ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತೀಯರಿಗೆ ಯಾವ ಉಪ್ಪು ಅತ್ಯುತ್ತಮ? ಪೌಷ್ಟಿಕತಜ್ಞರ ಸಲಹೆ ಏನು?

Health Tips: ಉಪ್ಪು ಆಹಾರ ರುಚಿಗೆ ಮಾತ್ರ ಪ್ರಮುಖವಾಗಿದೆ ಎಂದು ನಾವು ಅಂದುಕೊಂಡಿರುತ್ತೇವೆ, ಆದರೆ ಇದು ನಮ್ಮ ಆರೋಗ್ಯಕ್ಕೆ ಅಗತ್ಯವಾದ ಅಮೂಲ್ಯ ಖನಿಜವಾದ ಅಯೋಡಿನ್ ಅನ್ನೂ ಒದಗಿ ಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಡುಗೆಮನೆಯಲ್ಲಿ ಸಾಮಾನ್ಯ ಉಪ್ಪಿನ ಬದಲು ಪಿಂಕ್ ಸಾಲ್ಟ್ ಸೆಲ್ಟಿಕ್ ಸಾಲ್ಟ್ ಬಳಕೆ ಮಾಡುವ ಪ್ರಮಾಣ ಹೆಚ್ಚಾಗಿದೆ. ಇಂತಹ ಉಪ್ಪಿನ‌ ಸೇವನೆ ಆರೋಗ್ಯಕ್ಕೆ ಹೇಗೆ ಪರಿಣಾಮ ಬೀರಬಹುದು? ಎಂದು ಪೌಷ್ಟಿಕತಜ್ಞರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ, ಜ. 31: ಯಾವುದೇ ಆಹಾರಕ್ಕೆ ಅಗತ್ಯ ವಸ್ತು ಅಂದ್ರೆ ಅದು ಉಪ್ಪು. ಹಾಗಾಗಿ ಅಡುಗೆ ಮನೆಯಲ್ಲಿ ಇದರ ಬಳಕೆ ಬಹಳ ಪ್ರಮುಖವಾಗಿದೆ. ಆದರೆ ಉಪ್ಪು (Salt) ಆಹಾರ ರುಚಿಗೆ ಮಾತ್ರ ಪ್ರಮುಖವಾಗಿದೆ ಎಂದು ನಾವು ಅಂದುಕೊಂಡಿರುತ್ತೇವೆ, ಆದರೆ ಇದು ನಮ್ಮ ಆರೋಗ್ಯಕ್ಕೆ ಅಗತ್ಯವಾದ ಅಮೂಲ್ಯ ಖನಿಜವಾದ ಅಯೋಡಿನ್ ಅನ್ನೂ ಒದಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಡುಗೆಮನೆಯಲ್ಲಿ ಸಾಮಾನ್ಯ ಉಪ್ಪಿನ ಬದಲು ಪಿಂಕ್ ಸಾಲ್ಟ್ ಸೆಲ್ಟಿಕ್ ಸಾಲ್ಟ್ ಬಳಕೆ ಮಾಡುವ ಪ್ರಮಾಣ ಹೆಚ್ಚಾಗಿದೆ. ಇಂತಹ ಉಪ್ಪಿನ‌ ಸೇವನೆ ಆರೋಗ್ಯಕ್ಕೆ ಹೇಗೆ ಪರಿಣಾಮ ಬೀರಬಹುದು? ಎಂದು ಪೌಷ್ಟಿಕತಜ್ಞರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಪಿಂಕ್ ಸಾಲ್ಟ್ (Pink Salt)

ಇದು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳನ್ನು ಹೊಂದಿರುತ್ತದೆ. ಆದರೆ ದೇಹಕ್ಕೆ ಆರೋಗ್ಯ ಲಾಭ ಸಿಗಬೇಕಾದರೆ ದಿನಕ್ಕೆ 30 ಗ್ರಾಂಗಳಿಗಿಂತ ಹೆಚ್ಚು ಅಥವಾ ಸುಮಾರು ಆರು ಟೀ ಚಮಚಗಳಷ್ಟು ಈ ಉಪ್ಪು ಬೇಕಾಗುತ್ತವೆ ಎಂದು ಪ್ರಯೋಗಾಲಯ ವಿಶ್ಲೇಷಣೆ ತೋರಿಸುತ್ತದೆ. ಇದರ ಸೇವನೆ ಬಹಳಷ್ಟು ಅಪಾಯಕಾರಿಯಾಗಿದ್ದು ಎಲ್ಲಕ್ಕಿಂತ ಮುಖ್ಯವಾಗಿ, ಇದರಲ್ಲಿ ಅಯೋಡಿನ್ ಅಂಶ ಇರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಸೆಲ್ಟಿಕ್ ಸಾಲ್ಟ್ (Celtic Salt)

ಇದು ಹೆಚ್ಚಿನ ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಇದು ಸಾಮಾನ್ಯ ಟೇಬಲ್ ಉಪ್ಪಿಗಿಂತ ಭಿನ್ನವಾಗಿ ತೇವಾಂಶ ಮತ್ತು ವಿಶಿಷ್ಟ ರುಚಿಯನ್ನು ಹೊಂದಿರುತ್ತದೆ. ಆದರೆ ಇದರಲ್ಲೂ ಅಯೋಡಿನ್ ಕೊರತೆ ಇದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಕೇವಲ ಎರಡೇ ವಾರ ಸಕ್ಕರೆಯಿಂದ ಅಂತರ ಕಾಯ್ದುಕೊಂಡರೆ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನ ಸಿಗುತ್ತೆ ಗೊತ್ತಾ?

ಅಯೋಡಿಕರಿಸಿದ ಉಪ್ಪು (Iodised Salt)

ಒಂದು ಗ್ರಾಂ ಸುಮಾರು 30 ಮೈಕ್ರೋಗ್ರಾಂಗಳಷ್ಟು ಅಯೋಡಿನ್ ಅನ್ನು ಹೊಂದಿರುತ್ತದೆ. ಕೇವಲ ಒಂದು ಟೀ ಚಮಚವು ದೈನಂದಿನ ಅಯೋಡಿನ್ ಅವಶ್ಯಕತೆಯ ಅರ್ಧದಷ್ಟು ಭಾಗವನ್ನು ಒದಗಿ ಸುತ್ತದೆ. ಇದು ಥೈರಾಯ್ಡ್ ಹಾರ್ಮೋನುಗಳುಗಳಿಗೆ , ಮಕ್ಕಳ ಬೆಳವಣಿಗೆಗೆ ಅತಿ ಅಗತ್ಯವಾಗಿದೆ. ಅಯೋಡಿಕರಿಸಿದ ಉಪ್ಪನ್ನು ಕಡ್ಡಾಯಗೊಳಿಸಿದ ನಂತರ ಥೈರಾಯ್ಡ್ ಸಮಸ್ಯೆಗಳು ಶೇ. 70 ರಷ್ಟು ಕಡಿಮೆಯಾದವು. ಹಾಗಾಗಿ ಅಯೋಡಿಕರಿಸಿದ ಉಪ್ಪನ್ನು ಬಳಕೆ ಮಾಡುವುದು ಉತ್ತಮ‌ ಎಂದು ತಜ್ಞರು ಸಲಹೆ ನೀಡಿದ್ದಾರೆ.

ನೀವು ಸಾಮಾನ್ಯ ಉಪ್ಪನ್ನು ಬಿಟ್ಟು ಇಂತಹ ಉಪ್ಪು ಬಳಸುತ್ತಿದ್ದರೆ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೆಚ್ಚಿನ ಭಾರತೀಯರು ಆಹಾರದಿಂದ ಸಾಕಷ್ಟು ಅಯೋಡಿನ್ ಪಡೆ ಯುವುದಿಲ್ಲ. ಅಯೋಡಿಕರಿಸಿದ ಉಪ್ಪನ್ನು ಬಳಕೆ ಮಾಡದೆ ಇದ್ದರೆ ಥೈರಾಯ್ಡ್ ಸದ್ದಿಲ್ಲದೆ ಬರಬಹುದು. ಆಯಾಸ, ಶೀತ ಸಂವೇದನೆ, ಮೊಂಡುತನದ ತೂಕ, ಕೂದಲು ಉದುರುವಿಕೆಯಂತ ಲಕ್ಷಣಗಳು ನಿಧಾನವಾಗಿ ಕಾಣಿಸಿಕೊಳ್ಳುತ್ತವೆ.

ಪರಿಹಾರವೇನು?

ಬೇಳೆ, ಅನ್ನ ಸಾಂಬಾರ್ ಅಥವಾ ತಿಂಡಿ ಮಾಡುವಾಗ ಸಾಮಾನ್ಯ ಅಯೋಡಿಕರಿಸಿದ ಉಪ್ಪನ್ನೇ ಬಳಸಿ. ಇದು ನಿಮ್ಮ ಥೈರಾಯ್ಡ್ ಸಮಸ್ಯೆಯಿಂದ ರಕ್ಷಣೆ ನೀಡುತ್ತದೆ. ನೋಡಲು ಚೆನ್ನಾಗಿದೆ ಅಥವಾ ಟ್ರೆಂಡ್ಂಗ್ ಇದೆ ಎಂದು ಕಲರ್‌ ಕಲರ್‌ ಉಪ್ಪನ್ನು ಬಳಕೆ ಮಾಡಬೇಡಿ.