ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಚಳಿಗಾಲದಲ್ಲಿ ಪಾಲಕ್ ಸೊಪ್ಪು ತಿನ್ನೋದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಹಸಿರು ತರಕಾರಿಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಗೊತ್ತೇ ಇದೆ. ಅದರಲ್ಲಿ ಪಾಲಕ್ ಸೊಪ್ಪು ಕೂಡಾ ಒಂದು. ಪಾಲಕ್ ಸೊಪ್ಪು ಚಳಿಗಾಲದಲ್ಲಿ ಲಭ್ಯವಿರುವ ಹಸಿರು ತರಕಾರಿಯಾಗಿದೆ. ಇದು ಆರೋಗ್ಯಕ್ಕೂ ಬಹಳ ಒಳ್ಳೆಯದು. ಈ ಸೊಪ್ಪನ್ನು ನೀವು ಸೇವಿಸಿದರೆ, ದೇಹದ ಎಲ್ಲಾ ವಿಷಕಾರಿ ವಸ್ತುಗಳು ದೇಹದಿಂದ ಹೊರಹಾಕಲ್ಪಡುತ್ತವೆ. ಇದರೊಂದಿಗೆ, ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಚಳಿಗಾಲಕ್ಕೆ ಬಹಳ ಉಪಯೋಗಕಾರಿ ಈ ಪಾಲಕ್ ಸೊಪ್ಪು

ಪಾಲಕ್(ಸಂಗ್ರಹ ಚಿತ್ರ) -

Profile
Sushmitha Jain Nov 20, 2025 8:00 AM

ಚಳಿಗಾಲ(Winter) ಎಂದಾಕ್ಷಣ ನೆನಪಾಗುವುದೇ ಹೆಚ್ಚಿನ ಪ್ರಮಾಣದ ಚಳಿ. ಈ ಶೀತಲ ವಾತಾವರಣದಲ್ಲಿ ಆರೋಗ್ಯವನ್ನು(Health) ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳುವುದು ಸ್ವಲ್ಪ ಕಷ್ಟವೇ. ಈ ಚಳಿಗಾಲದ ಹಿಂದಯೇ ನಾನಾ ಆರೋಗ್ಯ ಸಮಸ್ಯೆಗಳು ಬರುತ್ತದೆ, ಈ ಋತುಮಾನದಲ್ಲಿ ವೇಗವಾಗಿ ನಮ್ಮ ದೇಹ ಅನಾರೋಗ್ಯಕ್ಕೆ ಒಳಗಾಗುತ್ತದೆ. ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದ್ದು, ಶೀತ, ಜ್ವರ, ಕೆಮ್ಮುವಿನ ಜೊತೆಗೆ ಸೋಂಕುಗಳಿಗೂ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ, ಈ ಋತುವಿನಲ್ಲಿ ಪೌಷ್ಠಿಕಾಂಶಗಳಿಂದ ಸಮೃದ್ಧವಾದ ಆಹಾರ ಸೇವನೆ ಅತ್ಯಂತ ಅವಶ್ಯಕವಾಗಿದ್ದು, ದೇಹ ಉತ್ತಮ ಸ್ಥಿತಿಯಲ್ಲಿ ಇರಬೇಕೆಂದರೆ ಉತ್ತಮ ಗುಣಮಟ್ಟದ ಆಹಾರವನ್ನು ಸೇವಿಸುವುದು ಒಳ್ಳೆಯದು.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಎಲ್ಲಿಯವರೆಗೂ ಚೆನ್ನಾಗಿರುತ್ತದೊ ಅಲ್ಲಿಯವರೆಗೆ ನಿಮಗೆ ಯಾವುದೇ ರೀತಿಯ ತೊಂದರೆಗಳು ಬಾಧಿಸುವುದಿಲ್ಲ. ಆದ್ದರಿಂದ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವಂತಹ ಆಹಾರಗಳನ್ನು ಸೇವಿಸುವುದು ಉತ್ತಮವಾಗಿದ್ದು, ಈ ಟೈಂ ಅಲ್ಲಿ ಕಾಡುವ ಅನಾರೋಗ್ಯ ಸಮಸ್ಯೆಗಳನ್ನು ತಡೆಯಬೇಕಾದರೆ ಚಳಿಗಾಲದ ಅವಧಿಯಲ್ಲಿ ಸಿಗುವ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕು. ಅಂತಹವುಗಳಲ್ಲಿ ಪಾಲಕ್ ಸೊಪ್ಪು (Spinach) ಒಂದಾಗಿದ್ದು, ಹಸಿರು ತರಕಾರಿಗಳು ದೇಹಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಬಹುಮುಖ್ಯ ವಿಟಮಿನ್ ಮತ್ತು ಖನಿಜಾಂಶಗಳು ಪಾಲಕ್ ಸೊಪ್ಪಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಷಿಯಂ, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಇದರಲ್ಲಿ ಸಾಕಷ್ಟಿದೆ. ಈ ಪೌಷ್ಟಿಕಾಂಶಗಳು ನಮ್ಮ ಆರೋಗ್ಯಕ್ಕೆ ಅನುಕೂಲಕರವಾಗಿದ್ದು, ಪ್ರತಿರಕ್ಷಣಾ ಶಕ್ತಿ, ಚರ್ಮದ ಆರೋಗ್ಯ ಅಥವಾ ಬಲವಾದ ಮೂಳೆಗಳಿಗಾಗಿ, ನಿಮ್ಮ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ನೀಡುವ ಆಹಾರಗಳಲ್ಲಿ ಪಾಲಕ್ ಸೊಪ್ಪು ಅಗ್ರಗಣ್ಯ ಸ್ಥಾನದಲ್ಲಿದೆ.

ಇನ್ನು ಈ ಕಾಲದಲ್ಲಿ ಪಾಲಕ್ ಸೊಪ್ಪನ್ನು ಆಗಾಗ ಬೇಯಿಸಿಕೊಂಡು ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾದ ಪೊಟ್ಯಾಶಿಯಂ ಸಿಗಲಿದ್ದು, ಇದು ದೇಹದಲ್ಲಿನ ಸೋಡಿಯಂ ಅಂಶವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೃದಯ ಹಾಗೂ ಹೃದ್ರೋಗ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುತ್ತದೆ. ಹಾಗಾದ್ರೆ ಬನ್ನಿ ಚಳಿಗಾಲದಲ್ಲಿ ಪಾಲಕ್ ಸೊಪ್ಪು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನೆಗಳೇನು ಎಂಬುದನ್ನು ಇಲ್ಲಿ ನೋಡೋಣಾ...'

Health Tips: ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಅರಿಶಿನದ ನೀರು ಕುಡಿದರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?

  • ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ಹಿಮಗ್ಲೋಬಿನ್ ಪ್ರಮಾಣ ಹೆಚ್ಚಾಗಲಿದ್ದು,​ಪಾಲಕ್ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶ, ಪೊಟ್ಯಾಸಿಯಮ್ ಮತ್ತು ಪೋಷಕಾಂಶಗಳು ಇರುತ್ತವೆ. ಕಬ್ಬಿಣಾಂಶದ ಕೊರತೆ ಉಂಟಾದಾಗ ರಕ್ತ ಮತ್ತು ಹಿಮಗ್ಲೋಬಿನ್ ಕೊರತೆ ಸಾಮಾನ್ಯವಾಗಿ ಕಾಡುವುದು. ಅಂತಹ ಸಮಯದಲ್ಲಿ ಪಾಲಕ್ ಸೊಪ್ಪಿನ ಆಹಾರವನ್ನು ಗಣನೀಯವಾಗಿ ಸೇವಿಸುವುದರಿಂದ ಸಮಸ್ಯೆಯನ್ನು ನಿವಾರಿಸಬಹುದು. ಹಾಗಾಗಿ ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಸೊಪ್ಪನ್ನು ಸೇವಿಸುವುದು ಒಳ್ಳೆಯದು.
  • ಪಾಲಕ್ ಸೊಪ್ಪಿನಲ್ಲಿ ನೈಟ್ರೇಟ್‍ ಅಂಶವಿದ್ದು, ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡದ ಮಟ್ಟವು ಸುಧಾರಣೆ ಆಗುತ್ತದೆ. ಪಾಲಕ್ ಸೊಪ್ಪಿನಲ್ಲಿ ಇರುವ ಪೋಷಕಾಂಶದ ರಕ್ತ ಕಣಗಳನ್ನು ಹೆಚ್ಚಿಸಲ್ಲಿದ್ದು, ಜೊತೆಗೆ ಹೃದಯವನ್ನು ಆರೋಗ್ಯಕರವಾಗಿ ಇರುವಂತೆ ಮಾಡುವುದು.
  • ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದ್ದು, ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ಪಾಲಕ್ ಸೊಪ್ಪಿನ ಸೇವನೆಯಿಂದ ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಬಹುದಾಗಿದೆ.
  • ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ, ಪೊಟ್ಯಾಸಿಯಮ್, ಕ್ಯಾಲ್ಸಿಯಮ್ ಮತ್ತು ಇತರ ಜೀವಸತ್ವಗಳು ಮುಳೆಯ ಆರೋಗ್ಯಕ್ಕೆ ಸಹಾಯ ಮಾಡಲಿದ್ದು, ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ. ಜೊತೆಗೆ ಕೆಲವು ಮೂಳೆ ಸಂಬಂಧಿ ಸಮಸ್ಯೆಗಳು ಬರದಂತೆ ಪೋಷಿಸುವುದು.