ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ESIC Recruitment 2025: ಎಂಪ್ಲಾಯ್ಸ್‌ ಸ್ಟೇಟ್‌ ಇನ್ಶೂರೆನ್ಸ್‌ ಕಾರ್ಪೋರೇಷನ್‌ನಲ್ಲಿದೆ 558 ಹುದ್ದೆ; ಹೀಗೆ ಅಪ್ಲೈ ಮಾಡಿ

ಕೇಂದ್ರ ಸರ್ಕಾರದ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುವವರು ನೀವಾಗಿದ್ದರೆ ಇಲ್ಲಿದೆ ಉತ್ತಮ ಅವಕಾಶ. ಎಂಪ್ಲಾಯ್ಸ್‌ ಸ್ಟೇಟ್‌ ಇನ್ಶೂರೆನ್ಸ್‌ ಕಾರ್ಪೋರೇಷನ್‌ ದೇಶಾದ್ಯಂತ ಖಾಲಿ ಇರುವ 558 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಸಬೇಕು. ನಿಮ್ಮ ಅರ್ಜಿ ಮೇ 26ರೊಳಗೆ ತಲುಪುವಂತಿರಬೇಕು.

ಎಂಪ್ಲಾಯ್ಸ್‌ ಸ್ಟೇಟ್‌ ಇನ್ಶೂರೆನ್ಸ್‌ ಕಾರ್ಪೋರೇಷನ್‌ನಲ್ಲಿದೆ 558 ಹುದ್ದೆ

ಸಾಂದರ್ಭಿಕ ಚಿತ್ರ.

Profile Ramesh B Apr 9, 2025 4:13 PM

ಬೆಂಗಳೂರು: ಎಂಪ್ಲಾಯ್ಸ್‌ ಸ್ಟೇಟ್‌ ಇನ್ಶೂರೆನ್ಸ್‌ ಕಾರ್ಪೋರೇಷನ್‌ (Employees’ State Insurance Corporation) ದೇಶಾದ್ಯಂತ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (ESIC Recruitment 2025). ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸ್ಪೆಷಲಿಸ್ಟ್‌ ಹುದ್ದೆಗಳಿದ್ದು, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು(Job Guide). ಒಟ್ಟು 558 ಹುದ್ದೆಗಳಿದ್ದು, ಆಸಕ್ತರು ಆಫ್‌ಲೈನ್‌ ಮೂಲಕ ಅಪ್ಲೈ ಮಾಡಬೇಕು. ನಿಮ್ಮ ಅರ್ಜಿ ಮೇ 26ರೊಳಗೆ ತಲುಪುವಂತಿರಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುವವರು ನೀವಾಗಿದ್ದರೆ ಈ ಅವಕಾಶ ಸದುಪಯೋಗಪಡಿಸಿಕೊಳ್ಳಬಹುದು. ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಶಾಸನಬದ್ಧ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಇಎಸ್ಐಸಿ ಕೂಡ ಒಂದು.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸ್ಪೆಷಲಿಸ್ಟ್‌ (ಸೀನಿಯರ್‌) - 155 ಹುದ್ದೆ ಮತ್ತು ಸ್ಪೆಷಲಿಸ್ಟ್‌ (ಜೂನಿಯರ್‌) - 403 ಹುದ್ದೆಗಳಿವೆ. ದೇಶದ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಎಂಎ, ಎಂಎಸ್‌, ಎಂ.ಎಸ್‌ಸಿ, ಡಿ.ಎಸ್‌ಸಿ, ಡಿಎ, ಎಂ.ಸಿಎಚ್‌, ಡಿಪಿಎಂ, ಡಿಎಂಆರ್‌ಡಿ, ಡಿಎಂ, ಪಿಚ್‌.ಡಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಮಹಿಳಾ/ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಇಎಸ್‌ಐಸಿ ಉದ್ಯೋಗಿಗಳು/ಮಾಜಿ ಸೈನಿಕರು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಇತರ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಪಾವತಿ ವಿಧಾನ: ಡಿಮ್ಯಾಂಡ್‌ ಡ್ರಾಫ್ಟ್‌/ಬ್ಯಾಂಕ್‌ ಚೆಕ್‌.

ಈ ಸುದ್ದಿಯನ್ನೂ ಓದಿ: IDBI Bank Recruitment 2025: ಐಡಿಬಿಐ ಬ್ಯಾಂಕ್‌ನಲ್ಲಿದೆ 119 ಹುದ್ದೆ; ಹೀಗೆ ಅಪ್ಲೈ ಮಾಡಿ

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಪೆಷಲಿಸ್ಟ್‌ (ಸೀನಿಯರ್‌) ಹುದ್ದೆಗಳಿಗೆ 78,800 ರೂ. ಮತ್ತು ಸ್ಪೆಷಲಿಸ್ಟ್‌ (ಜೂನಿಯರ್‌) ಹುದ್ದೆಗಳಿಗೆ 67,700 ರೂ. ಮಾಸಿಕ ವೇತನ ದೊರೆಯಲಿದೆ.

ಅಧಿಸೂಚನೆ ಮತ್ತು ಅರ್ಜಿ ಫಾರಂಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:

Karnataka: Additional Commissioner/ Regional Director, ESI Corporation, Panchdeep Bhawan, No.10, Binnyfields, Binnypet, Bangalore-560023, Karnataka.

Kerala: Regional Director, ESI Corporation, Panchdeep Bhawan, North Swaraj Round, Thrissur-680020, Kerala.

Tamilnadu: Regional Director, ESI Corporation, Panchdeep Bhawan, 143, Sterling Road, Chennai-600034. Tamil Nadu.

ಅರ್ಜಿಯೊಂದಿಗೆ ಅಟೆಸ್ಟ್‌ ಮಾಡಿದ ವಿವಿಧ ದಾಖಲೆಗಳನ್ನು ನಮೂದಿಸಬೇಕು.

ಹೆಚ್ಚಿನ ವಿವರಗಳಿಗೆ ಎಂಪ್ಲಾಯ್ಸ್‌ ಸ್ಟೇಟ್‌ ಇನ್ಶೂರೆನ್ಸ್‌ ಕಾರ್ಪೋರೇಷನ್‌ ಅಧಿಕೃತ ವೆಬ್‌ಸೈಟ್‌ ವಿಳಾಸ: esic.gov.inಗೆ ಭೇಟಿ ನೀಡಿ.