ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಕೊತ್ತಂಬರಿ ಬೀಜ ನೆನೆಸಿದ ನೀರು ಕುಡಿಯೋದು ಎಷ್ಟು ಒಳ್ಳೆಯದು ಗೊತ್ತೆ?

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಡ್ ಟೀ ಕಾಫಿ ಕುಡಿಯುವ ಬದಲು ಒಂದು ಲೋಟ ಕೊತ್ತಂಬರಿ ಬೀಜದ ನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಲಾಭಗಳು ಸಿಗುತ್ತದೆ. ತೂಕ ಇಳಿಕೆ, ಹೊಟ್ಟೆಯುಬ್ಬರ ಕಡಿಮೆ ಮಅಡುತ್ತದೆ. ಅಲ್ಲದೆ ಮುಟ್ಟಿನ ಸಮಸ್ಯೆ ಸೇರಿದಂತೆ ಹಲವು ರೋಗಗಳಿಗೆ ಇದು ಮದ್ದಿನಂತೆ ಕೆಲಸ ಮಾಡುತ್ತದೆ. ಹಾಗಾದರೆ ಪ್ರತಿದಿನ ಕೊತ್ತಂಬರಿ ನೀರು ಕುಡಿಯುವುದರಿಂದಾಗುವ ಪ್ರಯೋಜನವೇನು ಎನ್ನುವ ವಿವರ ಇಲ್ಲಿದೆ.

ಪ್ರತಿ ದಿನ ಈ ಆರೋಗ್ಯಕರ ಪಾನೀಯ ಕುಡಿಯಿರಿ

ಕೊತ್ತಂಬರಿ ಬೀಜದ ನೀರು -

Profile
Sushmitha Jain Nov 16, 2025 7:00 AM

ಬೆಂಗಳೂರು: ಮಸಾಲೆ ಪದಾರ್ಥಗಳಲ್ಲಿ ಒಂದಾದ ಕೊತ್ತಂಬರಿ ಬೀಜ (Coriander Seed) ಆರೋಗ್ಯ ಮತ್ತು ಶಕ್ತಿಯುತ ಔಷಧೀಯ ಗುಣಗಳನ್ನು ಹೊಂದಿದೆ. ಜ್ವರ, ಶೀತ, ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳಿಗೆ ಇದರ ಕಷಾಯ ಮದ್ದಾಗಲಿದೆ. ಹಾಗೇ ರಾತ್ರಿ ಇಡೀ ನೆನೆಸಿಟ್ಟ ಕೊತ್ತಂಬರಿ ಬೀಜದ ನೀರನ್ನು(Coriander Seed Water) ಬೆಳಗ್ಗೆ ಖಾಲಿ ಹೊಟ್ಟೆಗೆ (Empty Stomach) ಕುಡಿಯುವುದರಿಂದ ನಾನಾ ಆರೋಗ್ಯಕಾರಿ ಪ್ರಯೋಜನ (Health Benifits) ಸಿಗಲಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕರಗಿಸಲು ನೆರವಾಗಲಿದೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಸಹಾಯಕ.

ಹಾಗಾದರೆ ಈ ಆರೋಗ್ಯಕಾರಿ ಪಾನೀಯ ಕುಡಿಯುವುದರಿಂದ ಇನ್ನೆಲ್ಲ ಉಪಯೋಗವಿದೆ (Health Tips) ಎನ್ನುವುದನ್ನು ನೋಡೋಣ...

ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಕೊತ್ತಂಬರಿ ಬೀಜದ ನೀರಿನ ಕುಡಿಯುವುದರಿಂದ ದೇಹದ ಚಯಾಪಚಯ ಕ್ರಿಯೆ ಹೆಚ್ಚುತ್ತದೆ. ಇದರಿಂದ ಸುಲಭವಾಗಿ ತೂಕವನ್ನು ಸಹ ಇಳಿಕೆ ಮಾಡಬಹುದಾಗಿದ್ದು, ಚಯಾಪಚಯ ಕ್ರಿಯೆಯನ್ನು ಸರಾಗಗೊಳಿಸುತ್ತದೆ.

ಅಜೀರ್ಣ ಸಮಸ್ಯೆ

ಅಜೀರ್ಣ ಸಮಸ್ಯೆಗೆ ಕೊತ್ತಂಬರಿ ಬೀಜದ ನೀರು ರಾಮಬಾಣವಾಗಿದ್ದು, ಈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರು ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಬೀಜದ ನೀರನ್ನು ಕುಡಿಯುವದರಿಂದ ಅಜೀರ್ಣ ಸಮಸ್ಯೆಯನ್ನು ಸುಲಭವಾಗಿ ಹೋಗಲಾಡಿಸಬಹುದಾಗಿದೆ. ಕೊತ್ತಂಬರಿ ಬೀಜವು ಅತ್ಯುತ್ತಮ ರೀತಿಯಲ್ಲಿ ಸಹಾಯ ಮಾಡುತ್ತದೆ. ಕೊತ್ತಂಬರಿ ಬೀಜದಲ್ಲಿ ಇರುವ ಬೋರ್ನಿಯೋಲ್ ಮತ್ತು ಲಿನೂಲ್ ಸಂಯುಕ್ತಗಳು ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತವೆ.

ಈ ಸುದ್ದಿಯನ್ನು ಓದಿ: Health Tips: ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಅರಿಶಿನದ ನೀರು ಕುಡಿದರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಈ ಕೊತ್ತಂಬರಿ ಬೀಜದ ಪ್ರತಿದಿನ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದ್ದು, ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು, ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಗುಣಗಳು ಹೇರಳವಾಗಿವೆ. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿನ ಫ್ರೀ ರ್ಯಾಡಿಕಲ್‌ಗಳನ್ನು ಕಡಿಮೆ ಮಾಡಲು ಸಹಾಯ ಸಹಾಯ ಮಾಡಲಿದ್ದು, ಈ ಮೂಲಕ ನಿಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ತೂಕ ಇಳಿಕೆಗೆ ಸಹಾಯ

ಸಣ್ಣ ಆಗಬೇಕೆಂದು ಯಾರಿಗೆ ಆಸೆ ಇರುವುದಿಲ್ಲ ಹೇಳಿ. ಪ್ರತಿಯೋರ್ವರು ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅದಕ್ಕಾಗಿ ಒಂದಲೊಂದು ಸರ್ಕಸ್ ಮಾಡುತ್ತಲೇ ಇರುತ್ತಾರೆ. ನೀವು ಇಂತಹದೇ ಪ್ರಯತ್ನದಲ್ಲಿದ್ದರೆ ಈ ನೀರನ್ನು ಕುಡಿದರೆ ಸಾಕು. ಈ ನೀರನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸಲಿದ್ದು, ಜೀರ್ಣಕ್ರಿಯೆ ಸಮಸ್ಯೆಗಳು ಬರದಂತೆ ತಡೆಯಲು ಸಹಾಯ ಮಾಡುತ್ತದೆ. ಜತೆಗೆ ದೇಹದಲ್ಲಿ ಸಂಗ್ರಹವಾಗುವ ಅನಗತ್ಯ ಕೊಬ್ಬನ್ನು ಕರಗಿಸಲಿದ್ದು, ಸುಲಭವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಕೊತ್ತಂಬರಿ ಬೀಜ ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಲಿದ್ದು, ಚರ್ಮಕ್ಕೆ ಹೆಚ್ಚಿನ ಆಮ್ಲಜನಕವನ್ನು ಒದಗಿಸುತ್ತದೆ. ಚರ್ಮವನ್ನು ಕಾಂತಿಯುತವಾಗಿಸುತ್ತದೆ ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಲಿದ್ದು, ಇದರಲ್ಲಿರುವ ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.