ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sugar vs Jaggery: ಬೆಲ್ಲ ಅಥವಾ ಸಕ್ಕರೆ ಯಾವುದು ದೇಹಕ್ಕೆ ಒಳಿತು? ಇಲ್ಲಿದೆ ನೋಡಿ ಉತ್ತರ

ನಿತ್ಯದ ಬಳಕೆಯಲ್ಲಿ ಬಿಳಿ ಸಕ್ಕರೆ ಒಳ್ಳೆಯದಾ ಅಥವಾ ಬೆಲ್ಲ ಒಳ್ಳೆಯದಾ ಎಂಬುದು ತಲೆಯಲ್ಲಿ ಗುಂಯ್‌ ಗುಡುತ್ತಿರುತ್ತದೆ. ಅಂಗಡಿಯಲ್ಲಿ ಖರೀದಿಗೆ ನಿಂತಾಗ, ಸಿಹಿ ತಯಾರಿಸುತ್ತಾ ಒಲೆಯ ಮುಂದೆ ನಿಂತಾಗ, ಫಿಟ್‌ನೆಸ್‌ ಉತ್ಸಾಹಿಗಳೊಂದಿಗೆ ಮಾತಿಗೆ ನಿಂತಾಗ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ತೋರು ವಾಗ… ಹೀಗೆ ನಾನಾ ಸಂದರ್ಭಗಳಲ್ಲಿ ಸಕ್ಕರೆ ಒಳ್ಳೆಯದಾ ಅಥವಾ ಬೆಲ್ಲವಾ ಎಂಬ ಯೋಚನೆ ಪದೇಪದೆ ಬಂದಿರಬಹುದು. ಹಾಗಿದ್ರೆ ಯಾವುದು ಒಳ್ಳೆಯದು?

ಸಂಗ್ರಹ ಚಿತ್ರ-

ನವದೆಹಲಿ: ಸಿಹಿ ತಿಂಡಿಗಳನ್ನು ಬೇಡ ಎನ್ನುವವರು ಕಡಿಮೆ. ಸಿಹಿಯ ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರುವಷ್ಟು ಆಸೆ ಎಲ್ಲರಿಗೂ (Sugar vs Jaggery) ಆಗದಿದ್ದರೂ, ನಿರಾಕರಿಸುವ ಮನಸ್ಸಂತೂ ಹೆಚ್ಚಿನವರಿಗೆ ಇರುವುದಿಲ್ಲ. ಆದರೆ ನಿತ್ಯದ ಬಳಕೆಯಲ್ಲಿ ಬಿಳಿ ಸಕ್ಕರೆ ಒಳ್ಳೆಯದಾ ಅಥವಾ ಬೆಲ್ಲ ಒಳ್ಳೆಯದಾ ಎಂಬುದು ತಲೆಯಲ್ಲಿ ಗುಂಯ್‌ ಗುಡುತ್ತಿರುತ್ತದೆ. ಅಂಗಡಿಯಲ್ಲಿ ಖರೀದಿಗೆ ನಿಂತಾಗ, ಸಿಹಿ ತಯಾರಿಸುತ್ತಾ ಒಲೆಯ ಮುಂದೆ ನಿಂತಾಗ, ಫಿಟ್‌ನೆಸ್‌ ಉತ್ಸಾಹಿಗಳೊಂದಿಗೆ ಮಾತಿಗೆ ನಿಂತಾಗ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ತೋರುವಾಗ ಹೀಗೆ ನಾನಾ ಸಂದರ್ಭಗಳಲ್ಲಿ ಸಕ್ಕರೆ ಒಳ್ಳೆಯದಾ ಅಥವಾ ಬೆಲ್ಲವಾ ಎಂಬ ಯೋಚನೆ ಪದೇಪದೆ ಬಂದಿರಬಹುದು. ಬೆಲ್ಲವೆಂದರೆ ಹಳೆಯ ಕಾಲದ ಜೋನಿ ಅಥವಾ ಅಚ್ಚು ಬೆಲ್ಲಗಳನ್ನೇ ಹೇಳುತ್ತಿರುವುದಲ್ಲ. ಸಕ್ಕರೆಯಷ್ಟೇ ಸರಾಗವಾಗಿ ಉಪಯೋಗಿಸಲಾಗುವ ಪುಡಿ ಬೆಲ್ಲ, ಹರಳಿನೋಪಾದಿಯ ಕಂದು ಸಕ್ಕರೆ- ಇಂಥ ವಿವಿಧ ಆಯ್ಕೆಗಳು ಮಾರುಕಟ್ಟೆಯಲ್ಲಿವೆ.

ಮೊದಲಿಗೆ ಈ ಬೆಲ್ಲ ಅಥವಾ ಸಕ್ಕರೆಗಳೆಂದರೇನು ಎನ್ನುವುದರಿಂದ ಪ್ರಾರಂಭಿಸೋಣ. ಈ ಎರಡೂ ವಸ್ತುಗಳು ತಯಾರಾಗುವುದು ಕಬ್ಬಿನಿಂದ. ಬಿಳಿಯ ಬಣ್ಣದ ಸಕ್ಕರೆ ತಯಾರಿಸಲು, ಕಬ್ಬಿನ ರಸ ವನ್ನು ಹಿಂಡಿ ತೆಗೆದು, ಶುದ್ಧೀ ಕರಿಸಲಾಗುತ್ತದೆ. ಈ ರಸವನ್ನು ಆವಿಯಾಗಿಸುವುದು, ಪಾಕ ಮಾಡುವುದು ಮತ್ತು ಹರಳಾಗಿಸುವುದು ಮುಂದಿನ ಹಂತಗಳು. ಹರಳಾದ ಸಕ್ಕರೆಗೆ ಬೇಕಾದ ಆಕಾರ ನೀಡಲಾಗುತ್ತದೆ. ಬಿಳಿ ಸಕ್ಕರೆ ಕಟುವಾದ ಸಿಹಿ ರುಚಿಯನ್ನು ಹೊಂದಿದ್ದು, ತೇವವಿಲ್ಲದಂತೆ ಒಣಗಿರುತ್ತದೆ.

ಬಿಳಿ ಸಕ್ಕರೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮೊಲಾಸಿಸ್‌ ಹೊಂದಿ ರುವ ಬೆಲ್ಲ ಅಥವಾ ಕಂದು ಸಕ್ಕರೆ ರುಚಿಯಲ್ಲಿ ಸಕ್ಕರೆಯಷ್ಟು ಕಟುವಾದ ಸಿಹಿ ಇರುವುದಿಲ್ಲ. ಜೋನಿ ಬೆಲ್ಲವಂತೂ ಕೇವಲ ಕಬ್ಬಿನ ರಸದ ಶೋಧಿಸಿದ ಕಡು ಪಾಕವಷ್ಟೇ ಹೊರತಾಗಿ ಇನ್ನಾವ ಪ್ರಕ್ರಿಯೆಗೂ ಒಳಪಟ್ಟಿರುವುದಿಲ್ಲ. ಉಳಿದ ಆಕಾರದಲ್ಲಿರುವ ಬೆಲ್ಲಗಳಾದರೂ ಸಕ್ಕರೆಯಷ್ಟು ಒಣಗಿರದೆ, ಸ್ವಲ್ಪ ಪ್ರಮಾಣದ ತೇವ ವನ್ನು ಹೊಂದಿರುತ್ತದೆ.

ಕೆಂಪೇಕೆ?:

ಇವಿಷ್ಟು ಬೆಲ್ಲ-ಸಕ್ಕರೆಗಳ ಸಂಕ್ಷಿಪ್ತ ಪೂರ್ವಾಪರ. ಈ ಎರಡೂ ವಸ್ತುಗಳ ಆಕಾರ ಮತ್ತು ರುಚಿಯಲ್ಲಿ ವ್ಯತ್ಯಾಸ ಬರುವುದು ಅವುಗಳು ಒಳಪಡುವ ರಾಸಾಯನಿಕ ಪ್ರಕ್ರಿಯೆಗಳಿಂದ. ಹೆಚ್ಚಿನ ಪ್ರಮಾಣದ ಮೊಲಾಸಿಸ್‌ ಇದ್ದಷ್ಟೂ ಅದರ ಬಣ್ಣ ಹೆಚ್ಚೆಚ್ಚು ಕಂದುತ್ತಾ ಅಥವಾ ಕೆಂಪಾಗುತ್ತಾ ಹೋಗುತ್ತದೆ. ಹಾಗಾಗಿಯೇ ಎಷ್ಟೋ ಮಂದಿ ಸಿಹಿ ತಿನಿಸುಗಳ ತಯಾರಿಕೆಯಲ್ಲಿ ಬೆಲ್ಲದ ಬದಲು ಸಕ್ಕರೆ ಬಳಸುತ್ತಾರೆ. ಬೆಲ್ಲ ಹಾಕುವುದರಿಂದ ರುಚಿ ಕೆಡುವುದಿಲ್ಲ ಎಂಬುದು ನಿಜವಾದರೂ, ತಿಂಡಿಯ ಬಣ್ಣ ಬದಲಾಗುವುದು ಹೌದು. ಹಾಗಾಗಿ ವ್ಯಂಜನಗಳ ಬಣ್ಣ ಮತ್ತು ಸ್ವರೂಪಗಳು ಕಣ್ಣಿಗೆ ಹಿತವಾಗಿ ಇರಬೇಕೆಂದು ಬಯಸುವವರು ಸಕ್ಕರೆಯನ್ನೇ ಆಯ್ಕೆ ಮಾಡುತ್ತಾರೆ.

ಇದನ್ನು ಓದಿ:Health Tips: ಚಳಿಗಾಲದಲ್ಲಿ ಪಾಲಕ್ ಸೊಪ್ಪು ತಿನ್ನೋದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಆರೋಗ್ಯಕ್ಕೆ ಯಾವುದು ಒಳ್ಳೆಯದು?:

ಇದೀಗ ನಮ್ಮೆದುರಿಗಿರುವ ಪ್ರಶ್ನೆ. ಮೊಲಾಸಿಸ್‌ ಅಂಶ ಹೆಚ್ಚಿದಂತೆ ಅದರಲ್ಲಿ ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಶಿಯಂನಂಥ ಖನಿಜಗಳ ಸಾಂದ್ರತೆ ಹೆಚ್ಚುತ್ತದೆ. ಹಾಗೆಂದ ಮಾತ್ರಕ್ಕೆ ಬೆಲ್ಲ ಬಳಸಿ ʻಆರೋಗ್ಯಕರ ಸಿಹಿʼ ತಯಾರಿಸ ಬಹುದೆಂದು ಎಂದು ಭಾವಿಸುವ ಅಗತ್ಯ ವಿಲ್ಲ. ಕಾರಣ, ಈ ಎರಡೂ ಆಯ್ಕೆಗಳಲ್ಲಿ ಕ್ಯಾಲರಿ ಕಡಿಮೆಯೇನಿಲ್ಲ. ಸುಮಾರು 100 ಗ್ರಾಂ ಸಕ್ಕರೆಯಲ್ಲಿ 367 ಕ್ಯಾಲರಿ ಇದ್ದರೆ, ಅಷ್ಟೇ ಪ್ರಮಾಣದ ಬೆಲ್ಲದಲ್ಲಿ 367 ಕ್ಯಾಲರಿ ದೊರೆಯುತ್ತದೆ. ಹಾಗಾಗಿ ʻಲೋ-ಕ್ಯಾಲರಿ ಶುಗರ್‌ʼ ಎಂದೆಲ್ಲಾ ಯಾರಾದರೂ ಹೇಳಿದರೆ ನಂಬುವ ಮುನ್ನ ಸರಿಯಾಗಿ ಯೋಚಿಸಬೇಕು.

ಇಷ್ಟೊತ್ತು ಏನು ಹೇಳಿದ್ದಾಯಿತು ಎಂಬ ಗೊಂದಲ ಇನ್ನೂ ಇದ್ದರೆ- ಇಲ್ಲಿ ಕೇಳಿ. ಸಕ್ಕರೆಗಿಂತ ಬೆಲ್ಲದಲ್ಲಿ ಸ್ವಲ್ಪ ಕ್ಯಾಲರಿ ಕಡಿಮೆ ಇರುತ್ತದೆ. ಮೊಲಾಸಿಸ್‌ ಹೆಚ್ಚಿರುವುದರಿಂದ ಸ್ವಲ್ಪ ಖನಿ ಜಾಂಶಗಳೂ ಬೆಲ್ಲದಲ್ಲಿ ಸಾಂದ್ರವಾಗಿರುತ್ತವೆ. ಸಕ್ಕರೆಗಿಂತ ಕಡಿಮೆ ಪ್ರಮಾಣದಲ್ಲಿ ರಾಸಾಯನಿಕ ಪ್ರಕ್ರಿಯೆಗಳಿಗೆ ಬೆಲ್ಲ ಒಳಪಟ್ಟಿರುತ್ತದೆ. ಹಾಗೆಂದ ಮಾತ್ರಕ್ಕೆ ಬೆಲ್ಲದ ಸಿಹಿಗಳನ್ನು ಸಖತ್ತಾಗಿ ಬಾರಿಸಬಹುದು ಎಂದು ಖಂಡಿತಾ ಭಾವಿಸುವ ಅಗತ್ಯವಿಲ್ಲ. ಬೆಲ್ಲವಾಗಲೀ ಸಕ್ಕರೆಯಾಗಲಿ- ಸಿಹಿ ತಿನ್ನುವುದಕ್ಕೆ ಮಿತಿ ಇರಲಿ.