ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಮಹಾಶಿವರಾತ್ರಿ ಹಾಗೂ ನಂದಿ ಜಾತ್ರೆಗೆ ಹರಿಕೃಷ್ಣ ಫೌಂಡೇಷನ್ ವತಿಯಿಂದ ಉಚಿತ ಆಟೋ ಸೇವೆ

ರಾಜ್ಯದಲ್ಲೇ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಭೋಗನಂದೀಶ್ವರ ಜೋಡಿ ಭ್ರಹ್ಮ ರಥೋತ್ಸವವು ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಭಕ್ತಿಭಾವದಿಂದ ನಡೆಯುತ್ತದೆ.ಸುತ್ತಮುತ್ತಲಿನ ಪ್ರದೇಶಗಳಷ್ಟೇ ಅಲ್ಲದೆ ಇತರೆ ಜಿಲ್ಲೆಗಳಿಂದಲೂ ಸಹಸ್ರಾರು ಮಂದಿ ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿ ಭಕ್ತಿ ಪ್ರದರ್ಶಿಸುತ್ತಾರೆ.

ನಂದಿ ಜಾತ್ರೆಗೆ ಹರಿಕೃಷ್ಣ ಫೌಂಡೇಷನ್ ವತಿಯಿಂದ ಉಚಿತ ಆಟೋ ಸೇವೆ

-

Ashok Nayak
Ashok Nayak Feb 13, 2026 12:44 AM

ಚಿಕ್ಕಬಳ್ಳಾಪುರ: ತಾಲ್ಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ನಂದಿ ಗ್ರಾಮದ ಭೋಗನಂದೀಶ್ವರ ರಥೋತ್ಸವವು ಇದೇ ತಿಂಗಳ ೧೬ರಂದು ನಡೆಯಲಿದ್ದು, ಭಕ್ತರಿಗೆ ಹೋಗಿ ಬರಲು ಅನುಕೂಲ ವಾಗುವಂತೆ  ನಂದಿ ಗ್ರಾಮಕ್ಕೆ ಉಚಿತ ಆಟೋ ಸೇವಾ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಶ್ರೀ ಹರಿಕೃಷ್ಣ ಫೌಂಡೇಶನ್ ಅಧ್ಯಕ್ಷ ಹಾಗೂ ಸಮಾಜಸೇವಕ ಬಿಜೆಪಿ ಯುವ ಮುಖಂಡ ಆನೆಮಡುಗು ಹರೀಶ್‌ರೆಡ್ಡಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಹಾ ಶಿವರಾತ್ರಿ ಹಾಗೂ ನಂದಿ ಜಾತ್ರೆ ಅಂಗವಾಗಿ ಉಚಿತ ಆಟೋ ಸೇವೆ ಕುರಿತು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲೇ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಭೋಗನಂದೀಶ್ವರ ಜೋಡಿ ಭ್ರಹ್ಮ ರಥೋತ್ಸವವು ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಭಕ್ತಿಭಾವದಿಂದ ನಡೆಯುತ್ತದೆ.ಸುತ್ತಮುತ್ತಲಿನ ಪ್ರದೇಶಗಳಷ್ಟೇ ಅಲ್ಲದೆ ಇತರೆ ಜಿಲ್ಲೆಗಳಿಂದಲೂ ಸಹಸ್ರಾರು ಮಂದಿ ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿ ಭಕ್ತಿ ಪ್ರದರ್ಶಿಸುತ್ತಾರೆ.

ಇದನ್ನೂ ಓದಿ: Chikkamagaluru news: ಕಡೂರು ಶಾಸಕರ ಪಿಎಯಿಂದ ಕಿರುಕುಳ, ಸರಕಾರಿ ನೌಕರ ಡೆತ್‌ನೋಟ್‌ ಬರೆದಿಟ್ಟು ನಾಪತ್ತೆ

ಚಿಕ್ಕಬಳ್ಳಾಪುರ ನಗರದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಖಾಸಗಿ ಬಸ್ ನಿಲ್ದಾಣದಿಂದ 10 ಆಟೋಗಳು, ಜೂನಿಯರ್ ಕಾಲೇಜು ನಿಲ್ದಾಣದಿಂದ 10 ಆಟೋಗಳು ಹಾಗೂ ನಂದಿ ಕ್ರಾಸ್‌ ನಿಂದ 5 ಆಟೋಗಳನ್ನು ವ್ಯವಸ್ಥೆ ಮಾಡಲಾಗಿದೆ.

ಮಹಾಶಿವರಾತ್ರಿಯ ಭಾನುವಾರ ಮತ್ತು ಮರುದಿನದ ಸೋಮವಾರದ ರಥೋತ್ಸವದವರೆಗೆ ಎರಡು ದಿನಗಳ ಕಾಲ ಈ ಉಚಿತ ಆಟೋ ಸೇವೆ ಲಭ್ಯವಿರುತ್ತದೆ. ಶಿವರಾತ್ರಿ ದಿನ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಹಾಗೂ ಮರುದಿನ ಜಾತ್ರಾ ಮಹೋತ್ಸವದಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಆಟೋ ಸೌಲಭ್ಯ ಲಭ್ಯವಿರುತ್ತದೆ ಎಂದು ಮಾಹಿತಿ ನೀಡಿದರು.

ಶಿವನು ಸತ್ಯ,ನ್ಯಾಯ ಮತ್ತು ನಿರ್ಭಯತೆಯ ಪ್ರತೀಕ. ಸಂಕಷ್ಟದ ಸಂದರ್ಭದಲ್ಲಿಯೂ ಶಾಂತ ವಾಗಿರಲು ಮತ್ತು ಎಲ್ಲರ ಮೇಲೂ ಕರುಣೆ ತೋರಿಸಲು ಶಿವನ ಆದರ್ಶಗಳು ನಮಗೆ ಪಾಠ ಕಲಿಸು ತ್ತವೆ. ಸಮಾಜದ ಕಲ್ಯಾಣ ಮತ್ತು ಸೌಹಾರ್ದತೆಗೆ ಶಿವನ ಸಂದೇಶಗಳು ಪ್ರೇರಣೆಯಾಗಿವೆ ಎಂದರು.

ನಿಜವಾದ ದೈವಭಕ್ತಿ ಎಂದರೆ ಮಾನವಸೇವೆ.ಆ ನಿಟ್ಟಿನಲ್ಲಿ ನಂದಿ ರಥೋತ್ಸವದ ಅಂಗವಾಗಿ ಜನಸೇವೆಯ ರೂಪದಲ್ಲಿ ನನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಹರೀಶ್ ರೆಡ್ಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುರಳಿ,ಕೇಶವ ರೆಡ್ಡಿ,ವಿನಯ್,ನಾಗಾರ್ಜುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.