LPG Shortage: ಗೃಹಬಳಕೆ ಎಲ್‌ಪಿಜಿ ಡೆಲಿವರಿಯೂ ವಿಳಂಬ; ಬುಕಿಂಗ್ ಮಾಡಿ ವಾರವಾದ್ರೂ ಸಿಗುತ್ತಿಲ್ಲ ಗ್ಯಾಸ್ ಸಿಲಿಂಡರ್!
Domestic LPG cylinder: ಮಧ್ಯಪ್ರಾಚ್ಯದಲ್ಲಿ ಯುದ್ಧ ಹಿನ್ನೆಲೆಯಲ್ಲಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಗ್ಯಾಸ್ ಪ್ಲಾಂಟ್‌ಗಳಲ್ಲಿ ಅನಿಲ ಕೊರತೆ ಹಿನ್ನೆಲೆಯಲ್ಲಿ ನೆಲಮಂಗಲ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗೂ ನಿಂತಲ್ಲೇ ನಿಂತಿವೆ. ಇದರಿಂದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಗ್ಯಾಸ್ ಸಿಲಿಂಡರ್ (ಸಂಗ್ರಹ ಚಿತ್ರ). -
ಬೆಂಗಳೂರು: ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ಇದೀಗ ಭಾರತಕ್ಕೂ ತಟ್ಟಿದೆ. ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಕೊರತೆಯಿಂದ (LPG Shortage) ಹೋಟೆಲ್, ರೆಸ್ಟೋರೆಂಟ್‌ಗಳು ಬಂದ್ ಆಗುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಇದೀಗ ಗೃಹಬಳಕೆ ಗ್ಯಾಸ್ ಸಿಲಿಂಡರ್ ಸರಬರಾಜಿಗೂ ಕಠಿಣ ನಿಯಮಗಳನ್ನು ವಿಧಿಸಲು ಗ್ಯಾಸ್ ಏಜೆನ್ಸಿಗಳು ವಿಧಿಸಿದ್ದು, ಇನ್ನುಮುಂದೆ ತಿಂಗಳಿಗೊಂದೇ ಗ್ಯಾಸ್ ಸಿಗಲಿದೆ.
ಬೆಂಗಳೂರಿನಲ್ಲಿ ಹಲವೆಡೆ ಬುಕಿಂಗ್ ಮಾಡಿ ವಾರವಾದರೂ ಗ್ಯಾಸ್ ಸಿಗುತ್ತಿಲ್ಲ. ಈ ಮೊದಲು ಬುಕ್ ಮಾಡಿದ ಒಂದೆರಡು ದಿನಗಳಲ್ಲಿ ಸಿಲಿಂಡರ್ ಸಿಗುತ್ತಿತ್ತು. ಆದರೆ ಈಗ ವಾರದಿಂದ 15 ದಿನಗಳೂ ಆಗಬಹುದು ಎನ್ನಲಾಗಿದೆ. ಇದರಿಂದ ಗ್ರಾಹಕರು ಪರದಾಡುವಂತಾಗಿದೆ.
ಇನ್ನು ಗ್ಯಾಸ್ ಸರಬರಾಜು ಇಲ್ಲದೆ ಲಾರಿಗಳು ಹೆದ್ದಾರಿಯಲ್ಲಿ ನಿಂತಲ್ಲೇ ನಿಂತಿವೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ಹಿನ್ನೆಲೆಯಲ್ಲಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಗ್ಯಾಸ್ ಪ್ಲಾಂಟ್‌ಗಳಲ್ಲಿ ಅನಿಲ ಕೊರತೆ ಹಿನ್ನೆಲೆಯಲ್ಲಿ ನೆಲಮಂಗಲ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗೂ ನಿಂತಲ್ಲೇ ನಿಂತಿವೆ.
ಬುಕಿಂಗ್ ಅವಧಿ 21 ರಿಂದ 25 ದಿನಗಳಿಗೆ ಹೆಚ್ಚಳ
ನವದೆಹಲಿ: ಎಲ್‌ಪಿಜಿ ಸಿಲಿಂಡರ್‌ಗಳ ಕೃತಕ ಅಭಾವ ಮತ್ತು ಕಾಳಸಂತೆಯಲ್ಲಿ ಮಾರಾಟ ತಡೆಗಟ್ಟಲು ಕೇಂದ್ರ ಸರ್ಕಾರ ಬುಕಿಂಗ್ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಿದೆ (LPG Cylinder booking gap). ಅದೇ ರೀತಿ ಸರ್ಕಾರವು ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಸಂಸ್ಕರಣಾಗಾರಗಳಿಗೆ ಆದೇಶಿಸಿದೆ. ಕೆಲವು ಗ್ರಾಹಕರು ಸಾಮಾನ್ಯಕ್ಕಿಂತ ಹೆಚ್ಚು ಸಿಲಿಂಡರ್ ಬುಕ್ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ಅಡುಗೆ ಅನಿಲಗಳ ನ್ಯಾಯಯುತ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ನಿಜವಾದ ಗೃಹ ಬಳಕೆದಾರರಿಗೆ ಅನಿಯಂತ್ರಿತ ಪೂರೈಕೆಯನ್ನು ಮುಂದುವರಿಸುವ ಉದ್ದೇಶದಿಂದ ಈ ನಿಯಮ ಪರಿಚಯಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ದೇಶಾದ್ಯಂತ LPG ಸಿಲಿಂಡರ್ ಕೊರತೆ; ಅಗತ್ಯ ಸರಕುಗಳ ಕಾಯ್ದೆ ಜಾರಿಗೊಳಿಸಿದ ಕೇಂದ್ರ ಸರ್ಕಾರ
ಈ ಹಿಂದೆ 55 ದಿನಗಳಿಗೆ ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡುತ್ತಿದ್ದ ಗ್ರಾಹಕರು ಇದೀಗ 15 ದಿನಗಳಿಗೇ ಬೇಡಿಕೆ ಇಡುತ್ತಿರುವುದು ಕಂಡುಬಂದಿದೆ. ಹೀಗಾಗಿ ಹೊಸ ನಿಯಮಗಳ ಪ್ರಕಾರ ಸಿಲಿಂಡರ್ ಬುಕ್ ಮಾಡಿದ ನಂತರ, ನೀವು ಎರಡನೆಯ ಸಿಲಂಡರ್‌ಗಾಗಿ ಕನಿಷ್ಠ 25 ದಿನಗಳು ಕಾಯಬೇಕಾಗುತ್ತದೆ.