ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Health Tips: ಯಾವ ಬಗೆಯ ಅಕ್ಕಿ ಹೆಚ್ಚು ಆರೋಗ್ಯಕರ? ಇಲ್ಲಿದೆ ಡಿಟೇಲ್ಸ್‌

ಅಕ್ಕಿ ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ ಎಂಬ ಬಗ್ಗೆ ಚರ್ಚೆ ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದೆ . ಮಾತ್ರವಲ್ಲ, ಬಿಳಿ ಅಕ್ಕಿ, ಕೆಂಪು ಅಕ್ಕಿ, ಕುಚ್ಚಲಕ್ಕಿ, ಪರಿಮಳದ ಅಕ್ಕಿಗಳು ಮುಂತಾದ ಹಲವು ಬಗೆಯ ಅಕ್ಕಿಗಳಲ್ಲಿ ಯಾವುದು ಒಳ್ಳೆಯದು ಎನ್ನುವುದು ಸಹ ಈ ಚರ್ಚೆಯ ಭಾಗ ವಾಗಿದೆ. ಯಾವ ಅಕ್ಕಿಯ ಗುಣಾವ ಗುಣ ಗಳೇನೇನು ಎಂಬುದನ್ನು ಅರ್ಥ ಮಾಡಿಕೊಂಡರೆ, ನಮ್ಮ ಆರೋಗ್ಯದ ನಿರ್ಧಾರವನ್ನು ನಾವೇ ಮಾಡಿಕೊಳ್ಳಬಹುದು.

ಯಾವ ಬಣ್ಣದ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದು?

ಸಾಂದರ್ಭಿಕ ಚಿತ್ರ

Profile Pushpa Kumari Feb 19, 2025 5:00 AM

ನವದೆಹಲಿ: ವಿಶ್ವದಲ್ಲಿ ಅತಿ ಹೆಚ್ಚಿನ ಜನರು ಆಹಾರವಾಗಿ ಬಳಸುವ ಧಾನ್ಯವೆಂದರೆ ಅಕ್ಕಿ. ಅದರಲ್ಲೂ ಏಷ್ಯಾ ಖಂಡದಲ್ಲಿ ಅಕ್ಕಿಯನ್ನು ಮುಖ್ಯ ಆಹಾರವಾಗಿ ಬಳಸುವವರ ಸಂಖ್ಯೆ ಬಹುದೊಡ್ಡದು. ಗೋದಿಯನ್ನು ಆಹಾರವಾಗಿ ಬಳಸುವವರು ಸಹ ದೊಡ್ಡ ಸಂಖ್ಯೆ ಯಲ್ಲಿರುವುದರಿಂದ, ಅಕ್ಕಿ ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ ಎಂಬ ಬಗ್ಗೆ ಚರ್ಚೆ ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ(Health Tips). ಮಾತ್ರವಲ್ಲ, ಬಿಳಿ ಅಕ್ಕಿ, ಕೆಂಪು ಅಕ್ಕಿ, ಕುಚ್ಚಲಕ್ಕಿ, ಪರಿಮಳದ ಅಕ್ಕಿಗಳು ಮುಂತಾದ ಹಲವು ಬಗೆಯ ಅಕ್ಕಿಗಳಲ್ಲಿ ಯಾವುದು ಒಳ್ಳೆಯದು ಎನ್ನುವುದು ಸಹ ಈ ಚರ್ಚೆಯ ಭಾಗ ವಾಗಿದೆ. ಯಾವ ಅಕ್ಕಿಯ ಗುಣಾವ ಗುಣ ಗಳೇನೇನು ಎಂಬುದನ್ನು ಅರ್ಥ ಮಾಡಿಕೊಂಡರೆ, ನಮ್ಮ ಆರೋಗ್ಯದ ನಿರ್ಧಾರವನ್ನು ನಾವೇ ಮಾಡಿಕೊಳ್ಳಬಹುದು.

ಬಿಳಿ ಅಕ್ಕಿ: ವಿಶ್ವದ ಹೆಚ್ಚಿನೆಡೆಗಳಲ್ಲಿ ಬಳಕೆಯಾಗುವ ಅಕ್ಕಿಯಿದು. ಅತಿ ಹೆಚ್ಚಿನ ಪ್ರಮಾಣದ ಪಿಷ್ಟ ಇದರಲ್ಲಿ ಇರುವುದರಿಂದ ತೂಕ ಇಳಿಸುವ ಉದ್ದೇಶವಿದ್ದವರು ಇದನ್ನು ಕಡಿಮೆ ಬಳಸುವುದು ಒಳ್ಳೆಯದು ಎನ್ನುತ್ತಾರೆ ಆಹಾರ ತಜ್ಞರು. ಅಕ್ಕಿಯ ಮೇಲ್ಪದರದಲ್ಲಿರುವ ಸಿಪ್ಪೆ, ತೌಡುಗಳನ್ನು ತೆಗೆ ದು ಹಾಕಿ, ಧಾನ್ಯದ ಬಿಳಿಯ ಭಾಗವನ್ನು ಮಾತ್ರ ಉಳಿಸಿಕೊಳ್ಳುವು ದರಿಂದ ಅಕ್ಕಿಗೆ ಮಲ್ಲಿಗೆಯಂಥ ಬಿಳಿಯ ಬಣ್ಣ ಬರುತ್ತದೆ. ಈ ಅಕ್ಕಿಯಲ್ಲಿರುವ ನಾರಿನಂಶವೂ ಬಹಳ ಕಡಿಮೆ.

ಕೆಂಪಕ್ಕಿ: ಭತ್ತದ ಹೊಟ್ಟನ್ನು ಮಾತ್ರವೇ ತೆಗೆದು ಧಾನ್ಯದ ತೌಡನ್ನು ತೆಗೆಯದೆ ಹಾಗೆಯೇ ಉಳಿಸಿಕೊಂಡಾಗ ದೊರೆಯುವ ಅಕ್ಕಿಯಿದು. ಇದರಲ್ಲಿ ನಾರಿನಂಶ ಹೇರಳವಾಗಿರುತ್ತದೆ. ಮೆಗ್ನೀಶಿಯಂ, ಸೆಲೆನಿಯಂ, ಥಿಯಾಮಿನ್‌, ನಯಾಸಿನ್‌, ವಿಟಮಿನ್‌ ಬಿ೬, ಫಾಸ್ಫರಸ್, ಪೊಟಾಶಿಯಂ ಮುಂತಾದ ಖನಿಜಗಳೂ ಇದರಲ್ಲಿ ಇರುತ್ತವೆ. ಎಪಿಗೆನಿನ್‌ನಂಥ ಉತ್ಕ ರ್ಷಣ ನಿರೋಧಕಗಳೂ ಇದರಿಂದ ದೊರೆಯುತ್ತವೆ. ಮಾತ್ರವಲ್ಲ, ಬಿಳಿ ಯಕ್ಕಿಗೆ ಹೋಲಿಸಿದಲ್ಲಿ ಕೆಂಪಕ್ಕಿಯ ಗ್ಲೈಸೆಮಿಕ್‌ ಇಂಡೆಕ್ಸ್‌ ಸಹ ಕಡಿಮೆ ಇದ್ದು, ಮಧು ಮೇಹಿಗಳು ಸೇವಿಸಬಹುದು.

ಕುಚ್ಚಲಕ್ಕಿ: ಈ ಅಕ್ಕಿಯೂ ಸಹ ತೌಡು ಸೇರಿದ್ದೇ. ಇದರಲ್ಲಿ ಮ್ಯಾಂಗನೀಸ್‌, ಕಬ್ಬಿಣ, ಸತು. ಕ್ಯಾಲ್ಶಿಯಂ, ಸೆಲೆನಿ ಯಂ, ಮೆಗ್ನೀಶಿಯಂ, ಪೊಟಾಶಿಯಂ ಮುಂತಾದ ತರಹೇವಾರಿ ಪೋಷಕಾಂಶಗಳಿವೆ. ನಾರಿನಂಶವೂ ಭರಪೂರ. ಗ್ಲೈಸೆಮಿಕ್‌ ಇಂಡೆಕ್ಸ್‌ ಸಹ ಕಡಿಮೆಯಿದೆ. ಬಿಳಿಯಕ್ಕಿಗಿಂತ ಆರೋಗ್ಯಕರ ಆಯ್ಕೆಯಿದು. ಆದರೆ ಇದು ಬೇಯುವುದಕ್ಕೆ ಉಳಿದೆಲ್ಲ ಅಕ್ಕಿಗಿಂತಲೂ ಹೆಚ್ಚು ಸಮಯ ಮತ್ತು ತಾಳ್ಮೆವನ್ನು ಬೇಡುತ್ತದೆ.

ಕಪ್ಪು ಅಕ್ಕಿ: ನೋಡುವುದಕ್ಕೆ ಕಪ್ಪಾಗಿದ್ದು, ಬೇಯಿಸಿದಾಗ ನೇರಳೆ ಬಣ್ಣಕ್ಕೆ ತಿರುಗುವಂಥ ತಳಿಯಿದು. ನವಿರಾದ ಮಣ್ಣಿನ ಘಮವೂ ಕೆಲವೊಮ್ಮೆ ಈ ಅಕ್ಕಿಗೆ ಇರುತ್ತದೆ. ಉಳಿದೆಲ್ಲಾ ಅಕ್ಕಿಗಳಿಗಿಂತ ಹೆಚ್ಚಿನ ಪ್ರಮಾಣದ ವಿಟ ಮಿನ್‌, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಗಳನ್ನು ಈ ಅಕ್ಕಿ ಹೊಂದಿದೆ. ಆಂಥೋಸಯನಿನ್‌ ಎಂಬ ಉತ್ಕರ್ಷಣ ನಿರೋಧಕಗಳು ಹೆಚ್ಚಿನ ಪ್ರಮಾಣದಲ್ಲಿ ಇದರಲ್ಲಿ ಇರುವುದರಿಂದಲೇ ಈ ಅಕ್ಕಿಯ ಬಣ್ಣ ಕಪ್ಪು. ವಿಟಮಿನ್‌ ಇ, ಪ್ರೊಟೀನ್‌, ನಾರು ಮತ್ತು ಕಬ್ಬಿಣದ ಅಂಶವೂ ಇದ ರಲ್ಲಿ ಹೇರಳ. ಪೌಷ್ಟಿಕತೆಯಲ್ಲಿ ಉಳಿದೆಲ್ಲಾ ಅಕ್ಕಿಗಳಿಗಿಂತ ಇದು ಒಂದು ತೂಕ ಹೆಚ್ಚು ಎನ್ನುತ್ತಾರೆ ಆಹಾರ ತಜ್ಞರು.

ಇದನ್ನು ಓದಿ: Health Tips: ಋತುಬಂಧಕ್ಕೆ ಒಳಗಾಗುವ ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಳ!

ಬಾಸುಮತಿ ಅಕ್ಕಿ: ಕೇವಲ ಇದೊಂದೇ ಅಕ್ಕಿಯಲ್ಲ, ಪರಿಮಳವಿರುವ ಹಲವು ಬಗೆಯ ಅಕ್ಕಿಗಳನ್ನು ಭಾರತದಲ್ಲಿ ಬೆಳೆಯಲಾಗುತ್ತದೆ. ಇಂಥ ಪರಿಮಳ ಸಾಲೆಗಳನ್ನು ಬೆಳೆಯಲು ಬೇಕಾಗುವ ಮಣ್ಣು ಮತ್ತು ಹವಾ ಗುಣಗಳು ಉಳಿದೆಲ್ಲವುಗಳಿಗೆ ಬೇಕಾದ್ದಕ್ಕಿಂ ಭಿನ್ನವೇ ಆಗಿರುತ್ತದೆ. ಒಂದು ಕಪ್‌ ಬಾಸುಮತಿ ಅಕ್ಕಿಯಲ್ಲಿ ಸುಮಾರು ೨೦೦ ಕ್ಯಾಲರಿ ಶಕ್ತಿ ದೊರೆ ಯುತ್ತದೆ. ಅದರಲ್ಲೂ ಬಿಳಿ ಮತ್ತು ಕಂದು ಬಣ್ಣದ ಅಕ್ಕಿಗಳು ಲಭ್ಯವಿದ್ದು, ಬಿಳಿಯದ್ದಕ್ಕಿಂತ ಕಂದು ಬಣ್ಣದ್ದು ಆರೋಗ್ಯಕರ. ಈ ಅಕ್ಕಿಯಲ್ಲಿ ನಾರು, ರಂಜಕ, ಸತು, ನಿಯಾಸಿನ್‌, ಥಯಾಮಿನ್‌ ಸೇರಿದಂತೆ ಹಲವು ಬಗೆಯ ಬಿ ವಿಟಮಿನ್‌ಗಳು ಸಮೃದ್ಧವಾಗಿವೆ. ಆದರೆ ಈ ಅಕ್ಕಿಯನ್ನು ಮುಖ್ಯವಾಗಿ ಅಡುಗೆಯ ರುಚಿ ಮತ್ತು ಘಮ ಹೆಚ್ಚಿಸುವುದಕ್ಕಾಗಿಯೇ ಬಳಸಲಾಗುತ್ತದೆ.