Health Tips: ಗಂಟೆಗಟ್ಟಲೇ ಕೂತಲ್ಲೇ ಕೆಲ್ಸ ಮಾಡಿ ಬೆನ್ನು ನೋವೇ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ
ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತಲ್ಲೇ ಕೆಲಸ ಮಾಡುವುದು ದೇಹದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಳಿದೆ. JAMA ನೆಟ್ ವರ್ಕ್ ಓಪನ್ ಜರ್ನಲ್ ಸಂಶೋಧನೆ ಪ್ರಕಾರ ಬಹಳ ಹೊತ್ತು ಕುಳಿತಲ್ಲೇ ಕೆಲಸ ಮಾಡುವ ಜನರಿಗೆ ಹೃದಯ ರಕ್ತನಾಳದ ಖಾಯಿಲೆಯ ಅಪಾಯವೂ ಪ್ರತಿಶತ 40 ರಷ್ಟು ಹೆಚ್ಚಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಕೆಲವೊಮ್ಮೆ ಅತಿಯಾಗಿ ಕುಳಿತುಕೊಂಡೇ ಕೆಲಸ ಮಾಡುವುದರಿಂದ ಮಧುಮೇಹ, ಮತ್ತು ಅಧಿಕ ಬೊಜ್ಜಿನ ಸಮಸ್ಯೆಗೂ ಕಾರಣವಾಗಲಿದೆ.


ನವದೆಹಲಿ: ಪ್ರತಿನಿತ್ಯ ಆಫೀಸ್ ಗೆ ಹೋಗುವವರು ಸಮಯದ ಅರಿವಿಲ್ಲದೆ ಹೆಚ್ಚಿನ ಒತ್ತಡದಿಂದ ಕೆಲಸ ಮಾಡುತ್ತಾರೆ. ಅದರಲ್ಲೂ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತಲ್ಲೇ ಕೆಲಸ ಮಾಡುವುದು ದೇಹದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಳಿದೆ. JAMA ನೆಟ್ ವರ್ಕ್ ಓಪನ್ ಜರ್ನಲ್ ಸಂಶೋಧನೆ ಪ್ರಕಾರ ಬಹಳ ಹೊತ್ತು ಕುಳಿತಲ್ಲೇ ಕೆಲಸ ಮಾಡುವ ಜನರಿಗೆ ಹೃದಯ ರಕ್ತನಾಳದ ಖಾಯಿಲೆಯ ಅಪಾಯವೂ ಪ್ರತಿಶತ 40ರಷ್ಟು ಹೆಚ್ಚಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಅನೇಕರು ಕುಳಿತು ಕೊಳ್ಳುವ ಭಂಗಿ ಸರಿಯಾಗಿ ಪಾಲಿಸದೇ ಇದ್ದಕ್ಕಿದ್ದಂತೆ ಬೆನ್ನುನೋವು ಕಾಣಿಸಿಕೊಳ್ಫುವ ಸಾಧ್ಯತೆಯು ಇದೆ. ಕೆಲವೊಮ್ಮೆ ಅತಿಯಾಗಿ ಕುಳಿತುಕೊಂಡೆ ಕೆಲಸ ಮಾಡುವುದರಿಂದ ಮಧುಮೇಹ, ಮತ್ತು ಅಧಿಕ ಬೊಜ್ಜಿನ ಸಮಸ್ಯೆಗೂ ಕಾರಣವಾಗಲಿದೆ ಹಾಗಾಗಿ ಈ ಮೊದಲೆ ಕೆಲವು ಮುನ್ನೆಚ್ಚರಿಕೆಗಳನ್ನು(Health Tips) ತೆಗೆದುಕೊಳ್ಳುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
ಕುಳಿತು ಕೊಳ್ಳುವ ಭಂಗಿಯ ಬದಲಾವಣೆ:
ಆಫೀಸ್ ನಲ್ಲಿ ಒಂದೇ ಸ್ಥಳದಲ್ಲಿ ಕುಳಿತು ನಿರಂತರವಾಗಿ ಕೆಲಸ ಮಾಡಿ ದರೆ, ಬೆನ್ನು ನೋವಿನ ಸಮಸ್ಯೆಗೆ ಕಾರಣವಾಗಬಹುದು. ಹೆಚ್ಚಿನ ಜನರು ಬೆನ್ನು ನೋವು ಬಂದರು ಕಷ್ಟ ಪಟ್ಟು ಕುಳಿತು ಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವರು ಯಾವ ರೀತಿಯಲ್ಲಿ, ಎಷ್ಟು ಸಮಯ ಕುಳಿತುಕೊಂಡಿದ್ದೇವೆ ಎಂಬು ದರ ಬಗ್ಗೆಯೂ ಗಮನ ಹರಿಸುವುದಿಲ್ಲ. ಹಾಗಾಗಿ ತಜ್ಞರ ಪ್ರಕಾರ ಒಂದೇ ಭಂಗಿಯಲ್ಲಿ ಕುಳಿತು ಕೊಳ್ಳದೆ, ಸ್ವಲ್ಪ ಸಮಯ ವಿಶ್ರಮಿಸಿ ಆ ನಂತರ ಕೆಲಸ ಮಾಡಲು ಸಲಹೆ ನೀಡಿದ್ದಾರೆ.
ಒತ್ತಡ ಕಡಿಮೆ ಮಾಡಿಕೊಳ್ಳಿ:
ಕೆಲಸದ ಒತ್ತಡ ಹೆಚ್ಚಾದರೆ ಆರೋಗ್ಯ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದು ನಿಮ್ಮ ಮಾನಸಿಕ ಒತ್ತಡ ಅಲ್ಲದೆ ದೈಹಿಕ ವಾಗಿಯು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹಲವಾರು ಅಧ್ಯಯನಗಳು ಕಂಡು ಕೊಂಡಿ ವೆ. ಆದ್ದರಿಂದ ನೀವು ದೈಹಿಕವಾಗಿ ಆರೋಗ್ಯಯುತವಾಗಿದ್ದರೆ ಒತ್ತಡವನ್ನು ಸುಲಭದಲ್ಲಿ ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು.
ಈ ವ್ಯಾಯಾಮ ಮಾಡಿ
ಡೆಸ್ಕ್ ಪುಶ್ ಅಪ್: ಭುಜ ಹಾಗೂ ದೇಹಕ್ಕೆ ಬೇಕಾದ ಒಂದು ಉತ್ತಮವಾದ ವ್ಯಾಯಾಮ ಇದಾಗಿದೆ. ಮೇಜಿನಿಂದ ಸ್ವಲ್ಪ ಅಂತರ ಕಾಯ್ದುಕೊಂಡು ಬಳಿಕ ನಿಮ್ಮ ಕೈಯನ್ನು ಮೇಜಿನ ಅಂಚಿಗೆ ಹಿಡಿದು ಕೊಂಡು 10-15ಸೆಕೆಂಡ್ ಗಳ ತನಕ ಪುಷ್ ಅಪ್ ಮಾಡಿದರೆ ದೇಹದ ಮೂಳೆ ನೋವು, ಭುಜನೋವು ಇತರ ಸಮಸ್ಯೆ ಪರಿಹಾರ ಆಗಲಿದೆ.
ಕಾಲಿನ ವ್ಯಾಯಾಮ: ಒಂದು ಕಾಲಿನ ಮೇಲೆ ಇನ್ನೊಂದು ಕಾಲು ಇರಿಸಿ ಸ್ವಲ್ಪ ಮುಂದಕ್ಕೆ ಬಾಗಬೇಕು. ಬಳಿಕ ಪುನಃ ಯಥಾಸ್ಥಿತಿಗೆ ಬಂದು ನಿಮ್ಮ ಕಾಲುಗಳು ಹಾಗೂ ತೊಡೆಯ ಭಾಗವನ್ನು ಸ್ವಲ್ಪ ವಿಸ್ತರಿಸಿ ವ್ಯಾಯಾಮದ ರೀತಿ ಸುಮಾರು 15 ನಿಮಿಷಗಳ ಕಾಲ ಮಾಡಿ. ಹೀಗೆ 10-15 ಸೆಕೆಂಡ್ ತನಕ ಪುನರಾವರ್ತಿಸಿದರೆ ದೇಹದ ರಕ್ತ ಪರಿಚಲನೆ ಉತ್ತಮವಾಗುವ ಜೊತೆಗೆ ಕಾಲಿನ ಕೊಲೆಸ್ಟ್ರಾಲ್ ಸಮಸ್ಯೆ, ಮೂಳೆ ನೋವುಗಳು ಕಣ್ಮರೆಯಾಗಲಿದೆ.
ಇದನ್ನು ಓದಿ: Health Tips: ಸತ್ವಗಳ ಕೊರತೆಯಾದರೆ ದೇಹ ನೀಡುವ ಸೂಚನೆಗಳು ಗೊತ್ತೇ?
ನಿಂತು ಮಾಡುವ ವ್ಯಾಯಾಮ: ದೇಹದ ರಕ್ತ ಪರಿಚಲನೆ ಹೆಚ್ಚಾಗುವ ಜೊತೆಗೆ ಸ್ನಾಯುಗಳ ಆರೋಗ್ಯ ವೃದ್ಧಿಸಲು ನಿಂತು ಮಾಡುವ ಆಸನ ಬಹಳ ಪ್ರಯೋಜನೆ ನೀಡಲಿದೆ. ನಿಮ್ಮ ಕುರ್ಚಿ ಅಥವಾ ಟೇಬಲ್ ಅನ್ನು ಕೈಯಲ್ಲಿ ಹಿಡಿದು ಪಾದಗಳಿಂದ ಪುಷ್ ಅಪ್ ಮಾಡಬೇಕು. ಹಿಮ್ಮಡಿಗಳನ್ನು ಮೇಲೆತ್ತಿ ಸ್ವಲ್ಪ ಸಮಯದ ಬಳಿಕ ಕೆಳಕ್ಕೆ ಊರಬೇಕು. 15-20 ಬಾರಿ ಈ ವ್ಯಾಯಾಮ ಪುನರಾ ವರ್ತಿಸಿದರೆ ಕಾಲು ನೋವು, ಬೆನ್ನು ನೋವು ಹಾಗೂ ಬೊಜ್ಜಿನ ಸಮಸ್ಯೆ ನಿವಾರಣೆ ಆಗಲಿದೆ.
ಬೆನ್ನಿನ ಸ್ನಾಯು ಬಲಗೊಳ್ಳುವ ವ್ಯಾಯಾಮ: ಈ ವ್ಯಾಯಾಮ ಮಾಡುವಾಗ ನಿಮ್ಮ ಎರಡು ಮೊಣ ಕೈ ಮೇಲಕ್ಕೆ ಎತ್ತ ಬೇಕು. ಮೊದಲು ನಿಮ್ಮ ಮುಖದ ನೇರಕ್ಕೆ ಎರಡು ಕೈ ತಂದ ಬಳಿಕ ಎರಡು ಕೈಯನ್ನು ಬಲ ಹಾಗೂ ಎಡಕ್ಕೆ ವಿಸ್ತರಿಸಬೇಕು. ಈ ವ್ಯಾಯಾಮ ದಿನಕ್ಕೆ 6 ಭಾರಿ ಮಾಡಿದರೆ ಬೆನ್ನಿನ ನೋವುಗಳು ನಿವಾರಣೆ ಆಗಲಿದೆ. ಈ ಎಲ್ಲ ಸಿಂಪಲ್ ವ್ಯಾಯಾಮ ಮಾಡುವುದರಿಂದ ಕುಳಿತು ಮಾಡುವ ಕೆಲಸದಿಂದ ಉಂಟಾಗುವ ಆರೋಗ್ಯ ಸಮಸ್ಯೆ ನಿವಾರಣೆ ಆಗಲಿದೆ.