ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Job Guide: ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ನಲ್ಲಿದೆ 740 ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ, ಡಿಪ್ಲೊಮಾ, ಪದವಿ, ಎಂಜಿನಿಯರಿಂಗ್‌ ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಬೆಂಗಳೂರು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ನೇಮಿಸಲಾಗುತ್ತದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಫೆ. 20.

ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ನ  740 ಹುದ್ದೆಗಳಿಗೆ ಹೀಗೆ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ.

Profile Ramesh B Feb 4, 2025 3:15 PM

ಬೆಂಗಳೂರು: ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ (Centre for Development of Advanced Computing)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ (CDAC Recruitment 2025). ಪ್ರೊಜೆಕ್ಟ್‌ ಮ್ಯಾನೇಜರ್‌, ಪ್ರೊಜೆಕ್ಟ್‌ ಎಂಜಿನಿಯರ್‌ ಸೇರಿ ಒಟ್ಟು 740 ಹುದ್ದೆಗಳಿವೆ. ಐಟಿಐ, ಡಿಪ್ಲೊಮಾ, ಪದವಿ, ಎಂಜಿನಿಯರಿಂಗ್‌ ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಬೆಂಗಳೂರು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ನೇಮಿಸಲಾಗುತ್ತದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಫೆ. 20 (Job Guide).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಪ್ರಾಜೆಕ್ಟ್ ಎಂಜಿನಿಯರ್, ಪ್ರಾಜೆಕ್ಟ್ ಮ್ಯಾನೇಜರ್/ಪ್ರೋಗ್ರಾಂ ಮ್ಯಾನೇಜರ್/ಪ್ರೋಗ್ರಾಂ ಡೆಲಿವರಿ ಮ್ಯಾನೇಜರ್/ನಾಲೆಡ್ಜ್‌ ಪಾರ್ಟನರ್‌, ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್, ಹಿರಿಯ ಪ್ರಾಜೆಕ್ಟ್ ಎಂಜಿನಿಯರ್, ಪ್ರಾಜೆಕ್ಟ್ ಅಸೋಸಿಯೇಟ್ (ಫ್ರೆಷರ್), ಪ್ರಾಜೆಕ್ಟ್ ಎಂಜಿನಿಯರ್/ಪಿಎಸ್ & ಒ ಎಕ್ಸಿಕ್ಯುಟಿವ್‌, ಪ್ರಾಜೆಕ್ಟ್ ಟೆಕ್ನಿಷಿಯನ್, ಪ್ರಾಜೆಕ್ಟ್ ಆಫೀಸರ್, ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಎಂಜಿನಿಯರ್ (ಫ್ರೆಷರ್), ಕಾರ್ಪೊರೇಟ್ ಕಮ್ಯುನಿಕೇಷನ್ ಅಸೋಸಿಯೇಟ್, ಪಿಎಸ್ & ಒ ಮ್ಯಾನೇಜರ್, ಪಿಎಸ್ & ಒ ಆಫೀಸರ್, ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗಳಿವೆ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಬಿ.ಇ ಅಥವಾ ಬಿ.ಟೆಕ್‌, ಎಂ.ಇ, ಸ್ನಾತಕೋತ್ತರ ಪದವಿ, ಪಿಎಚ್‌.ಡಿ, ಐಟಿಐ, ಡಿಪ್ಲೊಮಾ, ಎಂಬಿಎ, ಎಂಸಿಎ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.

ಎಲ್ಲೆಲ್ಲಿ ಎಷ್ಟು ಹುದ್ದೆ?

ಬೆಂಗಳೂರು - 135, ಚೆನ್ನೈ - 101, ದಿಲ್ಲಿ - 21, ಹೈದರಾಬಾದ್ - 67, ಮೊಹಾಲಿ - 4, ಮುಂಬೈ - 10, ನೋಯ್ಡಾ - 173, ಪುಣೆ - 176, ತಿರುವನಂತಪುರಂ - 19, ಸಿಲ್ಚಾರ್ - 34 ಹುದ್ದೆಗಳಿವೆ.

ವಯೋಮಿತಿ ಮತ್ತು ಅರ್ಜಿ ಶುಲ್ಕ

ವಿವಿಧ ಹುದ್ದಗಳಿಗೆ ಅನುಗುಣವಾಗಿ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 30-56 ವರ್ಷ. ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ

* ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
(
https://careers.cdac.in/)

* ಅರ್ಜಿ ಸಲ್ಲಿಸಬೇಕಾದ ಸ್ಥಳವನ್ನು ಆಯ್ಕೆ ಮಾಡಿ.

* ಹೆಸರು ನೋಂದಾಯಿಸಿ.

* ಹೊಸ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.

* ಈಗ ಕಂಡುಬರುವ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.

* ಅಗತ್ಯ ಡಾಕ್ಯುಮೆಂಟ್‌ ಅಪ್‌ಲೋಡ್‌ ಮಾಡಿ.

* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

* ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ: https://cdac.in/ಗೆ ಭೇಟಿ ನೀಡಿ.

ಈ ಸುದ್ದಿಯನ್ನೂ ಓದಿ: Job Guide: ಬಾರ್ಡರ್‌ ರೋಡ್ಸ್‌ ಆರ್ಗನೈಸೇಷನ್‌ನಲ್ಲಿದೆ 411 ಹುದ್ದೆ; 10ನೇ ತರಗತಿ, ಐಟಿಐ ಪಾಸಾದವರು ಅರ್ಜಿ ಸಲ್ಲಿಸಿ