ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

White Hair: ಯೌವನದಲ್ಲೇ ಬಿಳಿಗೂದಲು; ಏನಿದಕ್ಕೆ ಪರಿಹಾರ?

ತಲೆಯಲ್ಲಿ ಬಿಳಿ ಕೂದಲುಗಳು ಬಂತೆಂದರೆ ದೇಹಕ್ಕೆ ವಯಸ್ಸಾಯ್ತು ಎಂದು ಕಳವಳಿಸುವುದರಲ್ಲಿ ಅರ್ಥವಿಲ್ಲ. ಕಾರಣ, ಹದಿಹರೆಯ ದಾಟುತ್ತಿದ್ದಂತೆ ಕೂದಲು ಬೆಳ್ಳಗೆ ಮಿಂಚಲು ಪ್ರಾರಂಭಿಸುವುದು ಹೊಸದೇನಲ್ಲ. ಇದಕ್ಕೆ ಕಾರಣಗಳೇನು? ವಯಸ್ಸಾಗುವುದಕ್ಕೂ ಕೂದಲು ಬಿಳಿಯಾಗುವುದಕ್ಕೂ ಸಂಬಂಧವೇ ಇಲ್ಲವೇ ಹಾಗಿದ್ದರೆ? ಇದನ್ನು ನಿಲ್ಲಿಸಲು ಸಾಧ್ಯವೇ? ಅದಕ್ಕೇನು ಮಾಡಬೇಕು?

ಬಿಳಿ ಕೂದಲಿನ‌ ಸಮಸ್ಯೆಗೆ ಇಲ್ಲಿದೆ ಪರಿಹಾರ

white hair

Profile Pushpa Kumari Apr 1, 2025 7:00 AM

ನವದೆಹಲಿ: ಕಾರ್ಮೋಡದಂಥ ಕೇಶರಾಶಿಯನ್ನು ಹೊಂದಬೇಕೆಂಬುದು ಲೆಕ್ಕವಿಲ್ಲದಷ್ಟು ಜನರ ಆಸೆ. ಆದರೆ ಈ ಕರಿಮುಗಿಲಿನಂಥ ಕೇಶದಲ್ಲಿ ಕೋಲ್ಮಿಂಚಿನಂಥ ಬಿಳಿ ಕೂದಲುಗಳು (White Hair) ಕಾಣಿಸಿ ಕೊಂಡರೆ…? ಕಣ್ಣಲ್ಲಿ ಸೋನೆ! ತಲೆಯಲ್ಲಿ ಬಿಳಿ ಕೂದಲುಗಳು ಬಂತೆಂದರೆ ದೇಹಕ್ಕೆ ವಯಸ್ಸಾಯ್ತು ಎಂದು ಕಳವಳಿಸುವುದರಲ್ಲಿ ಅರ್ಥವಿಲ್ಲ. ಕಾರಣ, ಹದಿ ಹರೆಯ ದಾಟುತ್ತಿದ್ದಂತೆ ಕೂದಲು ಬೆಳ್ಳಗೆ ಮಿಂಚಲು ಪ್ರಾರಂಭಿಸು ವುದು ಹೊಸದೇನಲ್ಲ. ಇದಕ್ಕೆ ಕಾರಣಗಳೇನು? ವಯಸ್ಸಾಗುವುದಕ್ಕೂ ಕೂದಲು ಬಿಳಿಯಾಗುವುದಕ್ಕೂ ಸಂಬಂಧವೇ ಇಲ್ಲವೇ ಹಾಗಿದ್ದರೆ? ಇದನ್ನು ನಿಲ್ಲಿಸಲು ಸಾಧ್ಯವೇ? ಅದಕ್ಕೇನು ಮಾಡಬೇಕು?

ಪೋಷಕಾಂಶಗಳು

ಇವುಗಳ ಕೊರತೆಯು ಕಡಿಮೆ ವಯೋಮಾನದವರಿಗೂ ಬಿಳಿಕೂದಲನ್ನು ತರಬಲ್ಲದು. ಕೂದಲಿನ ಬಣ್ಣ ನಿರ್ಧಾರವಾಗುವುದು ಚರ್ಮದಲ್ಲಿರುವ ಮೆಲನಿನ್‌ ಅಂಶದಿಂದ. ಮೆಲನಿನ್‌ ಕಡಿಮೆಯಾದರೆ ಕೂದಲು ಬಿಳಿ ಯಾಗುತ್ತದೆ. ಈ ಅಂಶದ ಕೊರತೆಯಾಗದಂತೆ ಕಾಪಾಡಲು ಕಬ್ಬಿಣ, ತಾಮ್ರ, ವಿಟಮಿನ್‌ ಬಿ12 ಇತ್ಯಾದಿ ಸತ್ವಗಳು ಬೇಕಾಗುತ್ತವೆ.

ಏನು ಮಾಡಬೇಕು?

ಮೆಲನಿನ್‌ ಉತ್ಪಾದನೆಗೆ ಪೂರಕವಾದ ಆಹಾರವನ್ನು ಸೇವಿಸಬೇಕು. ಅಂದರೆ ಹಸಿರು ಸೊಪ್ಪು-ತರಕಾರಿಗಳು, ಡೇರಿ ಉತ್ಪನ್ನಗಳು, ಮೊಟ್ಟೆ, ಕಾಯಿ-ಬೀಜಗಳು ಆಹಾರದಲ್ಲಿ ಸಾಕಷ್ಟಿರಬೇಕು. ಇದಲ್ಲದೆ, ಇಡೀ ಧಾನ್ಯಗಳು ಮತ್ತು ಬೇಳೆ-ಕಾಳುಗಳಲ್ಲಿಯೂ ಈ ಸತ್ವಗಳು ದೊರೆಯುತ್ತವೆ. ಆದರೆ ವೇಗನ್‌ ಮತ್ತು ಸಸ್ಯಾಹಾರಿಗಳು ವಿಟಮಿನ್‌ ಬಿ12 ಪೂರಕ ಮಾತ್ರೆಗಳು ಅಗತ್ಯವೇ ಎಂಬ ಬಗ್ಗೆ ವೈದ್ಯರಲ್ಲಿ ಮಾತಾಡಿ.

ಒತ್ತಡ

ಮಾನಸಿಕ ಒತ್ತಡ ಹೆಚ್ಚಾದರೆ ಬಲುಬೇಗನೇ ಕೂದಲು ಬೆಳ್ಳಗಾಗುತ್ತದೆ. ರಾತ್ರಿ ಬೆಳಗಾಗುವಷ್ಟರಲ್ಲಿ ಕೂದಲ ಬಣ್ಣ ವ್ಯತ್ಯಾಸವಾಗುತ್ತದೆ ಎಂದಲ್ಲ. ಆದರೆ ಅದು ನಿಶ್ಚಿತವಾಗಿ ಪರಿಣಾಮ ಬೀರುವುದು ಹೌದು. ಮಾನಸಿಕ ಒತ್ತಡದಿಂದ ಮೆಲನಿನ್‌ ಉತ್ಪಾದನೆ ಕುಂಠಿತಗೊಳ್ಳುವುದು ಇದಕ್ಕೆ ಮುಖ್ಯ ಕಾರಣ.

ಏನು ಮಾಡಬೇಕು?

ದಿನಕ್ಕೆ ಕನಿಷ್ಠ 10 ನಿಮಿಷಗಳ ಕಾಲ ಧ್ಯಾನ, ಪ್ರಾಣಾಯಾಮ ಅಗತ್ಯ. ಯೋಗಾಭ್ಯಾಸ ಈ ನಿಟ್ಟಿನಲ್ಲಿ ದೊಡ್ಡ ಸಹಾಯ ಮಾಡಬಲ್ಲದು. ಇದಲ್ಲದೆ ನಿಯಮಿತವಾದ ವ್ಯಾಯಾಮಗಳು, ಸಂಗೀತ ಕೇಳುವುದು, ಏಕಾಂತಕ್ಕೆ ಸಮಯ ನೀಡುವುದು, ಪ್ರತಿ ದಿನ ನಿಯಮಿತವಾದ 7-8 ತಾಸುಗಳ ನಿದ್ದೆ- ಇವೆಲ್ಲವೂ ಒತ್ತಡ ನಿವಾರಣೆಗೆ ಅತ್ಯಂತ ಸಹಕಾರಿ.

ಹೇರ್‌ಕೇರ್‌ ಉತ್ಪನ್ನಗಳು

ಇದೊಂಥರಾ ಬಣ್ಣದ ಬಾಂಬೆ ಮಿಠಾಯಿ ಇದ್ದಂತೆ. ತಿನ್ನಲು ಆಸೆ; ತಿಂದರೆ ಆರೋಗ್ಯ ಹಾಳು! ವಿವಿಧ ಪರಿಮಳಗಳನ್ನು ಹೊಂದಿದ, ಸದ್ಗುಣಗಳನ್ನು ಕೊಚ್ಚಿಕೊಳ್ಳುವ ಶಾಂಪೂ, ಕಂಡೀಶನರ್‌ ಇತ್ಯಾದಿಗಳು ನಿಜಕ್ಕೂ ಹೇಳಿಕೊಂಡಷ್ಟು ಒಳ್ಳೆಯದು ಅಲ್ಲದಿರಬಹುದು.

ಏನು ಮಾಡಬೇಕು?

ಈ ಮಂಕುಬೂದಿ ಎರಚುವ ಉತ್ಪನ್ನಗಳ ಬದಲಿಗೆ, ಸಲ್ಫೇಟ್‌ ಮತ್ತು ಪ್ಯಾರಬೆನ್‌ ಇಲ್ಲದಂಥವು, ಆದಷ್ಟೂ ಕೆರಾಟಿನ್‌, ಅಲೋವೇರಾದಂಥ ಅಂಶಗಳಿರುವ ಉತ್ಪನ್ನಗಳನ್ನು ಬಳಸುವುದು ಪ್ರಯೋಜನವಾದೀತು. ವಾರಕ್ಕೆ 2-3 ಬಾರಿ ತಲೆಸ್ನಾನ ಸಾಕು. ನಿತ್ಯವೂ ಬೇಕಿಲ್ಲ.

ಸ್ಟೈಲಿಂಗ್ ಉತ್ಪನ್ನಗಳು

ಇದು ಇತ್ತೀಚಿನ ವರ್ಷಗಳ ಮೋಡಿ. ಬಟ್ಟೆಯಂತೆ ಕೂದಲನ್ನೂ ಸರಿಯಾಗಿ ಇಸ್ತ್ರಿ ಮಾಡಿ (ಹೀಟ್‌ ಸ್ಟೈಲಿಂಗ್), ಬೇಕಾದಂತೆ ಕೂರಿಸಿಕೊಳ್ಳುವ ಈ ಹುಚ್ಚಿನಿಂದಾಗಿ ಕೂದಲಿಗೆ ತೊಂದರೆ ತಂದುಕೊಳ್ಳುವ ಉದಾಹರಣೆಗಳೇ ಹೆಚ್ಚು. ಇದಲ್ಲದೆ, ರಾಸಾಯನಿಕಗಳನ್ನು ಬಳಸಿ ನೇರ್ಪಾಗಿಸಿಕೊಳ್ಳುವುದು, ಹೇರ್‌ ಡೈಗಳು‌, ಬ್ಲೀಚಿಂಗ್‌ನಂಥ ಕೆಲಸಗಳು ಕೂದಲಿನ ಮೆಲನಿನ್‌ಗೆ ತೀವ್ರ ಹಾನಿಯನ್ನು ಮಾಡಬಲ್ಲವು.

ಇದನ್ನು ಓದಿ: Health Tips: ಬೇಸಿಗೆಯಲ್ಲಿ ಯಾವ ಬಗೆಯ ಚರ್ಮದ ಆರೈಕೆ ಹೇಗಿರಬೇಕು?

ಏನು ಮಾಡಬೇಕು?

ಅಮೋನಿಯ ರಹಿತವಾದ ನೈಸರ್ಗಿಕ ಅಂಶಗಳನ್ನೊಳಗೊಂಡ ಡೈ ಉಪಯೋಗಿಸಿ. ರಾಸಾಯನಿಕಗಳ ಬಳಕೆಗೆ ಕಡಿವಾಣ ಹಾಕಿ. ಸದಾ ಕಾಲ ಹೀಟ್‌ ಸ್ಟೈಲಿಂಗ್‌ ಮಾಡುವುದರಿಂದ ಕೂದಲು ತುಂಡಾಗಿ ಉದುರುತ್ತದೆ. ತಲೆಯಲ್ಲಿ ಕೂದಲೇ ಉಳಿಯದ ಮೇಲೆ, ಬಿಳಿಯಾದರೇನು, ಕರಿಯಾದರೇನು!

ವಾತಾವರಣ

ದಿನವೂ ಸಾಕಷ್ಟು ಧೂಳು, ಹೊಗೆ, ಬಿಸಿಲಿಗೆಲ್ಲ ಕೂದಲನ್ನು ಒಡ್ಡುವುದು ಅನಿವಾರ್ಯ. ಇದರಿಂದ ಚರ್ಮ ಸುಕ್ಕಾಗಿ ವಯಸ್ಸಾದಂತೆ ಕಾಣುವ ಹಾಗೆ, ಕೂದಲಿನ ವಯಸ್ಸು ಹೆಚ್ಚಾಗಿ ಬಿಳಿಯಾಗುತ್ತದೆ. ಏನು ಮಾಡಬೇಕು?: ಬಿಸಿಲಿಗೆ ಹೋಗುವಾಗ ತಲೆಯನ್ನು ಮುಚ್ಚುವಂತೆ ಬಿಸಿಲಿನ ಟೋಪಿ ಧರಿಸಿ. ವಾತಾವರಣದ ಮಾಲಿನ್ಯದಿಂದ ರಕ್ಷಿಸಿಕೊಳ್ಳು ವುದಕ್ಕೆ ತಲೆಗೆ ಸ್ಕಾರ್ಫ್‌ ಬಳಸಬಹುದು. ವಾರಕ್ಕೆ ಒಂದೆರಡು ಬಾರಿ ಯಾದರೂ ತಲೆಗೆಲ್ಲ ಲಘುವಾಗಿ ಎಣ್ಣೆ ಮಸಾಜ್‌ ಮಾಡಿ. ಇದರಿಂದ ಕೂದಲಿನ ಆರೈಕೆ ಚೆನ್ನಾಗಿರುತ್ತದೆ.