು. ಪ್ರತಿದಿನ ಹುರುಪು ಉತ್ಸಾಹದಿಂದ ಬದುಕಬೇಕು. ಅನುಕೂಲ ಮತ್ತು ಪ್ರತಿಕೂಲ ಸಂದಭ೯ಗಳಲ್ಲೂ ಸಕಾರಾತ್ಮಕವಾದ ಮನೋಭಾವವನ್ನು ಬೆಳೆಸಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಎದೆಗುಂದದೇ, ಧೈರ್ಯದಿಂದ ಪರಿಸ್ಥಿತಿಗಳನ್ನು ಎದುರಿಸುವ ಧನಾತ್ಮಕ ಶಕ್ತಿಯನ್ನು ಹಬ್ಬದ ಮೂಲಕ ಗಳಿಸಬೇಕು. ಮನಸ್ಸನ್ನು ನಿಗ್ರಹಿಸಿ ನಮ್ಮ ಭಾವನೆಗಳನ್ನು ನಿಭಾಯಿಸಿಕೊಂಡು ಹೋಗುವಂತಹ ಸಾಮಥ್ಯ೯ವನ್ನು ಬೆಳೆಸಿಕೊಳ್ಳುವ ಪ್ರಯತ್ನ ನಮ್ಮದಾಗಬೇಕು.

ನಮ್ಮ ಬದುಕಿನ ಗುರಿ ಮತ್ತು ಕನಸುಗಳನ್ನು ಈಡೇರಿಸಿಕೊಳ್ಳುವ ಯತ್ನದಲಿ ಸಾಗಬೇಕು. ಜಡತ್ವವನ್ನು ಬಿಟ್ಟು ಉತ್ಸಾಹಭರಿತರಾಗಿ ಲವಲವಿಕೆಯಿಂದ ದಿನಚರಿಗಳನ್ನು ನಿಭಾಯಿಸುವಂತರಾಗಬೇಕು. ದುಃಖ, ಚಿಂತೆ, ಆತಂಕ ಭಯಗಳನ್ನು ಬದಿಗಿಟ್ಟು ಪ್ರಸ್ತುತ ಗಳಿಗೆಯಲ್ಲಿ ನೆಮ್ಮದಿಯಿಂದ ಬದುಕುವುದನ್ನು ಕಲಿಯಬೇಕು.

ನಮ್ಮ ಮಾನಸಿಕ ಸಾಮಥ್ಯ೯ಗಳನ್ನು ಹೆಚ್ಚಿಸಿಕೊಂಡು ನೆಗೆಟೀವ್ ಯೋಚನೆಗಳನ್ನು ಕಡಿಮೆ ಮಾಡಿಕೊಳ್ಳುವ ಯತ್ನ ಮಾಡುವಂತವರಾಗಬೇಕು.ಪಾಪಾಪ್ರಜ್ಞೆಗಳಿಂದ ಮುಕ್ತರಾದರೇ ಮತ್ತೇ ತಪ್ಪು ಹೆಜ್ಜೆ ಹಾಕುವುದಿಲ್ಲ. ಅಹಂ, ಅಸೂಯೆಗಳನ್ಮು ನಿಯಂತ್ರಿಸಿ, ಮೋಸ, ವಂಚನೆಗಳಿಂದ ಹೊರ ಬರುವುದಕ್ಕೆ ಪ್ರಯತ್ನಿಸಬಹುದು. ಮತ್ತೆೊಬ್ಬರನ್ನು ದೂಷಿಸುವುದು, ಆಡಿಕೊಳ್ಳುವುದು, ಹಣಕಾಸಿನ ಸ್ಥಾನಮಾನವನ್ನು ಅತಿಯಾಗಿ ತೋರಿಸುವುದನ್ನು ಪ್ರಯತ್ನಪೂವ೯ಕವಾಗಿ ಕಡಿಮೆ ಮಾಡಿಕೊಳ್ಳಬೇಕು. ಅನುಕಂಪ ಸಹಾನುಭೂತಿಯನ್ನು ಬೆಳೆಸಿಕೊಳ್ಳುವಂತಹ ಶಕ್ತಿ ನಮ್ಮದಾಗಬೇಕು.

ನಮ್ಮ ಸೋಲು, ದೌಬ೯ಲ್ಯಗಳನ್ನು, ಕೊರತೆಗಳನ್ನು ಗೌರವದಿಂದ ಸ್ವೀಕರಿಸಿ, ಸುಧಾರಣೆಯತ್ತ ನಮ್ಮ ಗಮನವನ್ನು ಹರಿಸಬೇಕು. ಕೊನೆಯದಾದರೂ ಕನಿಷ್ಠವಾದ ಅಂಶವೆಲ್ಲವೆಂಬಂತೆ ಕೃತಘ್ನತೆ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಆ ಭಗವಂತನ ಕೃಪೆಯಿಂದಾಗಿ, ಹಬ್ಬವನ್ನು ಆಚರಿಸುವ ಅವಕಾಶ ನಮ್ಮ ಪಾಲಿಗೆ ಒದಗಿ ಬಂತು ಎಂಬ ಕಾರಣಕ್ಕೆ ತುಂಬು ಹೃದಯದಿಂದ ಕೃತಘ್ನತೆಯನ್ನು ಸಲ್ಲಿಸಿ, ಹಬ್ಬದ ನಂತರ ಪ್ರತಿಯೊಂದು ದಿನವನ್ನು ನಿತ್ಯೋತ್ಸವನ್ನಾಗಿ ಆಚರಿಸಬೇಕು. ಯಾರು ತಮ್ಮ ಬದುಕಿಗೆ ಪ್ರತಿನಿತ್ಯವೂ ಕೃತಘ್ನತೆಯನ್ನು ಸಲ್ಲಿಸುತ್ತಾರೋ ಅವರ ಪ್ರತಿದಿನವೂ ಕೂಡ ಹಬ್ಬವೇ ಆಗಿರುತ್ತದೆ.

ಈ ಸುದ್ದಿಯನ್ನೂ ಓದಿ: Roopa Gururaj Column: ಮನಸ್ಸು ಮಾಗಿದಾಗ ಗೋಚರವಾಗುವ ಗುರಿ

ಹೀಗೆ ಹಬ್ಬದ ಧನಾತ್ಮಕ ಶಕ್ತಿಯಿಂದಾಗಿ ನಾವು ಆತಂರಿಕವಾಗಿ ಪರಿಶುದ್ಧವಾದಲ್ಲಿ ಜೀವೋನೋತ್ಸಾಹ, ಸಂತಸ ಮತ್ತು ಶಾಂತಿ ನಮ್ಮದಾಗುವುದರಲ್ಲಿ ಸಂಶಯವಾಗುವುದಿಲ್ಲ. ನಮ್ಮ ಆಂತರಿಕ ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಾಸನವಾಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆಯ್ಕೆಯಾದರೇ ಪ್ರತಿದಿನವೂ ಹಬ್ಬವೇ ಸರಿ!

ಡಿ. ಆರ್. ಭವ್ಯಾ ವಿಶ್ವನಾಥ್

View all posts by this author