Benefits Of Sprouts: ಉಪಾಹಾರಕ್ಕೆ ಮೊಳಕೆ ಕಾಳು ಸೇವಿಸಿದರೆ ಸಿಗುತ್ತೆ ಆರೋಗ್ಯ ಭಾಗ್ಯ
ಮೊಳಕೆ ಕಾಳುಗಳು ಸಸ್ಯಾಹಾರಿ ಪ್ರೋಟೀನ್ ಮೂಲಗಳಲ್ಲಿ ಒಂದಾಗಿದ್ದು, ಹುರುಳಿ, ಹೆಸರು, ಕಡಲೆ, ಮುಂತಾದ ಕಾಳುಗಳನ್ನು ಮೊಳೆಕೆ ಬರಿಸಿ ಸೇವಿಸಿದರೆ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇವು ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ವಿಟಮಿನ್ಗಳಂತಹ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದ್ದು, ಎಲ್ಲ ವಯೋಮಾನದವರು ಸೇವಿಸಬಹುದು.

sprouts

ನವದೆಹಲಿ: ಮೊಳಕೆ ಬರಿಸಿದ ಕಾಳುಗಳು (Benefits Of Sprouts) ಅತ್ಯಂತ ಆರೋಗ್ಯಕರ ಆಹಾರ ಪದಾರ್ಥಗಳಲ್ಲಿ ಒಂದಾಗಿದ್ದು ದೇಹಕ್ಕೆ ಬಹಳಷ್ಟು ಉತ್ತಮ. ಮೊಳಕೆ ಬರಿಸಿದ ಕಾಳುಗಳನ್ನು (Sprouts) ಬೆಳಗ್ಗೆ ತಿನ್ನುವುದು ತುಂಬಾನೇ ಒಳ್ಳೆಯದು ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ. ಮೊಳಕೆ ಕಾಳುಗಳು ಸಸ್ಯಾಹಾರಿ ಪ್ರೋಟೀನ್ ಮೂಲಗಳಲ್ಲಿ ಒಂದಾಗಿದ್ದು, ಹುರುಳಿ, ಹೆಸರು, ಕಡಲೆ, ಮುಂತಾದ ಕಾಳುಗಳನ್ನು ಮೊಳಕೆ ಬರಿಸಿ ಸೇವಿಸಿದರೆ ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತದೆ. ಇವು ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ವಿಟಮಿನ್ಗಳಂತಹ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದ್ದು, ಮಕ್ಕಳಿಗೆ, ಗರ್ಭಿಣಿಯರಿಗೆ, ವೃದ್ಧರಿಗೆ ಸೇರಿದಂತೆ ಎಲ್ಲಾ ವಯೋಮಾನದವರು ಸೇವಿಸಬಹುದು. ಇವುಗಳನ್ನು ಬೆಳಗಿನ ಉಪಾಹಾರವಾಗಿ ಸೇವಿಸುವುದರಿಂದ ರೋಗ ನೀರೋಧಕ ಶಕ್ತಿಯು ಹೆಚ್ಚುತ್ತದೆ. ಜತೆಗೆ ಕ್ಯಾನ್ಸರ್‌ನಂತಹ ಹಲವು ಗಂಭೀರ ಕಾಯಿಲೆಯನ್ನು ತಡೆಯಲು ಸಹಾಯ ಮಾಡುತ್ತದೆ
ಜೀರ್ಣಕ್ರಿಯೆಯನ್ನು ಸುಧಾರಿಸುವುದು
ಮೊಳಕೆ ಬರಿಸಿದ ಕಾಳುಗಳಲ್ಲಿ ನಾರಿನಾಂಶ ಹಾಗೂ ಒಮೆಗಾ-3 ಕೊಬ್ಬಿನಾಮ್ಲಗಳು ಹೆಚ್ಚಾಗಿ ಇರುತ್ತದೆ. ಇದನ್ನು ನಿತ್ಯ ಸೇವಿಸುವುದರಿಂದ ಆರೋಗ್ಯ ಸುಧಾರಿಸುವುದಲ್ಲದೆ ದೇಹದ ಚಯಾಪಚಯ ಕ್ರಿಯೆಯನ್ನು ಸರಾಗವಾಗುತ್ತದೆ. ಹಾಗೆಯೇ ಜಿರ್ಣ ಕ್ರಿಯೆಯನ್ನು ಸಕ್ರಿಯಗೊಳಿಸಿ ಮಲ ಬದ್ಧತೆ, ಅತಿಸಾರ ಹಾಗೂ ಕರುಳಿನ ಕ್ಯಾನ್ಸರ್ ತಡೆಯುತ್ತದೆ.
ಹೃದಯದ ಆರೋಗ್ಯವನ್ನು ಕಾಪಾಡುವುದು
ಮೊಳಕೆ ಭರಿಸಿದ ಕಾಳು ಬೆಳಗಿನ ಜಾವದಲ್ಲಿ ತಿಂದರೆ ಹೃದಯದ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಇದರಲ್ಲಿ ನಾರಿನಾಂಶ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿ ಇರುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇವುಗಳಲ್ಲಿ ಇರುವ ನಾರಿನಂಶವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ರಕ್ತ ಪರಿಚಲನೆಯನ್ನು ಸುಲಭ ಗೊಳಿಸುತ್ತದೆ.
ಚರ್ಮಕ್ಕೂ ಉತ್ತಮ
ಮೊಳಕೆ ಕಾಳುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳ ಪ್ರಮಾಣ ಹೆಚ್ಚು ಇರುತ್ತದೆ. ಹಾಗಾಗಿ ಇದರ ಸೇವನೆಯು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಇ ಮತ್ತು ವಿಟಮಿನ್ ಸಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಕೂಡ ಸಹಾಯ ಮಾಡುತ್ತದೆ.
ಸಕ್ಕರೆ ಮಟ್ಟ ನಿಯಂತ್ರಿಸಲು ಸಹಕಾರಿ
ಮೊಳಕೆ ಕಾಳುಗಳು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ರಕ್ತದ ಇನ್ಸುಲಿನ್ ಮಟ್ಟವನ್ನು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಕಾರಿ. ಜತೆಗೆ ದೇಹಕ್ಕೆ ಅಗತ್ಯವಾದ ಅಮಿಲೇಸ್ ಎಂಜೈ ಮಗಳು ಹೆಚ್ಚು ಉತ್ಪತ್ತಿಯಾಗಲು ಮೊಳಕೆಕಾಳುಗಳ ಸೇವನೆ ಅಗತ್ಯ. ಇನ್ನು ಬ್ರೊಕೊಲಿಯಲ್ಲಿರುವ ಸಲ್ಫೊರಾಫೆನ್ ಗುಣವು ಟೈಪ್-2 ಡಯಾಬಿಟೀಸ್ ರೋಗಿಗಳ ದೇಹದಲ್ಲಿನ ಗ್ಲೂಕೋಸ್ ಮಟ್ಟ ನಿಯಂತ್ರಿಸಲು ಸಹಕಾರಿ.
ತೂಕ ಇಳಿಸಲು ಸಹಕಾರಿ
ಮೊಳಕೆಕಾಳುಗಳು ಹೆಚ್ಚು ಪ್ರಮಾಣದ ನಾರಿನಾಂಶ ಹೊಂದಿರುವುದರಿಂದ ದೇಹ ತೂಕ ಕಡಿಮೆ ಮಾಡಿಕೊಳ್ಳಲು ಇಚ್ಚಿಸುವವರು ಇದರ ಸೇವನೆ ಮಾಡಬಹುದು. ಇವುಗಳಲ್ಲಿನ ನಾರಿನಾಂಶವು ಹಸಿವಾಗುವುದನ್ನು ತಡೆಯುತ್ತದೆ. ಜತೆಗೆ ಹೆಚ್ಚು ಶಕ್ತಿ ನೀಡುವಂತೆ ಮಾಡುತ್ತದೆ. ಮೊಳಕೆ ಕಾಳುಗಳ ನಿಯಮಿತ ಸೇವನೆಯಿಂದ ಹೊಟ್ಟೆ ಭಾಗದ ಬೊಜ್ಜನ್ನು ಕೂಡ ಕರಗಿಸಲು ಸಾಧ್ಯ.
ಇದನ್ನು ಓದಿ: Health Tips: ಬೇಸಿಗೆಯಲ್ಲಿ ಕಾಡುವ ಮಲಬದ್ಧತೆಗೆ ಪರಿಹಾರವೇನು?
ರಕ್ತಹೀನತೆಯನ್ನು ಸುಧಾರಿಸುತ್ತದೆ
ಮೊಳಕೆಗಳಲ್ಲಿ ಕಬ್ಬಿಣ ಮತ್ತು ರಂಜಕವಿದೆ. ಮೊಳಕೆ ಕಾಳು ತಿನ್ನುವುದರಿಂದ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಬಹುದು. ರಕ್ತಹೀನತೆ ಸಮಸ್ಯೆ ಇರುವವರು ಪ್ರತಿದಿನ ಮೊಳಕೆ ಕಾಳು ಸೇವನೆ ಮಾಡಿದರೆ ಉತ್ತಮ.ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ ರಕ್ತಹೀನತೆಯನ್ನು ತಡೆಯುತ್ತದೆ.
ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಮೊಳಕೆ ಕಾಳುಗಳ ಸೇವನೆಯಿಂದ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಕಾಳುಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ಇದ್ದು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ಇದರಲ್ಲಿರುವ ಊತ್ಕರ್ಷಣ ನಿರೋಧಕ ಅಂಶಗಳು ಕಣ್ಣಿನ ಕೋಶಗಳನ್ನು ಫ್ರೀ ರಾಡಿಕಕ್‌ಗಳ ಹಾನಿಯಿಂದ ರಕ್ಷಿಸುತ್ತದೆ.