ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AIIMS Recruitment 2025: ಏಮ್ಸ್‌ನಲ್ಲಿದೆ ಬರೋಬ್ಬರಿ 1,383 ಹುದ್ದೆ; 10, 12ನೇ ತರಗತಿ, ಐಟಿಐ ಪಾಸಾದವರು ಅಪ್ಲೈ ಮಾಡಿ

Job Guide: ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 1,383 ಹುದ್ದೆಗಳಿವೆ. ಪದವಿ, 12ನೇ ತರಗತಿ, ಡಿಪ್ಲೋಮಾ ಮುಂತಾದ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಲಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಡಿಸೆಂಬರ್‌ 2.

ಏಮ್ಸ್‌ನಲ್ಲಿದೆ ಬರೋಬ್ಬರಿ 1,383 ಹುದ್ದೆ (ಸಾಂದರ್ಭಿಕ ಚಿತ್ರ).

ದೆಹಲಿ, ನ. 17: ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ (All India Institute Of Medical Sciences) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸೀನಿಯರ್‌ ನರ್ಸಿಂಗ್‌, ಡ್ರೈವರ್‌, ಜೂನಿಯರ್‌ ಎಂಜಿನಿಯರ್‌ (ಸಿವಿಲ್, ಎಲೆಕ್ಟ್ರಿಕಲ್‌)‌, ಕ್ಯಾಶಿಯರ್‌/ಜೂನಿಯರ್‌ ಅಕೌಂಟ್ಸ್‌ ಆಫೀಸರ್‌ ಸೇರಿ ಒಟ್ಟು 1,383 ಹುದ್ದೆಗಳಿವೆ (AIIMS Recruitment 2025). ಪದವಿ, 12ನೇ ತರಗತಿ, ಡಿಪ್ಲೋಮಾ ಮುಂತಾದ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಲಬಹುದು (Job Guide). ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಡಿಸೆಂಬರ್‌ 2.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಅಸಿಸ್ಟಂಟ್‌ ಡಯಟಿಷಿಯನ್‌, ಅಸಿಸ್ಟಂಟ್‌, ಲೋವರ್‌ ಡಿವಿಷನ್‌ ಕ್ಲರ್ಕ್‌, ಜೂನಿಯರ್‌ ಎಂಜಿನಿಯರ್‌, ಅಸಿಸ್ಟಂಟ್‌ ಎಂಜಿನಿಯರ್‌, ಸ್ಪೀಚ್‌ ಥೆರಪಿಸ್ಟ್‌, ಎಲೆಕ್ಟ್ರಿಷಿಯನ್‌, ಅಸಿಸ್ಟಂಟ್‌ ಲಾಂಡ್ರಿ ಸೂಪರ್‌ವೈಸರ್‌, ಟೆಕ್ನೀಷಿಯನ್‌, ಫಾರ್ಮಸಿಸ್ಟ್‌, ಜೂನಿಯರ್‌ ಸ್ಟೋರ್‌ ಆಫೀಸರ್‌, ಸಿಎಸ್‌ಎಸ್‌ಡಿ ಟೆಕ್ನೀಷಿಯನ್‌, ಲೈಬ್ರರಿ ಅಟೆಂಡೆಂಟ್‌, ಜೂನಿಯರ್‌ ಮೆಡಿಕಲ್‌ ರೆಕಾರ್ಡ್‌ ಆಫೀಸರ್‌, ಪರ್ಸನಲ್‌ ಅಸಿಸ್ಟಂಟ್‌, ಮೆಡಿಕಲ್‌ ಸೋಶಿಯಲ್‌ ವರ್ಕರ್‌, ಡ್ರೈವರ್‌, ಜೂನಿಯರ್‌ ವಾರ್ಡನ್‌, ವಾರ್ಡನ್‌, ಸೀನಿಯರ್‌ ನರ್ಸಿಂಗ್‌ ಆಫೀಸರ್‌, ಜೂನಿಯರ್‌ ಹಿಂದಿ ಟ್ರಾನ್ಸ್‌ಲೇಟರ್‌, ಪ್ರೋಗ್ರಾಮರ್‌, ಅಸಿಸ್ಟಂಟ್‌ ರಿಸರ್ಚ್‌ ಆಫೀಸರ್‌ ಮುಂತಾದ ಹುದ್ದೆಗಳಿವೆ. ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ, 12ನೇ ತರಗತಿ, ಐಟಿಐ, ಡಿಪ್ಲೊಮಾ, ಬಿ. ಫಾರ್ಮಾ, ಪದವಿ, ಎಂಬಿಬಿಎಸ್‌, ಸ್ನಾತಕೋತ್ತರ ಪದವಿ, ಪಿಚ್‌.ಡಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಈ ಸುದ್ದಿಯನ್ನೂ ಓದಿ: KSSIDC Recruitment 2025: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ 44 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಅರ್ಜಿ ಶುಲ್ಕವಾಗಿ ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು 3,000 ರೂ., ಎಸ್‌ಸಿ/ ಎಸ್‌ಟಿ/ಇಡಬ್ಲ್ಯುಎಸ್‌ ಅಭ್ಯರ್ಥಿಗಳು 2,400 ರೂ. ಆನ್‌ಲೈನ್‌ ಮೂಲಕ ಸಲ್ಲಿಸಬೇಕು. ಕಂಪ್ಯೂಟರ್‌ ಆಧಾರಿತ ಪರೀಕ್ಷೆ, ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

AIIMS Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ: aiimsexams.ac.inಗೆ ಭೇಟಿ ನೀಡಿ. ದೂರವಾಣಿ ಸಂಖ್ಯೆ: 1800-11-7898 ಸಂಪರ್ಕಿಸಿ.