ಬೆಂಗಳೂರು: ಜ. 29: ಇತ್ತೀಚೆಗೆ ತೂಕ ಇಳಿಸಿಕೊಳ್ಳಬೇಕೆಂದು ಯುವಕ ಯುವತಿಯರು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಲೆ ಇರುತ್ತಾರೆ. ವರ್ಕೌಟ್, ಡಯೆಟ್ ಅಂತ ಸಮಯ ಕಳೆಯು ತ್ತಾರೆ. ಅದರಲ್ಲೂ ವೇಗನ್ ಡಯೆಟ್ (Vegan Diet) ಇತ್ತೀಚೆಗೆ ಭಾರೀ ಟ್ರೆಂಡಿಂಗ್ ನಲ್ಲಿದೆ. ಸಂಪೂರ್ಣ ಸಸ್ಯ ಆಧಾರಿತ ಆಹಾರ ಪದ್ಧತಿ ಇದಾಗಿದ್ದು ಮಾಂಸ, ಮೀನು, ಮೊಟ್ಟೆ, ಇತ್ಯಾದಿ ಯಾವುದೇ ಮಾಂಸಾಹಾರಿ ಉತ್ಪನ್ನಗಳನ್ನು ಒಳಗೊಂಡಿರುವುದಿಲ್ಲ. ಅದೇ ರೀತಿ ಈ ಆಹಾರ ಕ್ರಮದಲ್ಲಿ ಡೈರಿ ಉತ್ಪನ್ನಗಳು ಮತ್ತು ಮೊಟ್ಟೆಗಳನ್ನು ಒಳಗೊಂಡಂತೆ ಪ್ರಾಣಿಗಳಿಂದ ಪಡೆದ ಯಾವುದೇ ಆಹಾರವನ್ನು ಬಳಕೆ ಮಾಡುವುದಿಲ್ಲ. ಹಾಗಿದ್ರೆ ಈ ವೇಗನ್ ಆಹಾರ ಕ್ರಮ ಎಂದರೇನು? ಇದರಿಂದ ಏನು ಆರೋಗ್ಯ ಲಾಭ ಇದೆ ಎಂದು ಡಯೇಟಿಷಿಯನ್ ಅನಿತಾ ಅವರು ಮಾಹಿತಿ ನೀಡಿದ್ದಾರೆ.
ಹಣ್ಣು- ತರಕಾರಿಗಳು ದೇಹಕ್ಕೆ ಬಹಳಷ್ಟು ಪೂರಕ ಎಂಬುದು ನಮಗೆ ತಿಳಿದಿದೆ. ಅಂತೆಯೇ ಈ ವೇಗನ್ ಆಹಾರ ಕ್ರಮದಲ್ಲಿ ಸಸ್ಯ ಆಧಾರಿತ ವಸ್ತುಗಳು ಅಂದ್ರೆ ತರಕಾರಿ, ಧಾನ್ಯ ಮತ್ತು ಹಣ್ಣುಗಳು ಒಳಗೊಂಡಿರುತ್ತದೆ. ಈ ಡಯಟ್ ಸೆಲಿಬ್ರಿಟಿಗಳ ಉದ್ಯಮದಲ್ಲಿ ಬಹಳ ಜನಪ್ರಿಯವಾಗಿದೆ. ಅನೇಕ ನಟ- ನಟಿಯರು ವೇಗನ್ ಲೈಫ್ ಸ್ಟೈಲ್ ಸಂಪೂರ್ಣವಾಗಿ ಫಾಲೋ ಮಾಡುತ್ತಾರೆ.
ವಿಡಿಯೋ ನೋಡಿ
ಈ ಆಹಾರಗಳನ್ನುಬಳಕೆ ಮಾಡುತ್ತಾರೆ
*ಹಣ್ಣು ಮತ್ತು ಧಾನ್ಯಗಳು
*ಅವರೆಕಾಳು, ಬೀನ್ಸ್ ತರಕಾರಿಗಳು
*ಬ್ರೆಡ್, ಪಾಸ್ಟಾ
*ತೆಂಗಿನ ಹಾಲು ಮತ್ತು ಬಾದಾಮಿ ಹಾಲು ಮುಂತಾದ ಡೈರಿ ಪರ್ಯಾಯಗಳು
*ತರಕಾರಿಗಳು ಮತ್ತು ಸೊಪ್ಪುಗಳಾದ ಪಾಲಕ್, ಬ್ರೊಕೊಲಿ, ಕ್ಯಾರೆಟ್, ಬೀಟ್ರೂಟ್, ಎಲ್ಲಾ ಬಗೆಯ ಹಸಿರು ತರಕಾರಿಗಳು.
*ಬಾದಾಮಿ, ವಾಲ್ನಟ್ಸ್, ಶೇಂಗಾ, ಚಿಯಾ ಬೀಜಗಳು, ಫ್ಲ್ಯಾಕ್ಸ್ ಸೀಡ್ಸ್
ಯಾವುದು ಒಳಗೊಂಡಿರುವುದಿಲ್ಲ
*ಹಾಲು ಮತ್ತು ಹಾಲಿನ ಉತ್ಪನ್ನಗಳು (ಮೊಸರು, ಬೆಣ್ಣೆ, ತುಪ್ಪ).
*ಮಾಂಸ ಮತ್ತು ಸಮುದ್ರ ಆಹಾರ (ಮೀನು, ಕೋಳಿ)
*ಮೊಟ್ಟೆ
*ಜೇನು ತುಪ್ಪ
ಏನು ಆರೋಗ್ಯ ಲಾಭ ಇದೆ?
*ವೇಗನ್ ಆಹಾರ ಕ್ರಮದಿಂದ ಮಧುಮೇಹ ಅಥವಾ ರಕ್ತದೊತ್ತಡದ ಸಮಸ್ಯೆಗಳನ್ನು ತಡೆಯಯುವ ಶಕ್ತಿ ಈ ಆಹಾರ ಕ್ರಮಕ್ಕಿದೆ
Healthy Breakfast: ಉತ್ತಮ ಜೀರ್ಣಕ್ರಿಯೆಗಾಗಿ ವೈದ್ಯರು ಸೂಚಿಸಿದ ಆಹಾರಗಳಿವು; ದಿನಚರಿಯಲ್ಲಿ ಇಂದೇ ಅಳವಡಿಸಿಕೊಳ್ಳಿ
*ಹೃದಯದ ಸಮಸ್ಯೆ ಇದ್ದವರಿಗೆ ಒಳಿತು ಆಗುತ್ತದೆ. ಇದರಿಂದ ರಕ್ತದೊತ್ತಡ ನಿವಾರಣೆ ಮಾಡಬಹುದು
*ಸಸ್ಯ-ಆಧಾರಿತ ಆಹಾರಗಳಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್ ಅಂಶಗಳು ಹೆಚ್ಚಿದ್ದು ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡಬಹುದು.
*ಸಸ್ಯಹಾರಿ ಉತ್ಪನ್ನಗಳು ಕಡಿಮೆ ಕ್ಯಾಲೋರಿ ಹೊಂದಿರುವುದರಿಂದ, ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ
ಆದರೆ ಈ ವೇಗನ್ ಡಯಟ್ ದೀರ್ಘಕಾಲದವರೆಗೆ ನಾವು ಪಾಲಿಸದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಡಬಹುದು. ಮುಖ್ಯವಾಗಿ ಕ್ಯಾಲ್ಸಿಯಂ, ಒಮೆಗಾ-3 ಕೊಬ್ಬಿನಾಮ್ಲಗಳ ಸಮಸ್ಯೆ ನಮ್ಮನ್ನು ಕಾಡಬಹುದು. ಹಾಗಾಗಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಸಿಗದೆ ಇದ್ದಾಗ ರಕ್ತಹೀನತೆ, ನರಗಳ ಸಮಸ್ಯೆ ಹೀಗೆ ನಾನಾ ರೋಗಗಳು ಬರಬಹುದು ಹಾಗಾಗಿ ಈ ಡಯೆಟ್ ಫಾಲೋ ಮಾಡುವಾಗ ವೈದ್ಯರ ಬಳಿ ಸಲಹೆ ತಿಗೆದುಕೊಳ್ಳಿ ಎಂದಿದ್ದಾರೆ.