ನವದೆಹಲಿ, ಮೇ 28: ಮುಂಜಾನೆ ಎದ್ದ ತಕ್ಷಣ ಒಂದು ಕಪ್ ಟೀ ಕುಡಿಯದಿದ್ದರೆ ದಿನವೇ ಹೋಗುವುದಿಲ್ಲ ಎನ್ನುವವರು ಇದ್ದಾರೆ. ಅಷ್ಟರ ಮಟ್ಟಿಗೆ ಟೀ ಗೆ ಅವಲಂಬಿಸಿದವರು ಇದ್ದಾರೆ. ಆದರೆ ಕೆಲವರು ಆರೋಗ್ಯದ (Health Tips) ದೃಷ್ಟಿಯಿಂದ ಬ್ಲಾಕ್ ಟೀ ಅಥವಾ ಗ್ರೀನ್ ಟೀ ಗೆ ಆಧ್ಯತೆಯನ್ನು ನೀಡುತ್ತಾರೆ.ಇವರೆಡರಲ್ಲೂ ಅತ್ಯುತ್ತಮ ಆರೋಗ್ಯ ಲಾಭ ಇದ್ದು ಕಡಿಮೆ ಕ್ಯಾಲೋರಿ ಹೊಂದಿದೆ. ಹಾಗಿದ್ರೆ ತೂಕ ಇಳಿಸುವ ನಿಟ್ಟಿನಲ್ಲಿ ಇವೆರಡರಲ್ಲಿ ಯಾವುದು ಹೆಚ್ಚು ಪ್ರಭಾವಶಾಲಿ?
ಕೊಬ್ಬು ಸುಡುವುದನ್ನು ಬೆಂಬಲಿಸುತ್ತದೆ:
ಗ್ರೀನ್ ಟಿ ಕ್ಯಾಟೆಚಿನ್‌ಗಳು ಮತ್ತು EGCG ಎಂಬ ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಈ ಸಂಯುಕ್ತಗ ಳು ದೇಹವು ಸಂಗ್ರಹವಾಗಿರುವ ಕೊಬ್ಬನ್ನು ತಡೆದು ಆಕ್ಸಿ ಡೀಕರಣವನ್ನು ಬೆಂಬಲಿಸುತ್ತವೆ..ದೇಹದಲ್ಲಿ ಶೇಖರಣೆ ಯಾಗಿರುವ ಹಠಮಾರಿ ಕೊಬ್ಬನ್ನು ಕರಗಿಸಲು ಇವು ನೆರವಾಗುತ್ತವೆ
ಕೆಫೀನ್ ಕಡಿಮೆ:
ಬ್ಲಾಕ್ ಕಾಫಿಗೆ ಹೋಲಿಕೆ ಮಾಡಿದರೆ ಗ್ರೀನ್ ಟೀಯಲ್ಲಿ ಕೆಫೀನ್ ಅಂಶವು ಕಡಿಮೆ ಇರುತ್ತದೆ. ಹೀಗಾಗಿ ದೇಹಕ್ಕೆ ಎನರ್ಜಿ ಬೂಸ್ಟರ್ ಆಗಿಯೂ ಕೆಲಸ ಮಾಡುತ್ತದೆ. ಅದೇ ರೀತಿ ಚಯಾಪಚಯ ಕ್ರಿಯೆಯನ್ನು ಬೆಂಬಲಿಸಿ ದೇಹದ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ:
ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಸುಧಾರಿಸಲು ಗ್ರೀನ್ ಟೀ ಹೆಚ್ಚು ಪರಿಣಾಮಕಾರಿಯಾಗಿದೆ. ಪದೇ ಪದೇ ಹಸಿವು ಆಗುವುದನ್ನು ತಡೆದು ಸಿಹಿಯ ಕ್ರೇವಿಂಗ್ಸ್ ಅನ್ನು ಕೂಡ ಕಡಿಮೆ ಮಾಡುತ್ತದೆ.
Health Tips: ಬೇಸಿಗೆಗೂ ಕಣ್ಣಿನ ಆರೋಗ್ಯಕ್ಕೂ ಏನು ನಂಟು?
ಒತ್ತಡವನ್ನು ಕಡಿಮೆ ಮಾಡುತ್ತದೆ:
ಗ್ರೀನ್ ಟೀ ನೈಸರ್ಗಿಕವಾಗಿ ಶಾಂತತೆಗೆ ಸಂಬಂಧಿಸಿದ ಅಮೈನೋ ಆಮ್ಲವಾದ ಎಲ್ ಥಿಯಾನೈನ್ ಅನ್ನು ಒಳಗೊಂಡಿದೆ. ಇದು ಒತ್ತಡ-ಸಂಬಂಧಿತ ಕಾರ್ಟಿಸೋಲ್ ಸ್ಪೈಕ್‌ಗಳನ್ನು ತಡೆಯಬಹುದು
ಬ್ಲಾಕ್ ಟೀ:
ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ತಕ್ಷಣದ ಎನರ್ಜಿ ಹಾಗೂ ವರ್ಕೌಟ್ ಬೂಸ್ಟರ್ ಆಗಿ ಕೆಲಸ ಮಾಡುತ್ತದೆ. ಜಿಮ್ ಅಥವಾ ಕಠಿಣ ವ್ಯಾಯಾಮ ಮಾಡುವವರಿಗೆ ಇದು ನೆಚ್ಚಿನ ಆಯ್ಕೆ.
ಹಸಿವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಬಹುದು:
ಹಲವಾರು ಅಧ್ಯಯನಗಳು ಕಾಫಿ ಅಲ್ಪಾವಧಿ ಸಮಯಕ್ಕೆ ಹಸಿವನ್ನು ನಿಗ್ರಹಿಸಬಹುದು ಎಂದು ಸೂಚಿಸುತ್ತವೆ.
ಮೆಟಬಾಲಿಸಂ ವೇಗಗೊಳಿಸುತ್ತದೆ:
ಬ್ಲಾಕ್ ಕಾಫಿಯಲ್ಲಿ ಕೆಫೀನ್ ಸಮೃದ್ಧವಾಗಿದೆ. ಇದು ದೇಹದಲ್ಲಿ ಶಾಖವನ್ನು ಉತ್ಪತ್ತಿಮಾಡುವ ಮೂಲಕ ಕ್ಯಾಲೋರಿ ಬರ್ನ್ ಮಾಡುತ್ತದೆ.
ಶೂನ್ಯ ಕ್ಯಾಲೊರಿ:
ಸಕ್ಕರೆ, ಹಾಲು ಅಥವಾ ಯಾವುದೇ ಸಿರಪ್ ಸೇರಿಸದ ಬ್ಲಾಕ್ ಟೀಯಲ್ಲಿ ಕ್ಯಾಲೊರಿ ಕೂಡ ಇರುವುದಿಲ್ಲ.