ಕಾರನ್ನು 1.5 ಕಿಲೋ ಮೀಟರ್ ಎಳೆದೊಯ್ದ ಟ್ರಕ್: ಪವಾಡಸದೃಶವಾಗಿ ಕಾರಿನಲ್ಲಿದ್ದ ಮೂವರು ಪಾರು
ಮಧ್ಯ ಪ್ರದೇಶದ ದಬ್ರಾ-ಗ್ವಾಲಿಯರ್ ರಸ್ತೆಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಗ್ವಾಲಿಯರ್ ಹೆದ್ದಾರಿಯಲ್ಲಿ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಅಲ್ಲದೆ ಅದೇ ಕಾರನ್ನು 1.5 ಕಿ.ಮೀ. ವರೆಗೆ ಎಳೆದೊಯ್ದಿದೆ. ಘಟನೆಯ ವಿಡಿಯೊ ಭಾರಿ ವೈರಲ್ ಆಗುತ್ತಿದೆ.
ಕಾರನ್ನು 1.5 ಕಿ.ಮೀ. ಎಳೆದೊಯ್ದ ಟ್ರಕ್ -
ಗ್ವಾಲಿಯರ್, ಮಾ. 1: ಇತ್ತೀಚೆಗೆ ರಸ್ತೆ ಸುರಕ್ಷತೆ ಬಗ್ಗೆ ಸಾರಿಗೆ ಇಲಾಖೆ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡಿದರೂ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಧ್ಯ ಪ್ರದೇಶದ ದಬ್ರಾ-ಗ್ವಾಲಿಯರ್ ರಸ್ತೆಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಗ್ವಾಲಿಯರ್ ಹೆದ್ದಾರಿಯಲ್ಲಿ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿದ್ದಲ್ಲದೆ ಅದೇ ಕಾರನ್ನು 1.5 ಕಿ.ಮೀ.ವರೆಗೆ ಎಳೆದೊಯ್ದಿದೆ. ಘಟನೆಯ ವಿಡಿಯೊ ಭಾರಿ ವೈರಲ್ (Viral Video) ಆಗುತ್ತಿದೆ.
ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ಭಾನುವಾರ ಬೆಳಗ್ಗೆ ಸಿನಿಮೀಯ ರೀತಿಯ ಈ ದೃಶ್ಯ ಕಂಡು ಬಂದಿದೆ. ವೇಗವಾಗಿ ಬಂದ ಟ್ರಕ್ ಒಂದು ಕಾರಿಗೆ ಡಿಕ್ಕಿ ಹೊಡೆದು ನಂತರ ಸುಮಾರು 1.5 ಕಿ.ಮೀ. ದೂರ ಎಳೆದುಕೊಂಡು ಹೋಗಿದೆ.
ವಿಡಿಯೊ ನೋಡಿ:
#WATCH | Truck Drags Car For 1.5 Km On Dabra - Gwalior Highway, Passengers Escape Unhurt; Incident Caught On Camera #MPnews #MadhyaPradesh pic.twitter.com/zUQu3qUyvG
— Free Press Madhya Pradesh (@FreePressMP) March 1, 2026
ಅದೃಷ್ಟವಶಾತ್, ಅಲ್ಲಿದ್ದವರು ಯಾವುದೇ ಹಾನಿಯಾಗದಂತೆ ಪಾರಾಗಿದ್ದಾರೆ ಮತ್ತು ಘಟನೆಯಲ್ಲಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಟ್ರಕ್ ಸಂಖ್ಯೆ RJ 11 GC 2456 ಟಾಟಾ ನೆಕ್ಸಾನ್ ಕಾರಿಗೆ (MP07-ZG-9779) ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಲಾರಿಯ ಮುಂಭಾಗದಲ್ಲಿ ಸಿಲುಕಿಕೊಂಡಿದೆ. ಆದರೆ ಚಾಲಕ ಟ್ರಕ್ ನಿಲ್ಲಿಸುವ ಬದಲು ಕಾರನ್ನು ಡಿಫೆನ್ಸ್ ಪಾರ್ಕ್ ಬಳಿಯ ಪ್ರದೇಶಕ್ಕೆ ಎಳೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಈ ಭಯಾನಕ ಘಟನೆಯ ಹೊರತಾಗಿಯೂ ಅವರೆಲ್ಲರೂ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ಪ್ರತ್ಯಕ್ಷದರ್ಶಿಗಳು ಹೇಳುವಂತೆ ಕಾರಿನಲ್ಲಿದ್ದವರು ಕಿರುಚಾಡುತ್ತಿದ್ದರೂ ಟ್ರಕ್ ಚಾಲಕನನ್ನು ನಿಲ್ಲಿಸುವಂತೆ ಬೇಡಿಕೊಂಡರು, ಆತನು ಪ್ರತಿಕ್ರಿಯಿಸಲಿಲ್ಲ. ಬಳಿಕ ಸ್ಥಳೀಯ ನಿವಾಸಿಗಳು ಟ್ರಕ್ ಅನ್ನು ಬೆನ್ನಟ್ಟಿ ಚಾಲಕನನ್ನು ಸರಿಯಾಗಿ ಥಳಿಸಿದ್ದಾರೆ ಎಂದು ವರದಿಯಾಗಿದೆ.