Beauty Tips: ಆರೋಗ್ಯಕರ ಚರ್ಮದ ಆರೈಕೆಗೆ ಇಲ್ಲಿದೆ ಟಿಪ್ಸ್
ಬದಲಾದ ಆಧುನಿಕ ಜೀವನ ಶೈಲಿ ಮತ್ತು ಆಹಾರಭ್ಯಾಸಗಳು ದೇಹದ ಆರೋಗ್ಯ ಕೆಡಿಸುವ ಜೊತೆಗೆ ನಮ್ಮ ಸೌಂದರ್ಯವನ್ನು ಕೂಡ ಕಳೆಗುಂದಿಸಲಿದೆ. ಹಾಗಾಗಿ ದೇಹದ ಹೊರನೋಟ ಚೆನ್ನಾಗಿ ಕಾಣಬೇಕೆಂದು ಬಯಸುವವರು ಆರೋಗ್ಯಯುತ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವ ಕ್ರಮವನ್ನು ಅನುಸರಿಸುವುದರಿಂದ ಬಹಳ ಪ್ರಯೋಜನ ಸಿಗಲಿದೆ. ಇನ್ನು ನಿಮ್ಮ ಚರ್ಮ, ಕೂದಲಿನ ಆರೈಕೆ ಮಾಡಲು ಯಾವುದೇ ಚಿಕಿತ್ಸೆಯ ಮೊರೆ ಹೋಗುವ ಬದಲಾಗಿ ಮನೆ ಯಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.


ನವದೆಹಲಿ: ಪ್ರತಿಯೊಬ್ಬರು ತಾವು ಸುಂದರವಾಗಿ ಕಾಣಬೇಕೆಂದು ವಿವಿಧ ರೀತಿಯ ಬ್ಯೂಟಿ ಪ್ರಾಡಕ್ಟ್‌ಗಳನ್ನು ಖರೀದಿ(Beauty Tips) ಮಾಡುತ್ತಾರೆ. ಅದರಲ್ಲೂ ಸೊಂಪಾದ ಕೇಶರಾಶಿ, ಕಾಂತಿಯುತ ಚರ್ಮ ಮತ್ತು ಸ್ವಚ್ಛವಾಗಿ ಕಾಣುವ ಉಗುರುಗಳು ನಮ್ಮ ಅಂದಕ್ಕೆ ಮೆರುಗು ನೀಡಲಿದ್ದು ಇವುಗಳ ಆರೈಕೆಗೆ ಆದ್ಯತೆ ನೀಡುವುದು ಬಹಳ ಮುಖ್ಯ. ಬದಲಾದ ಆಧುನಿಕ ಜೀವನ ಶೈಲಿ ಮತ್ತು ಆಹಾರಭ್ಯಾಸಗಳು ದೇಹದ ಆರೋಗ್ಯ ಕೆಡಿಸುವ ಜೊತೆಗೆ ನಮ್ಮ ಸೌಂದರ್ಯವನ್ನು ಕೂಡ ಕಳೆಗುಂದಿಸಲಿದೆ. ಹಾಗಾಗಿ ದೇಹದ ಹೊರ ನೋಟ ಚೆನ್ನಾಗಿ ಕಾಣಬೇಕೆಂದು ಬಯಸುವವರು ಆರೋಗ್ಯಯುತ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವ ಕ್ರಮವನ್ನು ಅನುಸರಿಸುವುದರಿಂದ ಬಹಳ ಪ್ರಯೋಜನ ಸಿಗಲಿದೆ. ಇನ್ನು ನಿಮ್ಮ ಚರ್ಮ, ಕೂದಲಿನ ಆರೈಕೆ ಮಾಡಲು ಯಾವುದೇ ಚಿಕಿತ್ಸೆಯ ಮೊರೆ ಹೋಗುವ ಬದಲಾಗಿ ಮನೆ ಯಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹಾಗಾಗಿ ಹೊಳೆಯುವ ಚರ್ಮ , ಕೂದಲು ಮತ್ತು ಉಗುರಿನ ಆರೈಕೆಗೆ ಯಾವ ರೀತಿಯಾದ ಆಹಾರ ಕ್ರಮ ಅನುಸರಿಸಬೇಕು ಎನ್ನುವ ಮಾಹಿತಿ ಇಲ್ಲಿದೆ.
ನೀರಿನ ಅಂಶ ಅಧಿಕ ಇರಲಿ:
ಚರ್ಮ, ಕೂದಲು ಮತ್ತು ಉಗುರಿನ ಆರೈಕೆಗಾಗಿ ಆಹಾರ ಸೇವಿಸುವ ಜೊತೆಗೆ ಅಧಿಕ ನೀರಿನ ಅಂಶ ಇರುವ ಆಹಾರಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಸೌತೆಕಾಯಿ, ಕಲ್ಲಂಗಡಿ, ದ್ರಾಕ್ಷಿ, ಪೀಚ್ ಹಣ್ಣು, ಸ್ಟ್ರಾಬೇರಿ, ಸೇಬು, ಸೋರೆಕಾಯಿ, ಕುಂಬಳಕಾಯಿ ಇಂತಹ ಆಹಾರವನ್ನೇ ಅತಿಯಾಗಿ ಸೇವಿಸಬೇಕು. ಅದರ ಜೊತೆಗೆ ನೀರಿನ ಸೇವನೆ ಕೂಡ ಹೆಚ್ಚು ಮಾಡಬೇಕು. ಹೀಗೆ ಮಾಡಿದರೆ ಒಣ ಹಾಗೂ ಸೀಳು ಕೂದಲ ಸಮಸ್ಯೆ ಪರಿಹಾರ ಕಾಣುವ ಜೊತೆಗೆ ಕ್ಯಾಲ್ಸಿಯಂ ಸಮಸ್ಯೆಗಳಿಂದ ಉಗುರಿನ ಮೇಲೆ ಮೂಡುವ ಬಿಳಿಗೆರೆಗಳ ಸಮಸ್ಯೆ ಬರಲಾರದು. ಅದರೊಂದಿಗೆ ಹೊಳೆಯುವ ಕಾಂತಿಯುತ ತ್ವಚೆ ಕೂಡವ ನಿಮ್ಮದಾಗಲಿದೆ.
ಮತ್ಸ್ಯ ಆಹಾರ ಸೇವಿಸಿ:
ಮತ್ಸ್ಯ ಆಹಾರಗಳ ಪೈಕಿ ಒಮೆಗಾ 3 ಕೊಬ್ಬಿ ನಾಮ್ಲಗಳಿಂದ ಸಮೃದ್ಧ ವಾಗಿರುವ ಮೀನಿನ ಸೇವನೆ ಮಾಡುವುದರಿಂದ ಕೂದಲು ಹಾಗೂ ಚರ್ಮದ ಆರೈಕೆ ಮೇಲೆ ಅನೇಕ ಧನಾತ್ಮಕ ಪರಿಣಾಮ ಬೀರಲಿದೆ. ಇದರಿಂದ ಚರ್ಮದ ಉರಿಯೂತ ಬರಲಾರದು, ಕೂದಲು ಕೂಡ ದಷ್ಟ ವಾಗಿ ಸೊಂಪಾಗಿರುವಂತೆ ಒಮೆಗಾ 3 ಕೊಬ್ಬಿನಾಮ್ಲ ಬಹಳ ಸಹಕಾರಿ ಆಗಲಿದೆ.
ಸಿಟ್ರಿಕ್ ಹಣ್ಣಿನ ಸೇವನೆ:
ಕಿತ್ತಳೆ, ಮೂಸಂಬಿ, ದ್ರಾಕ್ಷಿ, ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಅಧಿಕವಾಗಿ ಇರಲಿದೆ. ಹೀಗಾಗಿ ಇಂತಹ ಹಣ್ಣಿನ ಸೇವನೆ ಮಾಡು ವುದರಿಂದ ಚರ್ಮದ ಜೋತು ಬೀಳುವಿಕೆ, ಸುಕ್ಕುಗಳ ಸಮಸ್ಯೆ ನಿವಾರಣೆ ಆಗಲಿದೆ.ಹಾಗೆಯೇ ಚರ್ಮ ಗಡಸುತನವಿಲ್ಲದೆ ಮೃದುವಾಗುವಂತೆ ಮಾಡಲಿದೆ.
ಗೆಣಸಿನ ಸೇವನೆ:
ಸಿಹಿಯಾದ ಗೆಣಸಿನಲ್ಲಿ ವಿಟಮಿನ್ ಎ ಮತ್ತು ಬೀಟಾ ಕ್ಯಾರಟಿನ್ ಅಂಶ ಹೇರಳವಾಗಿ ಇರಲಿದೆ ಹಾಗಾಗಿ ಚರ್ಮ ಮತ್ತು ಉಗುರಿಗೆ ಬೇಕಾದ ಪೋಷಕಾಂಶ ಒದಗಿಸಿ ದಂತಾಗಲಿದೆ. ಇದು ಚರ್ಮದ ಶುಷ್ಕತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಮತ್ತು ಗೆಣಸಿನ ಸೇವನೆ ಔಷಧೀಯ ವಿಧಾನದಂತೆ ಕಾರ್ಯ ನಿರ್ವಹಿಸಲಿದೆ.
ಸೊಪ್ಪುಗಳನ್ನು ಸೇವಿಸಿ:
ಹಸಿರೆಲೆ ತರಕಾರಿಗಳ ಸೇವನೆ ಮಾಡಿದರೆ ದೇಹದ ಆರೋಗ್ಯದ ಮೇಲೆ ಅನೇಕ ಪ್ರಯೋಜನೆಯನ್ನು ನೀವು ಪಡೆಯಬಹುದು. ಪಾಲಕ್ , ಹರಿವೆ, ಬಸಲೆ ಇತರ ಹಸಿರೆಲೆ ತರಕಾರಿಗಳಲ್ಲಿ ವಿಟಮಿನ್ ಪ್ರಮಾಣ ಅಧಿಕವಿದೆ. ಹೀಗಾಗಿ ಕಬ್ಬಿಣದ ಕೊರತೆಯಿಂದ ಉಂಟಾಗುವ ಚರ್ಮದ ಕಾಂತಿಯ ಸಮಸ್ಯೆ, ಸೀಳು ಕೂದಲು ಮತ್ತು ತೆಳು ಉಗುರುಗಳ ಉಪಶಮನ ಆಗಲಿದೆ. ಅದರೊಂದಿಗೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ಈ ಆಹಾರ ಕ್ರಮ ಬಹಳ ಅನುಕೂಲ ಆಗಲಿದೆ.
ಡ್ರೈಫ್ರೂಟ್ಸ್ ಸೇವನೆ:
ಡ್ರೈಫ್ರೂಟ್ಸ್ ಗಳಾದ ಬಾದಾಮಿ, ವಾಲ್ನೆಟ್, ಬ್ರೆಜಿಲ್ ಬೀಜಗಳಲ್ಲಿ ವಿಟಮಿನ್ ಇ, ಬಯೋಟಿನ್, ಸತ್ವ ಅಂಶಗಳು ಹೇರಳವಾಗಿವೆ. ಹಾಗಾಗಿ ಇದು ಜೀವಕೋಶಗಳ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿ ಕೂದಲು ಮತ್ತು ಚರ್ಮದ ಆರೈಕೆ ಮೇಲೆ ಉಪಯುಕ್ತ ವಿಧಾನದಂತೆ ಪರಿಣಾಮ ಬೀರಲಿದೆ.
ಮೊಟ್ಟೆಯ ಸೇವನೆ:
ಮೊಟ್ಟೆಯಲ್ಲಿ ಕೆರಟಿನ್ ಆಮ್ಲಗಳ ಪ್ರಮಾಣ ಹೇರಳವಾಗಿದ್ದು ಕೂದಲು ಮತ್ತು ಉಗುರಿನ ಆರೈಕೆಗೆ ಬಹಳ ಪ್ರಯೋಜನಕಾರಿಯಾಗಲಿದೆ. ಮೊಟ್ಟೆಯನ್ನು ವಾರಕ್ಕೆ 3-5ರಂತೆ ಸೇವಿಸಿದರೆ ಕೂದಲು ಉದುರುವಿಕೆ, ತೆಳುವಾದ ಕೂದಲಿನ ಸಮಸ್ಯೆ ನಿವಾರಣೆ ಆಗಲಿದೆ. ಹಾಗೆಯೇ ಆರೋಗ್ಯ ಕರ ನೆತ್ತಿಯ ಆರೋಗ್ಯವನ್ನು ಉತ್ತೇಜಿಸಲಿದೆ.
ಡಾರ್ಕ್ ಚಾಕಲೇಟ್ ಸೇವನೆ:
ಆ್ಯಂಟಿ ಆಕ್ಸಿಡೆಂಟ್ ಲೆವೆಲ್ ಹೆಚ್ಚಿಸಲು ಚರ್ಮದ ರಕ್ತದ ಹರಿವನ್ನು ಉತ್ತೇಜಿಸಲು ಬಹಳ ಸಹಕಾರಿ ಯಾಗಲಿದೆ .ಹಾಗಾಗಿ ಪ್ರತಿದಿನ ಒಂದು ಅಥವಾ ಎರಡು ಚಾಕಲೇಟ್ ಸೇವನೆ ಮಾಡಿದರೆ ಚರ್ಮ,ಕೂದಲಿನ ಆರೈಕೆ ಮೇಲೆ ಇದು ಬಹಳ ಉತ್ತಮ ಪರಿಣಾಮ ಬೀರಲಿದೆ.
ಇದನ್ನು ಓದಿ: Summer Health Tips: ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು ಇಲ್ಲಿವೆ ತಜ್ಞರ ಸಲಹೆ!
ಧಾನ್ಯಗಳ ಸೇವನೆ:
ಓಟ್ಸ್ , ಧಾನ್ಯಗಳ ಬಿ ಸತ್ವಹೊಂದಿದ್ದು ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಇಂತಹ ಧಾನ್ಯ ಸೇವಿಸುವುದರಿಂದ ಉಗುರಿನ ಬೆಳವಣಿಗೆ ಹೆಚ್ಚಾಗಲಿದೆ. ಬೆಳಗ್ಗೆ ಓಟ್ಸ್ ಅನ್ನು ಹಾಲಿನ ಜೊತೆ ಸೇವಿಸುದರಿಂದ ದೇಹದ ಆರೋಗ್ಯಕ್ಕೆ ಅನೇಕ ಪ್ರಯೋಜನೆ ಸಿಗಲಿದೆ.
ಈ ಆಹಾರ ಸೇವಿಸದಿರಿ:
ಚರ್ಮದ ಆರೋಗ್ಯ ಕಾಳಜಿ ಹೊಂದಿದ್ದವರು ಮದ್ಯ ಸೇವನೆ ಮಾಡಬಾರದು. ಆಲ್ಕೋಹಾಲ್ ಸೇವನೆಯಿಂದ ಚರ್ಮವು ನಿರ್ಜಲೀಕರಣ ಗೊಳ್ಳಲಿದೆ. ಹಾಗೆಯೇ ಹಳಸಿದ ಆಹಾರ ಸೇವಿಸಬಾರದು. ಸಂಸ್ಕರಿಸಿ ಬಹುಕಾಲ ಇಟ್ಟ ಆಹಾರವನ್ನು ಕೂಡ ತುಂಬಾ ತಡವಾಗಿ ಸೇವಿಸುವುದು ಕೂಡ ಒಳ್ಳೆಯ ವಿಧಾನವಲ್ಲವಾಗಿದೆ. ಆಹಾರ ಸೇವನೆ ಜೊತೆಗೆ ನಿಯಮಿತ ವ್ಯಾಯಾಮ, ಅಧಿಕ ನೀರಿನ ಸೇವನೆ ಮತ್ತು ಎಣ್ಣೆ ಇತರವುಗಳಿಂದ ಆಗಾಗ ಮಸಾಜ್ ಮಾಡಿದರೆ ಕೂಡ ಕೂದಲು, ಚರ್ಮ ಕಾಂತಿ ಯುಕ್ತವಾಗಲಿದೆ.