ಬೆಂಗಳೂರು, ಫೆ. 23: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾರೇ ಸ್ನೇಹಿತರು, ಪರಿಚಿತರು ಸಿಕ್ಕಾಗ ಎರಡು ಕೈಗಳನ್ನು ಜೋಡಿಸಿ ನಮಸ್ಕರಿಸುವ ಮೂಲಕ ಗೌರವ ನೀಡಿ ಸ್ವಾಗತಿಸುತ್ತೇವೆ. ಕೈಗಳನ್ನು ಜೋಡಿಸಿ ಮಾಡುವ ಸರಳ ಯೋಗ (Namaskar Tradition) ಭಂಗಿ ಇದಾಗಿದೆ. ಎರಡೂ ಕೈಗಳನ್ನು ಜೋಡಿಸುವುದು ನಮ್ಮ ಸಂಸ್ಕೃತಿಯಲ್ಲಿ ನೀಡುವ ಗೌರವ ಆಗಿದ್ದರೂ ಇದು ಆಚರಣೆಯ ದೃಷ್ಟಿಯಿಂದ ಮಾತ್ರವಲ್ಲ, ಆರೋಗ್ಯಕ್ಕೂ ಕೂಡ ಒಳ್ಳೆಯದು. ಇದರಿಂದ ದೇಹದಲ್ಲಿ ಹಲವು ಬದಲಾವಣೆಗಳು ಉಂಟಾಗಲಿದೆ. ಈ ಬಗ್ಗೆ ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಪ್ರೊ. ಸುತ್ತೂರು ಮಾಲಿನಿ ಮಾಹಿತಿ ನೀಡಿದ್ದಾರೆ.
ಕೋವಿಡ್ ಸಮಯದಲ್ಲಿ ಹಸ್ತಲಾಘವ ಕಡಿಮೆ ಮಾಡಿ ಎರಡು ಕೈಗಳನ್ನು ಮುಗಿದು ನಮಸ್ಕಾರ ಮಾಡುವ ಪದ್ಧತಿಯನ್ನು ಹೆಚ್ಚಿನವರು ಅನುಸರಿಸಿದ್ದಾರೆ. ಬ್ಯಾಕ್ಟೀರಿಯಾಗಳು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಹರಡುತ್ತವೆ ಎನ್ನುವ ಕಾರಣಕ್ಕೆ ನಮಸ್ಕಾರ ಮುದ್ರೆಗೆ ಹೆಚ್ಚಿನ ಒಲವು ತೋರಿಸಿದ್ದಾರೆ. ಇದರಿಂದ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಕಡಿಮೆ. ಜತೆಗೆ ಹಲವು ಆರೋಗ್ಯ ಲಾಭವನ್ನು ಕೂಡ ಈ ಭಂಗಿ ನೀಡುತ್ತದೆ.
ವಿಡಿಯೊ ನೋಡಿ:
ಅದೇ ರೀತಿ ಈ ಭಂಗಿಯು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಮೆದುಳಿನ ಎಡ ಮತ್ತು ಬಲ ಭಾಗವನ್ನು ಸಕ್ರಿಯಗೊಳಿಸುವಂತೆ ಮಾಡಲು ಸಹಾಯಕವಾಗುತ್ತದೆ. ಕೈಗಳ ಎಲ್ಲ ಬೆರಳುಗಳ ತುದಿ ಪರಸ್ಪರ ಸಂಪರ್ಕಕ್ಕೆ ಬಂದಾಗ ವೇಗಸ್ ನರ್ವ್ ಕೂಡ ಆ್ಯಕ್ಟಿವ್ ಆಗುತ್ತದೆ ಎಂದು ತಿಳಿಸಿದ್ದಾರೆ.
ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ?
ದೇಹದ ಆಕ್ಯುಪ್ರೆಶರ್ ಅನ್ನು ಕಾಪಾಡಿ ಎನರ್ಜಿಯನ್ನು ಸಕ್ರಿಯಗೊಳಿಸುತ್ತದೆ. ಇದು ನಮ್ಮ ಜ್ಞಾನೇಂದ್ರಿಯಗಳನ್ನು ಉತ್ತೇಜಿಸಿ ಕಿವಿ, ಕಣ್ಣು ಮತ್ತು ಮೆದುಳಿನ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಹಾಗೆಯೇ ಕೈಮುಗಿಯುವುದರಿಂದ ನರಗಳು ಕ್ರಿಯಾಶೀಲವಾಗಿ ದೇಹದಲ್ಲಿ ಖುಷಿಯ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತವೆ ಎಂದು ಪ್ರೊ. ಮಾಲಿನಿ ವಿವರಿಸಿದ್ದಾರೆ.
ಇನ್ನು ಎರಡೂ ಕೈಗಳನ್ನು ಜೋಡಿಸಿದಾಗ ಹೃದಯ ಚಕ್ರ ಕೂಡ ಸಕ್ರಿಯಗೊಳ್ಳುತ್ತದೆ. ಇದರಿಂದ ರಕ್ತ ಸಂಚಾರ ಸರಿಯಾಗಿ ಆಗಿ ನಿಮ್ಮ ಹೃದಯವು ಬಲಗೊಳ್ಳುತ್ತದೆ.