ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bank of Maharashtra Recruitment 2025: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿದೆ 500 ಹುದ್ದೆ; ಹೀಗೆ ಅಪ್ಲೈ ಮಾಡಿ

Bank Jobs: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾಲಿ ಇರುವ 500 ಸ್ಪೆಷಲಿಸ್ಟ್ ಸ್ಕೇಲ್ -2ರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಒಟ್ಟು ಹುದ್ದೆಗಳ ಪೈಕಿ ಎಸ್‌ಸಿ ಅಭ್ಯರ್ಥಿಗಳು -75. ಎಸ್‌ಟಿ ವರ್ಗದವರಿಗೆ 37, ಒಬಿಸಿ ಅಭ್ಯರ್ಥಿಗಳಿಗೆ 135, ಆರ್ಥಿಕ ದುರ್ಬಲ ವರ್ಗದವರಿಗೆ 50 ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 203 ಹುದ್ದೆಗಳನ್ನು ಮೀಸಲಿಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 30.

ಬೆಂಗಳೂರು: ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ (Bank of Maharashtra) ಖಾಲಿ ಇರುವ 500 ಸ್ಪೆಷಲಿಸ್ಟ್ ಸ್ಕೇಲ್ -2ರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ (Bank of Maharashtra Recruitment 2025). ಒಟ್ಟು ಹುದ್ದೆಗಳ ಪೈಕಿ ಎಸ್‌ಸಿ ಅಭ್ಯರ್ಥಿಗಳು -75. ಎಸ್‌ಟಿ ವರ್ಗದವರಿಗೆ 37, ಒಬಿಸಿ ಅಭ್ಯರ್ಥಿಗಳಿಗೆ 135, ಆರ್ಥಿಕ ದುರ್ಬಲ ವರ್ಗದವರಿಗೆ 50 ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 203 ಹುದ್ದೆಗಳನ್ನು ಮೀಸಲಿಡಲಾಗಿದೆ (Bank Jobs). ಒಟ್ಟು ಹುದ್ದೆಗಳ ಸಂಖ್ಯೆ: 500 (Job Guide). ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 30.

ವಿದ್ಯಾರ್ಹತೆಗಳೇನು?

ಅಭ್ಯರ್ಥಿಗಳು ಪದವೀಧರರಾಗಿದ್ದು,ಇಂಟಿಗ್ರೇಟೆಡ್ ಡ್ಯುಯಲ್ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ. 60 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದವರೂ ಅರ್ಜಿ ಸಲ್ಲಿಸಲು ಅರ್ಹರು. ಎಸ್‌ಸಿ / ಎಸ್‌ಟಿ / ಒಬಿಸಿ ಮತ್ತು ವಿಶೇಷಚೇತನ ಅಭ್ಯರ್ಥಿಗಳಾಗಿದ್ದಲ್ಲಿ ಕನಿಷ್ಠ ಶೇ.55 ಅಂಕಗಳೊಂದಿಗೆ ತೇರ್ಗಡೆಯಾಗಿರುವುದು ಕಡ್ಡಾಯ. ಯಾವುದೇ ಬ್ಯಾಂಕ್‌ನಲ್ಲಿ ಕನಿಷ್ಠ 3 ವರ್ಷಗಳ ಸೇವಾನುಭವ ಇದ್ದಲ್ಲಿ ನೇಮಕಾತಿಗೆ ಆದ್ಯತೆ ನೀಡಲಾಗುತ್ತದೆ.

ಈ ಸುದ್ದಿಯನ್ನೂ ಓದಿ: SBI Recruitment 2025: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 6,589 ಜೂನಿಯ‌ರ್ ಅಸೋಸಿಯೇಟ್ ಹುದ್ದೆಗಳಿಗೆ ನೇಮಕಾತಿ; ಹೀಗೆ ಅಪ್ಲೈ ಮಾಡಿ

ವಯೋಮಿತಿ ಏಷ್ಟು?

ಅಭ್ಯರ್ಥಿಗಳ ಕನಿಷ್ಠ ವಯಸ್ಸು 23 ವರ್ಷ ಹಾಗೂ ಗರಿಷ್ಠ 35 ವರ್ಷವಾಗಿದ್ದು ಮೀಸಲಾತಿ ವರ್ಗಗಳಿಗೆ ಸರ್ಕಾರಿ ಮಾರ್ಗಸೂಚಿಗಳ ಪ್ರಕಾರ ಸಡಿಲಿಕೆ ಅನ್ವಯಿಸುತ್ತದೆ.

ಅರ್ಜಿ ಶುಲ್ಕವೆಷ್ಟು?

ಸಾಮಾನ್ಯ, ಆರ್ಥಿಕ ದುರ್ಬಲ ವರ್ಗ ಮತ್ತು ಇತರ ಹಿಂದುಳಿದ ವರ್ಗದವರು 1,180 ರೂ. ಹಾಗೂ ಉಳಿದೆಲ್ಲ ವರ್ಗದ ಅಭ್ಯರ್ಥಿಗಳು 118 ರೂ. (ಇಂಟಿಮೇಷನ್ ಫೀ ಮಾತ್ರ) ಪಾವತಿಸಬೇಕು.

ಸಿಬಿಲ್ ಸ್ಕೋರ್ ಅಗತ್ಯ

ಸಾಲ ಮರುಪಾವತಿಯಲ್ಲಿ ಡೀಫಾಲ್ಟ್ ದಾಖಲೆ ಹೊಂದಿರುವ / ಕ್ರೆಡಿಟ್ ಕಾರ್ಡ್ ಬಾಕಿ ಹೊಂದಿರುವ ಮತ್ತು / ಅಥವಾ ಸಿಬಿಲ್‌ ಅಥವಾ ಇತರ ಬಾಹ್ಯ ರೇಟಿಂಗ್ ಏಜೆನ್ಸಿಗಳಿಂದ ವ್ಯತಿರಿಕ್ತ ವರದಿ ಲಭ್ಯವಿರುವ ಅಭ್ಯರ್ಥಿಗಳು ನೇಮಕಾತಿಗೆ ಅರ್ಹರಲ್ಲ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಆನ್‌ಲೈನ್‌ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಇಂಗ್ಲಿಷ್ ಭಾಷೆ (20), ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ (20), ರೀಸನಿಂಗ್ ಎಬಿಲಿಟಿ (20) ಮತ್ತು ಪ್ರೊಫೆಶನಲ್ ನಾಲೇಜ್‌ (90) ಪ್ರಶ್ನೆಗಳಿರಲಿದ್ದು, 150 ಅಂಕಗಳ ಪ್ರಶ್ನೆಗಳಿರಲಿವೆ. ಪರೀಕ್ಷೆ ಬರೆಯಲು ಎರಡು ಗಂಟೆ ಸಮಯಾವಕಾಶ ನೀಡಲಾಗುತ್ತದೆ. ತಪ್ಪು ಉತ್ತರಗಳಿಗೆ 0.25 ಅಂಕಗಳನ್ನು ಕಳೆಯಲಾಗುತ್ತದೆ. ಅಭ್ಯರ್ಥಿಗಳು ನೇಮಕಾತಿ ಸಂಸ್ಥೆಯ ಮೂಲಕ ನಡೆಸುವ ಆನ್‌ಲೈನ್‌ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಯಶಸ್ವಿ ಅಭ್ಯರ್ಥಿಗಳನ್ನು ಅವರ ಶ್ರೇಯಾಂಕದ ಆಧಾರದ ಮೇಲೆ 1:3 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಆನ್‌ಲೈನ್‌ ಪರೀಕ್ಷೆ ಮತ್ತು ಸಂದರ್ಶನಕ್ಕೆ ಕ್ರಮವಾಗಿ 150 ಮತ್ತು 100 ಅಂಕಗಳ ಹಂಚಿಕೆಯಾಗಿದ್ದು, ಇದನ್ನು 75:25 (ಆನ್‌ಲೈನ್‌ ಪರೀಕ್ಷೆ: ಸಂದರ್ಶನ) ಗೆ ಪರಿವರ್ತಿಸಲಾಗುತ್ತದೆ.

ನಿರೀಕ್ಷಣಾ ಅವಧಿ ಎಷ್ಟು?

ನೇಮಕಗೊಂಡವರಿಗೆ ಆರು ತಿಂಗಳ ನಿರೀಕ್ಷಣಾ ಅವಧಿ ಇರುತ್ತದೆ ಹಾಗೂ ಆಯ್ಕೆಯಾದ ಅಭ್ಯರ್ಥಿಗಳು 2 ಲಕ್ಷ ರೂ.ಗಳ ಸೇವಾ ಬಾಂಡ್ ಅನ್ನು 2 ವರ್ಷಗಳಿಗೆ ಕಡ್ಡಾಯವಾಗಿ ನೀಡಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಬ್ಯಾಂಕಿನ ಅವಶ್ಯಕತೆಗೆ ಅನುಗುಣವಾಗಿ ಭಾರತದ ಯಾವುದೇ ಸ್ಥಳಕ್ಕೆ ನಿಯೋಜಿಸಲಾಗುತದೆ.

ರಾಜ್ಯದಲ್ಲಿ ಆನ್‌ಲೈನ್ ಪರೀಕ್ಷಾ ಕೇಂದ್ರಗಳು ಎಲ್ಲೆಲ್ಲಿ?

ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ. ವೇತನ ಶ್ರೇಣಿ: 64,820 ರೂ.-93,960 ರೂ. ಆರಂಭಿಕ ವೇತನ ಇರಲಿದ್ದು ಹಾಗೂ ಇತರ ಭತ್ಯೆಗಳನ್ನು ನಿಯಮಾನುಸಾರ ನೀಡಲಾಗುತ್ತದೆ.

ನೆನಪಿಡಿ

ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸುವ ಸಮಯದಲ್ಲಿ ಪಟ್ಟಿ ಮಾಡಲಾದ ಪ್ರತಿಯೊಂದು ದಾಖಲೆಯನ್ನು ಅಪ್‌ಲೋಡ್‌ ಮಾಡಬೇಕು. ಪ್ರತಿ ದಾಖಲೆಯನ್ನು ಅಪ್‌ಲೋಡ್‌ ಮಾಡಲು ಪ್ರತ್ಯೇಕ ಲಿಂಕ್‌ಗಳು ಇರುತ್ತವೆ. ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಸಬೇಕಾದ ಜಾಲತಾಣ:
https://bankofmaharashtra.in