ಯುಪಿಎಸ್‌ಸಿ 2025 ಫಲಿತಾಂಶ ಪ್ರಕಟ; ರಾಜಸ್ಥಾನದ ಅನುಜ್ ಅಗ್ನಿಹೋತ್ರಿ ಟಾಪರ್: ರಿಸಲ್ಟ್ ಹೀಗೆ ಚೆಕ್ ಮಾಡಿ
UPSC CSE 2026 Final Result Out: ಕೇಂದ್ರ ಲೋಕಸೇವಾ ಆಯೋಗದ 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ಒಟ್ಟು 958 ಅಭ್ಯರ್ಥಿಗಳು ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ರಾಜಸ್ಥಾನದ ಅನುಜ್ ಅಗ್ನಿಹೋತ್ರಿ ದೇಶಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಅನುಜ್ ಅಗ್ನಿಹೋತ್ರಿ ಮತ್ತು ಸಾಂದರ್ಭಿಕ ಚಿತ್ರ -
ದೆಹಲಿ, ಮಾ. 6: ಬಹುನಿರೀಕ್ಷಿತ ಕೇಂದ್ರ ಲೋಕಸೇವಾ ಆಯೋಗದ 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ (CSE) ಅಂತಿಮ ಫಲಿತಾಂಶ ಪ್ರಕಟಗೊಂಡಿದೆ (UPSC CSE 2026 Final Result Out). ದೇಶದ ಅತ್ಯಂತ ಕಠಿಣ ಮತ್ತು ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೊಂದು ಎನ್ನಲಾಗುವ ಈ ಪರೀಕ್ಷೆಯಲ್ಲಿ ಒಟ್ಟು 958 ಅಭ್ಯರ್ಥಿಗಳು ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ರಾಜಸ್ಥಾನದ ಅನುಜ್ ಅಗ್ನಿಹೋತ್ರಿ (Anuj Agnihotri) ದೇಶಕ್ಕೆ ಟಾಪರ್ ಎನಿಸಿಕೊಂಡಿದ್ದಾರೆ. 2 ಮತ್ತು 3ನೇ ಸ್ಥಾನದಲ್ಲಿ ರಾಜೇಶ್ವರಿ ಸುವೆ ಎಂ. ಮತ್ತು ಆಕಾಂಶ್ ಧುಲ್ ಇದ್ದಾರೆ.
ಈ ಪರೀಕ್ಷೆಯ ಮೂಲಕ ಆಯ್ಕೆಯಾದ ಅಭ್ಯರ್ಥಿಗಳು ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS), ಭಾರತೀಯ ವಿದೇಶಾಂಗ ಸೇವೆ (IFS), ಭಾರತೀಯ ಕಂದಾಯ ಸೇವೆ (IRS), ಭಾರತೀಯ ವ್ಯಾಪಾರ ಸೇವೆ (Indian Trade Service) ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಗ್ರೂಪ್–A ಮತ್ತು ಗ್ರೂಪ್–B ಸೇವೆಗಳ ಹುದ್ದೆಗಳಿಗೆ ನೇಮಕವಾಗಲಿದ್ದಾರೆ. ಸಾಮಾನ್ಯ ವರ್ಗ– 317, ಆರ್ಥಿಕವಾಗಿ ದುರ್ಬಲ ವರ್ಗ– 104, ಇತರ ಹಿಂದುಳಿದ ವರ್ಗ– 306, ಪರಿಶಿಷ್ಟ ಪಂಗಡ – 73 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಟಾಪರ್ ಅನುಜ್ ಅಗ್ನಿಹೋತ್ರಿ ಅವರ ಮಾತು:
#WATCH | Chittorgarh, Rajasthan: On securing first rank in UPSC civil services final result 2025, Anuj Agnihotri says, "I'm feeling good. I gave my first attempt for the UPSC CSE in 2023. I started preparing during my internship in 2022, and it's 2026 now, so obviously, it's been… pic.twitter.com/OqmKefEQwm
— ANI (@ANI) March 6, 2026
2025ರ ಆಗಸ್ಟ್ 22ರಿಂದ ಆಗಸ್ಟ್ 31ರ ತನಕ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಮುಖ್ಯ ಪರೀಕ್ಷೆಯ ಫಲಿತಾಂಶ 2025ರ ನವೆಂಬರ್‌ನಲ್ಲಿ ಹೊರ ಬಂದಿತ್ತು. ಬಳಿಕ ದೆಹಲಿಯಲ್ಲಿ 2025ರ ಡಿಸೆಂಬರ್ ಮತ್ತು 2026ರ ಜನವರಿಯಲ್ಲಿ 2 ಹಂತಗಲಲ್ಲಿ ಇಂಟರ್‌ವ್ಯೂ ಆಯೋಜಿಸಲಾಗಿತ್ತು. ಸಂದರ್ಶನಕ್ಕೆ 275 ಅಂಕ ನಿಗದಿಪಡಿಸಲಾಗಿತ್ತು.
ಮೊದಲ 20 ರ‍್ಯಾಂಕ್ ಪಡೆದವರ ವಿವರ:
ಟಾಪ್ 20 ಅಭ್ಯರ್ಥಿಗಳು
| ರ‍್ಯಾಂಕ್ | ಅಭ್ಯರ್ಥಿ |
|---|---|
| 1 | ಅನುಜ್ ಅಗ್ನಿಹೋತ್ರಿ |
| 2 | ರಾಜೇಶ್ವರಿ ಸುವೇ ಎಂ. |
| 3 | ಆಕಾಂಶ್ ಧುಲ್ |
| 4 | ರಾಘವ್ ಜುನ್ಜುನ್ವಾಲಾ |
| 5 | ಇಶಾನ್ ಭಟ್ನಾಗರ್ |
| 6 | ಜಿನ್ನಿಯಾ ಅರೋರಾ |
| 7 | ಎ.ಆರ್. ರಾಜಾ ಮೊಹೈದೀನ್ |
| 8 | ಪಕ್ಷಲ್ ಸೀಕ್ರೆಟ್ |
| 9 | ಆಸ್ತಾ ಜೈನ್ |
| 10 | ಉಜ್ವಲ್ ಪ್ರಿಯಾಂಕ್ |
| 11 | ಯಶಸ್ವಿ ರಾಜ್ ವರ್ಧನ್ |
| 12 | ಅಕ್ಷಿತ್ ಭಾರದ್ವಾಜ್ |
| 13 | ಅನನ್ಯಾ ಶರ್ಮಾ |
| 14 | ಸುರಭಿ ಯಾದವ್ |
| 15 | ಸಿಮ್ರನ್‌ದೀಪ್ ಕೌ |
| 16 | ಮೋನಿಕಾ ಶ್ರೀವಾಸ್ತವ |
| 17 | ಚಿಟ್ವಾನ್ ಜೈನ್ |
| 18 | ಶ್ರುತಿ ಆರ್. |
| 19 | ನಿಸಾರ್ ದಿಶಾಂತ್ ಅಮೃತ್ಲಾಲ್ |
| 20 | ರವಿ ರಾಝ್ |
ಮಹಾರಾಷ್ಟ್ರದ ಮೊದಲ ಮುಸ್ಲಿಂ ಮಹಿಳಾ IAS ಅಧಿಕಾರಿಯಾಗಲಿರುವ ಆಟೋ ಚಾಲಕನ ಮಗಳು
ಫಲಿತಾಂಶ ಪರಿಶೀಲಿಸುವ ವಿಧಾನ
- ಅಧಿಕೃತ ವೆಬ್‌ಸೈಟ್ upsc.gov.in ಭೇಟಿ ನೀಡಿ
- ಮುಖಪುಟದಲ್ಲಿ ಕಾಣುವ Final Result – Civil Services Examination 2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಹೊಂದಿರುವ ಪಿಡಿಎಫ್ ಫೈಲ್ ಡೌನ್‌ಲೋಡ್ ಮಾಡಿ.
- ಪಟ್ಟಿಯಲ್ಲಿ ನಿಮ್ಮ ರಿಜಿಸ್ಟರ್ ಸಂಖ್ಯೆಯನ್ನು ಹುಡುಕಿ.
- ಫಲಿತಾಂಶವನ್ನು ಸೇವ್ ಮಾಡಿ ಪ್ರಿಂಟ್ ತೆಗೆಯಿರಿ.
ಎಲ್ಲ ಅಭ್ಯರ್ಥಿಗಳ ಅಂಕಪಟ್ಟಿ 15 ದಿನಗಳಲ್ಲಿ ವೆಬ್‌ಸೈಟ್‌ಗೆ ಅಪ್‌ಲೋಡ್ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.