ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಳಿಗಾಲದ ಸೂಪರ್‌ಫುಡ್ 'ಸಿಹಿಗೆಣಸು' ಇದರ ಅದ್ಭುತ ಆರೋಗ್ಯ ಪ್ರಯೋಜನಗಳು ಏನು?

Sweet Potato: ಸಿಹಿ ಗೆಣಸಿನಲ್ಲಿ ಹೆಚ್ಚು ಪೌಷ್ಟಿಕಾಂಶವಿದೆ. ಅದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಮ್ಯಾಂಗನೀಸ್‌ನಿಂದ ಪ್ರಮಾಣ ಹೇರಳವಾಗಿದ್ದು ಇದರ ಸೇವನೆಯಿಂದ ದೇಹದ ಆರೋಗ್ಯಕ್ಕೆ ಅನೇಕ ಪ್ರಯೋಜನೆ ಸಿಗಲಿದೆ. ಸಿಹಿ ಗೆಣಸಿನಲ್ಲಿ ಕ್ಯಾನ್ಸರ್ ನಿರ್ಮೂಲನೆಯ ಪೌಷ್ಟಿಕಾಂಶ ಇದೆ ಎಂದು ಅಧ್ಯಯನ ಗಳಲ್ಲಿಯೂ ತಿಳಿಸಲಾಗಿದೆ. ಹಾಗಾದರೆ ಸಿಹಿಗೆಣಸಿನಿಂದ ಯಾವೆಲ್ಲ ಆರೋಗ್ಯ ಪ್ರಯೋಜನೆ ಸಿಗುತ್ತದೆ ಎಂಬ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನ ಓದಿ.

ಬೆಲೆ ಕಡಿಮೆಯಾದರೂ ಪೌಷ್ಟಿಕಾಂಶ ಹೆಚ್ಚು; ಸಿಹಿಗೆಣಸಿನ ಲಾಭ ತಿಳಿಯಿರಿ!

ಸಂಗ್ರಹ ಚಿತ್ರ -

Profile
Pushpa Kumari Dec 28, 2025 6:00 AM

ಬೆಂಗಳೂರು, ಡಿ. 27: ಈಗಂತೂ ಚಳಿಗಾಲದ ಹವಾಮಾನಕ್ಕೆ ವಾತಾವರಣ ಸಂಪೂರ್ಣ ಬದಲಾಗಿದ್ದು ಹವಾಮಾನ ವೈಪರಿತ್ಯದಿಂದ ಶೀತ , ಕೆಮ್ಮು, ಜ್ವರ ಇತರ ವೈರಲ್ ಜ್ವರಗಳು ಕಂಡು ಬರುವ ಪ್ರಮಾಣ ಹೆಚ್ಚಾಗಿದೆ‌. ಹೀಗಾಗಿ ಈ ಕಾಲದಲ್ಲಿ ಚಳಿಗಾಲಕ್ಕೆ ಒಗ್ಗಿಕೊಳ್ಳುವ ಆಹಾರ ಕ್ರಮಕ್ಕೆ ಅಧಿಕ ಪ್ರಾತಿನಿಧ್ಯ ನೀಡಬೇಕು. ಇದರಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಅದರ ಜೊತೆಗೆ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಸಿಗುವ ಕಾರಣ ಕೆಲವು ಸಾಂಕ್ರಾಮಿಕ ರೋಗ ಬರಲಾರದು. ಅಂತಹ ಆಹಾರದಲ್ಲಿ ಸಿಹಿಗೆಣಸು (Sweet Potato) ಕೂಡ ಒಂದು.

ಸಿಹಿ ಗೆಣಸಿನಲ್ಲಿ ಹೆಚ್ಚು ಪೌಷ್ಟಿಕಾಂಶವಿದೆ. ಅದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಮ್ಯಾಂಗನೀಸ್‌ನಿಂದ ಪ್ರಮಾಣ ಹೇರಳವಾಗಿದ್ದು ಇದರ ಸೇವನೆಯಿಂದ ದೇಹದ ಆರೋಗ್ಯಕ್ಕೆ ಅನೇಕ ಪ್ರಯೋಜನೆ ಸಿಗಲಿದೆ. ಸಿಹಿ ಗೆಣಸಿನಲ್ಲಿ ಕ್ಯಾನ್ಸರ್ ನಿರ್ಮೂಲನೆಯ ಪೌಷ್ಟಿಕಾಂಶ ಇದೆ ಎಂದು ಅಧ್ಯಯನ ಗಳಲ್ಲಿಯೂ ತಿಳಿಸಲಾಗಿದೆ. ಹಾಗಾದರೆ ಸಿಹಿಗೆಣಸಿನಿಂದ ಯಾವೆಲ್ಲ ಆರೋಗ್ಯ ಪ್ರಯೋಜನೆ ಸಿಗುತ್ತದೆ ಎಂಬ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನ ಓದಿ.

ಈ ಆರೋಗ್ಯ ಪ್ರಯೋಜನಗಳು ಸಿಗಲಿದೆ.

*ಸಿಹಿ ಗೆಣಸಿನಲ್ಲಿ ಕರಗುವ ಮತ್ತು ಕರಗದ ಎರಡು ರೀತಿಯ ಫೈಬರ್ ಅಂಶ ಇರಲಿದೆ. ಹೆಚ್ಚಿನ ಫೈಬರ್ ಅಂಶವು ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯಲು ಕೂಡ ಸಹಾಯ ಮಾಡುತ್ತದೆ.

*ಹೆಚ್ಚಿನ ವಿಟಮಿನ್ ಸಿ ಅಂಶವಿದ್ದು ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

*ಮಧುಮೇಹ ನಿಯಂತ್ರಣವಾಗಿ ಪರಿಣಾಮಕಾರಿಯಾಗಿದೆ. ಸಿಹಿಯಾಗಿದ್ದರೂ ಸಹ, ಇದರ 'ಗ್ಲೈಸೆಮಿಕ್ ಇಂಡೆಕ್ಸ್' ಕಡಿಮೆ ಇರುವುದರಿಂದ ಇದು ಸಕ್ಕರೆ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುವುದಿಲ್ಲ ಹೀಗಾಗಿ ಡಯಾಬಿಟಿಸ್ ಕಂಟ್ರೋಲ್ ಆಗಲಿದೆ.

*ಸಿಹಿ ಗೆಣಸು ವಿಟಮಿನ್ ಎ ಮತ್ತು ಸಿ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ6, ಮ್ಯಾಂಗನೀಸ್ ಮತ್ತು ನಿಯಾಸಿನ್ ಹಾಗೂ ನಾರಿನ ಅಂಶ ಇದ್ದ ಕಾರಣ ಹೆಚ್ಚಿನ ಆರೋಗ್ಯ ಪ್ರಯೋಜನೆ ಸಿಗಲಿದೆ.

*ಸಿಹಿ ಗೆಣಸಿನಲ್ಲಿ ಬೀಟಾ-ಕ್ಯಾರೋಟಿನ್ ಅಂಶ ಇದ್ದು ಇದರಿಂದಾಗಿ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಲಿದೆ.

*ಸಿಹಿ ಗೆಣಸಿನಲ್ಲಿರುವ ಜೀವಸತ್ವಗಳು ವಯಸ್ಸಿಗೆ ಸಂಬಂಧಿಸಿದ ದೃಷ್ಟಿ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

*ಇದು ಉತ್ಕರ್ಷಣ ನಿರೋಧಕವಾಗಿದ್ದು ಚರ್ಮದ ಆರೋಗ್ಯವನ್ನು ಸುಧಾರಿಸಲಿದೆ.

*ಸಿಹಿಗೆಣಸು ತಿಂದಾಗ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ಪದೇ ಪದೇ ಹಸಿವಾಗುವುದು ಕಡಿಮೆಯಾಗಿ, ತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಹಾರವಾಗಿದೆ.

*ನೈಸರ್ಗಿಕವಾಗಿ ಗ್ಲುಟನ್-ಮುಕ್ತವಾಗಿರುವುದರಿಂದ ಉದರದ ಕಾಯಿಲೆ (ಹೊಟ್ಟೆ ನೋವು) ಇರುವವರಿಗೆ ಈ ಆಹಾರ ಚಳಿಗಾಲಕ್ಕೆ ಉತ್ತಮ ಆಯ್ಕೆಯಾಗಿದೆ.

Health Tips: ಚಳಿ ಚಳಿ ತಾಳೆನು ಈ ಚಳಿಯ...ಚಳಿಯಿಂದ ನಿಮ್ಮ ಅರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ

ಯಾವ ರೀತಿ ಸೇವಿಸಬಹುದು?

*ಬೇಯಿಸಿದ ಸಿಹಿ ಗೆಣಸನ್ನು ಶುಂಠಿ ಮತ್ತು ಅರಿಶಿನದಂತಹ ಮಸಾಲೆಗಳೊಂದಿಗೆ ಸೂಪ್ ಆಗಿ ಕೂಡ ಸೇವನೆ ಮಾಡಬಹುದು.

*ಹುರಿದ ಅಥವಾ ಬೇಯಿಸಿದ ಸಿಹಿ ಗೆಣಸನ್ನು ತೆಗೆದುಕೊಂಡು ಸಿಪ್ಪೆ ತೆಗೆದ ನಂತರ ಸಣ್ಣ ತುಂಡುಗಳಾಗಿ ಕತ್ತರಿಸಿ. ಕತ್ತರಿಸಿದ ಈರುಳ್ಳಿ, ಟೊಮೆಟೊ ಮತ್ತು ಚಾಟ್ ಮಸಾಲಾದೊಂದಿಗೆ ಬೆರೆಸಬೇಕು. ಸ್ವಲ್ಪ ಉಪ್ಪು ಮತ್ತು ನಿಂಬೆ ರಸವನ್ನು ಸಿಂಪಡಿಸಿ ಚಾಟ್ ಮಾಡಿ ಸೇವಿಸಬಹುದು.

* ಸಿಹಿ ಗೆಣಸಿನ ಕಟ್ ಮಾಡಿ ಅದಕ್ಕೆ ಸಾಸಿವೆ ಒಗ್ಗರಣೆ ಹಾಕಿ ಸೇವನೆ ಮಾಡಬಹುದು.

*ಬೇಯಿಸಿದ ಸಿಹಿ ಗೆಣಸನ್ನು ಸ್ವಲ್ಪ ತುಪ್ಪ ಮತ್ತು ಬೆಲ್ಲದೊಂದಿಗೆ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ, ಬಿಸಿ ಬಿಸಿಯಾಗಿ ಸವಿಯಿರಿ. ಬೆಲ್ಲವನ್ನು ಮಿತವಾಗಿ ಬಳಸಿ.

*ಕಾಯಿ ಹಾಲಿನ ಜೊತೆಗೂ ಸಿಹಿ ಗೆಣಸನ್ನು ಸೇವನೆ ಮಾಡಬಹುದು.

*ಸಿಹಿ ಗೆಣಸಿನ ಕಟ್ಲೆಟ್ , ಪೊಡಿ ಕೂಡ ಅಪರೂಪವಾಗಿ ಸೇವನೆ ಮಾಡಬಹುದು.

ಒಟ್ಟಿನಲ್ಲಿ ಸಿಹಿ ಗೆಣಸು ಕೇವಲ ಒಂದು ಸಾಧಾರಣ ಗೆಡ್ಡೆಯಲ್ಲ ಬದಲಾಗಿ ಇದು ಪೋಷಕಾಂಶಗಳ ಗಣಿಯಾಗಿದೆ. ಕಡಿಮೆ ವೆಚ್ಚದಲ್ಲಿ ಸಿಗುವ ಈ ಸೂಪರ್ ಫುಡ್, ಮಧುಮೇಹಿಗಳಿಗೂ ಹಾಗೂ ಸಣ್ಣ ಮಕ್ಕಳಿಗೂ ಅತ್ಯುತ್ತಮ ಆಹಾರವಾಗಿದೆ. ​ನಮ್ಮ ಆಧುನಿಕ ಆಹಾರ ಪದ್ಧತಿಯಲ್ಲಿ ಜಂಕ್ ಫುಡ್‌ಗಳ ಬದಲಾಗಿ, ಇಂತಹ ನೈಸರ್ಗಿಕ ಮತ್ತು ಪೌಷ್ಟಿಕ ಆಹಾರಗಳನ್ನು ಅಳವಡಿಸಿ ಕೊಳ್ಳುವುದು ಇಂದಿಗೆ ಅಗತ್ಯವಾಗಿದೆ.