BMRCL Recruitment 2025: ನಮ್ಮ ಮೆಟ್ರೋದಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡುವ ವಿಧಾನ ಇಲ್ಲಿದೆ
Job Guide: ನಮ್ಮ ಮೆಟ್ರೋದಲ್ಲಿ ಖಾಲಿ ಇದುವ ಹುದ್ದೆಗಳ ಭರ್ತಿಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ ಅರ್ಜಿ ಆಹ್ವಾನಿಸಿದೆ. ಒಟ್ಟು 35 ಗ್ರ್ಯಾಜುವೇಟ್ ಎಂಜಿನಿಯರ್ (ಸಿವಿಲ್) ಇದೆ. ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಹೊಂದಿದವರು ಅಪ್ಲೈ ಮಾಡಬಹುದು. ಆಸಕ್ತರು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಕರ್ನಾಟಕದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲೇ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುವವರು ನೀವಾಗಿದ್ದರೆ ಇಲ್ಲಿದೆ ಗುಡ್‌ನ್ಯೂಸ್. ನಮ್ಮ ಮೆಟ್ರೋ (Namma Metro)ದಲ್ಲಿ ಖಾಲಿ ಇದುವ ಹುದ್ದೆಗಳ ಭರ್ತಿಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (Bangalore Metro Rail Corporation Limited) ಅರ್ಜಿ ಆಹ್ವಾನಿಸಿದೆ (BMRCL Recruitment 2025). ಗ್ರ್ಯಾಜುವೇಟ್ ಎಂಜಿನಿಯರ್ (ಸಿವಿಲ್) ಹುದ್ದೆ ಇದ್ದಾಗಿದೆ. ಒಟ್ಟು 35 ಹುದ್ದೆಗಳಿವೆ. ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಹೊಂದಿದವರು ಅಪ್ಲೈ ಮಾಡಬಹುದು (Job Guide). ಆಸಕ್ತರು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮೇ 3ರೊಳಗೆ ನಿಮ್ಮ ಆನ್‌ಲೈನ್ ಅರ್ಜಿ ಮತ್ತು ಆಫ್‌ಲೈನ್ ಅರ್ಜಿ ಮೇ 7ರೊಳಗೆ ತಲುಪುವಂತಿರಬೇಕು ಎಂದು ಪ್ರಕಟಣೆ ತಿಳಿಸಿದೆ.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಗ್ರಾಜ್ಯುವೇಟ್ ಎಂಜಿನಿಯರ್ (ಸಿವಿಲ್) ಹುದ್ದೆ ಇದಾಗಿದೆ. ಒಟ್ಟು 35 ಹುದ್ದೆ ಖಾಲಿ ಇದೆ. ಬಿಎಂಆರ್‌ಸಿಎಲ್ ಅಧಿಕೃತ ಅಧಿಸೂಚನೆ ಪ್ರಕಾರ ದೇಶದ ಯಾವುದೇ ಅಧಿಕೃತ ಶಿಕ್ಷಣ ಮಂಡಳಿ ಅಥವಾ ವಿಶ್ವ ವಿದ್ಯಾನಿಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್ ಪದವಿ ಪೂರೈಸಿದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ
ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ ಎಂದು ಅಧಿಸೂಚನೆ ತಿಳಿಸಿದೆ.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಗೇಟ್ (GATE) ಸ್ಕೋರ್, ಲಿಖಿತ ಪರೀಕ್ಷೆ/ಸ್ಕಿಲ್ ಟೆಸ್ಟ್/ಮೆಡಿಕಲ್ ಟೆಸ್ಟ್/ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅಭ್ಯರ್ಥಿಗಳಿಗೆ ಕನ್ನಡ ಓದಲು, ಮಾತನಾಡಲು, ಬರೆಯಲು ಮತ್ತು ಅರ್ಥ ಮಾಡಿಕೊಳ್ಳಲು ಬರಬೇಕು. ಆಯ್ಕೆಯಾದವರನ್ನು 3 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತದೆ. ಆಯ್ಕೆಯಾದವರಿಗೆ 44,000 ರೂ. ಮಾಸಿಕ ವೇತನ ದೊರೆಯಲಿದೆ.
BMRCL Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: RRB Recruitment 2025: ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರಿಗೆ ಗುಡ್‌ನ್ಯೂಸ್; ರೈಲ್ವೆಯಲ್ಲಿದೆ ಬರೋಬ್ಬರಿ 9,970 ಹುದ್ದೆ
ಅರ್ಜಿ ಸಲ್ಲಿಸಲುವ ವಿಧಾನ
*ಅರ್ಜಿ ಸಲ್ಲಿಸಲು ಇಲ್ಲಿ ಮಾಡಿ
(https://recruitv.bmrc.co.in)
* ವೈಯಕ್ತಿಕ, ಶೈಕ್ಷಣಿಕ ಮಾಹಿತಿ ನೀಡಿ ಅಪ್ಲಿಕೇಷನ್ ಭರ್ತಿ ಮಾಡಿ.
* ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
ಭರ್ತಿ ಮಾಡಿದ ಅಪ್ಲಿಕೇಷನ್ ಹಾರ್ಡ್ ಕಾಪಿಯನ್ನು ವಿವಿಧ ದಾಖಲಾತಿ, ಫೋಟೊದೊಂದಿಗೆ ಈ ಕೆಳಗಿನ ವಿಳಾಸಕ್ಕೆ ಮೇ 7ರೊಳಗೆ ತಲುಪುವಂತೆ ಸ್ಪೀಡ್ ಪೋಸ್ಟ್ ಮಾಡಿ:
General Manager (HR), Bangalore Metro Rail Corporation Limited, III Floor, BMTC Complex, K.H. Road, Shanthinagar, Bengaluru – 560027.
ಹೆಚ್ಚಿನ ಮಾಹಿತಿಗೆ ಅಧಿಕೃತ ವಿಳಾಸ:english.bmrc.co.inಗೆ ಭೇಟಿ ನೀಡಿ.