ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಯಾವ ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಸೂಕ್ತ?

Exercise for health: ವ್ಯಾಯಾಮವನ್ನು ಅತಿ ಸ್ಥೂಲವಾಗಿ ವಿಂಗಡಿಸಬಹುದಾದರೆ ಏರೋಬಿಕ್‌ ಮತ್ತು ಅನರೋಬಿಕ್‌ ಎನ್ನಬಹುದು. ಅಂದರೆ ಏರೋಬಿಕ್‌ ವ್ಯಾಯಾಮಗಳನ್ನು ಕಾರ್ಡಿಯೊ ಮಾದರಿಗಳೆಂದು ಕರೆಯಬಹುದು. ಅಂದರೆ ನಮ್ಮ ಇಡೀ ದೇಹಕ್ಕೆ ರಕ್ತಪರಿಚಲನೆ ಯನ್ನು ಹೆಚ್ಚಿಸಿ, ಇದಕ್ಕಾಗಿ ಹೆಚ್ಚು ಕೆಲಸ ಮಾಡುವಂತೆ ನಮ್ಮ ಹೃದಯವನ್ನು ಪ್ರೇರೇಪಿಸುತ್ತದೆ. ಹಾಗಾದರೆ ಮಾಡುವ ವ್ಯಾಯಾಮ ಹೇಗಿರಬೇಕು ಎಂಬುದನ್ನು ತಿಳಿಯುವ ಬಗೆ ಹೇಗೆ? ಯಾರಿಗೆ ಯಾವ ರೀತಿಯ ವ್ಯಾಯಾಮ ಸೂಕ್ತ ಎಂಬುದನ್ನು ತಿಳಿಯುವುದು ಹೇಗೆ?

physical Exercise for health

ನವದೆಹಲಿ: ವ್ಯಾಯಾಮ ಮಾಡಲು ಎಲ್ಲರಿಗೂ ಉತ್ಸಾಹ ವಿರುತ್ತದೆ, ಆದರೆ ಸಮಯ ಇರುವುದಿಲ್ಲ. ತೂಕ ಇಳಿಸುವ ಬಗ್ಗೆ ಹಲವು ರೀತಿಯ ಪ್ರತಿಜ್ಞೆ ಮಾಡುತ್ತೇವೆ, ಬಿಗಿಯಾಗಿ ಹಾಕಲಾಗದ ವಸ್ತ್ರಗಳತ್ತ ಆಸೆಗಣ್ಣು ಬೀರುತ್ತೇವೆ. ಆದರೆ ಎಂಥಾ ವ್ಯಾಯಾಮ ಗಳನ್ನು ಮಾಡಿದರೂ ನಮ್ಮ ಗುರಿಯನ್ನು ತಲುಪಲು ಆಗು ವುದಿಲ್ಲ. ಆಹಾರಕ್ರಮದ ಬಗ್ಗೆ ಹೇಳಲು ಹೋದರೆ ಅದೇ ದೊಡ್ಡ ಕಥೆ ಯಾಗುವುದರಿಂದ ಬೇಡ, ಬಿಡಿ. ಹಾಗಾದರೆ ಮಾಡುವ ವ್ಯಾಯಾಮ (Exercise) ಹೇಗಿರಬೇಕು ಎಂಬುದನ್ನು ತಿಳಿಯುವ ಬಗೆ ಹೇಗೆ? ಯಾರಿಗೆ ಯಾವ ರೀತಿಯ ವ್ಯಾಯಾಮ ಸೂಕ್ತ ಎಂಬುದನ್ನು ತಿಳಿಯುವುದು ಹೇಗೆ?

ವ್ಯಾಯಾಮವನ್ನು ಅತಿ ಸ್ಥೂಲವಾಗಿ ವಿಂಗಡಿಸಬಹುದಾದರೆ ಏರೋಬಿಕ್‌ ಮತ್ತು ಅನರೋಬಿಕ್‌ ಎನ್ನಬಹುದು. ಅಂದರೆ ಏರೋಬಿಕ್‌ ವ್ಯಾಯಾಮಗಳನ್ನು ಕಾರ್ಡಿಯೊ ಮಾದರಿಗಳೆಂದು ಕರೆ ಯಬಹುದು. ಅಂದರೆ ನಮ್ಮ ಇಡೀ ದೇಹಕ್ಕೆ ರಕ್ತಪರಿಚಲನೆ ಯನ್ನು ಹೆಚ್ಚಿಸಿ, ಇದಕ್ಕಾಗಿ ಹೆಚ್ಚು ಕೆಲಸ ಮಾಡುವಂತೆ ನಮ್ಮ ಹೃದಯವನ್ನು ಪ್ರೇರೇಪಿಸುತ್ತದೆ. ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಿ, ಅದಕ್ಕಾಗಿ ದೇಹದೆಲ್ಲ ಅಂಗಗಳೂ ಕ್ರಿಯಾಶೀಲವಾಗಿ ಇರುವಂತೆ ಮಾಡಿ, ಇಡೀ ದೇಹಕ್ಕೆ ಸುಸ್ಥಿರವಾದ ಶಕ್ತಿಯನ್ನು ಪೂರೈಕೆ ಮಾಡುವಂಥ ವ್ಯಾಯಾಮ ಗಳಿವು. ನಮ್ಮ ಸ್ನಾಯು ಗಳು, ಶ್ವಾಸಕೋಶ, ಹೃದಯ ಮುಂತಾದ ಅಂಗಗಳನ್ನು ಬಲಗೊಳಿಸುತ್ತವೆ. ಇದರಲ್ಲಿ ಉಸಿರಾಟದ ರೀತಿಯೂ ಅನರೋಬಿಕ್‌ ವ್ಯಾಯಾಮಕ್ಕಿಂತ ಭಿನ್ನವಾಗಿಯೇ ಇರುತ್ತದೆ.

ಏನು ಹಾಗೆಂದರೆ?: ಯಾವೆಲ್ಲಾ ವ್ಯಾಯಾಮಗಳನ್ನು ಏರೋಬಿಕ್‌ ಅಥವಾ ಕಾರ್ಡಿಯೊ ಮಾದರಿ ಯದ್ದೆಂದು ಕರೆಯಬಹುದು? ನಡಿಗೆ, ಜಾಗಿಂಗ್‌, ಈಜು, ಸೈಕ್ಲಿಂಗ್‌ ಮತ್ತು ಮಧ್ಯಮ ತೀವ್ರತೆಯ ಬಹುತೇಕ ವ್ಯಾಯಾಮಗಳು ಏರೋಬಿಕ್‌ ಎನಿಸಿಕೊಳ್ಳುತ್ತವೆ. ರಕ್ತದ ಒತ್ತಡ ಮತ್ತು ಮಧುಮೇಹ ನಿಯಂತ್ರಣಕ್ಕೆ, ದೇಹದ ಶಕ್ತಿ ವರ್ಧನೆಗೆ, ಸ್ನಾಯುಗಳ ಸಾಮರ್ಥ್ಯ ಹೆಚ್ಚಳಕ್ಕೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು- ಹೀಗೆ ಹಲವಾರು ಪ್ರಯೋಜನ ಗಳು ಈ ವ್ಯಾಯಾಮಗಳಿಗೆ ಇವೆ. ಮಧುಮೇಹಿಗಳು, ಹೃದ್ರೋಗಿ ಗಳು, ಯಾವುದೇ ವಯಸ್ಸಿನವರು, ಅಲ್ಪಸ್ವಲ್ಪ ತೂಕ ಇಳಿಸುವ ಉದ್ದೇಶದವರು, ಸುಮ್ಮನೆ ದೇಹವನ್ನು ಚಟುವಟಿಕೆಯಲ್ಲಿ ಇರಿಸಬಯಸುವವರು - ಹೀಗೆ ಯಾವುದೇ ಉದ್ದೇಶಕ್ಕೆ ವ್ಯಾಯಾಮ ಮಾಡುವವರಿಗೂ ಹೊಂದುವಂಥ ವ್ಯಾಯಾಮ ಗಳನ್ನು ಏರೋಬಿಕ್‌ ವಿಭಾಗದಲ್ಲಿ ಆಯ್ಕೆ ಮಾಡಿಕೊಳ್ಳಬಹುದು.

ಇದನ್ನು ಓದಿ:Health Tips: ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಕೊತ್ತಂಬರಿ ಬೀಜ ನೆನೆಸಿದ ನೀರು ಕುಡಿಯೋದು ಎಷ್ಟು ಒಳ್ಳೆಯದು ಗೊತ್ತೆ?

ಅನರೋಬಿಕ್‌ ಎಂದರೇನು?: ಇಷ್ಟೆಲ್ಲಾ ಪ್ರವರಗಳು ಏರೋಬಿಕ್‌ ವ್ಯಾಯಾಮಗಳಿಗಿದ್ದರೆ, ಅನರೋಬಿಕ್‌ ವ್ಯಾಯಾಮಗಳ ವಿಶೇಷವೇನು? ಇವು ವಾಕಿಂಗ್‌, ಜಾಗಿಂಗ್‌ನಂತಲ್ಲದೆ ಹೆಚ್ಚು ತೀವ್ರತೆಯ ವ್ಯಾಯಾಮಗಳು. ಕಡಿಮೆ ಸಮಯದಲ್ಲಿ ದೇಹದಿಂದ ಹೆಚ್ಚು ಶಕ್ತಿಯನ್ನು ಖರ್ಚು ಮಾಡಿಸುವ ಈ ಕಸರತ್ತುಗಳು ಆಮ್ಲ ಜನಕದ ಮೇಲೆ ಕೆಲಸ ಮಾಡುವವಲ್ಲ. ಬದಲಿಗೆ, ನೇರವಾಗಿ ದೇಹದಲ್ಲಿರುವ ಗ್ಲೂಕೋಸ್‌ ಮೇಲೆ ಕೆಲಸ ಮಾಡುತ್ತವೆ, ಅಂದರೆ ದೇಹದಿಂದ ಹೆಚ್ಚು ಪ್ರಮಾಣದ ಶಕ್ತಿ ವ್ಯಯವಾಗುತ್ತದೆ. ಒಂದು ತಾಸು ವಾಕಿಂಗ್‌ ಮಾಡಿದಂತೆ ಇವುಗಳನ್ನು ಒಂದು ತಾಸು ಸತತ ಮಾಡಲು ಸಾಧ್ಯವಿಲ್ಲ. ದೇಹವನ್ನು ಚೆನ್ನಾಗಿ ದಂಡಿಸಿ, ಸುಸ್ತು ಮಾಡಿಸುತ್ತವೆ.

ಯಾವೆಲ್ಲಾ ವ್ಯಾಯಾಮಗಳು ಈ ಪಟ್ಟಿಯಲ್ಲಿವೆ ಎಂದರೆ- ಸ್ಕಿಪ್ಪಿಂಗ್‌, ಜಂಪಿಂಗ್‌, ಭಾರ ಎತ್ತುವುದು, ಸ್ಪ್ರಿಂಟಿಂಗ್‌, ಪುಷಪ್‌ ಅಥವಾ ಪುಲಪ್‌ಗಳು ಮುಂತಾದವು. ದೊಡ್ಡ ಪ್ರಮಾಣದಲ್ಲಿ ತೂಕ ಇಳಿಸುವವರಿಗೆ ಇದು ಸೂಕ್ತ. ಕಾರಣ, ವ್ಯಾಯಾಮ ಮುಗಿದ ಮೇಲೂ ದೇಹ ತನ್ನ ಶಕ್ತಿ ಕರಗಿಸುವ ಪ್ರಕ್ರಿಯೆಯನ್ನು ಕೆಲವು ಕಾಲ ಜಾರಿಯಲ್ಲಿ ಇಡಬೇಕಾಗುತ್ತದೆ. ಕ್ರೀಡಾ ಪಟುಗಳಿಗೆ ಅವರವರ ಅಗತ್ಯಕ್ಕೆ ತಕ್ಕಂತೆ ಬೇಕಾಗುವ ವ್ಯಾಯಾಮಗಳಿವು. ಆದರೆ ಇವುಗಳನ್ನು ಎಲ್ಲರೂ ಮಾಡುವ ಮುನ್ನ ಸೂಕ್ತ ಮಾರ್ಗದರ್ಶನ ಬೇಕಾಗುತ್ತದೆ. ಸರಿಯಾದ ವೈದ್ಯರು, ಫಿಸಿಯೊ ಅಥವಾ ಟ್ರೇನರ್‌ ಸಲಹೆಯನ್ನು ತೆಗೆದುಕೊಳ್ಳದೆ ಅನರೋಬಿಕ್‌ ವ್ಯಾಯಾಮಗಳನ್ನು ಮಾಡುವುದು ಸರಿಯಲ್ಲ. ಈಗ ನಿಮ್ಮ ಆದ್ಯತೆ ಮತ್ತು ಅಗತ್ಯದ ಮೇರೆಗೆ ಎಂಥ ವ್ಯಾಯಾಮ ನಿಮಗೆ ಬೇಕು ಎಂಬುದನ್ನು ನಿರ್ಧರಿಸಬಹುದು.